Zimbabwe vs Nepal: ಜಿಂಬಾಬ್ವೆ ಅಭಿಮಾನಿಗಳಿಗೊಂದು ಸಲಾಂ: ಪಂದ್ಯ ಮುಗಿದ ಬಳಿಕ ಇಡೀ ಸ್ಟೇಡಿಯಂ ಕ್ಲೀನ್ ಮಾಡಿದ ಫ್ಯಾನ್ಸ್

|

Updated on: Jun 20, 2023 | 9:06 AM

ICC Cricket World Cup Qualifiers 2023: ಜಿಂಬಾಬ್ವೆಯಲ್ಲಿ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳನ್ನು ಆಯೋಜಿಸುತ್ತಿರುವುದಕ್ಕೆ ಫ್ಯಾನ್ಸ್ ಖುಷಿ ಆಗಿದ್ದರು. ತಮ್ಮ ತಂಡವನ್ನು ಬೆಂಬಲ ನೀಡುವುದಕ್ಕೆ ಸ್ಟೇಡಿಯಂನಲ್ಲಿ ಕೂಡ ಹಾಜರಿದ್ದರು.

Zimbabwe vs Nepal: ಜಿಂಬಾಬ್ವೆ ಅಭಿಮಾನಿಗಳಿಗೊಂದು ಸಲಾಂ: ಪಂದ್ಯ ಮುಗಿದ ಬಳಿಕ ಇಡೀ ಸ್ಟೇಡಿಯಂ ಕ್ಲೀನ್ ಮಾಡಿದ ಫ್ಯಾನ್ಸ್
Zimbabwe fans
Follow us on

ಈ ವರ್ಷ ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್​ಗಾಗಿ (ICC ODI World Cup) ಅರ್ಹತಾ ಸುತ್ತಿನ ಪಂದ್ಯಗಳು ಆರಂಭವಾಗಿದೆ. ಜಿಂಬಾಬ್ವೆಯಲ್ಲಿ ಈ ಪಂದ್ಯಗಳು ನಡೆಯುತ್ತಿದ್ದು ಎರಡು ಸ್ಥಾನಕ್ಕಾಗಿ ಹತ್ತು ತಂಡಗಳು ಸೆಣೆಸಾಟ ನಡೆಸುತ್ತಿದೆ. ಈಗಾಗಲೇ 8 ತಂಡಗಳು ಕ್ವಾಲಿಫೈ ಆಗಿದೆ. ಕ್ವಾಲಿಫೈಯರ್​ನ ಮೊದಲ ಪಂದ್ಯದಲ್ಲಿ ಜಿಂಬಾಬ್ವೆ ಹಾಗೂ ನೇಪಾಳ (Zimbabwe vs Nepal) ಮುಖಾಮುಖಿ ಆಗಿತ್ತು. ಹರಾರೆಯ ಹರಾರೆ ಸ್ಪೋರ್ಟ್ಸ್ ಕ್ಲಬ್​ನಲ್ಲಿ ನಡೆದ ಈ ಪಂದ್ಯದಲ್ಲಿ ಜಿಂಬಾಬ್ವೆ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ನಾಯಕ ಕ್ರೈಗ್ ಎರ್ವಿನ್ (Craig Ervine) ಹಾಗೂ ಸೀನ್ ವಿಲಿಯಮ್ಸ್ ಅವರ ಶತಕದ ನೆರವಿನಿಂದ ಜಿಂಬಾಬ್ವೆ ಅಮೋಘ ಗೆಲುವು ಕಂಡಿತು.

ಮೊದಲ ಪಂದ್ಯದಲ್ಲಿ ಜಿಂಬಾಬ್ವೆ ಗೆದ್ದ ಬಳಿಕ ಅಲ್ಲಿನ ಅಭಿಮಾನಿಗಳು ನಡೆದುಕೊಂಡ ರೀತಿಗೆ ಉತ್ತಮ ಪ್ರತಿಕ್ರಿಯೆ ಕೇಳಿಬರುತ್ತಿದೆ. ಜಿಂಬಾಬ್ವೆಯಲ್ಲಿ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳನ್ನು ಆಯೋಜಿಸುತ್ತಿರುವುದಕ್ಕೆ ಫ್ಯಾನ್ಸ್ ಖುಷಿ ಆಗಿದ್ದಾರೆ. ತಮ್ಮ ತಂಡವನ್ನು ಬೆಂಬಲ ನೀಡುವುದಕ್ಕೆ ಸ್ಟೇಡಿಯಂನಲ್ಲಿ ಕೂಡ ಹಾಜರಿದ್ದರು. ಇದೀಗ ಪಂದ್ಯ ಮುಗಿದ ಬಳಿಕ ಅಭಿಮಾನಿಗಳು ಮನೆಗೆ ತೆರಳುವ ಮುನ್ನ ಇಡೀ ಸ್ಟೇಡಿಯಂ ಅನ್ನು ಸ್ವಚ್ಚಗೊಳಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ
ENG vs AUS, Ashes Test: ತಾನೇ ತೋಡಿದ ಹಳ್ಳಕ್ಕೆ ಬಿದ್ದ ಇಂಗ್ಲೆಂಡ್?: ರೋಚಕ ಘಟ್ಟದತ್ತ ಆ್ಯಶಸ್ ಪ್ರಥಮ ಟೆಸ್ಟ್
India Squad for WI: ವಿಂಡೀಸ್ ವಿರುದ್ಧದ ಟಿ20 ಸರಣಿಗೆ ಐಪಿಎಲ್​ನ ಈ 5 ಸ್ಟಾರ್ ಪ್ಲೇಯರ್ಸ್ ಆಯ್ಕೆ ಖಚಿತ
World Cup Qualifiers 2023: 6 ವಿಕೆಟ್ ಕಬಳಿಸಿದ ಹಸರಂಗ: ಶ್ರೀಲಂಕಾಗೆ 175 ರನ್​ಗಳ ಭರ್ಜರಿ ಜಯ
IND vs PAK: ಪಾಕಿಸ್ತಾನ್ ತಂಡ ಭಾರತದ ವಿರುದ್ಧ ಆಡಬಾರದು: ಜಾವೇದ್ ಮಿಯಾಂದಾದ್

Ashes 2023: ಮೊದಲ ದಿನವೇ ಡಿಕ್ಲೇರ್ ಘೋಷಿಸಿ ಸಂಕಷ್ಟಕ್ಕೆ ಸಿಲುಕಿದ ಇಂಗ್ಲೆಂಡ್

 

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನೇಪಾಳ ಬೊಂಬಾಟ್ ಬ್ಯಾಟಿಂಗ್ ನಡೆಸಿತು. ಓಪನರ್​ಗಳಾದ ಕುಶಲ್ ಬುರ್ತೆಲ್ ಹಾಗೂ ಆಸಿಫ್ ಶೇಖ್ ಮೊದಲ ವಿಕೆಟ್​ಗೆ 171 ರನ್​ಗಳ ಜೊತೆಯಾಟ ಆಡಿದರು. ಕುಶಾಲ್ 95 ಎಸೆತಗಳಲ್ಲಿ 99 ರನ್ ಗಳಿಸಿ 1 ರನ್​ನಿಂದ ಶತಕ ವಂಚಿತರಾದರೆ ಆಸಿಫ್ 66 ರನ್ ಬಾರಿಸಿದರು. ಮಲ್ಲ 41 ರನ್​ಗಳ ಕೊಡುಗೆ ನೀಡಿದರು. ನಾಯಕ ರೋಹಿತ್ ಪೌಡೆಲ್ 31 ರನ್ ಗಳಿಸಿದರು. ನೇಪಾಳ 50 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 290 ರನ್ ಕಲೆಹಾಕಿತು. ಜಿಂಬಾಬ್ವೆ ಪರ ನಗರ್ವ 4 ವಿಕೆಟ್ ಕಿತ್ತರು.

ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ಜಿಂಬಾಬ್ವೆ ಬೇಗನೆ ಜೋಲಾರ್ಡ್ ಗುಂಬೀ (25) ಹಾಗೂ ವೆಸ್ಲಿ ಮಧೆವೀರೆ (32) ವಿಕೆಟ್ ಕಳೆದುಕೊಂಡಿತು. ಆದರೆ, ಮೂರನೇ ವಿಕೆಟ್​ಗೆ ನಾಯಕ ಕ್ರೈಗ್ ಎರ್ವಿನ್ ಹಾಗೂ ಸೀನ್ ವಿಲಿಯಮ್ಸ್ ಜೊತೆಯಾಗಿ ಭರ್ಜರಿ ಆಟವಾಡಿ ತಂಡಕ್ಕೆ ಜಯ ತಂದುಕೊಟ್ಟರು. ಕ್ರೈಹ್ 128 ಎಸೆತಗಳಲ್ಲಿ ಅಜೇಯ 121 ರನ್ ಸಿಡಿಸಿದರೆ, ವಿಲಿಯಮ್ಸ್ ಕೇವಲ 70 ಎಸೆತಗಳಲ್ಲಿ 102 ರನ್ ಚಚ್ಚಿದರು. ಜಿಂಬಾಬ್ವೆ 44.1 ಓವರ್​ನಲ್ಲೇ 2 ವಿಕೆಟ್ ನಷ್ಟಕ್ಕೆ 291 ರನ್ ಕಲೆಹಾಕಿ ಜಯ ಸಾಧಿಸಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ