Pat Cummins: ಪ್ಯಾಟ್ ಕಮಿನ್ಸ್ ಬೆಂಕಿ ಯಾರ್ಕರ್ಗೆ ಹೆದರಿದ ಒಲೀ ಪೋಪ್ ಕ್ಲೀನ್ ಬೌಲ್ಡ್: ರೋಚಕ ವಿಡಿಯೋ ನೋಡಿ
ENG vs AUS, Ashes 2023: ಆಸೀಸ್ ಪರ ನಾಯಕ ಪ್ಯಾಟ್ ಕಮಿನ್ಸ್ 18.2 ಓವರ್ಗೆ 63 ರನ್ ನೀಡಿ 4 ವಿಕೆಟ್ ಕಿತ್ತು ಮಿಂಚಿದರು. ಅದರಲ್ಲೂ ಕಮಿನ್ಸ್ ಅವರು ಒಲೀ ಪೋಪ್ ವಿಕೆಟ್ ಪಡೆದುಕೊಂಡಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತು.
ಬರ್ಮಿಂಗ್ಹ್ಯಾಮ್ನ ಎಜ್ಬಾಸ್ಟನ್ನಲ್ಲಿ (Edgbaston) ನಡೆಯುತ್ತಿರುವ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ (England vs Australia) ನಡುವಣ ಆ್ಯಶಸ್ ಟೆಸ್ಟ್ (Ashes Test) ಸರಣಿಯ ಮೊದಲ ಪಂದ್ಯ ರೋಚಕ ಘಟ್ಟಕ್ಕೆ ಬಂದು ನಿಂತಿದೆ. ಇಂದು ಅಂತಿಮ ಕೊನೆಯ ದಿನದಾಟ ಮಾತ್ರ ಬಾಕಿ ಉಳಿದಿದೆ. ಇತ್ತ ಇಂಗ್ಲೆಂಡ್ ಗೆಲ್ಲಬೇಕಾದರೆ ಆಸೀಸ್ನ 7 ವಿಕೆಟ್ ಕೀಳಬೇಕಿದೆ, ಅತ್ತ ಆಸ್ಟ್ರೇಲಿಯಾ ಗೆಲ್ಲಬೇಕಾದರೆ 174 ರನ್ ಕಲೆಹಾಕಬೇಕು. ಹೀಗಾಗಿ ಎಲ್ಲರ ಚಿತ್ತ ಕೊನೆಯ ದಿನದಾಟದ ಮೇಲಿದೆ. ಮೊದಲ ಇನ್ನಿಂಗ್ಸ್ನ ಪ್ರಥಮ ದಿನವೇ ಡಿಕ್ಲೇರ್ ಘೋಷಿಸಿ ಅಚ್ಚರಿ ನಿರ್ಧಾರ ತೆಗೆದುಕೊಂಡಿದ್ದ ಇಂಗ್ಲೆಡ್ ಇದೀಗ ಸಂಕಷ್ಟಕ್ಕೆ ಸಿಲುಕಿದಂತೆ ಗೋಚರಿಸುತ್ತಿದೆ.
ದ್ವಿತೀಯ ಇನ್ನಿಂಗ್ಸ್ನಲ್ಲಿ ಆಂಗ್ಲರು 273 ರನ್ಗಳಿಗೆ ಆಲೌಟ್ ಆದರು. ಈ ಮೂಲಕ ಆಸ್ಟ್ರೇಲಿಯಾಕ್ಕೆ ಗೆಲ್ಲಲು 281 ರನ್ಗಳ ಟಾರ್ಗೆಟ್ ನೀಡಿತು. ಆಸೀಸ್ ಪರ ನಾಯಕ ಪ್ಯಾಟ್ ಕಮಿನ್ಸ್ 18.2 ಓವರ್ಗೆ 63 ರನ್ ನೀಡಿ 4 ವಿಕೆಟ್ ಕಿತ್ತು ಮಿಂಚಿದರು. ಅದರಲ್ಲೂ ಕಮಿನ್ಸ್ ಅವರು ಒಲೀ ಪೋಪ್ ವಿಕೆಟ್ ಪಡೆದುಕೊಂಡಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತು.
ಜೋ ರೂಟ್ ಜೊತೆಗೆ ಅರ್ಧಶತಕದ ಜೊತೆಯಾಟ ಆಡಿ ಕ್ರೀಸ್ನಲ್ಲಿದ್ದ ಪೋಪ್ ಅವರು ಕಮಿನ್ಸ್ ಅವರ ಇನ್-ಸ್ವಿಂಗ್ ಯಾರ್ಕರ್ ಅನ್ನು ಎದುರಿಸಲಾಗದೆ ಹೀನಾಯವಾಗಿ ಕ್ಲೀನ್ ಬೌಲ್ಡ್ ಆದರು. ಈ ಮೂಲಕ ಪೋಪ್ ಆಟ 14 ರನ್ಗಳಿಗೆ ಅಂತ್ಯವಾಯಿತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಕಮಿನ್ಸ್ ಅವರ ಈ ಎಸೆತವನ್ನು ಅನೇಕರು ಬಾಲ್ ಆಫ್ ದಿ ಈಯರ್ ಎಂದು ಹೇಳುತ್ತಿದ್ದಾರೆ.
World Cup Qualifiers 2023: 6 ವಿಕೆಟ್ ಕಬಳಿಸಿದ ಹಸರಂಗ: ಶ್ರೀಲಂಕಾಗೆ 175 ರನ್ಗಳ ಭರ್ಜರಿ ಜಯ
The ball of Ashes 2023.
Captain Cummins for Australia, He is a machine. pic.twitter.com/SzDHJ7glE6
— Johns. (@CricCrazyJohns) June 19, 2023
ಆಸ್ಟ್ರೇಲಿಯಾ ಗೆಲುವಿಗೆ ಬೇಕು 174 ರನ್:
281 ರನ್ಗಳ ಟಾರ್ಗೆಟ್ ಬೆನ್ನಟ್ಟಿರುವ ಆಸ್ಟ್ರೇಲಿಯಾನ್ನರು ನಾಲ್ಕನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 107 ರನ್ ಕಲೆಹಾಕಿದೆ. ಕೊನೆಯ ಒಂದು ದಿನದಾಟ ಬಾಕಿ ಉಳಿದಿದ್ದು ಇಂಗ್ಲೆಂಡ್ ಗೆಲ್ಲಬೇಕಾದರೆ ಆಸೀಸ್ನ 7 ವಿಕೆಟ್ ಕೀಳಬೇಕು, ಇತ್ತ ಆಸ್ಟ್ರೇಲಿಯಾ ಗೆಲ್ಲಬೇಕಾದರೆ 174 ರನ್ ಕಲೆಹಾಕಬೇಕು. ಮೊದಲ ಇನ್ನಿಂಗ್ಸ್ನಲ್ಲಿ ಶತಕ ಸಿಡಿಸಿ ಮಿಂಚಿದ್ದ ಉಸ್ಮಾನ್ ಖ್ವಾಜಾ 34 ರನ್ ಗಳಿಸಿ ಹಾಗೂ ಸ್ಕಾಟ್ ಬೋಲಂಡ್ 13 ರನ್ ಬಾರಿಸಿ ಕೊನೆಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇದಕ್ಕೂ ಮೊದಲು ಬ್ಯಾಟಿಂಗ್ಗೆ ಬಂದ ಡೇವಿಡ್ ವಾರ್ನರ್ (36), ಮಾರ್ನಸ್ ಲಾಬುಶೇನ್ (16) ಹಾಗೂ ಸ್ಟೀವ್ ಸ್ಮಿತ್ (6) ಬೇಗನೆ ಔಟಾಗಿದ್ದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಅಚ್ಚರಿ ಎಂಬಂತೆ ಮೊದಲ ದಿನ ಮುಕ್ತಾಯ ಆಗುವ ಮುನ್ನವೇ 78 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 393 ರನ್ ಗಳಿಸಿದಾಗ ಡಿಕ್ಲೇರ್ ಘೋಷಿಸಿತು. ಜೋ ರೂಟ್ 152 ಎಸೆತಗಳಲ್ಲಿ 7 ಫೋರ್, 4 ಸಿಕ್ಸರ್ನೊಂದಿಗೆ ಅಜೇಯ 118 ರನ್ ಚಚ್ಚಿದರು. ತನ್ನ ಪ್ರಥಮ ಇನಿಂಗ್ಸ್ ಆರಂಭದಲ್ಲಿ ಆಸೀಸ್ ತೃತೀಯ ದಿನದಾಟದ ಆರಂಭದಲ್ಲಿ 386 ರನ್ಗಳಿಗೆ ಆಲೌಟ್ ಆಯಿತು. ತಂಡದ ಪರ ಉಸ್ಮಾನ್ ಖ್ವಾಜಾ 321 ಎಸೆತಗಳಲ್ಲಿ 141 ರನ್ ಗಳಿಸಿದರು. ಬಳಿಕ ತನ್ನ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ 273 ರನ್ಗಳಿಗೆ ಆಲೌಟ್ ಆಯಿತು. ಮೊದಲ ಇನ್ನಿಂಗ್ಸ್ನಲ್ಲಿ ಶತಕ ಸಿಡಿಸಿದ್ದ ಜೋ ರೂಟ್ ಹಾಗೂ ಹ್ಯಾರಿ ಬ್ರೂಕ್ 46 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ