CSK vs SRH, IPL 2021 Match 23 Result: ಡುಪ್ಲೆಸಿಸ್- ಗಾಯಕ್​ವಾಡ್ ಭರ್ಜರಿ ಬ್ಯಾಟಿಂಗ್; ಚೆನ್ನೈಗೆ 7 ವಿಕೆಟ್ ಜಯ!

| Updated By: ganapathi bhat

Updated on: Sep 05, 2021 | 10:44 PM

CSK vs SRH Scorecard: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ನಡುವಿನ ಐಪಿಎಲ್ 2021 ಟೂರ್ನಿಯ 23ನೇ ಪಂದ್ಯದ ಸಂಪೂರ್ಣ ಮಾಹಿತಿ ಇಲ್ಲಿದೆ.

CSK vs SRH, IPL 2021 Match 23 Result: ಡುಪ್ಲೆಸಿಸ್- ಗಾಯಕ್​ವಾಡ್ ಭರ್ಜರಿ ಬ್ಯಾಟಿಂಗ್; ಚೆನ್ನೈಗೆ 7 ವಿಕೆಟ್ ಜಯ!
ಧೋನಿ ಹಾಗೂ ವಾರ್ನರ್

ದೆಹಲಿ: ಸನ್​ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 7 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಚೆನ್ನೈ ಪರ ಆರಂಭಿಕರಾದ ಡುಪ್ಲೆಸಿಸ್ ಹಾಗೂ ಗಾಯಕ್​ವಾಡ್ ಭದ್ರ ಅಡಿಪಾಯ ಹಾಕಿಕೊಟ್ಟು ತಂಡದ ಗೆಲುವಿಗೆ ಕಾರಣರಾಗಿದ್ದಾರೆ. ಡುಪ್ಲೆಸಿಸ್ 56 (38) ಹಾಗೂ ಗಾಯಕ್​ವಾಡ್ 75 (44) ರನ್ ಪೇರಿಸಿದ್ದಾರೆ. ಸನ್​ರೈಸರ್ಸ್ ಪರ ರಶೀದ್ ಖಾನ್ ಮೂರು ವಿಕೆಟ್​ಗಳನ್ನೂ ಪಡೆದಿದ್ದಾರೆ. ಇತರ ಬೌಲರ್​ಗಳ ಪ್ರಯತ್ನ ವಿಫಲವಾಗಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಸನ್​ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್​ಗಳ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 171 ರನ್ ದಾಖಲಿಸಿತ್ತು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್​ಗೆ ಗೆಲ್ಲಲು 172 ರನ್ ಟಾರ್ಗೆಟ್ ನೀಡಿತ್ತು. ಆರಂಭಿಕರಾಗಿ ಆಗಮಿಸಿದ ಬೇರ್​ಸ್ಟೋ ಬೇಗ ವಿಕೆಟ್ ಒಪ್ಪಿಸಿದರೂ ನಂತರ ಜೊತೆಯಾದ ವಾರ್ನರ್ 57 (55) ಹಾಗೂ ಪಾಂಡೆ 61 (46) ಉತ್ತಮ ಜೊತೆಯಾಟ ಆಡಿದ್ದರು. ಕೇನ್ ವಿಲಿಯಮ್ಸನ್ ಹಾಗೂ ಕೇದಾರ್ ಜಾಧವ್ ಅಂತಿಮ ಓವರ್​ಗಳಲ್ಲಿ ವೇಗದ ಆಟವಾಡಿ ತಂಡದ ಮೊತ್ತ ಹೆಚ್ಚಿಸಿದ್ದರು. ವಿಲಿಯಮ್ಸನ್ 10 ಬಾಲ್​ಗೆ 4 ಬೌಂಡರಿ, 1 ಸಿಕ್ಸರ್ ಸಹಿತ 26 ರನ್, ಜಾಧವ್ 4 ಬಾಲ್​ಗೆ 1 ಬೌಂಡರಿ ಹಾಗೂ ಸಿಕ್ಸರ್ ಮೂಲಕ 12 ರನ್ ಪೇರಿಸಿದ್ದರು.

ಚೆನ್ನೈ ಸೂಪರ್ ಕಿಂಗ್ಸ್ ಪರ ಎನ್​ಗಿಡಿ 2 ವಿಕೆಟ್ ಹಾಗೂ ಸ್ಯಾಮ್ ಕುರ್ರನ್ ಒಂದು ವಿಕೆಟ್ ಪಡೆದಿದ್ದರು. ಪಂದ್ಯದ ಸಂಪೂರ್ಣ ವಿವರ ಈ ಕೆಳಗಿದೆ.

LIVE NEWS & UPDATES

The liveblog has ended.
  • 28 Apr 2021 11:00 PM (IST)

    ಚೆನ್ನೈ ಸೂಪರ್ ಕಿಂಗ್ಸ್​ಗೆ 7 ವಿಕೆಟ್ ಗೆಲುವು

    ಸನ್​ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 7 ವಿಕೆಟ್​ಗಳ ಗೆಲುವು ದಾಖಲಿಸಿದೆ.

  • 28 Apr 2021 10:56 PM (IST)

    ಚೆನ್ನೈ ಗೆಲ್ಲಲು 12 ಬಾಲ್​ಗೆ 5 ರನ್ ಬೇಕು

    ಚೆನ್ನೈ ಸೂಪರ್ ಕಿಂಗ್ಸ್ 18 ಓವರ್​ಗೆ 3 ವಿಕೆಟ್ ಕಳೆದುಕೊಂಡು 167 ರನ್ ದಾಖಲಿಸಿದೆ. ಚೆನ್ನೈ ಪರ ಜಡೇಜಾ ಹಾಗೂ ರೈನಾ ಬ್ಯಾಟ್ ಬೀಸುತ್ತಿದ್ದಾರೆ. ತಂಡ ಗೆಲುವಿನ ಸನಿಹದಲ್ಲಿದೆ. ಗೆಲ್ಲಲು 12 ಬಾಲ್​ಗೆ ಕೇವಲ 5 ರನ್ ಬೇಕಿದೆ.


  • 28 Apr 2021 10:50 PM (IST)

    ಚೆನ್ನೈ ಗೆಲುವಿಗೆ 18 ಬಾಲ್​ಗೆ 14 ರನ್ ಬೇಕು

    ಚೆನ್ನೈ ಸೂಪರ್ ಕಿಂಗ್ಸ್ ಗೆಲ್ಲಲು 18 ಬಾಲ್​ಗೆ 14 ರನ್ ಬೇಕಿದೆ. ಜಡೇಜಾ ಹಾಗೂ ಸುರೇಶ್ ರೈನಾ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 28 Apr 2021 10:39 PM (IST)

    ಚೆನ್ನೈ 3ನೇ ವಿಕೆಟ್ ಪತನ

    56 ರನ್​ಗಳಿಸಿದ್ದ ಡು ಪ್ಲೆಸಿಸ್​ ರಶೀದ್​ ಅವರ ಗೂಗ್ಲಿ ಬಾಲ್​ಗೆ ಕ್ಲೀನ್ LBW ಬಲೆಗೆ ಬಿದ್ದಿದ್ದಾರೆ. ಔಟಾಗುವುದಕ್ಕೂ ಮುನ್ನ ಡು ಪ್ಲೆಸಿಸ್ 6 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದ್ದರು.

  • 28 Apr 2021 10:25 PM (IST)

    ಚೆನ್ನೈ ಮೊದಲ ವಿಕೆಟ್ ಪತನ

    ಆರಂಭದಿಂದಲೂ ವಿಕೆಟ್​ ಕಳೆದುಕೊಳ್ಳದೆ ಅತ್ಯುತ್ತಮ ಬ್ಯಾಟಿಂಗ್ ಮಾಡಿದ ಡುಪ್ಲೆಸಿಸ್ ಹಾಗೂ ರುತುರಾಜ್​ ಅವರ ಜೊತೆಯಾಟಕ್ಕೆ ಬ್ರೇಕ್ ಬಿದ್ದಿದೆ. 75 ರನ್ ಗಳಿಸಿದ್ದ ರುತುರಾಜ್ ರಶೀದ್ ಬೌಲಿಂಗ್​ನಲ್ಲಿ ಕ್ಲಿನ್ ಬೌಲ್ಡ್ ಆಗಿದ್ದಾರೆ.

  • 28 Apr 2021 10:15 PM (IST)

    ಶತಕ ಪೂರೈಸಿದ ಚೆನ್ನೈ

    ಆರಂಬಿಕ ಜೋಡಿಗಳ ಅದ್ಭುತ ಆಟದಿಂದಾಗಿ ಯಾವುದೇ ವಿಕೆಟ್ ನಷ್ಟವಿಲ್ಲದೆ ಚೆನ್ನೈ ಶತಕ ಪೂರೈಸಿದೆ. ಜೊತೆಗೆ ಆರಂಭಿಕ ಆಟಗಾರ ಡುಪ್ಲೆಸಿಸ್ ಅರ್ಧ ಶತಕ ಕೂಡ ಸಿಡಿಸಿದ್ದಾರೆ.

  • 28 Apr 2021 10:06 PM (IST)

    ಚೆನ್ನೈ ಸೂಪರ್ ಕಿಂಗ್ಸ್ 67/0 (8 ಓವರ್)

    8 ಓವರ್​ಗಳ ಅಂತ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ವಿಕೆಟ್ ನಷ್ಟವಿಲ್ಲದೆ 67 ರನ್ ದಾಖಲಿಸಿದೆ. ಡುಪ್ಲೆಸಿಸ್ 35 ಹಾಗೂ ಗಾಯಕ್​ವಾಡ್ 38 ರನ್ ಪೇರಿಸಿದ್ದಾರೆ.

  • 28 Apr 2021 09:57 PM (IST)

    ಪವರ್​ಪ್ಲೇ ಅಂತ್ಯಕ್ಕೆ 50/0

    ಚೆನ್ನೈ ಸೂಪರ್ ಕಿಂಗ್ಸ್ 6 ಓವರ್​ಗಳ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 50 ರನ್ ದಾಖಲಿಸಿದೆ. ಡುಪ್ಲೆಸಿಸ್ 19 ಬಾಲ್​ಗೆ 32 ರನ್ ಪೇರಿಸಿದ್ದಾರೆ. ಗಾಯಕ್​ವಾಡ್ 17 ಬಾಲ್​ಗೆ 17 ರನ್ ಬಾರಿಸಿ ಕಣದಲ್ಲಿದ್ದಾರೆ.

  • 28 Apr 2021 09:43 PM (IST)

    ಡುಪ್ಲೆಸಿಸ್ ವೇಗದ ಆಟ

    ಚೆನ್ನೈ ಸೂಪರ್ ಕಿಂಗ್ಸ್ ಪರ ಫಫ್ ಡುಪ್ಲೆಸಿಸ್ ವೇಗದ ಆಟ ಆಡುತ್ತಿದ್ದಾರೆ. 4 ಓವರ್​ಗಳ ಅಂತ್ಯಕ್ಕೆ ಚೆನ್ನೈ ವಿಕೆಟ್ ಕಳೆದುಕೊಳ್ಳದೆ 31 ರನ್ ದಾಖಲಿಸಿದೆ. ಡುಪ್ಲೆಸಿಸ್ 13 ಬಾಲ್​ಗೆ 3 ಬೌಂಡರಿ ಸಹಿತ 21 ರನ್ ದಾಖಲಿಸಿದ್ದಾರೆ. ಗಾಯಕ್​ವಾಡ್ ಕ್ರೀಸ್​ನಲ್ಲಿದ್ದಾರೆ. ಗೆಲ್ಲಲು 141 ರನ್ ಬೇಕಿದೆ.

  • 28 Apr 2021 09:34 PM (IST)

    ಬ್ಯಾಟಿಂಗ್ ಆರಂಭಿಸಿದ ಸಿಎಸ್​ಕೆ

    ಚೆನ್ನೈ ಸೂಪರ್ ಕಿಂಗ್ಸ್ ಪರ ಫಫ್ ಡುಪ್ಲೆಸಿಸ್ ಹಾಗೂ ಋತುರಾಜ್ ಗಾಯಕ್​ವಾಡ್ ಬ್ಯಾಟಿಂಗ್ ಆರಂಭಿಸಿದ್ದಾರೆ. 2 ಓವರ್ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 15 ರನ್ ದಾಖಲಿಸಿದ್ದಾರೆ.

  • 28 Apr 2021 09:19 PM (IST)

    ಸನ್​ರೈಸರ್ಸ್ ಹೈದರಾಬಾದ್ 171/3 (20 ಓವರ್)

    ನಿಗದಿತ 20 ಓವರ್​ಗಳ ಅಂತ್ಯಕ್ಕೆ ಸನ್​ರೈಸರ್ಸ್ ಹೈದರಾಬಾದ್ ತಂಡ 3 ವಿಕೆಟ್ ಕಳೆದುಕೊಂಡು 171 ರನ್ ದಾಖಲಿಸಿದೆ. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್​ಗೆ ಗೆಲ್ಲಲು 172 ರನ್ ಟಾರ್ಗೆಟ್ ನೀಡಿದೆ. ಕೇನ್ ವಿಲಿಯಮ್ಸನ್ ಹಾಗೂ ಕೇದಾರ್ ಜಾಧವ್ ಅಂತಿಮ ಓವರ್​ಗಳಲ್ಲಿ ವೇಗದ ಆಟವಾಡಿ ತಂಡದ ಮೊತ್ತ ಹೆಚ್ಚಿಸಿದ್ದಾರೆ. ವಿಲಿಯಮ್ಸನ್ 10 ಬಾಲ್​ಗೆ 4 ಬೌಂಡರಿ, 1 ಸಿಕ್ಸರ್ ಸಹಿತ 26 ರನ್, ಜಾಧವ್ 4 ಬಾಲ್​ಗೆ 1 ಬೌಂಡರಿ ಹಾಗೂ ಸಿಕ್ಸರ್ ಮೂಲಕ 12 ರನ್ ಪೇರಿಸಿದ್ದಾರೆ.

  • 28 Apr 2021 09:02 PM (IST)

    ಮನೀಶ್ ಪಾಂಡೆ ವಿಕೆಟ್ ಪತನ!

    ಸನ್​ರೈಸರ್ಸ್ ಪರ ಉತ್ತಮ ಜೊತೆಯಾಟ ನೀಡಿದ್ದ ವಾರ್ನರ್- ಪಾಂಡೆ ಇಬ್ಬರೂ ಕೂಡ ವಿಕೆಟ್ ಒಪ್ಪಿಸಿದ್ದಾರೆ. ಎನ್​ಗಿಡಿ ಬಾಲ್​ಗೆ ಡುಪ್ಲೆಸಿಸ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಮನೀಶ್ ಪಾಂಡೆ 46 ಬಾಲ್​ಗೆ 61 ರನ್ ಗಳಿಸಿ ಔಟ್ ಆಗಿದ್ದಾರೆ. ಸನ್​ರೈಸರ್ಸ್ ತಂಡ 18 ಓವರ್​ಗಳ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 138 ರನ್ ದಾಖಲಿಸಿದೆ.

  • 28 Apr 2021 09:00 PM (IST)

    ವಾರ್ನರ್ ಔಟ್!

    55 ಬಾಲ್​ಗೆ 57 ರನ್ ಗಳಿಸಿ ಡೇವಿಡ್ ವಾರ್ನರ್ ಔಟ್ ಆಗಿದ್ದಾರೆ. ಎನ್​ಗಿಡಿ ಬೌಲಿಂಗ್​ಗೆ ಜಡೇಜಾಗೆ ಕ್ಯಾಚ್ ನೀಡಿ ವಾರ್ನರ್ ನಿರ್ಗಮಿಸಿದ್ದಾರೆ.

  • 28 Apr 2021 08:57 PM (IST)

    ಸನ್​ರೈಸರ್ಸ್ ಹೈದರಾಬಾದ್ 128/1 (17 ಓವರ್)

    ಸನ್​ರೈಸರ್ಸ್ ಹೈದರಾಬಾದ್ ತಂಡ 17 ಓವರ್​ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 128 ರನ್ ದಾಖಲಿಸಿದೆ. ವಾರ್ನರ್- ಪಾಂಡೆ ಜೋಡಿ ಆಟ ಚೆನ್ನೈ ಬೌಲರ್​ಗಳನ್ನು ಸುಸ್ತಾಗಿಸಿದೆ. ಶಿಸ್ತುಬದ್ಧ ಬ್ಯಾಟಿಂಗ್​ನಿಂದ ಉತ್ತಮ ಟಾರ್ಗೆಟ್ ಪೇರಿಸುವತ್ತ ಸನ್​ರೈಸರ್ಸ್ ಮುನ್ನುಗ್ಗುತ್ತಿದೆ. ಈ ನಡುವೆ ಡೇವಿಡ್ ವಾರ್ನರ್ ಐಪಿಎಲ್​ನಲ್ಲಿ 50 ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಈ ಸಾಧನೆ ಮಾಡಿದ ಮೊದಲ ಆಟಗಾರನಾಗಿ ವಾರ್ನರ್ ಹೊರಹೊಮ್ಮಿದ್ದಾರೆ.

  • 28 Apr 2021 08:48 PM (IST)

    ಅರ್ಧಶತಕ ಪೂರೈಸಿದ ವಾರ್ನರ್

    ಸನ್​ರೈಸರ್ಸ್ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ ಅರ್ಧಶತಕ ಪೂರೈಸಿದ್ದಾರೆ. 50 ಬಾಲ್​ಗೆ 2 ಸಿಕ್ಸ್ ಹಾಗೂ 3 ಬೌಂಡರಿ ಸಹಿತ 55 ರನ್ ಪೇರಿಸಿ ಆಡುತ್ತಿದ್ದಾರೆ. ಸನ್​ರೈಸರ್ಸ್ ಹೈದರಾಬಾದ್ 16 ಓವರ್​ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 121 ರನ್ ದಾಖಲಿಸಿದೆ.

  • 28 Apr 2021 08:36 PM (IST)

    ಪಾಂಡೆ ಅರ್ಧಶತಕ; ಎಸ್​​ಆರ್​ಎಚ್ ಶತಕ!

    ಸನ್​ರೈಸರ್ಸ್ ಹೈದರಾಬಾದ್ ಪರ ಆಕರ್ಷಕ ಆಟ ಆಡುತ್ತಿರುವ ಮನೀಶ್ ಪಾಂಡೆ ಅರ್ಧಶತಕ ಪೂರೈಸಿದ್ದಾರೆ. 35 ಬಾಲ್​ಗೆ 4 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 50 ರನ್ ದಾಖಲಿಸಿದ್ದಾರೆ. ಡೇವಿಡ್ ವಾರ್ನರ್ 39 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಹೈದರಾಬಾದ್ ತಂಡ 14 ಓವರ್​ಗೆ 1 ವಿಕೆಟ್ ಕಳೆದುಕೊಂಡು 102 ರನ್ ದಾಖಲಿಸಿದೆ.

  • 28 Apr 2021 08:28 PM (IST)

    ವಾರ್ನರ್- ಪಾಂಡೆ ಜವಾಬ್ದಾರಿಯುತ ಜೊತೆಯಾಟ

    ಡೇವಿಡ್ ವಾರ್ನರ್ ಹಾಗೂ ಮನೀಶ್ ಪಾಂಡೆ ಜವಾಬ್ದಾರಿಯುತ ಬ್ಯಾಟಿಂಗ್ ಸಹಾಯದಿಂದ ಸನ್​ರೈಸರ್ಸ್ ಹೈದರಾಬಾದ್ ತಂಡ 12 ಓವರ್​ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 82 ರನ್ ದಾಖಲಿಸಿದೆ.

  • 28 Apr 2021 08:21 PM (IST)

    ಸನ್​ರೈಸರ್ಸ್ ಹೈದರಾಬಾದ್ 69/1 (10 ಓವರ್)

    ಸನ್​ರೈಸರ್ಸ್ ಹೈದರಾಬಾದ್ 10 ಓವರ್​ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 69 ರನ್ ದಾಖಲಿಸಿದೆ. ವಾರ್ನರ್- ಪಾಂಡೆ ಜೊತೆಯಾಟ ಮುಂದುವರಿದಿದೆ. ಮೊದಲ ವಿಕೆಟ್ ಬಳಿಕ ಮತ್ತೆ ವಿಕೆಟ್ ಕೀಳುವಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸಫಲವಾಗಿಲ್ಲ.

  • 28 Apr 2021 08:09 PM (IST)

    ಅರ್ಧಶತಕ ಪೂರೈಸಿದ ಸನ್​ರೈಸರ್ಸ್

    ಸನ್​ರೈಸರ್ಸ್ ಹೈದರಾಬಾದ್ ತಂಡ 8 ಓವರ್​ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 54 ರನ್ ದಾಖಲಿಸಿದೆ. ಡೇವಿಡ್ ವಾರ್ನರ್ 27 (30) ಹಾಗೂ ಮನೀಶ್ ಪಾಂಡೆ 17 (13) ಆಟವಾಡುತ್ತಿದ್ದಾರೆ. ಕೇನ್ ವಿಲಿಯಮ್ಸನ್, ಕೇದಾರ್ ಜಾಧವ್, ವಿಜಯ್ ಶಂಕರ್ ಬ್ಯಾಟಿಂಗ್​ಗೆ ಬಾಕಿ ಇದ್ದಾರೆ.

  • 28 Apr 2021 08:02 PM (IST)

    ಪವರ್​ಪ್ಲೇ ಅಂತ್ಯಕ್ಕೆ 39/1

    6 ಓವರ್​ಗಳ ಅಂತ್ಯಕ್ಕೆ ಸನ್​ರೈಸರ್ಸ್ ಹೈದರಾಬಾದ್ ತಂಡ 39 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದೆ. ನಾಯಕ ಡೇವಿಡ್ ವಾರ್ನರ್ ಹಾಗೂ ಮನೀಶ್ ಪಾಂಡೆ ಕ್ರೀಸ್​ನಲ್ಲಿದ್ದಾರೆ.

  • 28 Apr 2021 07:51 PM (IST)

    ಜಾನಿ ಬೇರ್​ಸ್ಟೋ ಔಟ್

    ಸನ್​ರೈಸರ್ಸ್ ಹೈದರಾಬಾದ್ ತಂಡದ ಮೊದಲ ವಿಕೆಟ್ ಪತನವಾಗಿದೆ. ಜಾನಿ ಬೇರ್​ಸ್ಟೋ 5 ಬಾಲ್​ಗೆ 7 ರನ್ ಗಳಿಸಿ ನಿರ್ಗಮಿಸಿದ್ದಾರೆ. ಸ್ಯಾಮ್ ಕುರ್ರನ್ ಬೌಲಿಂಗ್​ಗೆ ದೀಪಕ್ ಚಹರ್ ಕ್ಯಾಚ್ ಪಡೆದು ಬೇರ್​ಸ್ಟೋ ಔಟ್ ಮಾಡಿದ್ದಾರೆ. ಸನ್​ರೈಸರ್ಸ್ ತಂಡ 4 ಓವರ್​ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 25 ರನ್ ದಾಖಲಿಸಿದೆ.

  • 28 Apr 2021 07:46 PM (IST)

    ಸನ್​ರೈಸರ್ಸ್ ಹೈದರಾಬಾದ್ 20/0 (3 ಓವರ್)

    ಮೂರನೇ ಓವರ್ ಅಂತ್ಯಕ್ಕೆ ಸನ್​ರೈಸರ್ಸ್ ಹೈದರಾಬಾದ್ ತಂಡ ವಿಕೆಟ್ ನಷ್ಟವಿಲ್ಲದೆ 20 ರನ್ ದಾಖಲಿಸಿದೆ. ಡೇವಿಡ್ ವಾರ್ನರ್ ಹಾಗೂ ಜಾನಿ ಬೇರ್​​ಸ್ಟೋ ಬ್ಯಾಟಿಂಗ್ ಮಾಡುತ್ತಿದ್ದಾರೆ. 3 ಓವರ್​ಗಳ ಅಂತ್ಯಕ್ಕೆ 2 ಬೌಂಡರಿಗಳು ಸನ್​ರೈಸರ್ಸ್ ದಾಂಡಿಗರಿಂದ ಸಿಡಿದಿವೆ.

  • 28 Apr 2021 07:40 PM (IST)

    ಮೊದಲ ಓವರ್ ಅಂತ್ಯಕ್ಕೆ 3 ರನ್

    ಸನ್​ರೈಸರ್ಸ್ ಹೈದರಾಬಾದ್ ತಂಡ ಬ್ಯಾಟಿಂಗ್ ಆರಂಭಿಸಿದೆ. ಡೇವಿಡ್ ವಾರ್ನರ್ ಹಾಗೂ ಜಾನಿ ಬೇರ್​​ಸ್ಟೋ ಬ್ಯಾಟಿಂಗ್ ಮಾಡುತ್ತಿದ್ದಾರೆ. ದೀಪಕ್ ಚಹರ್ ಮೊದಲ ಓವರ್ ಬೌಲಿಂಗ್ ಮಾಡಿದ್ದಾರೆ.

  • 28 Apr 2021 07:32 PM (IST)

    ಸನ್​ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ ಇಲೆವೆನ್

    ಡೇವಿಡ್ ವಾರ್ನರ್ (ನಾಯಕ), ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಕೇನ್ ವಿಲಿಯಮ್ಸನ್, ಮನೀಶ್ ಪಾಂಡೆ, ಕೇದಾರ್ ಜಾಧವ್, ವಿಜಯ್ ಶಂಕರ್, ರಶೀದ್ ಖಾನ್, ಜಗದೀಶ್ ಸುಚಿತ್, ಸಂದೀಪ್ ಶರ್ಮಾ, ಖಲೀಲ್ ಅಹ್ಮದ್, ಸಿದ್ದಾರ್ಥ್ ಕೌಲ್

  • 28 Apr 2021 07:31 PM (IST)

    ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್

    ಋತುರಾಜ್ ಗಾಯಕ್ವಾಡ್, ಫಫ್ ಡು ಪ್ಲೆಸಿಸ್, ಮೊಯೀನ್ ಅಲಿ, ಸುರೇಶ್ ರೈನಾ, ಅಂಬಟಿ ರಾಯುಡು, ಎಂ.ಎಸ್.ಧೋನಿ (ನಾಯಕ/ ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಸ್ಯಾಮ್ ಕುರ್ರನ್, ಶಾರ್ದುಲ್ ಠಾಕೂರ್, ಲುಂಗಿ ಎನ್‌ಗಿಡಿ, ದೀಪಕ್ ಚಹರ್

  • 28 Apr 2021 07:29 PM (IST)

    ಪ್ಲೇಯಿಂಗ್ ಇಲೆವೆನ್ ಹೀಗಿದೆ

    ಎರಡೂ ತಂಡಗಳು ತಮ್ಮ ಪ್ಲೇಯಿಂಗ್ ಇಲೆವೆನ್​ನಲ್ಲಿ ಬದಲಾವಣೆ ಮಾಡಿಕೊಂಡಿವೆ.

  • 28 Apr 2021 07:14 PM (IST)

    ಸನ್​ರೈಸರ್ಸ್ ಹೈದರಾಬಾದ್ ಟಾಸ್ ವಿನ್

    ಟಾಸ್ ಗೆದ್ದ ಸನ್​ರೈಸರ್ಸ್ ಹೈದರಾಬಾದ್ ತಂಡ ಬ್ಯಾಟಿಂಗ್ ಆಯ್ದುಕೊಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ಮೊದಲು ಬೌಲಿಂಗ್ ಮಾಡಲಿದೆ.

Published On - 11:00 pm, Wed, 28 April 21

Follow us on