ಟಿ20 ಕ್ರಿಕೆಟ್ ಆಡಿದ ಮೊದಲ ಭಾರತೀಯ ಇವರು! ದಾಖಲೆಗಳು ಏನೇನು? ಇಲ್ಲಿದೆ ವಿವರ

ಭಾರತದ ಪರವಾಗಿ 57 ಏಕದಿನ ಪಂದ್ಯ ಆಡಿದ್ದರ ಜೊತೆಗೆ, ಟಿ20 ಕ್ರಿಕೆಟನ್ನೂ ಆಡಿದರು. ಏಕದಿನ ಕ್ರಿಕೆಟ್‌ನಲ್ಲಿ 27.95 ಸರಾಸರಿಯಲ್ಲಿ 1,230 ರನ್ ಗಳಿಸಿದ ಇವರು, 1 ಶತಕ, 4 ಅರ್ಧಶತಕ ಬಾರಿಸಿದ್ದಾರೆ. 14 ವಿಕೆಟ್‌ಗಳನ್ನೂ ಪಡೆದಿದ್ದಾರೆ.

ಟಿ20 ಕ್ರಿಕೆಟ್ ಆಡಿದ ಮೊದಲ ಭಾರತೀಯ ಇವರು! ದಾಖಲೆಗಳು ಏನೇನು? ಇಲ್ಲಿದೆ ವಿವರ
ದಿನೇಶ್ ಮೋಂಗಿಯಾ
Follow us
TV9 Web
| Updated By: ganapathi bhat

Updated on:Sep 05, 2021 | 10:43 PM

ಕ್ರಿಕೆಟ್ ಆಟದಲ್ಲಿ ಕೆಲವೊಮ್ಮೆ ಪ್ರತಿಭೆ ಒಂದಿದ್ದರೆ ಸಾಲುವುದಿಲ್ಲ.‌ ಜೊತೆಗೆ ಅದೃಷ್ಟವೂ ಬೇಕಿರುತ್ತದೆ. ಹಲವು ಆಟಗಾರರ ವಿಚಾರದಲ್ಲಿ ಈ ಮಾತು ನಿಜವಾದದ್ದಿದೆ. ಕೆಲವೊಮ್ಮೆ ಒಬ್ಬ ಆಟಗಾರನಿಗೆ ಇಂಜುರಿ ಸಮಸ್ಯೆ ಕಂಡುಬಂದ ಕಾರಣ ಮತ್ತೋರ್ವ ಆಟಗಾರ ತಂಡ‌ ಸೇರುತ್ತಾನೆ. ಬಳಿಕ ಆತನೇ ಉತ್ತಮ ಆಟಗಾರನಾಗಿ ಮೆರೆದಿರುತ್ತಾನೆ. ಅಂತಹ ಕ್ರಿಕೆಟ್ ಆಟಗಾರನೊಬ್ಬನ ಬಗ್ಗೆ ಈಗ ನಾವು ಮಾತನಾಡುತ್ತಿದ್ದೇವೆ. ವಿರೇಂದ್ರ ಸೆಹ್ವಾಗ್‌ಗೆ ಇಂಜುರಿ ಸಮಸ್ಯೆಯಾದಾಗ ಸೌರವ್ ಗಂಗೂಲಿ ಜೊತೆ ಓಪನಿಂಗ್ ಬ್ಯಾಟ್ಸ್‌ಮನ್ ಆಗಿ ಬಂದವನು ಈತ. ಜೊತೆಗೆ ಶತಕವನ್ನೂ ಬಾರಿಸಿದ. ಈ ಒಂದು ಪ್ರದರ್ಶನದ ಪರಿಣಾಮ ಎಷ್ಟಾಯ್ತು ಎಂದರೆ, ನಂತರ 2003ರ ವಿಶ್ವಕಪ್ ಟೂರ್ನಿಯಲ್ಲೂ ಈತ ತಂಡದಲ್ಲಿ ಸ್ಥಾನ ಪಡೆದಿದ್ದ‌. ಭಾರತ ತಂಡದ ಪರವಾಗಿ ಮತ್ತೆಂದೂ ಶತಕ ಸಿಡಿಸಲಾಗದಿದ್ದರೂ, ಸಣ್ಣ ಅವಧಿಯಲ್ಲಿ ಹಲವು ಐತಿಹಾಸಿಕ ದಾಖಲೆ‌ ನಿರ್ಮಿಸಿದ ಆಟಗಾರ, ಈತನ ಹೆಸರು ದಿನೇಶ್ ಮೋಂಗಿಯಾ.

5 ಫೀಟ್ 10 ಇಂಚು ಎತ್ತರದ ದಿನೇಶ್ ಮೋಂಗಿಯಾ ಭಾರತದ ಪರವಾಗಿ 57 ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡಿದರು. ಆದರೆ, ಮೋಂಗಿಯಾ ಆಟವನ್ನು ಕೇವಲ 1 ಇನ್ನಿಂಗ್ಸ್ ಉಲ್ಲೇಖಿಸಿ ಜನ ಗುರುತಿಸುತ್ತಾರೆ. ಜಿಂಬಾಬ್ವೆ ವಿರುದ್ಧ ಮೋಂಗಿಯಾ ಭರ್ಜರಿ 159 (147 ಬಾಲ್) ರನ್‌ಗಳ ರನ್ ದಾಖಲಿಸಿದರು. ಈ ಆಟದಲ್ಲಿ 17 ಬೌಂಡರಿ ಹಾಗೂ 1 ಸಿಕ್ಸರ್ ಸೇರಿತ್ತು. ಆಗಿನ ಕಾಲದಲ್ಲಿ ಇದು ಭಾರತದ ಪರವಾಗಿ ಬಂದ ನಾಲ್ಕನೇ ಅತಿದೊಡ್ಡ ಮೊತ್ತಸ ಶತಕವಾಗಿತ್ತು. ಸಚಿನ್ ತೆಂಡೂಲ್ಕರ್ 186 (1999 ಇಸವಿ), ಸೌರವ್ ಗಂಗೂಲಿ 183 (1999 ಇಸವಿ) ಮತ್ತು ಕಪಿಲ್ ದೇವ್ 175 (1983 ಇಸವಿ) ಮೊದಲ ಮೂರು ಸ್ಥಾನದಲ್ಲಿತ್ತು.

ಮೋಂಗಿಯಾ ತಂಡದಲ್ಲಿ ಸ್ಥಾನ ಪಡೆದಿದ್ದು ಹೀಗೆ 2002ರ ಜಿಂಬಾಬ್ವೆ ಸರಣಿ ಸಂದರ್ಭದಲ್ಲಿ ವೀರೇಂದ್ರ ಸೆಹ್ವಾಗ್ ಭುಜದ ಸಮಸ್ಯೆಗೆ ಒಳಗಾಗಿದ್ದರು. ಆಗ ಓಪನಿಂಗ್ ಬ್ಯಾಟ್ಸ್‌ಮನ್ ಅವಶ್ಯಕತೆ ಇರುವುದು ಸೌರವ್ ಗಂಗೂಲಿಗೆ ಸವಾಲಾಯಿತು. ಗಂಗೂಲಿ, ದಿನೇಶ್ ಮೋಂಗಿಯಾಗೆ ಆ ಹೊಣೆ ನೀಡಿದರು. ಮೋಂಗಿಯಾಗೆ ಈ ಅವಕಾಶ ಸಿಗುವಲ್ಲಿ ಅನಿಲ್ ಕುಂಬ್ಳೆ ಅಭಿಪ್ರಾಯವೂ ಅಡಗಿತ್ತು. ಚಾಲೆಂಜರ್ ಟ್ರೋಫಿಯಲ್ಲಿ ಕುಂಬ್ಳೆ ತಂಡದಲ್ಲಿ ಮೋಂಗಿಯಾ ಆಟವಾಡಿದ್ದರು‌. ಅಲ್ಲಿ ಆರಂಭಿಕ ಆಟಗಾರನಾಗಿ ಮೋಂಗಿಯಾ ಶತಕವನ್ನೂ ಸಿಡಿಸಿದ್ದರು. ಈ ಕಾರಣದಿಂದ ಮೋಂಗಿಯಾ ಅಂತಾರಾಷ್ಟ್ರೀಯ ತಂಡ ಸೇರುವಂತಾಯಿತು. 2001 ಮಾರ್ಚ್ 28ರಂದು ಮೋಂಗಿಯಾ ಆಸ್ಟ್ರೇಲಿಯಾ ವಿರುದ್ಧ ಆಡಿದರು.‌ ನಂತರ ಜಿಂಬಾಬ್ವೆ ವಿರುದ್ಧ ಶತಕ ಸಿಡಿಸಿ ಮಿಂಚಿದರು.

ಭಾರತದ ಪರವಾಗಿ 57 ಏಕದಿನ ಪಂದ್ಯ ಆಡಿದ್ದರ ಜೊತೆಗೆ, ಟಿ20 ಕ್ರಿಕೆಟನ್ನೂ ಆಡಿದರು. ಏಕದಿನ ಕ್ರಿಕೆಟ್‌ನಲ್ಲಿ 27.95 ಸರಾಸರಿಯಲ್ಲಿ 1,230 ರನ್ ಗಳಿಸಿದ ಮೋಂಗಿಯಾ, 1 ಶತಕ, 4 ಅರ್ಧಶತಕ ಬಾರಿಸಿದ್ದಾರೆ. 14 ವಿಕೆಟ್‌ಗಳನ್ನೂ ಪಡೆದಿದ್ದಾರೆ.

ಟಿ20 ಕ್ರಿಕೆಟ್ ಆಡಿದ ಮೊದಲ ಭಾರತೀಯ! ದಿನೇಶ್ ಮೋಂಗಿಯಾ ಕುರಿತ ವಿಶೇಷ ವಿಚಾರ ಏನೆಂದರೆ. ಅವರು ಟಿ20 ಕ್ರಿಕೆಟ್ ಆಡಿದ ಮೊದಲ ಭಾರತೀಯ! ಲಾನ್ಸಶೈರ್ ಎಂಬ ಇಂಗ್ಲೆಂಡ್ ಕಂಟ್ರಿ ಕ್ಲಬ್‌ನಿಂದ 2004ರಲ್ಲಿ ಮೋಂಗಿಯಾ ಟಿ20 ಆಡುವ ಅವಕಾಶ ಪಡೆದಿದ್ದರು. ಆಸ್ಟ್ರೇಲಿಯಾದ ಸ್ಟುವರ್ಟ್ ಲಾ ಗಾಯಗೊಂಡಿದ್ದಾಗ ಮೋಂಗಿಯಾ ಆ ಸ್ಥಾನ ಪಡೆದಿದ್ದರು. ನಂತರ ಭಾರತದ ಮೊದಲ ಟಿ20 ಮ್ಯಾಚ್‌ನಲ್ಲೂ ಮೋಂಗಿಯಾ ಆಡಿದ್ದರು. ಮೊದಲ ಮತ್ತು ಏಕೈಕ ಟಿ20 ಆಟದಲ್ಲಿ 38 ರನ್ ದಾಖಲಿಸಿದ್ದರು. ಆದರೆ, 2007ರ ಬಳಿಕ ಮೋಂಗಿಯಾ ತಂಡದಿಂದ ಹೊರಗುಳಿಯಬೇಕಾಯಿತು. ಇಂಡಿಯನ್ ಕ್ರಿಕೆಟ್ ಲೀಗ್‌ನಲ್ಲಿ ಆಡುವಾಗ ಬುಕ್ಕಿಗಳಿಗೆ ಸಹಾಯ ಮಾಡಿದ ಆರೋಪ ಅವರ ಮೇಲೆ ಬಂತು. ಮೋಂಗಿಯಾ ತಮ್ಮ ‌ಮೇಲಿನ ಆರೋಪಗಳನ್ನು‌‌ ನಿರಾಕರಿಸಿದರೂ ಪ್ರಯೋಜನವಾಗಲಿಲ್ಲ. ಬಳಿಕ 2008ರಲ್ಲಿ ಮೋಂಗಿಯಾ ಮೇಲಿನ ನಿಷೇಧವನ್ನು ಬಿಸಿಸಿಐ ತೆಗೆದುಹಾಕಿತು. ಆದರೆ, ಮೋಂಗಿಯಾ ಮತ್ತೆ ಕ್ರಿಕೆಟ್ ಆಡಲು ಸಾಧ್ಯವಾಗಲಿಲ್ಲ. 2019ರಲ್ಲಿ ಅವರು ಕ್ರಿಕೆಟ್‌ಗೆ ವಿದಾಯ ಹೇಳಿದರು. ಅಂದರೆ ಕೊನೆಯ ಏಕದಿನ ಪಂದ್ಯವಾಡಿ ಬರೋಬ್ಬರಿ 12 ವರ್ಷಗಳ ನಂತರ ಮೋಂಗಿಯಾ ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ವಿದಾಯ ಘೋಷಿಸಿದರು.

ಪ್ರಥಮ ದರ್ಜೆ ಪಂದ್ಯದಲ್ಲಿ ಮೋಂಗಿಯಾ ಸಾಧನೆ ದಿನೇಶ್ ಮೋಂಗಿಯಾ 121 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. 48.95 ಸರಾಸರಿಯಲ್ಲಿ 8,028 ರನ್ ಗಳಿಸಿದ್ದಾರೆ. ಇದರಲ್ಲಿ 27 ಶತಕಗಳು ಹಾಗೂ 28 ಅರ್ಧಶತಕಗಳೂ ಸೇರಿವೆ. ಔಟಾಗದೆ 308 ರನ್ ಗಳಿಸಿರುವುದು ಅವರ ಅತಿ ಹೆಚ್ಚು ಸ್ಕೋರ್ ಆಗಿದೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮೋಂಗಿಯಾ 46 ವಿಕೆಟ್ ಕೂಡ ಕಬಳಿಸಿದ್ದಾರೆ.

ಇದನ್ನೂ ಓದಿ: Rashmika Mandanna: ‘ಈ ಸಲ ಕಪ್​ ನಮ್ದೇ’ ಎಂದ ರಶ್ಮಿಕಾ ಮಂದಣ್ಣಗೆ ಆರ್​ಸಿಬಿ ಫ್ಯಾನ್ಸ್​ ಫಿದಾ

(Dinesh Mongia former Indian Batsman who played first T20 Cricket Other details here)

Published On - 6:23 pm, Wed, 28 April 21

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ