AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ICC T20 WorldCup: ಭಾರತದಲ್ಲಿ ಕೊರೊನಾ ನಿಯಂತ್ರಣದಲ್ಲಿಲ್ಲ.. ಟಿ20 ವಿಶ್ವಕಪ್​ಗಾಗಿ ಶ್ರೀಲಂಕಾ- ಯುಎಇ ಮೇಲೆ ಕಣ್ಣಿಟ್ಟಿದ್ದೇವೆ; ಐಸಿಸಿ

ICC T20 WorldCup: ಭಾರತದಲ್ಲಿ ಪರಿಸ್ಥಿತಿ ಸುಧಾರಿಸದಿದ್ದರೆ, ಟಿ 20 ವಿಶ್ವಕಪ್ ಅನ್ನು ನಡೆಸಲು ಯುಎಇಯನ್ನು ಸ್ಟ್ಯಾಂಡ್‌ಬೈನಲ್ಲಿ ಇರಿಸಿದೆ.

ICC T20 WorldCup: ಭಾರತದಲ್ಲಿ ಕೊರೊನಾ ನಿಯಂತ್ರಣದಲ್ಲಿಲ್ಲ.. ಟಿ20 ವಿಶ್ವಕಪ್​ಗಾಗಿ ಶ್ರೀಲಂಕಾ- ಯುಎಇ ಮೇಲೆ ಕಣ್ಣಿಟ್ಟಿದ್ದೇವೆ; ಐಸಿಸಿ
ಪ್ರಾತಿನಿಧಿಕ ಚಿತ್ರ
ಪೃಥ್ವಿಶಂಕರ
|

Updated on: Apr 28, 2021 | 5:25 PM

Share

ಐಸಿಸಿ ಟಿ 20 ವಿಶ್ವಕಪ್ ಈ ವರ್ಷ ಭಾರತದಲ್ಲಿ ನಡೆಯಲಿದೆ. ಪೂರ್ವ ನಿರ್ಧಾರಿತ ವೇಳಾಪಟ್ಟಿಯ ಪ್ರಕಾರ, ಅಕ್ಟೋಬರ್-ನವೆಂಬರ್ನಲ್ಲಿ ಭಾರತದಲ್ಲಿ ಐಸಿಸಿ ಟಿ 20 ವಿಶ್ವಕಪ್ ಆಯೋಜಿಸಲು ದಿನಾಂಕ ನಿಗಧಿಸಲ್ಲಾಗಿತ್ತು. ನಿಗಧಿಯಂತೆ ಟಿ20 ವಿಶ್ವಕಪ್​ ನಡೆದರೆ, ಕ್ರಿಕೆಟ್ ಆಡುವ ಎಲ್ಲಾ ದೇಶಗಳು ಭಾರತದಲ್ಲಿರಬೇಕಾಗುತ್ತದೆ. ಆದರೆ, ಭಾರತವು ಕೊರೊನಾದ ಎರಡನೇ ಅಲೆಯ ಹಿಡಿತದಲ್ಲಿದೆ. ಅಲ್ಲದೆ ಭಾರತದ ಈಗಿನ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಜನರು ಸಾಯುತ್ತಿದ್ದಾರೆ. ಹೊಸ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ಆಸ್ಟ್ರೇಲಿಯಾದ ಅನುಭವಿ ಆಟಗಾರರು ಭಾರತದ ಟಿ 20 ವಿಶ್ವಕಪ್‌ಗೆ ಆತಿಥ್ಯ ವಹಿಸುವ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ.

ಕೊರೊನಾದ ನಡುವೆ ಭಾರತದಲ್ಲಿ ವಿಶ್ವಕಪ್ ಆಯೋಜಿಸುವುದನ್ನು ಆಸ್ಟ್ರೇಲಿಯಾದ ಅನುಭವಿ ಆಟಗಾರ ಇಯಾನ್ ಚಾಪೆಲ್ ಅಲ್ಲಗಳೆದಿದ್ದಾರೆ. ಟಿ 20 ವಿಶ್ವಕಪ್ ಭಾರತದಲ್ಲಿ ನಡೆಯಬಾರದು ಎಂಬುದು ಸಾಮಾನ್ಯ ಜ್ಞಾನದ ವಿಷಯವಾಗಿದೆ ಎಂದು ಹೇಳಿರುವ ಚಾಪೆಲ್, ಕೊರೊನಾದ ಹೆಚ್ಚುತ್ತಿರುವ ಅಪಾಯದ ದೃಷ್ಟಿಯಿಂದ ಈ ಮಾತನ್ನು ಹೇಳಿದ್ದಾರೆ.

ಕೊರೊನಾಗೆ ಸಂಬಂಧಿಸಿದಂತೆ ಐಸಿಸಿ, ಬಿಸಿಸಿಐ ಜೊತೆ ಸಂಪರ್ಕದಲ್ಲಿದೆ ವರದಿಯ ಪ್ರಕಾರ, ಐಸಿಸಿ ಭಾರತದಲ್ಲಿ ಹೆಚ್ಚುತ್ತಿರುವ ಕೊರೊನಾದ ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದೆ. ಇದರೊಂದಿಗೆ ಭಾರತ ಟಿ 20 ವಿಶ್ವಕಪ್‌ಗೆ ಆತಿಥ್ಯ ವಹಿಸುವ ಆಯ್ಕೆಯನ್ನು ಸಹ ಅನ್ವೇಷಿಸುತ್ತಿದೆ. ಭಾರತದಲ್ಲಿ ಪರಿಸ್ಥಿತಿ ಸುಧಾರಿಸದಿದ್ದರೆ, ಟಿ 20 ವಿಶ್ವಕಪ್ ಅನ್ನು ನಡೆಸಲು ಯುಎಇಯನ್ನು ಸ್ಟ್ಯಾಂಡ್‌ಬೈನಲ್ಲಿ ಇರಿಸಿದೆ. ಜೊತೆಗೆ ಡೈಲಿ ಮೇಲ್ ವರದಿಯ ಪ್ರಕಾರ, ವಿಶ್ವಕಪ್​ ಆಯೋಜನೆಗಾಗಿ ಶ್ರೀಲಂಕಾವನ್ನು ಭಾರತಕ್ಕೆ ಪರ್ಯಾಯವಾಗಿಯೂ ನೋಡಲಾಗುತ್ತಿದೆ ಎಂದು ವರದಿಯಾಗಿದೆ. ಹದಗೆಡುತ್ತಿರುವ ಪರಿಸ್ಥಿತಿಯ ಬಗ್ಗೆ ಐಸಿಸಿ ಬಿಸಿಸಿಐನೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದೆ ಮತ್ತು ಪರಿಸ್ಥಿತಿಯ ಮೇಲೆ ನಿಗಾ ಇಡುತ್ತಿದೆ ಎಂದು ವರದಿಯಾಗಿದೆ.

ಟಿ20 ವಿಶ್ವಕಪ್‌ಗೆ 9 ಸ್ಥಳಗಳು ವರದಿಯ ಪ್ರಕಾರ, ಐಸಿಸಿ ನಿಯೋಗ ಪ್ರಸ್ತುತ ಭಾರತದಲ್ಲಿದೆ ಮತ್ತು ಕಳೆದ ವಾರ ಟಿ 20 ವಿಶ್ವಕಪ್‌ಗೆ 9 ಸ್ಥಳಗಳ ಪ್ರಸ್ತಾಪವನ್ನು ಪ್ರಸ್ತಾಪಿಸಲಾಗಿತ್ತು. ಟಿ 20 ವಿಶ್ವಕಪ್ ಅಕ್ಟೋಬರ್ ಮಧ್ಯದಲ್ಲಿ ಪ್ರಾರಂಭವಾಗಿ ನವೆಂಬರ್ 13 ರೊಳಗೆ ಕೊನೆಗೊಳ್ಳುವ ನಿರೀಕ್ಷೆಯಿದೆ. ಬಿಸಿಸಿಐ ಕಳೆದ ವರ್ಷ ಯುಎಇಯಲ್ಲಿ ಐಪಿಎಲ್ ಅನ್ನು ಆಯೋಜಿಸಿತ್ತು ಮತ್ತು ಆ ಸಮಯದಲ್ಲಿ ಭಾರತದಲ್ಲಿ ಕೊರೊನಾ ಪ್ರಕರಣಗಳು ಪ್ರಸ್ತುತ ಸಮಯಕ್ಕಿಂತ ಕಡಿಮೆಯಿದ್ದವು ಮತ್ತು ಕಡಿಮೆ ವೇಗವಾಗಿ ಹರಡುತ್ತಿದ್ದವು, ಆದರೆ ಪ್ರಸ್ತುತ ಸಮಯದಲ್ಲಿ ಪರಿಸ್ಥಿತಿ ಸಾಕಷ್ಟು ಭಯಾನಕವಾಗಿದೆ.