IPL 2021 Points Table: ಅಂಕಪಟ್ಟಿಯಲ್ಲಿ ಆರ್‌ಸಿಬಿ ಸುಲ್ತಾನ್; ಮತ್ತೆ‌‌‌ ಮೊದಲ ಸ್ಥಾನಕ್ಕೇರಿದ ಕೊಹ್ಲಿ ಪಡೆ!

Orange Cap Purple Cap Holders List: ಅಂಕಪಟ್ಟಿಯ ವಿವರಗಳು, ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಹೊಂದಿರುವ ಆಟಗಾರರು ಯಾರು? ಇಲ್ಲಿದೆ ಮಾಹಿತಿ.

IPL 2021 Points Table: ಅಂಕಪಟ್ಟಿಯಲ್ಲಿ ಆರ್‌ಸಿಬಿ ಸುಲ್ತಾನ್; ಮತ್ತೆ‌‌‌ ಮೊದಲ ಸ್ಥಾನಕ್ಕೇರಿದ ಕೊಹ್ಲಿ ಪಡೆ!
ಆರ್​ಸಿಬಿ ತಂಡ
Follow us
TV9 Web
| Updated By: ganapathi bhat

Updated on:Sep 05, 2021 | 10:43 PM

ಐಪಿಎಲ್ 2021 ಟೂರ್ನಿಯ ಅಂಕಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೆ ಟಾಪ್ ಸ್ಥಾನಕ್ಕೇರಿದೆ. ನಿನ್ನೆ (ಏಪ್ರಿಲ್ 27) ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ರೋಚಕ ಪಂದ್ಯದಲ್ಲಿ 1 ರನ್‌ನಿಂದ ಜಯಗಳಿಸುವ ಮೂಲಕ ಮೊದಲ ಸ್ಥಾನ ಪಡೆದುಕೊಂಡಿದೆ. ಅದಕ್ಕೂ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮೊದಲೆರಡು ಸ್ಥಾನ ಹೊಂದಿತ್ತು. ಆರ್‌ಸಿಬಿ, ಡೆಲ್ಲಿ ಮತ್ತು ಚೆನ್ನೈ ಮೂರು ತಂಡಗಳು ಕೂಡ ತಲಾ 8 ಅಂಕ ಹೊಂದಿ ಪೈಪೋಟಿಯಲ್ಲಿ ಇದ್ದವು. ಆದರೆ, ನಿನ್ನೆ ಮ್ಯಾಚ್ ಬಳಿಕ, 6ರಲ್ಲಿ 5 ಗೆಲುವು ಕಂಡ ಆರ್‌ಸಿಬಿ 10 ಅಂಕ ಪಡೆದು ಎಲ್ಲರನ್ನು ಹಿಂದಿಕ್ಕಿದೆ.

ನಿನ್ನೆಯ ಸೋಲು ಡೆಲ್ಲಿ ತಂಡಕ್ಕೆ ಭರ್ಜರಿ ಹೊಡೆತವನ್ನೇನೂ ಕೊಟ್ಟಿಲ್ಲ. 6 ಪಂದ್ಯಗಳಲ್ಲಿ 4 ಪಂದ್ಯ ಗೆದ್ದಿರುವ ರಿಷಭ್ ಪಂತ್ ಪಡೆ ಮೂರನೇ ಸ್ಥಾನದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ 5ರಲ್ಲಿ 4 ಗೆಲುವು ಕಂಡು ಎರಡನೇ ಸ್ಥಾನವನ್ನು ಹೊಂದಿದೆ. ಇಂದು (ಏಪ್ರಿಲ್ 28) ಇಂದಿನ ಪಂದ್ಯದಲ್ಲಿ ಚೆನ್ನೈ ತಂಡ ಹೈದರಾಬಾದ್ ಟೀಂನ್ನು ಎದುರಿಸಲಿದೆ. ಆ ಬಳಿಕ ಅಂಕಪಟ್ಟಿಯ ಬದಲಾವಣೆಗಳು ಏನಾಗಬಹುದು ಎಂದು ಕಾದುನೋಡಬೇಕಿದೆ. ನಾಲ್ಕನೇ ಸ್ಥಾನದಲ್ಲಿ 5ರಲ್ಲಿ 2 ಗೆಲುವು ಕಂಡಿರುವ ಮುಂಬೈ ಇಂಡಿಯನ್ಸ್ ತಂಡವಿದೆ. ಅಂಕಪಟ್ಟಿಯ ಮೊದಲ ಮೂರು ತಂಡಗಳ ಹೊರತಾಗಿ ಉಳಿದ ತಂಡಗಳು ಪೈಪೋಟಿಯಲ್ಲಿ ಅಷ್ಟೊಂದು ಮುಂಚೂಣಿಯಲ್ಲಿಲ್ಲ.

6 ಪಂದ್ಯಗಳ ಪೈಕಿ 2ರಲ್ಲಿ ಗೆದ್ದು 4 ಅಂಕ ಪಡೆದಿರುವ ಕೋಲ್ಕತ್ತಾ ಹಾಗೂ ಪಂಜಾಬ್ ತಂಡಗಳು 5 ಮತ್ತು 6ನೇ ಸ್ಥಾನದಲ್ಲಿದೆ. 5 ಪಂದ್ಯಗಳಲ್ಲಿ 2 ಗೆದ್ದ ರಾಜಸ್ಥಾನ್ ರಾಯಲ್ಸ್ 7ನೇ ಸ್ಥಾನದಲ್ಲಿದೆ. ಆಡಿದ 5 ಪಂದ್ಯದಲ್ಲಿ ಕೇವಲ 1 ಮ್ಯಾಚ್ ಗೆದ್ದಿರುವ ಸನ್‌ರೈಸರ್ಸ್ ಹೈದರಾಬಾದ್ ಕೊನೆಯ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದ ಬಳಿಕ ಅಂಕಪಟ್ಟಿ ಹೀಗಿದೆ.

ಆರೆಂಜ್ ಕ್ಯಾಪ್ ಪಟ್ಟಿ ಹೀಗಿದೆ ನಿನ್ನೆ ನಡೆದ ಪಂದ್ಯದಲ್ಲಿ ಆಕರ್ಷಕ ಆಟವಾಡಿ, 75 ರನ್ ದಾಖಲಿಸಿದ ಎಬಿ ಡಿವಿಲಿಯರ್ಸ್ ಅತಿ ಹೆಚ್ಚು ರನ್ ಸ್ಕೋರರ್ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದುಕೊಂಡಿದ್ದಾರೆ. ಆದರೆ, ಟಾಪ್ 5 ಆಟಗಾರರ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಶಿಖರ್ ಧವನ್ 265 ರನ್ ಗಳಿಸಿ ಮೊದಲ ಸ್ಥಾನದಲ್ಲಿ ಇದ್ದಾರೆ‌. ಕೆ‌.ಎಲ್. ರಾಹುಲ್ 240, ಗ್ಲೆನ್ ಮ್ಯಾಕ್ಸ್‌ವೆಲ್ 223, ಡುಪ್ಲೆಸಿಸ್ 214 ಮತ್ತು ಬೇರ್‌ಸ್ಟೋ 211 ರನ್ ಗಳಿಸಿ ನಂತರದ ಸ್ಥಾನದಲ್ಲಿದ್ದಾರೆ.

ಪರ್ಪಲ್ ಕ್ಯಾಪ್ ಪಟ್ಟಿ ಹೀಗಿದೆ ಆರ್‌ಸಿಬಿ ತಂಡದ ಹರ್ಷಲ್ ಪಟೇಲ್ ಭರ್ಜರಿ 17 ವಿಕೆಟ್ ಪಡೆದುಕೊಂಡು ಮೊದಲ ಸ್ಥಾನ ಹೊಂದಿದ್ದಾರೆ. ಡೆಲ್ಲಿ ಟೀಂ ಅವೇಶ್ ಖಾನ್ 12 ವಿಕೆಟ್ ಕಿತ್ತು ಎರಡನೇ ಸ್ಥಾನ ಹೊಂದಿದ್ದಾರೆ. ರಾಹುಲ್ ಚಹರ್, ಕ್ರಿಸ್ ಮಾರಿಸ್ ತಲಾ 9 ವಿಕೆಟ್ ಪಡೆದು ಹಾಗೂ ದೀಪಕ್ ಚಹಾರ್ 8 ವಿಕೆಟ್ ಪಡೆದು ನಂತರದ ಸ್ಥಾನದಲ್ಲಿ ಇದ್ದಾರೆ.

ಇದನ್ನೂ ಓದಿ: Rashmika Mandanna: ‘ಈ ಸಲ ಕಪ್​ ನಮ್ದೇ’ ಎಂದ ರಶ್ಮಿಕಾ ಮಂದಣ್ಣಗೆ ಆರ್​ಸಿಬಿ ಫ್ಯಾನ್ಸ್​ ಫಿದಾ

IPL 2021: ಡೆಲ್ಲಿ ಸೋಲಿಗೆ ಇಶಾಂತ್​ ಶರ್ಮಾ ಕಾರಣರಾದ್ರ? ಇಶಾಂತ್ ಅಣ್ಣ ಹೇಳಿಕೊಟ್ಟ ತಂತ್ರ ನನ್ನ ಸಹಾಯಕ್ಕೆ ಬಂತು ಎಂದ ಸಿರಾಜ್ (IPL 2021 Points Table after DC vs RCB Match Orange Cap Purple Cap List)

Published On - 4:15 pm, Wed, 28 April 21

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ