IPL 2021: ಡೆಲ್ಲಿ ಸೋಲಿಗೆ ಇಶಾಂತ್ ಶರ್ಮಾ ಕಾರಣರಾದ್ರ? ಇಶಾಂತ್ ಅಣ್ಣ ಹೇಳಿಕೊಟ್ಟ ತಂತ್ರ ನನ್ನ ಸಹಾಯಕ್ಕೆ ಬಂತು ಎಂದ ಸಿರಾಜ್
IPL 2021: ತನ್ನ ಈ ಸಾಧನೆಗೆ ಡೆಲ್ಲಿ ಪರ ಆಡುತ್ತಿರುವ ಇಶಾಂತ್ ಶರ್ಮಾ ಹಾಗೂ ಜಸ್ಪ್ರೀತ್ ಬುಮ್ರಾ ಅವರೇ ಕಾರಣ ಎಂದಿದ್ದಾರೆ. ಡೆತ್ ಓವರ್ಗಳಲ್ಲಿ ಹೇಗೆ ಬೌಲಿಂಗ್ ಮಾಡಬೇಕೆಂಬುದನ್ನು ಈ ಇಬ್ಬರು ನನಗೆ ಚೆನ್ನಾಗಿ ಹೇಳಿಕೊಟ್ಟಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್ಸಿಬಿ ಬಿಗ್ ಸ್ಕೋರ್ ಕಲೆ ಹಾಕಲು, ಮಾರ್ಕಸ್ ಸ್ಟೋನಿಸ್ ಮಾಡಿದ ಕೊನೆ ಓವರ್ ಕಾರಣ. ಹಾಗೇ ಆರ್ಸಿಬಿ ಡೆಲ್ಲಿ ವಿರುದ್ಧ ಗೆಲುವಿನ ಕೇಕೆ ಹಾಕಲು, ಮೊಹಮ್ಮದ್ ಸಿರಾಜ್ ಮಾಡಿದ ಕೊನೇ ಓವರ್ ಕಾರಣ. ಮೋದಿ ಮೈದಾನದಲ್ಲಿ ಕೊನೇ ಓವರ್ನಲ್ಲಿ ಡೆಲ್ಲಿ ಗೆಲುವಿಗೆ ಕೇವಲ 14 ರನ್ ಬೇಕಿತ್ತು. ಕ್ರೀಸ್ನಲ್ಲಿದ್ದ ಶಿಮ್ರಾನ್ ಹೆಟ್ಮೇರ್ ಮತ್ತು ರಿಷಬ್ ಪಂತ್, ಡೆಲ್ಲಿಗೆ ಗೆಲುವು ದೊರಕಿಸಿಕೊಡುವ ವಿಶ್ವಾಸದಲ್ಲಿದ್ರು. ಟಿ-ಟ್ವೆಂಟಿ ಕ್ರಿಕೆಟ್ನಲ್ಲಿ 6 ಬಾಲ್ಗಳಲ್ಲಿ 14 ರನ್ಗಳಿಸುವುದು ಕಷ್ಟದ ವಿಚಾರವೇ ಆಗಿರಲಿಲ್ಲ. ಅದ್ರಲ್ಲೂ ಸೆಟಲ್ ಆಗಿದ್ದ ಇಬ್ಬರು, ಬೌಂಡರಿ ಸಿಕ್ಸರ್ಗಳನ್ನ ಸಿಡಿಸಿ ನಡುಕ ಹುಟ್ಟಿಸಿದ್ರು.
ಇಶಾಂತ್ ಶರ್ಮಾ ಹಾಗೂ ಜಸ್ಪ್ರೀತ್ ಬುಮ್ರಾ ಅವರೇ ಕಾರಣ ಆದರೆ ಸಿರಾಜ್ ತಂತ್ರದ ಮುಂದೆ ಈ ಇಬ್ಬರ ಆಟ ನಡೆಯಲಿಲ್ಲ. ಫಲವಾಗಿ ಆರ್ಸಿಬಿ ಅಂತಿಮ ಓವರ್ನಲ್ಲಿ ಗೆದ್ದು ಬೀಗಿತು. ಪಂದ್ಯದ ನಂತರ ಈ ಬಗ್ಗೆ ಮಾತನಾಡಿದ ಸಿರಾಜ್, ತನ್ನ ಈ ಸಾಧನೆಗೆ ಡೆಲ್ಲಿ ಪರ ಆಡುತ್ತಿರುವ ಇಶಾಂತ್ ಶರ್ಮಾ ಹಾಗೂ ಜಸ್ಪ್ರೀತ್ ಬುಮ್ರಾ ಅವರೇ ಕಾರಣ ಎಂದಿದ್ದಾರೆ. ಡೆತ್ ಓವರ್ಗಳಲ್ಲಿ ಹೇಗೆ ಬೌಲಿಂಗ್ ಮಾಡಬೇಕೆಂಬುದನ್ನು ಈ ಇಬ್ಬರು ನನಗೆ ಚೆನ್ನಾಗಿ ಹೇಳಿಕೊಟ್ಟಿದ್ದಾರೆ. ಆದರೆ ಅವರು ಹೇಳಿಕೊಟ್ಟಿರುವ ತಂತ್ರವನ್ನು ನಾನು ಇಲ್ಲಿ ಈಗ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಡೆತ್ ಓವರ್ಗಳಲ್ಲಿ ನಾನು ಆತಂಕವಿಲ್ಲದೆ ಬೌಲಿಂಗ್ ಮಾಡಲು ನೆರವಾಗಿದ್ದು ಟೆಸ್ಟ್ ಪಂದ್ಯಗಳು ಎಂದು ಸಿರಾಜ್ ಹೇಳಿಕೊಂಡಿದ್ದಾರೆ. ಸಿರಾಜ್ ಅವರ ಹೇಳಿಕೆಯಿಂದ ಡೆಲ್ಲಿ ಪಾಳಯದಲ್ಲಿ ಇಶಾಂತ್ ಶರ್ಮಾ ಮೇಲೆ ಎಲ್ಲರ ಕಣ್ಣು ಕೆಂಪಾಗಿದ್ದರು ಆಗಿರಬಹುದು.
ಕೊನೇ ಓವರ್ನಲ್ಲಿ ಹೆಟ್ಮೇರ್-ಪಂತ್ಗೆ ಸಿರಾಜ್ ಪಂಚ್! ಸಿರಾಜ್ ಕೊನೇ ಓವರ್ ಮಾಡಲು ಬಂದಾಗ ಕ್ರೀಸ್ನಲ್ಲಿದ್ದ ಪಂತ್ ಸಿಕ್ಸರ್ ಸಿಡಿಸುವ ದಾವಂತದಲ್ಲಿದ್ರು. ಆದ್ರೆ ಸಿರಾಜ್ ಮೊದಲ ಬಾಲ್ ಅನ್ನ ಯಾರ್ಕರ್ ಎಸೆದು ಸಿಂಗಲ್ ರನ್ ನೀಡಿದ್ರು. 2ನೇ ಬಾಲ್ನಲ್ಲಿ ಹೆಟ್ಮೇರ್ಗೆ ಲೆಗ್ ಸ್ಟಂಪ್ ಯಾರ್ಕರ್ ಎಸೆದು ಸಿಂಗಲ್ ರನ್ ನೀಡಿದ್ರು..
3ನೇ ಬಾಲ್ ಅನ್ನ ಸಿರಾಜ್ ಪಂತ್ಗೆ ಡಾಟ್ ಬಾಲ್ ಎಸೆದು ಯಾವುದೇ ರನ್ ನೀಡಲಿಲ್ಲ. ಅಲ್ಲಿಗೆ ಪಂದ್ಯ ಆರ್ಸಿಬಿ ಕೈಗೆ ಬಂದಿತ್ತು. ನಾಲ್ಕನೇ ಬಾಲ್ನಲ್ಲಿ ಪಂತ್ 2 ರನ್ಗಳಿಸಿದ್ರೆ, 5ನೇ ಬಾಲ್ನಲ್ಲಿ ಬೌಂಡರಿ ಸಿಡಿಸಿದ್ರು. ಹೀಗಾಗಿ ಕೊನೆ ಬಾಲ್ನಲ್ಲಿ ಡೆಲ್ಲಿ ಗೆಲುವಿಗೆ 6 ರನ್ ಬೇಕಿತ್ತು. ರೋಚಕತೆ ಪಡೆದುಕೊಂಡಿದ್ದ ಕೊನೆ ಬಾಲ್ ಅನ್ನ ಸಿರಾಜ್ ವೈಡ್ ಯಾರ್ಕರ್ ಎಸೆದಿದ್ದರಿಂದ, ಪಂತ್ಗೆ ಸಿಕ್ಸರ್ ಹೊಡೆಯೋಕೆ ಸಾಧ್ಯವಾಗಲಿಲ್ಲ. ಹೀಗಾಗಿ ಬಾಲ್ ಬೌಂಡರಿ ಗೆರೆ ದಾಟಿದ್ರೂ, ಆರ್ಸಿಬಿ 1 ರನ್ನಿಂದ ರೋಚಕ ಗೆಲುವು ದಾಖಲಿಸಿತು..
ಸ್ಯಾಮ್ಸ್, ಹರ್ಷಲ್ ಬದಲು ಕೊಹ್ಲಿ ಸಿರಾಜ್ ಕೈಗೆ ಬಾಲ್ ಕೊಟ್ಟಿದ್ದೇಕೆ? ಇಂಟ್ರಸ್ಟಿಂಗ್ ವಿಷ್ಯ ಏನಂದ್ರೆ ಮೊದಲ ಮೂರು ಓವರ್ಗಳಲ್ಲಿ 32 ರನ್ಕೊಟ್ಟಿದ್ದ ಮೊಹಮ್ಮದ್ ಸಿರಾಜ್ ಕೈಗೆ ಕೊಹ್ಲಿ ಕೊನೇ ಓವರ್ ನೀಡಿದ್ದು. ಸೀಸನ್ನಲ್ಲಿ ಹೈಯೆಸ್ಟ್ ವಿಕೆಟ್ ಟೇಕರ್ ಆಗಿರುವ ಹರ್ಷಲ್ ಪಟೇಲ್, ಎರಡು ಓವರ್ನಲ್ಲಿ ಕೇವಲ 15 ರನ್ ನೀಡಿದ ಡೇನಿಯಲ್ ಸ್ಯಾಮ್ಸ್ ಇದ್ರು. ವಿರಾಟ್ ಕೊನೆ ಓವರ್ಗೆ ಇವರಿಬ್ಬರನ್ನು ಬಳಸಿಕೊಳ್ಳಲಿಲ್ಲ. ಮೊದಲೇ ನಿರ್ಧರಿಸಿದಂತೆ, ವಿರಾಟ್ ಸಿರಾಜ್ ಕೈಗೆ ಬಾಲ್ ನೀಡಿದ್ರು. ಸಿರಾಜ್ ನಾಯಕ ಕೊಹ್ಲಿ ನಂಬಿಕೆಯನ್ನ ಹುಸಿ ಮಾಡಲಿಲ್ಲ. ಇಬ್ಬರು ಸೆಟ್ ಬ್ಯಾಟ್ಸ್ಮನ್ಗಳಿಗೆ ಚಾಕಚಕ್ಯತೆಯಿಂದ ಬೌಲಿಂಗ್ ಮಾಡಿ ಕಟ್ಟಿ ಹಾಕಿ, ಆರ್ಸಿಬಿಗೆ ಗೆಲುವು ತಂದುಕೊಟ್ರು.
ಈ ಸೀಸನ್ನಲ್ಲಿ ಸಿರಾಜ್, ಹರ್ಷಲ್ ಪಟೇಲ್ಗಿಂತ ಕಡಿಮೆ ವಿಕೆಟ್ ಪಡೆದಿರಬಹುದು. ಆದ್ರೆ ಆರ್ಸಿಬಿಗೆ ಗೆಲುವು ತಂದುಕೊಡುವ ವಿಚಾರದಲ್ಲಿ, ಹರ್ಷಲ್ ಪಟೇಲ್ಗಿಂತ ಹೆಚ್ಚಿನ ಕೊಡುಗೆ ನೀಡುತ್ತಿದ್ದಾರೆ. ಅದ್ರಲ್ಲೂ ಈ ಸೀಸನ್ನಲ್ಲಿ ಅತೀ ಹೆಚ್ಚು ಡಾಟ್ ಬಾಲ್ಗಳನ್ನ ಮಾಡಿದವರ ಪಟ್ಟಿಯಲ್ಲಿ ಸಿರಾಜ್ ಅಗ್ರಸ್ಥಾನದಲ್ಲಿದ್ದಾರೆ.
138 ಬಾಲ್ಗಳಲ್ಲಿ 67 ಡಾಟ್ ಬಾಲ್ ಮಾಡಿರುವ ಸಿರಾಜ್! ಪ್ರಸ್ತುತ ಐಪಿಎಲ್ನಲ್ಲಿ ಮೊಹಮ್ಮದ್ ಸಿರಾಜ್ ಮಾಡಿರುವ 23 ಓವರ್ಗಳಲ್ಲಿ, ಅಂದ್ರೆ ಎಸೆದಿರುವ 138 ಬಾಲ್ಗಳಲ್ಲಿ ಬರೋಬ್ಬರಿ 67 ಡಾಟ್ ಬಾಲ್ಗಳನ್ನ ಎಸೆದಿದ್ದಾರೆ. ಈ ಸೀಸನ್ನಲ್ಲಿ ಆಡಿದ ಆರು ಪಂದ್ಯಗಳಲ್ಲೇ ಅತೀ ಹೆಚ್ಚು ಡಾಟ್ ಬಾಲ್ಗಳನ್ನ ಮಾಡಿರುವ ಸಿರಾಜ್, ಬೂಮ್ರಾ, ರಬಾಡಾ, ಬೌಲ್ಟ್ರಂತ ಸ್ಟಾರ್ ಬೌಲರ್ಗಳಿಗೆ ಶಾಕ್ ನೀಡಿದ್ದಾರೆ.
ರಸ್ಸೆಲ್ಗೆ ಒಂದೇ ಓವರ್ನಲ್ಲಿ 5 ಡಾಟ್ ಬಾಲ್ ಮಾಡಿದ್ದ ಸಿರಾಜ್! ಈ ಸೀಸನ್ನಲ್ಲಿ ಸಿರಾಜ್ ಎಷ್ಟು ಎಫೆಕ್ಟೀವ್ ಬೌಲರ್ ಅನ್ನೋದಕ್ಕೆ ಮೊಹಮ್ಮದ್ ಸಿರಾಜ್, ಕೆಕೆಆರ್ ತಂಡದ ದೈತ್ಯ ರಸ್ಸೆಲ್ನನ್ನ ಕಟ್ಟಿ ಹಾಕಿದ್ದೇ ಸಾಕ್ಷಿ. ಕೆಕೆಆರ್ ವಿರುದ್ಧ ಪಂದ್ಯದಲ್ಲಿ 17ನೇ ಓವರ್ನಲ್ಲಿ ಸಿರಾಜ್, ದೈತ್ಯ ರಸ್ಸೆಲ್ಗೆ ಮೊದಲ ಐದು ಬಾಲ್ಗಳಲ್ಲಿ ಒಂದೇ ಒಂದು ರನ್ ಬಿಟ್ಟುಕೊಡಲಿಲ್ಲ.
ಅತೀ ಹೆಚ್ಚು ಡಾಟ್ ಬಾಲ್ ಎಸೆದವರು ಪ್ರಸ್ತುತ ಐಪಿಎಲ್ನಲ್ಲಿ 67 ಡಾಟ್ ಬಾಲ್ಗಳನ್ನ ಮಾಡಿರುವ ಸಿರಾಜ್ ಅಗ್ರಸ್ಥಾನದಲ್ಲಿದ್ರೆ, ಪಂಜಾಬ್ ಕಿಂಗ್ಸ್ ತಂಡದ ಮೊಹಮ್ಮದ್ ಶಮಿ 61 ಡಾಟ್ ಬಾಲ್ಗಳನ್ನ ಮಾಡಿ 2ನೇ ಪ್ಲೇಸ್ನಲ್ಲಿದ್ದಾರೆ. ಕೊಲ್ಕತ್ತಾ ತಂಡದಲ್ಲಿರುವ ಕನ್ನಡಿಗ ಪ್ರಸಿದ್ಧ್ ಕೃಷ್ಣ್ 59 ಡಾಟ್ ಬಾಲ್ ಮಾಡಿದ್ರೆ, ಡೆಲ್ಲಿ ತಂಡದ ಆವೇಶ್ ಖಾನ್,56 ಡಾಟ್ ಬಾಲ್ಗಳನ್ನ ಮಾಡಿದ್ದಾರೆ. ಕೇವಲ ಈ ಸೀಸನ್ನಲ್ಲಿ ಮಾತ್ರವಲ್ಲ.. ಐಪಿಎಲ್ನಲ್ಲಿ ಪ್ರತೀ ಸೀಸನ್ನಲ್ಲೂ ಸಿರಾಜ್ ಡಾಟ್ ಬಾಲ್ಗಳನ್ನ ಎಸೆಯೋದ್ರಲ್ಲಿ ಪಂಟರ್ ಎನಿಸಿಕೊಂಡಿದ್ದಾರೆ.
ಐಪಿಎಲ್ನಲ್ಲಿ ಸಿರಾಜ್ ಡಾಟ್ ಬಾಲ್ 2020ರ ಐಪಿಎಲ್ನಲ್ಲಿ ಮೊಹಮ್ಮದ್ ಸಿರಾಜ್ 14 ಪಂದ್ಯಗಳಿಂದ ಒಟ್ಟು 140 ಡಾಟ್ ಬಾಲ್ಗಳನ್ನ ಮಾಡಿದ್ರೆ, 2019ರಲ್ಲಿ ಸಿರಾಜ್ 9 ಪಂದ್ಯಗಳಿಂದ 69 ಡಾಟ್ ಬಾಲ್ಗಳನ್ನ ಮಾಡಿದ್ರು. 2018ರಲ್ಲಿ 11 ಪಂದ್ಯಗಳಿಂದ 90 ಡಾಟ್ ಬಾಲ್ಗಳನ್ನ ಮಾಡಿದ್ರೆ, 2017ರ ಐಪಿಎಲ್ನಲ್ಲಿ ಹೈದರಾಬಾದ್ ತಂಡದ ಪರ 48 ಡಾಟ್ ಬಾಲ್ಗಳನ್ನ ಮಾಡಿದ್ರು. ಐಪಿಎಲ್ನಲ್ಲಿ ಅತೀ ಹೆಚ್ಚು ಡಾಟ್ ಬಾಲ್ಗಳನ್ನ ಮಾಡಿದ ಸಾಧನೆ, ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇನ್ ಹೆಸರಿನಲ್ಲಿದೆ. 2013ರಲ್ಲಿ ಹೈದರಾಬಾದ್ ತಂಡದಲ್ಲಿದ್ದ ಸ್ಟೇನ್, ಒಟ್ಟು 211 ಡಾಟ್ ಬಾಲ್ಗಳನ್ನ ಮಾಡಿದ್ರು. ಆದ್ರೀಗ ಸಿರಾಜ್ಗೆ ಸ್ಟೇನ್ ದಾಖಲೆ ಅಳಿಸಿ ಹಾಕಿ, ನೂತನ ದಾಖಲೆ ನಿರ್ಮಿಸುವ ಅವಕಾಶವಿದೆ.