IPL 2021: ನೀವೇನೂ ದೇಶಕ್ಕಾಗಿ ಆಡಲು ಹೋಗಿಲ್ಲ! ಬೇಕಿದ್ರೆ ಸ್ವಂತ ಖರ್ಚಿನಲ್ಲಿ ತಾಯ್ನಾಡಿಗೆ ವಾಪಸ್ಸಾಗಿ; ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್

IPL 2021: ಆಸಿಸ್ ಕ್ರಿಕೆಟಿಗರು ವೈಯಕ್ತಿಕವಾಗಿ ಐಪಿಎಲ್ನಲ್ಲಿ ಪಾಲ್ಗೊಂಡಿದ್ದಾರೆ. ಹೀಗಾಗಿ ಆಸಿಸ್ ಕ್ರಿಕೆಟಿಗರು ತವರಿಗೆ ವಾಪಸ್ ಆಗಲು, ನಾವು ವಿಶೇಷ ವಿಮಾನದ ವ್ಯವಸ್ಥೆ ಮಾಡುವುದಿಲ್ಲ ಅಂತಾ ಮಾರಿಸನ್ ಸ್ಪಷ್ಟಪಡಿಸಿದ್ದಾರೆ.

IPL 2021:  ನೀವೇನೂ ದೇಶಕ್ಕಾಗಿ ಆಡಲು ಹೋಗಿಲ್ಲ! ಬೇಕಿದ್ರೆ ಸ್ವಂತ ಖರ್ಚಿನಲ್ಲಿ ತಾಯ್ನಾಡಿಗೆ ವಾಪಸ್ಸಾಗಿ;  ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್
ಡೇವಿಡ್ ವಾರ್ನರ್, ಸ್ಟಿವ್ ಸ್ಮಿತ್
pruthvi Shankar

|

Apr 28, 2021 | 4:40 PM

ಭಾರತದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಎರಡನೆ ಅಲೆ ಐಪಿಎಲ್ನಲ್ಲಿ ಪಾಲ್ಗೊಂಡಿರುವ ವಿದೇಶಿ ಆಟಗಾರರನ್ನು ಬೆಚ್ಚಿ ಬೀಳಿಸಿದೆ. ಈಗಾಗಲೇ ನಾಲ್ವರು ವಿದೇಶಿ ಆಟಗಾರರು, ಭಾರತಲ್ಲಿ ರಕ್ಕಸ ರೂಪ ತಾಳಿರುವ ಕೊರೊನಾ ಮಾಹಾಮಾರಿಗೆ ಹೆದರಿ ತಮ್ಮ ತವರಿಗೆ ಹಿಂತುರಿಗಿದ್ದಾರೆ. ವಿದೇಶಿ ಕ್ರಿಕೆಟಿಗರಷ್ಟೇ ಅಲ್ಲ.. ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದ ಆರ್.ಅಶ್ವಿನ್ ಕೂಡ ಐಪಿಎಲ್ ತೊರೆದಿದ್ದಾರೆ. ಕೊರೊನಾಗೆ ಭಯ ಬಿದ್ದು ಈಗಾಗಲೇ ಆರ್ಸಿಬಿ ತಂಡದಲ್ಲಿದ್ದ ಕೇನ್ ರಿಚರ್ಡ್ಸನ್, ಌಡಮ್ ಜಂಪಾ, ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದ ಌಂಡ್ರೂ ಟೈ ಆಸ್ಟ್ರೇಲಿಯಾಕ್ಕೆ ವಾಪಸ್ ಹೋಗಿದ್ದಾರೆ. ಕೊರೊನಾ ಮಹಾಮಾರಿಗೆ ಹೆದರಿ ಐಪಿಎಲ್ ತೊರೆಯುವವರ ಪಟ್ಟಿಗೆ ಈಗ ಮತ್ತಿಬ್ಬರು ಆಸ್ಟ್ರೇಲಿಯಾ ಕ್ರಿಕೆಟಗರು ಸೇರೋದಕ್ಕೆ ರೆಡಿಯಾಗಿದ್ದಾರೆ.

ಐಪಿಎಲ್ ತೊರೆಯಲು ನಿರ್ಧರಿಸಿದ ಸ್ಮಿತ್ ವಾರ್ನರ್? V-3 : ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಟೀವ್ ಸ್ಮಿತ್ ಐಪಿಎಲ್ ತೊರೆಯುವ ಸಾಧ್ಯತೆಯಿದೆ. ಭಾರತದಲ್ಲಿ ಹೆಚ್ಚಾಗುತ್ತಿರುವ ಕೊವಿಡ್, ವಾರ್ನರ್ ಮತ್ತು ಸ್ಮಿತ್ಗೆ ಭಯ ಹುಟ್ಟಿಸಿದೆ. ಹೀಗಾಗಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸೋದಕ್ಕಿಂತ ಮೊದಲು, ಆಸ್ಟ್ರೇಲಿಯಾ ತೆರಳುವ ಸಾಧ್ಯತೆಯಿದೆ ಎನ್ನಲಾಗ್ತಿದೆ.

ವಾರ್ನರ್ ಮತ್ತು ಸ್ಮಿತ್ ಇಬ್ಬರು ಆದಷ್ಟು ಬೇಗ ಆಸ್ಟ್ರೇಲಿಯಾಕ್ಕೆ ವಾಪಸ್ ಆಗಲಿದ್ದಾರೆ ಎಂದು, ಆಸ್ಟ್ರೇಲಿಯಾದ ನೈನ್ನ್ಯೂಸ್ ವರದಿ ಮಾಡಿದೆ. ಈ ಸುದ್ದಿಯನ್ನ ಲಘುವಾಗಿ ತಳ್ಳಿ ಹಾಕುವಂತಿಲ್ಲ. ಯಾಕೆಂದ್ರೆ ಈಗಾಗಲೇ ಮೂವರು ಆಸ್ಟ್ರೇಲಿಯಾ ಕ್ರಿಕೆಟಿಗರು ಐಪಿಎಲ್ ತೊರೆದಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಭಾರತದ ವಿಮಾನಗಳಿಗೆ ನಿರ್ಭಂದ! ವಾರ್ನರ್ ಮತ್ತು ಸ್ಮಿತ್ ಐಪಿಎಲ್ ತೊರೆಯುವ ನಿರ್ಧಾರ ಕೈಗೊಂಡಿದ್ದು ಇದೇ ಕಾರಣಕ್ಕೆ ಎನ್ನಲಾಗ್ತಿದೆ. ಆದ್ರೆ ಸ್ಮಿತ್ ಮತ್ತು ವಾರ್ನರ್ ಮೇ 15ರ ವರೆಗೂ ಭಾರತದಲ್ಲೇ ಇರಬೇಕಾಗುತ್ತೆ. ಯಾಕಂದ್ರೆ ಮಂಗಳವಾರ ನಡೆದ ಆಸ್ಟ್ರೇಲಿಯಾ ಸರ್ಕಾರದ ಸಭೆಯಲ್ಲಿ, ಮೇ 15ರ ವರೆಗೆ ಆಸ್ಟ್ರೇಲಿಯಾದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂಧ ಹೇರಲಾಗಿದೆ.

ವಿಶೇಷ ವಿಮಾನ ಬೇಕು ಎಂದ ಲೈನ್ಗೆ ಆಸಿಸ್ ಪ್ರಧಾನಿ ತಿರುಗೇಟು! ಮುಂಬೈ ಇಂಡಿಯನ್ಸ್ ತಂಡದಲ್ಲಿರುವ ಆಸ್ಟ್ರೇಲಿಯಾದ ಕ್ರಿಸ್ ಲೈನ್, ಆಸಿಸ್ ಕ್ರಿಕೆಟಿಗರು ತವರಿಗೆ ತರಳಲು ವಿಶೇಷ ವಿಮಾನ ಕಳುಹಿಸುವಂತೆ ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಮನವಿ ಮಾಡಿದ್ರು. ಆದ್ರೆ ಲೈನ್ ಮನವಿಯನ್ನ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ತಿರಸ್ಕರಿಸಿದ್ದಾರೆ. ಆಸಿಸ್ ಕ್ರಿಕೆಟಿಗರು ವೈಯಕ್ತಿಕವಾಗಿ ಐಪಿಎಲ್ನಲ್ಲಿ ಪಾಲ್ಗೊಂಡಿದ್ದಾರೆ. ಹೀಗಾಗಿ ಆಸಿಸ್ ಕ್ರಿಕೆಟಿಗರು ತವರಿಗೆ ವಾಪಸ್ ಆಗಲು, ನಾವು ವಿಶೇಷ ವಿಮಾನದ ವ್ಯವಸ್ಥೆ ಮಾಡುವುದಿಲ್ಲ ಅಂತಾ ಮಾರಿಸನ್ ಸ್ಪಷ್ಟಪಡಿಸಿದ್ದಾರೆ.

ಮತ್ತೊಂದೆಡೆ ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಆಸ್ಟ್ರೇಲಿಯಾ ಕ್ರಿಕೆಟಿಗರ ಸಂಘ, ನಮ್ಮ ಕ್ರಿಕೆಟಿಗರನ್ನ ವಾಪಸ್ ಆಸ್ಟ್ರೇಲಿಯಾಕ್ಕೆ ಕರೆಸಿಕೊಳ್ಳುವ ಯೋಚನೆ ಮಾಡಿಲ್ಲ. ಆದ್ರೆ ನಾವು ಆಸ್ಟ್ರೇಲಿಯಾ ಕ್ರಿಕೆಟಿಗರೊಂದಿಗೆ ಸಂಪರ್ಕದಲ್ಲಿದ್ದು ಮೇಲ್ವಿಚಾರಣೆ ಮಾಡುತ್ತಿದ್ದೇವೆ ಎಂದಿದೆ.

ಸದ್ಯ ಐಪಿಎಲ್ನಲ್ಲಿ ಆಸ್ಟ್ರೇಲಿಯಾದ 14 ಕ್ರಿಕೆಟಿಗರಿದ್ದಾರೆ. ವಾರ್ನರ್, ಸ್ಮಿತ್, ಕಮಿನ್ಸ್ ಸೇರಿದಂತೆ ಡೆಲ್ಲಿ ತಂಡದ ಕೋಚ್ ಪಾಂಟಿಂಗ್, ಆರ್ಸಿಬಿ ತಂಡದ ಕೋಚ್ ಸೈಮನ್ ಕಾಟಿಚ್, ಭಾರತದಲ್ಲಿದ್ದಾರೆ. ಒಂದು ವೇಳೆ ಆಸ್ಟ್ರೇಲಿಯಾ ಕ್ರಿಕೆಟಿಗರು ತವರಿಗೆ ವಾಪಸ್ ಆಗ್ಬೇಕು ಅಂದ್ರೆ, ಮೇ 15ರ ವರೆಗೂ ಕಾಯಲೇಬೇಕು. ಇತ್ತ ಬಿಸಿಸಿಐ ವಿದೇಶಿ ಕ್ರಿಕೆಟಿಗರು ತವರಿಗೆ ವಾಪಸ್ ಆದ್ರೂ, ನಿಗದಿಯಂತೆ ಐಪಿಎಲ್ ನಡೆಸೋದಾಗಿ ತಿಳಿಸಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada