AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CSK vs SRH Predicted Playing 11: ಚೆನ್ನೈ ಪರ ಆಡುತ್ತಾರಾ ರಾಬಿನ್ ಉತ್ತಪ್ಪ? ಸನ್​ರೈಸರ್ಸ್ ತಂಡದ ಬದಲಾವಣೆಗಳೇನು?

ಬಲಿಷ್ಠ ಹಾಗೂ ಅನುಭವಿ ಆಟಗಾರರನ್ನು ಒಳಗೊಂಡ ಚೆನ್ನೈ ತಂಡ, ಅಂತಹದೇ ಮತ್ತೊಂದು ತಂಡ ಆದರೆ ಗೆಲುವು ಕಾಣುವಲ್ಲಿ ಎಡವುತ್ತಿರುವ ಸನ್‌ರೈಸರ್ಸ್ ಹೈದರಾಬಾದ್‌ನ್ನು ಎದುರಿಸಲಿದೆ.

CSK vs SRH Predicted Playing 11: ಚೆನ್ನೈ ಪರ ಆಡುತ್ತಾರಾ ರಾಬಿನ್ ಉತ್ತಪ್ಪ? ಸನ್​ರೈಸರ್ಸ್ ತಂಡದ ಬದಲಾವಣೆಗಳೇನು?
ಧೋನಿ ಹಾಗೂ ವಾರ್ನರ್
TV9 Web
| Updated By: ganapathi bhat|

Updated on:Sep 05, 2021 | 10:43 PM

Share

ಐಪಿಎಲ್ 2021 ಟೂರ್ನಿಯ 23ನೇ ಪಂದ್ಯವು ಇಂದು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿದೆ. ಆಡಿರುವ 5 ಪಂದ್ಯಗಳಲ್ಲಿ 4ನ್ನು ಗೆದ್ದು ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ಇರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ, 5‌ ಪಂದ್ಯಗಳ ಪೈಕಿ ಕೇವಲ 1 ಪಂದ್ಯ ಗೆದ್ದು ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಬಲಿಷ್ಠ ಹಾಗೂ ಅನುಭವಿ ಆಟಗಾರರನ್ನು ಒಳಗೊಂಡ ಚೆನ್ನೈ ತಂಡ, ಅಂತಹದೇ ಮತ್ತೊಂದು ತಂಡ ಆದರೆ ಗೆಲುವು ಕಾಣುವಲ್ಲಿ ಎಡವುತ್ತಿರುವ ಸನ್‌ರೈಸರ್ಸ್ ಹೈದರಾಬಾದ್‌ನ್ನು ಎದುರಿಸಲಿದೆ. ಆರ್‌ಸಿಬಿ ವಿರುದ್ಧ ಗೆದ್ದು ಬೀಗಿರುವ ಚೆನ್ನೈ, ಸೂಪರ್ ಓವರ್‌ನಲ್ಲಿ ಕೂದಲೆಳೆಯ ಅಂತರದಲ್ಲಿ ಸೋತ ಸನ್‌ರೈಸರ್ಸ್ ತಂಡವನ್ನು ಕಟ್ಟಿಹಾಕುತ್ತಾ ಎಂದು ಕಾದುನೋಡಬೇಕಿದೆ.

ಚೆನ್ನೈ ತಂಡ ಗಾಯಕ್ವಾಡ್, ಡುಪ್ಲೆಸಿಸ್, ರೈನಾ, ಮೊಯೀನ್ ಅಲಿ, ರಾಯುಡು, ಜಡೇಜಾ, ಧೋನಿ ಮೊದಲಾದ ಘಟಾನುಘಟಿ ದಾಂಡಿಗರನ್ನು ಹೊಂದಿದೆ. ಇಮ್ರಾನ್ ತಾಹಿರ್, ಚಹರ್, ಸ್ಯಾಮ್ ಕುರ್ರನ್ ಹಾಗೂ ಜಡೇಜಾ ಬೌಲಿಂಗ್‌ನಲ್ಲೂ ಕಮಾಲ್ ಮಾಡುವ ಸಾಧ್ಯತೆ ಇದೆ. ಇನ್ನು ವಿಶೇಷ ಅಂದರೆ ರಾಯುಡು ಬದಲು ಇಂದು ರಾಬಿನ್ ಉತ್ತಪ್ಪ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿದೆ.

ಬೇರ್‌ಸ್ಟೋ, ವಾರ್ನರ್ ಬಲಿಷ್ಢ ಓಪನಿಂಗ್, ಕೇನ್ ವಿಲಿಯಮ್ಸನ್ ಒನ್‌ಡೌನ್ ಆಟ, ಮನೀಶ್ ಪಾಂಡೆ, ವಿಜಯ್ ಶಂಕರ್ ಮುಂತಾದ ದಾಂಡಿಗರು ಸನ್‌ರೈಸರ್ಸ್ ತಂಡದಲ್ಲಿದ್ದಾರೆ. ರಶೀದ್ ಖಾನ್, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್ ಮೊದಲಾದ ಬೌಲರ್‌ಗಳೂ ತಂಡಕ್ಕೆ ಆಸರೆಯಾಗಬಲ್ಲರು. ಭುವನೇಶ್ವರ್ ಕುಮಾರ್ ಅಥವಾ ಖಲೀಲ್ ಅಹ್ಮದ್ ಈ ಪೈಕಿ ಯಾರು ತಂಡದಲ್ಲಿ ಇರುತ್ತಾರೆ ಎಂದು ಇನ್ನಷ್ಟೇ ಖಚಿತವಾಗಬೇಕಿದೆ.

ಚೆನ್ನೈ ಸೂಪರ್ ಕಿಂಗ್ಸ್ ಸಂಭಾವ್ಯ ಪ್ಲೇಯಿಂಗ್ ಇಲೆವೆನ್: 1) ಋತುರಾಜ್ ಗಾಯಕವಾಡ್ 2) ಫಾಫ್ ಡು ಪ್ಲೆಸಿಸ್ 3) ಸುರೇಶ್ ರೈನಾ 4) ಮೊಯೀನ್ ಅಲಿ 5) ರಾಬಿನ್ ಉತ್ತಪ್ಪ / ಅಂಬಟಿ ರಾಯುಡು 6) ರವೀಂದ್ರ ಜಡೇಜಾ 7) ಎಂ.ಎಸ್. ಧೋನಿ (ನಾಯಕ/ ವಿಕೆಟ್ ಕೀಪರ್) 8) ಸ್ಯಾಮ್ ಕರ್ರನ್ 9) ದೀಪಕ್ ಚಹರ್ 10) ಶಾರ್ದುಲ್ ಠಾಕೂರ್ 11) ಇಮ್ರಾನ್ ತಾಹಿರ್

ಸನ್​ರೈಸರ್ಸ್ ಹೈದರಾಬಾದ್ ಸಂಭಾವ್ಯ ಪ್ಲೇಯಿಂಗ್ ಇಲೆವೆನ್: 1) ಡೇವಿಡ್ ವಾರ್ನರ್ (ನಾಯಕ) 2) ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್) 3) ಕೇನ್ ವಿಲಿಯಮ್ಸನ್ 4) ಮನೀಶ್ ಪಾಂಡೆ 5) ವಿಜಯ್ ಶಂಕರ್ 6) ಅಭಿಷೇಕ್ ಶರ್ಮಾ 7) ಕೇದಾರ್ ಜಾಧವ್ 8) ರಶೀದ್ ಖಾನ್ 9) ಜಗದೀಶ್ ಸುಚಿತ್ 10) ಭುವನೇಶ್ವರ್ ಕುಮಾರ್ / ಖಲೀಲ್ ಅಹ್ಮದ್ 11) ಸಿದ್ದಾರ್ಥ್ ಕೌಲ್

ಇದನ್ನೂ ಓದಿ: IPL 2021 Points Table: ಅಂಕಪಟ್ಟಿಯಲ್ಲಿ ಆರ್‌ಸಿಬಿ ಸುಲ್ತಾನ್; ಮತ್ತೆ‌‌‌ ಮೊದಲ ಸ್ಥಾನಕ್ಕೇರಿದ ಕೊಹ್ಲಿ ಪಡೆ!

Rashmika Mandanna: ‘ಈ ಸಲ ಕಪ್​ ನಮ್ದೇ’ ಎಂದ ರಶ್ಮಿಕಾ ಮಂದಣ್ಣಗೆ ಆರ್​ಸಿಬಿ ಫ್ಯಾನ್ಸ್​ ಫಿದಾ (CSK vs SRH Team Prediction IPL 2021 CSK vs SRH at Arun Jaitley Stadium Delhi)

Published On - 5:48 pm, Wed, 28 April 21

ತಿಮರೋಡಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ: ಪೂಜಾರ್, ವಕೀಲ
ತಿಮರೋಡಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ: ಪೂಜಾರ್, ವಕೀಲ
ಎನ್​ಡಿಆರ್​ಎಫ್ ನಿಯಮ ಉಲ್ಲಂಘಿಸಿ ವಯನಾಡ್​ಗೆ ನೆರವು ನೀಡಲಾಗಿದೆ: ಅಶೋಕ
ಎನ್​ಡಿಆರ್​ಎಫ್ ನಿಯಮ ಉಲ್ಲಂಘಿಸಿ ವಯನಾಡ್​ಗೆ ನೆರವು ನೀಡಲಾಗಿದೆ: ಅಶೋಕ
‘ಸಾರಥಿ’ ಸಿನಿಮಾ ಬಿಡುಗಡೆ ಸಮಯದಲ್ಲಿ ಪಟ್ಟ ಕಷ್ಟ ನೆನೆದ ನಿರ್ಮಾಪಕ
‘ಸಾರಥಿ’ ಸಿನಿಮಾ ಬಿಡುಗಡೆ ಸಮಯದಲ್ಲಿ ಪಟ್ಟ ಕಷ್ಟ ನೆನೆದ ನಿರ್ಮಾಪಕ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ