IPL 2021: ಭಾರತದಲ್ಲಿ ಸ್ವಚ್ಛತಾ ವ್ಯವಸ್ಥೆ ಸರಿಯಿಲ್ಲ, ಬಯೋ ಬಬಲ್​ ನಿಯಮ ಸ್ವಲ್ಪವೂ ಸುರಕ್ಷಿತವಲ್ಲ! ಅದಕ್ಕಾಗಿ ಐಪಿಎಲ್ ತೊರೆದೆ; ಆಡಮ್ ಜಂಪಾ

IPL 2021: ಇದುವರೆಗೆ ನಾನು ಭಾಗವಹಿಸಿದ ಎಲ್ಲಾ ಬಯೋ ಬಬಲ್​ನಲ್ಲಿ ಇದು ಅತ್ಯಂತ ಅಸುರಕ್ಷಿತವಾಗಿದೆ. ಪಂದ್ಯಾವಳಿ ಕಳೆದ ವರ್ಷದಂತೆಯೇ ಈ ವರ್ಷ್​ವೂ ಯುಎಇಯಲ್ಲಿ ನಡೆಯಬೇಕಿತ್ತು ಎಂದಿದ್ದಾರೆ.

IPL 2021: ಭಾರತದಲ್ಲಿ ಸ್ವಚ್ಛತಾ ವ್ಯವಸ್ಥೆ ಸರಿಯಿಲ್ಲ, ಬಯೋ ಬಬಲ್​ ನಿಯಮ ಸ್ವಲ್ಪವೂ ಸುರಕ್ಷಿತವಲ್ಲ! ಅದಕ್ಕಾಗಿ ಐಪಿಎಲ್ ತೊರೆದೆ; ಆಡಮ್ ಜಂಪಾ
* ಆ್ಯಡಂ ಝಂಪಾ (ರಾಯಲ್ ಚಾಲೆಂಜರ್ಸ್ ಬೆಂಗಳೂರು)
Follow us
ಪೃಥ್ವಿಶಂಕರ
|

Updated on: Apr 28, 2021 | 2:54 PM

ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಆಡಮ್ ಜಂಪಾ ವೈಯಕ್ತಿಕ ಕಾರಣಗಳಿಗಾಗಿ ಐಪಿಎಲ್ 2021 ಅನ್ನು ಮಧ್ಯದಲ್ಲಿ ಬಿಟ್ಟು ಸ್ವದೇಶಕ್ಕೆ ತೆರಳಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರಿನೊಂದಿಗೆ ಇದ್ದ ಆಡಮ್ ಜಂಪಾ ಅವರು ಏಪ್ರಿಲ್ 27 ರಂದು ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಮಧ್ಯದಲ್ಲಿ ಬಿಡಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದರು. ಈ ಬಗ್ಗೆ ಸ್ವದೇಶಕ್ಕೆ ತೆರಳಿ ಮಾತಾನಾಡಿರುವ ಜಂಪಾ ಹೇಳಿದ್ದು ಹೀಗೆ, ಇದುವರೆಗೆ ನಾನು ಭಾಗವಹಿಸಿದ ಎಲ್ಲಾ ಬಯೋ ಬಬಲ್​ನಲ್ಲಿ ಇದು ಅತ್ಯಂತ ಅಸುರಕ್ಷಿತವಾಗಿದೆ. ಪಂದ್ಯಾವಳಿ ಕಳೆದ ವರ್ಷದಂತೆಯೇ ಈ ವರ್ಷ್​ವೂ ಯುಎಇಯಲ್ಲಿ ನಡೆಯಬೇಕಿತ್ತು ಎಂದಿದ್ದಾರೆ.

ಭಾರತದಲ್ಲಿ ಈ ವ್ಯವಸ್ಥೆ ಅತ್ಯಂತ ದುರ್ಬಲವಾಗಿದೆ ಕಳೆದ ವರ್ಷ ಪಂದ್ಯಾವಳಿ ನಡೆದ ಯುಎಇಯಲ್ಲಿ ತಾನು ಹೆಚ್ಚು ಸುರಕ್ಷಿತ ಎಂದು ಭಾವಿಸಿದ್ದೇನೆ. ಇದುವರೆಗೆ ನಾನು ಭಾಗವಹಿಸಿದ ಎಲ್ಲಾ ಬಯೋ ಬಬಲ್​ನಲ್ಲಿ ಇದು ಅತ್ಯಂತ ಅಸುರಕ್ಷಿತವಾಗಿದೆ. ಹೀಗಾಗಿ ನಾನು ಐಪಿಎಲ್ ತೊರೆಯುವುದಕ್ಕೆ ಇದೇ ಕಾರಣ ಎಂದು ನಾನು ಭಾವಿಸುತ್ತೇನೆ. ನಾವು ಯಾವಾಗಲೂ ಸ್ವಚ್ಚತೆಯ ಬಗ್ಗೆ ಹೆಚ್ಚು ಗಮನ ನೀಡುತ್ತೇವೆ, ಜೊತೆಗೆ ಹೆಚ್ಚುವರಿ ಜಾಗರೂಕತೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಭಾರತದಲ್ಲಿ ಈ ವ್ಯವಸ್ಥೆ ಅತ್ಯಂತ ದುರ್ಬಲವಾಗಿದೆ ಎಂದು ನಾನು ಭಾವಿಸಿದೆ. ಆರು ತಿಂಗಳ ಹಿಂದೆ ದುಬೈನಲ್ಲಿ ಐಪಿಎಲ್ ಆಯೋಜಿಸಲಾಗಿತ್ತು, ಆದರೆ ನಮಗೆ ಅಲ್ಲಿ ಈ ಭಾವನೆ ಇರಲಿಲ್ಲ. ನಾನು ಅಲ್ಲಿ ತುಂಬಾ ಸುರಕ್ಷಿತ ಎಂದು ಭಾವಿಸಿದೆ. ವೈಯಕ್ತಿಕವಾಗಿ ಹೇಳಬೇಕೆಂದರೆ, ಈ ಐಪಿಎಲ್‌ ನಡೆಸಲು ದುಬೈ ಉತ್ತಮ ಆಯ್ಕೆಯಾಗಿದೆ, ಆದರೆ ಇದರಲ್ಲಿರುವ ಸಾಕಷ್ಟು ರಾಜಕೀಯದಿಂದಾಗಿ ಐಪಿಎಲ್​ ದುಬೈನಲ್ಲಿ ನಡೆಯಲಿಲ್ಲ ಎಂದಿದ್ದಾರೆ.

ಜಂಪಾಗೆ 1.5 ಕೋಟಿ ರೂ ನೀಡಿದ್ದ ಆರ್ಸಿಬಿ ಈ ವರ್ಷ ಟಿ 20 ವಿಶ್ವಕಪ್ ಭಾರತದಲ್ಲಿ ನಡೆಯಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಬಹುಶಃ ಕ್ರಿಕೆಟ್ ಜಗತ್ತಿನಲ್ಲಿ ಮುಂದಿನ ಚರ್ಚೆ ಈ ಬಗ್ಗೆ ಇರುತ್ತದೆ. ಹಲವಾರು ಕಾರಣಗಳಿಗಾಗಿ ಐಪಿಎಲ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇನೆ. ಇಲ್ಲಿ ಕೋವಿಡ್ಗೆ ಸಂಬಂಧಿಸಿದ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಖಂಡಿತವಾಗಿಯೂ ನನಗೆ ತಂಡದಲ್ಲಿ ಆಡಲು ಅವಕಾಶ ಸಿಗಲಿಲ್ಲ, ನಾನು ತರಬೇತಿಗಾಗಿ ಹೋಗುತ್ತಿದ್ದೆ ಮತ್ತು ನನಗೆ ಯಾವುದೇ ಸ್ಫೂರ್ತಿ ಸಿಗುತ್ತಿಲ್ಲ. ಬಯೋ ಬಬಲ್​ನಿಂದಾಗಿರುವ ಆಯಾಸ ಮತ್ತು ದೇಶೀಯ ವಿಮಾನಗಳಿಗೆ ಸಂಬಂಧಿಸಿದ ಸುದ್ದಿಗಳಂತಹ ಇತರ ವಿಷಯಗಳಿಂದ ನಾನು ಐಪಿಎಲ್ ತೊರೆಯಲು ನಿರ್ಧರಿಸಿದೆ ಎಂದಿದ್ದಾರೆ. ಪ್ರಸಕ್ತ ಆವೃತ್ತಿಯಲ್ಲಿ ಆಡಲು ಜಂಪಾಗೆ ಒಂದು ಪಂದ್ಯವೂ ಸಿಕ್ಕಿಲ್ಲ. ಅವರನ್ನು ತಂಡವು 1.5 ಕೋಟಿ ರೂ ನೀಡಿ ಖರೀದಿಸಿತ್ತು.

ಐಪಿಎಲ್ ಮುಂದುವರಿಕೆ ಕುರಿತು ತೀಕ್ಷ್ಣ ಹೇಳಿಕೆ ಐಪಿಎಲ್ ಮುಂದುವರಿಕೆ ಬಗ್ಗೆ ಹೇಳಿರುವ ಜಂಪಾ, ಕೆಲವರು ಕ್ರಿಕೆಟ್‌ನಿಂದ ಪರಿಹಾರ ಪಡೆಯಬಹುದು ಎಂದು ಅನೇಕ ಜನರು ಹೇಳುತ್ತಿದ್ದಾರೆ ಆದರೆ ಇದು ತುಂಬಾ ವೈಯಕ್ತಿಕ ಉತ್ತರವಾಗಿದೆ. ಒಂದು ಕುಟುಂಬದ ಸದಸ್ಯ ಸಾವಿನೊಂದಿಗೆ ಹೋರಾಡುತ್ತಿದ್ದರೆ, ಅವನು ಬಹುಶಃ ಕ್ರಿಕೆಟ್ ಬಗ್ಗೆ ಯೋಚಿಸುವುದಿಲ್ಲ. ಆರ್ಥಿಕ ನಷ್ಟದ ಬಗ್ಗೆಯೂ ಕಾಳಜಿ ವಹಿಸುವುದಿಲ್ಲ. ಖಂಡಿತವಾಗಿಯೂ ಪಂದ್ಯಾವಳಿಯ ಮಧ್ಯದಿಂದ ಹೋಗುವುದರಿಂದ ಆರ್ಥಿಕ ನಷ್ಟ ಉಂಟಾಗುತ್ತದೆ, ಆದರೆ ನನ್ನ ಮಾನಸಿಕ ಆರೋಗ್ಯವನ್ನು ಸ್ಥಿಮಿತದಲ್ಲಿ ಇಟ್ಟುಕೊಳ್ಳಲು ನಾನು ಬಯಸುತ್ತೇನೆ ಎಂದು ಜಂಪಾ ಹೇಳಿದ್ದಾರೆ.

ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ