ಭಾವನಾತ್ಮಕ ಟ್ವೀಟ್; ಕೊರೊನಾ ವಿರುದ್ಧ ಹೋರಾಟಕ್ಕೆ ದೊಡ್ಡ ಮೊತ್ತದ ಧನಸಹಾಯ ಮಾಡಿದ ಆಸಿಸ್ ವೇಗಿ ಬ್ರೆಟ್ ಲೀ
ಬ್ರೆಟ್ ಲೀ, ಕೊರೊನಾ ಸೋಂಕಿತರಿಗೆ ಭಾರತದಾದ್ಯಂತ ಆಸ್ಪತ್ರೆಗಳಿಗೆ ಆಕ್ಸಿಜನ್ ನೀಡಲು, 1 ಬಿಟ್ ಕಾಯಿನ್ ಸಹಾಯ ಮಾಡಿದ್ದಾರೆ. 1 ಬಿಟ್ ಕಾಯಿನ್ ಅಂದರೆ ಭಾರತೀಯ ರೂಪಾಯಿಗಳಲ್ಲಿ 41 ಲಕ್ಷ.
ಪ್ಯಾಟ್ ಕಮ್ಮಿನ್ಸ್ ಬಳಿಕ ಮತ್ತೋರ್ವ ಕ್ರಿಕೆಟಿಗ ಭಾರತದ ಕೊವಿಡ್ ಪರಿಹಾರ ನಿಧಿಗೆ ಸಹಾಯಹಸ್ತ ಚಾಚಿದ್ದಾರೆ. ಆಸ್ಟ್ರೇಲಿಯಾ ವೇಗಿ ಬ್ರೆಟ್ ಲೀ ಭಾರತದ ಕಠಿಣ ಪರಿಸ್ಥಿತಿಯಲ್ಲಿ ಆರ್ಥಿಕ ಸಹಾಯ ನೀಡಿದ್ದಾರೆ. 2012ರಲ್ಲಿ ಆಸಿಸ್ ಪರ ಕೊನೆಯ ಪಂದ್ಯ ಆಡಿದ ಬ್ರೆಟ್ ಲೀ, ಐಪಿಎಲ್ 2021ರ ತಜ್ಞರ ಸಮಿತಿಯಲ್ಲಿ ಭಾಗಿಯಾಗಿದ್ದಾರೆ. ಲೀ ಭಾರತದಲ್ಲಿದ್ದಾರೆ.
ಭಾರತದಲ್ಲಿ ಕೊರೊನಾ ಪ್ರಕರಣಗಳು ತೀವ್ರ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದು ಹಾಗೂ ಅದರಿಂದ ಐಪಿಎಲ್, ಕ್ರಿಕೆಟಿಗರಿಗೆ ಕೂಡ ಪರೋಕ್ಷವಾಗಿ ಸಮಸ್ಯೆ ಉಂಟಾಗಿರುವುದು ಕಳೆದ ಎರಡು ದಿನಗಳಿಂದ ತಿಳಿದು ಬಂದಿದೆ. ದಿನದ ಹಿಂದೆ, ಪ್ಯಾಟ್ ಕಮ್ಮಿನ್ಸ್ ಭಾರತದ ಕೊವಿಡ್ ಪರಿಹಾರ ನಿಧಿಗೆ ಧನಸಹಾಯವನ್ನು ಮಾಡಿದ್ದರು. ಆ ಬಳಿಕ, ಇದೀಗ ಬ್ರೆಟ್ ಲೀ ಕೊರೊನಾ ಬಿಕ್ಕಟ್ಟು ಪರಿಹಾರಕ್ಕೆ ಸಹಾಯ ಮಾಡಿದ್ದಾರೆ.
ಬ್ರೆಟ್ ಲೀ, ಕೊರೊನಾ ಸೋಂಕಿತರಿಗೆ ಭಾರತದಾದ್ಯಂತ ಆಸ್ಪತ್ರೆಗಳಿಗೆ ಆಕ್ಸಿಜನ್ ನೀಡಲು, 1 ಬಿಟ್ ಕಾಯಿನ್ ಸಹಾಯ ಮಾಡಿದ್ದಾರೆ. 1 ಬಿಟ್ ಕಾಯಿನ್ ಅಂದರೆ ಭಾರತೀಯ ರೂಪಾಯಿಗಳಲ್ಲಿ 41 ಲಕ್ಷ. 44 ವರ್ಷದ ಬ್ರೆಟ್ ಲೀ ತಮ್ಮ ಟ್ವಿಟರ್ ಖಾತೆಯಲ್ಲಿ ಭಾವನಾತ್ಮಕ ಸಾಲುಗಳನ್ನು ಬರೆದು ಧನಸಹಾಯ ಮಾಡಿದ್ದಾರೆ. ಭಾರತ ನನಗೆ ಎರಡನೇ ಮನೆ ಇದ್ದಂತೆ. ಈ ದೇಶದಲ್ಲಿ ಪಡೆದ ಪ್ರೀತಿ ಮತ್ತು ಅಭಿಮಾನವನ್ನು ಅವರು ಸ್ಮರಿಸಿಕೊಂಡಿದ್ದಾರೆ. ಆಡುತ್ತಿದ್ದಾಗಲೂ, ನಿವೃತ್ತಿ ಹೊಂದಿದ ಬಳಿಕವೂ ಭಾರತದ ಜನರ ಪ್ರೀತಿ ತಮಗೆ ಸಿಕ್ಕಿದೆ ಎಂದು ಬರೆದುಕೊಂಡಿದ್ದಾರೆ.
ಕೊರೊನಾ ಸೋಂಕಿನ ಈ ದುರಿತ ಕಾಲದಲ್ಲಿ ಎಲ್ಲರೂ ಜೊತೆಯಾಗಿರುವಂತೆಯೂ ಬ್ರೆಟ್ ಲೀ ಕೇಳಿಕೊಂಡಿದ್ದಾರೆ. ಮುಂಚೂಣಿಯ ಕಾರ್ಯಕರ್ತರ ಕೆಲಸ ಕಾರ್ಯಗಳನ್ನು ಅವರು ಶ್ಲಾಘಿಸಿದ್ದಾರೆ. ಅಲ್ಲದೆ, ಕೊರೊನಾ ನಿಯಂತ್ರಣಕ್ಕೆ ಜನರು ಕೈ ತೊಳೆಯುವುದು, ಸಾಮಾಜಿಕ ಅಂತರ ಪಾಲಿಸಿಕೊಳ್ಳುವುದು, ಮಾಸ್ಕ್ ಧರಿಸುವುದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕೇಳಿಕೊಂಡಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ಯಾಟ್ ಕಮ್ಮಿನ್ಸ್ ಧನಸಹಾಯ ಮಾಡಿರುವುದಕ್ಕೆ ಬ್ರೆಟ್ ಲೀ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
Well done @patcummins30 ?? pic.twitter.com/iCeU6933Kp
— Brett Lee (@BrettLee_58) April 27, 2021
ಪಿಎಂ ಕೇರ್ಸ್ ಫಂಡ್‌ಗೆ 50,000 ಅಮೇರಿಕನ್ ಡಾಲರ್ ಹಣ ದೇಣಿಗೆ ವಿದೇಶಿ ಮೂಲದ ಆಟಗಾರ ತನ್ನ ಹಣವನ್ನು ಪಿಎಮ್ ಫಂಡ್ಗೆ ಕೊಟ್ಟು ಎಲ್ಲರಿಗೂ ಮಾರ್ಗದರ್ಶಿ ಆಗಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಪರ ಆಡುವ ಆಸ್ಟ್ರೇಲಿಯಾದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಸೋಮವಾರ ಭಾರತೀಯ ಆಸ್ಪತ್ರೆಗಳಿಗೆ ಆಮ್ಲಜನಕ ಸಾಮಗ್ರಿಗಳನ್ನು ಖರೀದಿಸಲು ಪಿಎಂ ಕೇರ್ಸ್ ಫಂಡ್‌ಗೆ 50,000 ಅಮೇರಿಕನ್ ಡಾಲರ್ ಹಣವನ್ನು ದೇಣಿಗೆ ನೀಡುವುದಾಗಿ ಘೋಷಿಸಿದ್ದರು. ದೇಶವು COVID-19 ಪ್ರಕರಣಗಳ ಉಲ್ಬಣವನ್ನು ಎದುರಿಸುತ್ತಿದೆ. ಹೀಗಾಗಿ ಐಪಿಎಲ್‌ನ ಸಹೋದ್ಯೋಗಿಗಳು ಸಹಕರಿಸಬೇಕೆಂದು ಅವರು ಆಗ್ರಹಿಸಿದ್ದರು.
(IPL 2021 Former Australian Fast Bowler Brett Lee donates for Oxygen Supplies in India)
Published On - 11:15 pm, Tue, 27 April 21