Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ಸ್ವದೇಶಕ್ಕೆ ಮರಳಲು ಎಲ್ಲಾ ವ್ಯವಸ್ಥೆ ಮಾಡಿಕೊಡುತ್ತೇವೆ; ಐಪಿಎಲ್​ನಲ್ಲಿ ಭಾಗಿಯಾಗಿರುವ ವಿದೇಶಿ ಕ್ರಿಕೆಟಿಗರಿಗೆ ಬಿಸಿಸಿಐ ವಿಶ್ವಾಸ

ನಿಮ್ಮಲ್ಲಿ ಬಹುತೇಕ ಕ್ರಿಕೆಟಿಗರು ಟೂರ್ನಿಯ ಮುಕ್ತಾಯದ ಬಳಿಕ ಮನೆಗೆ ಮರಳುವುದು ಹೇಗೆ ಎಂದು ಚಿಂತೆಗೀಡಾಗಿದ್ದೀರಿ ಎಂದು ತಿಳಿದಿದೆ. ಆದರೆ, ಆ ಬಗ್ಗೆ ನೀವು ಗಾಬರಿ ಪಡಬೇಕಾದ್ದಿಲ್ಲ. ಸದ್ಯದ ಪರಿಸ್ಥಿತಿಯ ಬಗ್ಗೆ ಬಿಸಿಸಿಐ ಕೂಡ ಗಮನವಿರಿಸಿದೆ ಎಂದು ಬಿಸಿಸಿಐ ಹೇಳಿದೆ.

IPL 2021: ಸ್ವದೇಶಕ್ಕೆ ಮರಳಲು ಎಲ್ಲಾ ವ್ಯವಸ್ಥೆ ಮಾಡಿಕೊಡುತ್ತೇವೆ; ಐಪಿಎಲ್​ನಲ್ಲಿ ಭಾಗಿಯಾಗಿರುವ ವಿದೇಶಿ ಕ್ರಿಕೆಟಿಗರಿಗೆ ಬಿಸಿಸಿಐ ವಿಶ್ವಾಸ
ಐಪಿಎಲ್ 2021
Follow us
TV9 Web
| Updated By: ganapathi bhat

Updated on:Sep 05, 2021 | 10:45 PM

ಐಪಿಎಲ್ 2021 ಟೂರ್ನಿ ಮುಕ್ತಾಯವಾದ ಬಳಿಕ ತಮ್ಮ ತಮ್ಮ ದೇಶಕ್ಕೆ ಮರಳಲು ಆಟಗಾರರಿಗೆ ಏನೇನು ಸೌಲಭ್ಯ ನೀಡಬೇಕೋ ಅದೆಲ್ಲವನ್ನೂ ನಾವು ಒದಗಿಸುತ್ತೇವೆ. ಐಪಿಎಲ್‌ನಲ್ಲಿ ಭಾಗಿಯಾಗಿರುವ ಕ್ರಿಕೆಟರ್ಸ್ ಸ್ವದೇಶಕ್ಕೆ ಮರಳಲು ಬೇಕಾದ ವ್ಯವಸ್ಥೆ ಎಲ್ಲವನ್ನೂ ನಾವು ಮಾಡಿಕೊಡುತ್ತೇವೆ ಎಂದು ಬಿಸಿಸಿಐ ಇಂದು ತಿಳಿಸಿದೆ. ಭಾರತದಲ್ಲಿ ಒಂದೆಡೆ ಕೊವಿಡ್19 ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಮತ್ತೊಂದೆಡೆ ಐಪಿಎಲ್ 2021 ಟೂರ್ನಮೆಂಟ್ ಕೂಡ ಸಾಗುತ್ತಿದೆ. ಈ ನಡುವೆ ಐಪಿಎಲ್‌ನಲ್ಲಿ ಭಾಗಿಯಾಗಿದ್ದ ಮೂವರು ವಿದೇಶಿ ಕ್ರಿಕೆಟಿಗರು ಸರಣಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಸ್ವದೇಶಕ್ಕೆ ವಾಪಸಾಗಿದ್ದಾರೆ. ಆಸ್ಟ್ರೇಲಿಯಾದ ಮೂರು ಜನ ಕ್ರಿಕೆಟರ್ಸ್ ತಮ್ಮ ದೇಶಕ್ಕೆ ಮರಳಿದ್ದಾರೆ. ಈ ಘಟನಾವಳಿಗಳ ಬೆನ್ನಲ್ಲೇ ಬಿಸಿಸಿಐ ಹೀಗೆ ಹೇಳಿದೆ.

ನಿಮ್ಮಲ್ಲಿ ಬಹುತೇಕ ಕ್ರಿಕೆಟಿಗರು ಟೂರ್ನಿಯ ಮುಕ್ತಾಯದ ಬಳಿಕ ಮನೆಗೆ ಮರಳುವುದು ಹೇಗೆ ಎಂದು ಚಿಂತೆಗೀಡಾಗಿದ್ದೀರಿ ಎಂದು ತಿಳಿದಿದೆ. ಆದರೆ, ಆ ಬಗ್ಗೆ ನೀವು ಗಾಬರಿ ಪಡಬೇಕಾದ್ದಿಲ್ಲ. ಸದ್ಯದ ಪರಿಸ್ಥಿತಿಯ ಬಗ್ಗೆ ಬಿಸಿಸಿಐ ಕೂಡ ಗಮನವಿರಿಸಿದೆ. ಎಲ್ಲಾ ಆಟಗಾರರು ಟೂರ್ನಿ ಮುಗಿದ ಬಳಿಕ ಸ್ವದೇಶಕ್ಕೆ ಮರಳಲು ವ್ಯವಸ್ಥೆ ಮಾಡಿಕೊಡುತ್ತೇವೆ. ಅದಕ್ಕಾಗಿ ಸಂಸ್ಥೆ ಸರ್ಕಾರದೊಂದಿಗೆ ವಿಚಾರ ಮಾಡಿದೆ ಎಂದು ಬಿಸಿಸಿಐ ಆಟಗಾರರನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ ಹೇಳಿದೆ.

ಯಾರೆಲ್ಲಾ ಐಪಿಎಲ್​ನಿಂದ ಅರ್ಧಕ್ಕೆ ಮರಳಿದ್ದಾರೆ? ಸದ್ಯದ ಮಟ್ಟಿಗೆ ಐದು ಆಟಗಾರರು ಐಪಿಎಲ್‌ನಿಂದ ವಾಪಸ್ ಆಗಿದ್ದಾರೆ. ಡೆಲ್ಲಿ ತಂಡದ ಆರ್. ಅಶ್ವಿನ್, ರಾಜಸ್ಥಾನ್ ರಾಯಲ್ಸ್ ತಂಡದ ಸೀಮರ್ ಆಂಡ್ರ್ಯೂ ಟೈ ಮತ್ತು ತಂಡದ ಸಹ ಆಟಗಾರ ಲಿಯಾಮ್ ಲಿವಿಂಗ್ಸ್ಟನ್ ಮನೆಗೆ ಮರಳಿದ್ದಾರೆ. ಸೋಮವಾರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟ್ವಿಟರ್ ಹ್ಯಾಂಡಲ್ ಮೂಲಕ ಲೆಗ್ ಸ್ಪಿನ್ನರ್ ಆಡಮ್ ಜಂಪಾ ಮತ್ತು ಆಲ್‌ರೌಂಡರ್ ಕೇನ್ ರಿಚರ್ಡ್‌ಸನ್ ಆಸ್ಟ್ರೇಲಿಯಾಕ್ಕೆ ಮರಳಲಿದ್ದಾರೆ ಎಂದು ತಿಳಿಸಿದ್ದಾರೆ.

ಚೆನ್ನೈ ಮತ್ತು ಮುಂಬೈನ ಕ್ರಿಕೆಟ್ ಗ್ರೌಂಡ್ ಪಂದ್ಯಗಳ ಬಳಿಕ ಮುಂದಿನ ಪಂದ್ಯಗಳಿಗಾಗಿ ತಂಡಗಳು ದೆಹಲಿ, ಅಹಮದಾಬಾದ್, ಬೆಂಗಳೂರು, ಕೋಲ್ಕತ್ತಾಗೆ ಹೊರಡಲಿವೆ. ಬುಧವಾರದ ಪಂದ್ಯ ದೆಹಲಿಯಲ್ಲಿ ನಡೆಯಲಿದೆ. ಕೊರೊನಾ ಸಂಕಷ್ಟದ ಪರಿಸ್ಥಿತಿಯ ನಡುವೆ ಐಪಿಎಲ್ ಹೀಗೆ ನಡೆಯುತ್ತಿದೆ, ಆಟಗಾರರು ಬಯೋ ಬಬಲ್‌ನಲ್ಲೂ ಒಂದಷ್ಟು ಒತ್ತಡಗಳನ್ನು ಅನುಭವಿಸುತ್ತಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಭಾರತ ತಂಡದ ಹೆಸರಾಂತ ಬೌಲರ್, ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಐಪಿಎಲ್ 2021 ಟೂರ್ನಿಯನ್ನು ಅರ್ಧಕ್ಕೆ‌ ಮೊಟಕುಗೊಳಿಸುವ ತೀರ್ಮಾನ ಕೈಗೊಂಡಿದ್ದಾರೆ. ತಮ್ಮ ಕುಟುಂಬಕ್ಕೆ ಕೊವಿಡ್-19 ವಿರುದ್ಧ ಹೋರಾಡಲು ನೈತಿಕ ಸ್ಥೈರ್ಯ ನೀಡುವ ಉದ್ದೇಶದಿಂದ ಅವರು ಐಪಿಎಲ್‌ ಟೂರ್ನಿಯಿಂದ ಅರ್ಧಕ್ಕೆ ಹಿಂತಿರುಗುವ ನಿರ್ಧಾರ ಮಾಡಿದ್ದಾರೆ. ಜೊತೆಗೆ, ಮೂವರು ಆಸ್ಟ್ರೇಲಿಯಾ ಕ್ರಿಕೆಟಿಗರು ಕೂಡ ಐಪಿಎಲ್ ಟೂರ್ನಿಯಿಂದ ಖಾಸಗಿ ಕಾರಣಗಳನ್ನು ನೀಡಿ ಹೊರನಡೆದಿದ್ದಾರೆ. ಓರ್ವ ಇಂಗ್ಲೆಂಡ್ ಕ್ರಿಕೆಟಿಗ ಬಬಲ್ ಫ್ಯಾಟಿಗ್ ಕಾರಣ ನೀಡಿ ಆಟದಿಂದ ಹಿಂದೆ ಸರಿದಿದ್ದಾರೆ.

ಇದನ್ನೂ ಓದಿ: IPL 2021:ಕೊರೊನಾ ನೆಪವೊಡ್ಡಿ ಐಪಿಎಲ್​ ತೊರೆಯುತ್ತಿರುವ ಸ್ಟಾರ್​ ಕ್ರಿಕೆಟಿಗರು ಇವರೆ

Explainer: ಬಯೋ ಬಬಲ್‌ನಲ್ಲಿ ಇದ್ದರೂ ಐಪಿಎಲ್ ಕ್ರಿಕೆಟಿಗರನ್ನು ಕಾಡುತ್ತಿದೆ ಕೊವಿಡ್19 ಆತಂಕ! ಕಾರಣವೇನು?

(well ensure you reach home seamlessly says BCCI to foreign Cricketers at IPL 2021)

Published On - 4:22 pm, Tue, 27 April 21

ಆಸ್ಪತ್ರೆಯಲ್ಲಿ ಅಗ್ನಿ ಅವಘಡ, ಓರ್ವ ರೋಗಿ ಸಾವು, ಹಲವರಿಗೆ ಗಾಯ
ಆಸ್ಪತ್ರೆಯಲ್ಲಿ ಅಗ್ನಿ ಅವಘಡ, ಓರ್ವ ರೋಗಿ ಸಾವು, ಹಲವರಿಗೆ ಗಾಯ
ಹೊಸ ದಾಖಲೆ... ಕೇವಲ 26 ರನ್ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಧೋನಿ
ಹೊಸ ದಾಖಲೆ... ಕೇವಲ 26 ರನ್ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಧೋನಿ
ಉತ್ಸವಗಳ ಸಂದರ್ಭ ಪಾನಕ ಹಾಗೂ ಮಜ್ಜಿಗೆ ನೀಡುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಉತ್ಸವಗಳ ಸಂದರ್ಭ ಪಾನಕ ಹಾಗೂ ಮಜ್ಜಿಗೆ ನೀಡುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚರಿಸುವ ಈ ದಿನದ ಭವಿಷ್ಯ ಇಲ್ಲಿ ತಿಳಿಯಿರಿ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚರಿಸುವ ಈ ದಿನದ ಭವಿಷ್ಯ ಇಲ್ಲಿ ತಿಳಿಯಿರಿ
ಬೆಂಗಳೂರು ಹೈವೇಯಲ್ಲಿ 3 ಬಾರಿ ಪಲ್ಟಿಯಾದ ನೀರಿನ ಟ್ಯಾಂಕರ್; ವಿಡಿಯೋ ವೈರಲ್
ಬೆಂಗಳೂರು ಹೈವೇಯಲ್ಲಿ 3 ಬಾರಿ ಪಲ್ಟಿಯಾದ ನೀರಿನ ಟ್ಯಾಂಕರ್; ವಿಡಿಯೋ ವೈರಲ್
ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್