ಭಾರತ ಕಷ್ಟದಲ್ಲಿದೆ ಕ್ರಿಕೆಟಿಗರು ನೆರವಿಗೆ ಬನ್ನಿ! ಪಿಎಂ ಕೇರ್ಸ್ ಫಂಡ್‌ಗೆ 50,000 ಡಾಲರ್ ಹಣ​ ದೇಣಿಗೆ ನೀಡಿದ ಆಸಿಸ್ ಕ್ರಿಕೆಟಿಗ​ ಪ್ಯಾಟ್ ಕಮ್ಮಿನ್ಸ್

Pat Cummins: ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಪರ ಆಡುವ ಆಸ್ಟ್ರೇಲಿಯಾದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಪಿಎಂ ಕೇರ್ಸ್ ಫಂಡ್‌ಗೆ 50,000 ಅಮೇರಿಕನ್ ಡಾಲರ್​ ಹಣವನ್ನು ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ.

ಭಾರತ ಕಷ್ಟದಲ್ಲಿದೆ ಕ್ರಿಕೆಟಿಗರು ನೆರವಿಗೆ ಬನ್ನಿ! ಪಿಎಂ ಕೇರ್ಸ್ ಫಂಡ್‌ಗೆ 50,000 ಡಾಲರ್ ಹಣ​ ದೇಣಿಗೆ ನೀಡಿದ ಆಸಿಸ್ ಕ್ರಿಕೆಟಿಗ​ ಪ್ಯಾಟ್ ಕಮ್ಮಿನ್ಸ್
ಕೇನ್ ಜೊತೆ ಐಪಿಎಲ್ 2021 ಹರಾಜಿನಲ್ಲಿ ದಾಖಲೆ ಮೊತ್ತಕ್ಕೆ ಸೇಲ್ ಆಗಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ಯಾಟ್ ಕಮಿನ್ಸ್, ಪಂಜಾಬ್ ಕಿಂಗ್ಸ್ ತಂಡದ ಜ್ಯೆ ರಿಚರ್ಡಸನ್ ಮತ್ತು ರಿಲೆ ಮೆರಡಿತ್ ಕೂಡ ಮಿಲಿಯನ್ ಡಾಲರ್ ಟೂರ್ನಿಗೆ ಲಭ್ಯರಿಲ್ಲ.
Follow us
ಪೃಥ್ವಿಶಂಕರ
|

Updated on:Apr 26, 2021 | 5:03 PM

ಕೊರೊನಾ.. ಭಾರತವನ್ನು ಒಂದು ವರ್ಷದಿಂದ ಇನ್ನಿಲ್ಲದಂತೆ ಹಿಂಡಿಹಿಪ್ಪೆ ಮಾಡಿದೆ. ಸೋಂಕಿತರು ಸರಿಯಾದ ಚಿಕಿತ್ಸೆ ಇಲ್ಲದೆ ನರಳಿ ನರಳಿ ಪ್ರಾಣ ಬಿಡುತ್ತಿದ್ದಾರೆ. ಸರ್ಕಾರವು ಸಹ ಸೋಂಕಿತರಿಗೆ ನೆರವಾಗುವಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಆದರೆ ದಿನೇದಿನೇ ಹೆಚ್ಚುತ್ತಿರುವ ಪ್ರಕರಣಗಳಿಂದಾಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ನೀಡಲಾಗುತ್ತಿಲ್ಲ. ಆಮ್ಲಜನಕದ ವ್ಯವಸ್ಥೆ ಸಿಗದೇ ಸೋಂಕಿತರು ಪ್ರಾಣ ಬಿಡುತ್ತಿದ್ದಾರೆ. ಹೀಗಾಗಿ ಸಂಕಷ್ಟಕ್ಕೆ ಸಿಲುಕಿರುವ ಭಾರತಕ್ಕೆ ಹಲವರು ದೇಶಗಳು ನೆರವಿನ ಹಸ್ತ ಚಾಚಿವೆ. ಜೊತೆಗೆ ದೇಶದ ಪ್ರಮುಖ ವ್ಯಕ್ತಿಗಳು ಸರ್ಕಾರದ ನೆರವಿಗೆ ನಿಂತಿದ್ದಾರೆ. ಇವರುಗಳ ಸಾಲಿಗೆ ಈಗ ವಿದೇಶಿ ಕ್ರಿಕೆಟಿಗನೊಬ್ಬ ಸೇರ್ಪಡೆಗೊಂಡಿದ್ದಾನೆ. ಆತ ಮತ್ತ್ಯಾರು ಅಲ್ಲ, ಐಪಿಎಲ್​ ಟೂರ್ನಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡದ ಪರ ಆಡುತ್ತಿರುವ ಆಸ್ಟ್ರೇಲಿಯಾದ ಆಲ್​ರೌಂಡರ್ ಪ್ಯಾಟ್ ಕಮಿನ್ಸ್.

ಐಪಿಎಲ್​ ಮುಂದುವರೆಯುತ್ತದೆ- ಬಿಸಿಸಿಐ ದೇಶದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಕಾರಣದಿಂದಾಗಿ ಈ ಬಾರಿಯ ಐಪಿಎಲ್​ನನ್ನು ಬಿಸಿಸಿಐ ತುಂಬಾ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಂಡು ನಡೆಸುತ್ತಾ ಬರುತ್ತಿದೆ. ಅಲ್ಲದೆ ಕ್ರೀಡಾಂಗಣಕ್ಕೆ ಪ್ರೇಕ್ಷಕರಿಗೆ ನಿಷೇದ ಹೆರಲಾಗಿದೆ. ಹೀಗಾಗಿ ಖಾಲಿ ಕ್ರೀಡಾಂಗಣದಲ್ಲಿ ಐಪಿಎಲ್ ಆಡಲಾಗುತ್ತಿದೆ. ಆದರೂ ಸಹ ಭಾರತದಲ್ಲಿ ಕೊರೊನಾ ಕ್ರಾಂತಿಯನ್ನು ಮನಗಂಡ ಕೆಲವು ವಿದೇಶಿ ಹಾಗೂ ದೇಶಿ ಆಟಗಾರರು ಟೂರ್ನಿಯಿಂದ ಹೊರ ನಡೆಯುತ್ತಿದ್ದಾರೆ. ಜೊತೆಗೆ ಐಪಿಎಲ್​ ಬಂದ್​ ಮಾಡಬೇಕು ಎನ್ನುವ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಧೃಡ ನಿರ್ಧಾರ ಕೈಗೊಂಡಿದ್ದು ಐಪಿಎಲ್​ ಅನ್ನು ಮುಂದುವರೆಸಲಾಗುತ್ತದೆ ಎಂದು ಸ್ಪಷ್ಟನೆ ನೀಡಿದೆ.

ಪಿಎಂ ಕೇರ್ಸ್ ಫಂಡ್‌ಗೆ 50,000 ಅಮೇರಿಕನ್ ಡಾಲರ್​ ಹಣ ದೇಣಿಗೆ ಇದೆಲ್ಲವುದರಗಳ ನಡುವೆ ಓರ್ವ ವಿದೇಶಿ ಮೂಲದ ಆಟಗಾರ ತನ್ನ ಹಣವನ್ನು ಪಿಎಮ್​ ಫಂಡ್ಗೆ ಕೊಟ್ಟು ಎಲ್ಲರಿಗೂ ಮಾರ್ಗದರ್ಶಿ ಆಗಿದ್ದಾನೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಪರ ಆಡುವ ಆಸ್ಟ್ರೇಲಿಯಾದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಸೋಮವಾರ ಭಾರತೀಯ ಆಸ್ಪತ್ರೆಗಳಿಗೆ ಆಮ್ಲಜನಕ ಸಾಮಗ್ರಿಗಳನ್ನು ಖರೀದಿಸಲು ಪಿಎಂ ಕೇರ್ಸ್ ಫಂಡ್‌ಗೆ 50,000 ಅಮೇರಿಕನ್ ಡಾಲರ್​ ಹಣವನ್ನು ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ. ದೇಶವು COVID-19 ಪ್ರಕರಣಗಳ ಉಲ್ಬಣವನ್ನು ಎದುರಿಸುತ್ತಿದೆ. ಹೀಗಾಗಿ ಐಪಿಎಲ್‌ನ ಸಹೋದ್ಯೋಗಿಗಳು ಸಹಕರಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಮಿನ್ಸ್, ‘ನಾವು ಪ್ರೀತಿಸುವ ದೇಶಗಳಲ್ಲಿ ಭಾರತವೂ ಒಂದು. ನಾನು ಎಲ್ಲೂ ನೋಡಿರದ-ಭೇಟಿಯಾಗಿರದ ವಿಶಾಲ ಹೃದಯದ, ಆದರದ ಮನಸ್ಸಿನ ಜನ ಇಲ್ಲಿದ್ದಾರೆ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಇಲ್ಲಿನ ಜನ ತೊಂದರೆ ಅನುಭವಿಸುತ್ತಿರುವುದನ್ನು ನೋಡುವಾಗ ನನಗೆ ತುಂಬಾ ಬೇಸರವಾಗುತ್ತಿದೆ. ಒಬ್ಬ ಆಟಗಾರನಾಗಿ ಐಪಿಎಲ್‌ನಲ್ಲಿ ಕೋಟ್ಯಾಂತರ ಮಂದಿಯನ್ನು ತಲುಪಲು ಇರುವ ಅವಕಾಶವನ್ನು ನಾನು ಬಳಸಿಕೊಳ್ಳಲಿದ್ದೇನೆ. ನಾನು ಪಿಎಂ ಕೇರ್ಸ್‌ಗೆ ದೇಣಿಗೆ ನೀಡಿದ್ದೇನೆ. ನನ್ನ ಇತರ ಐಪಿಎಲ್ ಆಟಗಾರರಿಗೂ ನಾನು ದೇಣಿಗೆ ನೀಡಲು ಬೆಂಬಲ ನೀಡುತ್ತಿದ್ದೇನೆ, ಎಂದು ಬರೆದುಕೊಂಡಿದ್ದಾರೆ.

Published On - 4:52 pm, Mon, 26 April 21

ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ