ಭಾರತದಲ್ಲಿ ‘ಪ್ರೊಫೆಸರ್ ಡೀನೊ‘ ಅಂತ ಕರೆಸಿಕೊಳ್ಳುತ್ತಿದ್ದ ಜೋನ್ಸ್ ಗುರುವಾರ ಮಧ್ಯಾಹ್ನ 12 ಗಂಟೆಗೆ ತಾವು ಉಳಿದುಕೊಡಿದ್ದ ಮುಂಬೈನ ಹೋಟೆಲೊಂದರಲ್ಲಿ ಭಾರಿ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದರು. ಅವರಿಗೆ 59 ವರ್ಷ ವಯಸ್ಸಾಗಿತ್ತು. ಇಂಡಿಯನ್ ಪ್ರಿಮೀಯರ್ ಲೀಗ್ 2020 ಟೂರ್ನಮೆಂಟ್ಗೆ ಅನಾಲಿಸ್ಟ್ ಆಗಿ ಕೆಲಸ ಮಾಡಲು ಸ್ಟಾರ್ ಸ್ಪೋರ್ಟ್ಸ್ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಜೋನ್ಸ್ ಅದೇ ಕಾರಣದ ನಿಮಿತ್ತ ಮುಂಬೈನಲ್ಲಿದ್ದರು.
ಜೋನ್ಸ್ ಅಂದಾಕ್ಷಣ ಕ್ರಿಕೆಟ್ ಪ್ರೇಮಿಗಳಿಗೆ ನೆನಪಾಗೋದು 1986ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಚೆನೈನಲ್ಲಿ ಟೈನಲ್ಲಿ ಕೊನೆಗೊಂಡ ಐತಿಹಾಸಿಕ ಟೆಸ್ಟ್ ಪಂದ್ಯ. ಅದರಲ್ಲಿ ಅವರು ದ್ವಿಶತಕ ಬಾರಿಸಿದ್ದರು. ಆದರೆ ವಿಷಯ ಅದಲ್ಲ. ಚೆನೈ ನಗರದ ಉಷ್ಣಾಂಶ ಮತ್ತು ವಾತಾವರಣದಿಂದ ಅವರೆಷ್ಟು ಕಂಗಾಲಾಗಿದ್ದರೆಂದರೆ ಬ್ಯಾಟಿಂಗ್ ಮಾಡುವಾಗ ಡಿಹೈಡ್ರೇಶನ್ಗೊಳಗಾಗಿ ನಾಲ್ಕೈದು ಬಾರಿ ಮೈದಾನದಲ್ಲೇ ವಾಂತಿ ಮಾಡಿಕೊಂಡರೂ ಮೈದಾನ ಬಿಟ್ಟು ಹೋಗಲಿಲ್ಲ. ದಣಿವು, ಆಯಾಸ
ಆ ಟೆಸ್ಟ್ ಪಂದ್ಯವನ್ನು ನೆನೆಸಿಕೊಂಡೇ ಅವರು ಸಾಯುವುದಾದರೆ ಮೈದಾನದಲ್ಲೇ ಸಾಯುತ್ತೇನೆ ಅಂತ ಹೇಳಿದ್ದು.
1984ರಿಂದ 1992 ರವರೆಗೆ ಆಸ್ಟ್ರೇಲಿಯಾ ಪರ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದ ಜೋನ್ಸ್ 52 ಟೆಸ್ಟ್ಗಳಲ್ಲಿ 46.55 ಸರಾಸರಿಯಲ್ಲಿ 3631 ರನ್ ಗಳಿಸಿದರು. ಹಾಗೆಯೇ, 164 ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿ 44.71ರ ಸರಾಸರಿಯಲ್ಲಿ 6068 ರನ್ ಗಳಿಸಿದರು. ಜೋನ್ಸ್ ಆಡುವ ದಿನಗಳಲ್ಲಿ ಟಿ20 ಕ್ರಿಕೆಟ್ ಇನ್ನೂ ಹುಟ್ಟಿರಲಿಲ್ಲ. 1987 ರಲ್ಲಿ ಆಲನ್ ಬಾರ್ಡರ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ವಿಶ್ವಕಪ್ ಗೆದ್ದಾಗ ಜೋನ್ಸ್ ಮಹತ್ತರ ಕಾಣಿಕೆ ನೀಡಿದ್ದರು. ‘‘ಸುಮಾರು ಒಂದು ಲಕ್ಷ ಪ್ರೇಕ್ಷಕರೆದರು ವಿಶ್ವಕಪ್ ಗೆದ್ದಿದ್ದು ಒಂದು ಅವಿಸ್ಮರಣೀಯ ಅನುಭವ’’ ಅಂತ ಡೀನೊ ಹೇಳಿದ್ದರು.
ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾದ ನಂತರ ಜೋನ್ಸ್ ಕಾಮೆಂಟೇಟರ್ ಮತ್ತು ಅನಾಲಿಸ್ಟ್ ಆಗಿ ಕೆಲಸ ಮಾಡಿದರು. ಐಪಿಎಲ್ನ ಪ್ರತಿ ಆವೃತಿಗೆ ಅವರು ಪ್ಯಾನಲಿಸ್ಟ್ ಆಗಿ ಆಗಮಿಸುತ್ತಿದ್ದರು. ಅದ್ಭುತವಾದ ಹಾಸ್ಯಪ್ರಜ್ಞೆ ಹೊಂದಿದ್ದ ಅವರ ಕಾಮೆಂಟರಿ ನಿಖರ, ಸಮಂಜಸ ಮತ್ತು ಮನರಂಜನಾತ್ಮಕವಾಗಿರುತ್ತಿತ್ತು.
ಅವರ ಸಾವಿನ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾದ ಚೇರ್ಮನ್ ಅರ್ಲ್ ಎಡ್ಡಿಂಗ್ಸ್, ‘‘ಡೀನ್ ಜೋನ್ಸ್ ಕ್ರಿಕೆಟ್ ಜನಾಂಗದ ಹೀರೊ ಆಗಿದ್ದರು ಹಾಗೂ ಒಬ್ಬ ಲೆಜೆಂಡ್ ಆಗಿ ನಮ್ಮ ನೆನಪಿನಲ್ಲುಳಿಯುತ್ತಾ
ಅವರು ಹೇಳಿದ್ದು ಅಕ್ಷರಶಃ ನಿಜ. ವಿ ಮಿಸ್ ಯೂ ಪ್ರೊಫೆಸರ್ ಡೀನೊ