ಸಾರಾ ತೆಂಡುಲ್ಕರ್.. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಮುದ್ದಿನ ಮಗಳು. ಅಂದ ಚೆಂದದಲ್ಲಿ ಸಾರಾ ಯಾವ ಬಾಲಿವುಡ್ ಹೀರೊಯಿನ್ಗೂ ಕಡಿಮೆಯಿಲ್ಲ. ಲಂಡನ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಪದವಿ ಪಡೆದಿರೋ 22ರ ಹರೆಯದ ಸಾರಾ ಅಂದ್ರೆ, ಅಪ್ಪ ಸಚಿನ್ಗೆ ಪಂಚಪ್ರಾಣ.
ಐಪಿಎಲ್ ಟೈಮ್ನಲ್ಲಿ ಸಾರಾ ವಿಷ್ಯ ಯಾಕೇ ಎತ್ಕೊಂಡ್ವಿ ಅಂದ್ರೆ, ಸಾರಾ ಈಗ ಐಪಿಎಲ್ನಲ್ಲಿ ಆಡ್ತೀರೋ ಯುವ ಕ್ರಿಕೆಟಿಗನೊಬ್ಬನಿಗೆ ಮನಸೋತಿದ್ದಾಳೆ. ಅಷ್ಟಕ್ಕೂ ಸಾರಾ ಹೃದಯಕ್ಕೆ ಲಗ್ಗೆ ಹಾಕಿರೋ ಆ ಕ್ರಿಕೆಟಿಗ ಬೇರರ್ಯಾರೂ ಅಲ್ಲ.. ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಶುಭಮನ್ ಗಿಲ್.
ಡೇಟಿಂಗ್ ಗಾಸಿಪ್ಗೆ ಕಿಡಿ ಹಚ್ಚಿದ ಸಾರಾ ತೆಂಡುಲ್ಕರ್!
ಸಾರಾ ಮತ್ತು ಶುಭಮನ್ ಪ್ರೀತಿಯಲ್ಲಿ ಬಿದ್ದಿದ್ದಾರೆ ಅನ್ನೋ ಗಾಸಿಪ್ ಸುದ್ದಿ ಕಳೆದೊಂದು ವರ್ಷದಿಂದ ಕೇಳಿ ಬರ್ತಾನೆ ಇತ್ತು. ಆದ್ರೀಗ ಸ್ವತಃ ಸಾರಾ, ಗಿಲ್ ಜೊತೆ ಡೇಟಿಂಗ್ನಲ್ಲಿದ್ದೀನಿ ಅನ್ನೋ ಗಾಸಿಪ್ಗೆ ಕಿಡಿ ಹಚ್ಚಿದ್ದಾಳೆ. ಕೆಕೆಆರ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ವೇಳೆ, ಸಾರಾ ಇನ್ಸ್ಟಾಗ್ರಾಮ್ನಲ್ಲಿ ಮಾಡಿದ ಪೋಸ್ಟ್, ಇಷ್ಟೆಲ್ಲಾ ಚರ್ಚೆಗೆ ಕಾರಣವಾಗಿದೆ.
ಸಾರಾಳ ಇದೇ ಪೋಸ್ಟ್ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಹೀಗಾಗಿ ನೆಟ್ಟಿಗರು ಇಬ್ಬರು ಲವ್ನಲ್ಲಿದ್ದಾರೆ ಅನ್ನೋ ಗಾಸಿಪ್ ಸುದ್ದಿ ಸುಳ್ಳಲ್ಲ. ನಿಜ ಅನ್ನೋದಕ್ಕೆ ಶುರುಮಾಡಿದ್ದಾರೆ.
ಇದೊಂದೇ ಅಲ್ಲ. ಇನ್ಸ್ಟಾಗ್ರಾಮ್ನಲ್ಲಿ ಸಾರಾ ಮತ್ತು ಗಿಲ್ ಮಾಡೋ ಪೋಸ್ಟ್ಗಳು, ಒಂದೇ ರೀತಿಯಲ್ಲಿರುತ್ತೆ. ಹಾಗೇ ಫೋಸ್ಟ್ಗೆ ಇಬ್ಬರೂ ಒಂದೇ ರೀತಿ ಶೀರ್ಷಿಕೆ ಮತ್ತು ಇಮೊಜಿಗಳನ್ನ ಹಾಕ್ತಾರೆ. ಒಮ್ಮೆ ಇದೇ ವಿಚಾರವಾಗಿ ಹಾರ್ದಿಕ್ ಪಾಂಡ್ಯಾ, ಸಾರಾ ಮತ್ತು ಗಿಲ್ ಕಾಲೆಳೆದಿದ್ರು.
ಹೀಗೆ ಗಾಸಿಪ್ ಸುದ್ದಿ ಹರಡಿರುವಾಗಲೇ, ಶುಬ್‌ಮನ್ ಗಿಲ್ ಇನ್ಸ್ಟಾಗ್ರಾಮ್ನಲ್ಲಿ ಚೆಂದದ ಫೋಟೋ ಹಾಕಿ, ಐ ಸ್ಪೈ ಎಂದು ಬರೆದುಕೊಂಡಿದ್ರು. ಇದಾದ ಬಳಿಕ ಸಾರಾ ಕೂಡ ಚೆಂದದ ಫೋಟೋ ಪೋಸ್ಟ್ ಮಾಡಿ, ಐ ಸ್ಪೈ ಎಂದು ಬರೆದುಕೊಂಡಿದ್ಳು. ಇಷ್ಟೆಲ್ಲಾ ಸುದ್ದಿಗಳ ಮದ್ಯೆ ಸಾರಾ ಮತ್ತೊಮ್ಮೆ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಗಿಲ್ ಫೋಟೋಗೆ, ಹಾರ್ಟ್ ಸಿಂಬಲ್ ಹಾಕಿಕೊಂಡಿರೋದನ್ನ ನೋಡಿದ್ರೆ, ಇಬ್ಬರು ಲವ್ನಲ್ಲಿ ಬಿದ್ದಿದ್ದಾರೆ ಅನ್ನೋ ಸುದ್ದಿ ನಿಜ ಅನ್ನೋದ್ರಲ್ಲಿ ಅನುಮಾನವೇ ಇಲ್ಲ ಅಂತಿದ್ದಾರೆ ನೆಟ್ಟಿಗರು.
Published On - 10:03 am, Fri, 25 September 20