ಭಾರತೀಯರ ಪ್ರೊಫೆಸರ್ ಡೀನೊ ಇನ್ನು ನೆನಪು ಮಾತ್ರ

‘‘ನನ್ನ ಜೀವವಾಗಿರುವ ಕ್ರಿಕೆಟ್​ಗೋಸ್ಕರ ಪ್ರಾಣವನ್ನೇ ತ್ಯಜಿಸಬೇಕಾಗಿ ಬಂದರೆ ನನ್ನ ಹಸಿರು ಬಣ್ಣದ ಬ್ಯಾಗಿ ಕ್ಯಾಪ್ ಧರಿಸಿ ಕ್ರಿಕೆಟ್ ಮೈದಾನದಲ್ಲಿ ಸಾಯುವುದಕ್ಕಿಂತ ಹಿರಿದಾದ ಸೌಭಾಗ್ಯ ಮತ್ತೊಂದಿಲ್ಲ,’’ ಅಂತ ಮೂರು ವರ್ಷಗಳ ಹಿಂದೆ ಹೇಳಿದ್ದ ಆಸ್ಟ್ರೇಲಿಯಾದ ಖ್ಯಾತ ಬ್ಯಾಟ್ಸ್​ಮನ್ ಮತ್ತು ಅತ್ಯಂತ ಜನಪ್ರಿಯ ಕ್ರಿಕೆಟ್ ಅನಾಲಿಸ್ಟ್ ಡೀನ್ ಜೋನ್ಸ್ ತಾವಂದಕೊಂಡಂತೆ ಕ್ರಿಕೆಟ್​ಗಾಗಿ ಸೇವೆ ಸಲ್ಲಿಸುವಾಗಲೇ ಇಹಲೋಕ ತ್ಯಜಿಸಿದ್ದಾರೆ. ಅವರ ತಲೆ ಮೇಲೆ ಬ್ಯಾಗಿ ಕ್ಯಾಪ್ ಇರಲಿಲ್ಲವೆನ್ನುವುದು ಬೇರೆ ವಿಷಯ. ಭಾರತದಲ್ಲಿ ‘ಪ್ರೊಫೆಸರ್ ಡೀನೊ‘ ಅಂತ ಕರೆಸಿಕೊಳ್ಳುತ್ತಿದ್ದ ಜೋನ್ಸ್ ಗುರುವಾರ ಮಧ್ಯಾಹ್ನ […]

ಭಾರತೀಯರ ಪ್ರೊಫೆಸರ್ ಡೀನೊ ಇನ್ನು ನೆನಪು ಮಾತ್ರ
Arun Belly

|

Sep 24, 2020 | 7:28 PM

‘‘ನನ್ನ ಜೀವವಾಗಿರುವ ಕ್ರಿಕೆಟ್​ಗೋಸ್ಕರ ಪ್ರಾಣವನ್ನೇ ತ್ಯಜಿಸಬೇಕಾಗಿ ಬಂದರೆ ನನ್ನ ಹಸಿರು ಬಣ್ಣದ ಬ್ಯಾಗಿ ಕ್ಯಾಪ್ ಧರಿಸಿ ಕ್ರಿಕೆಟ್ ಮೈದಾನದಲ್ಲಿ ಸಾಯುವುದಕ್ಕಿಂತ ಹಿರಿದಾದ ಸೌಭಾಗ್ಯ ಮತ್ತೊಂದಿಲ್ಲ,’’ ಅಂತ ಮೂರು ವರ್ಷಗಳ ಹಿಂದೆ ಹೇಳಿದ್ದ ಆಸ್ಟ್ರೇಲಿಯಾದ ಖ್ಯಾತ ಬ್ಯಾಟ್ಸ್​ಮನ್ ಮತ್ತು ಅತ್ಯಂತ ಜನಪ್ರಿಯ ಕ್ರಿಕೆಟ್ ಅನಾಲಿಸ್ಟ್ ಡೀನ್ ಜೋನ್ಸ್ ತಾವಂದಕೊಂಡಂತೆ ಕ್ರಿಕೆಟ್​ಗಾಗಿ ಸೇವೆ ಸಲ್ಲಿಸುವಾಗಲೇ ಇಹಲೋಕ ತ್ಯಜಿಸಿದ್ದಾರೆ. ಅವರ ತಲೆ ಮೇಲೆ ಬ್ಯಾಗಿ ಕ್ಯಾಪ್ ಇರಲಿಲ್ಲವೆನ್ನುವುದು ಬೇರೆ ವಿಷಯ.

ಭಾರತದಲ್ಲಿ ‘ಪ್ರೊಫೆಸರ್ ಡೀನೊ‘ ಅಂತ ಕರೆಸಿಕೊಳ್ಳುತ್ತಿದ್ದ ಜೋನ್ಸ್ ಗುರುವಾರ ಮಧ್ಯಾಹ್ನ 12 ಗಂಟೆಗೆ ತಾವು ಉಳಿದುಕೊಡಿದ್ದ ಮುಂಬೈನ ಹೋಟೆಲೊಂದರಲ್ಲಿ ಭಾರಿ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದರು. ಅವರಿಗೆ 59 ವರ್ಷ ವಯಸ್ಸಾಗಿತ್ತು. ಇಂಡಿಯನ್ ಪ್ರಿಮೀಯರ್ ಲೀಗ್ 2020 ಟೂರ್ನಮೆಂಟ್​ಗೆ ಅನಾಲಿಸ್ಟ್ ಆಗಿ ಕೆಲಸ ಮಾಡಲು ಸ್ಟಾರ್ ಸ್ಪೋರ್ಟ್ಸ್​ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಜೋನ್ಸ್ ಅದೇ ಕಾರಣದ ನಿಮಿತ್ತ ಮುಂಬೈನಲ್ಲಿದ್ದರು.

ಜೋನ್ಸ್ ಅಂದಾಕ್ಷಣ ಕ್ರಿಕೆಟ್ ಪ್ರೇಮಿಗಳಿಗೆ ನೆನಪಾಗೋದು 1986ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಚೆನೈನಲ್ಲಿ ಟೈನಲ್ಲಿ ಕೊನೆಗೊಂಡ ಐತಿಹಾಸಿಕ ಟೆಸ್ಟ್ ಪಂದ್ಯ. ಅದರಲ್ಲಿ ಅವರು ದ್ವಿಶತಕ ಬಾರಿಸಿದ್ದರು. ಆದರೆ ವಿಷಯ ಅದಲ್ಲ. ಚೆನೈ ನಗರದ ಉಷ್ಣಾಂಶ ಮತ್ತು ವಾತಾವರಣದಿಂದ ಅವರೆಷ್ಟು ಕಂಗಾಲಾಗಿದ್ದರೆಂದರೆ ಬ್ಯಾಟಿಂಗ್ ಮಾಡುವಾಗ ಡಿಹೈಡ್ರೇಶನ್​ಗೊಳಗಾಗಿ ನಾಲ್ಕೈದು ಬಾರಿ ಮೈದಾನದಲ್ಲೇ ವಾಂತಿ ಮಾಡಿಕೊಂಡರೂ ಮೈದಾನ ಬಿಟ್ಟು ಹೋಗಲಿಲ್ಲ. ದಣಿವು, ಆಯಾಸ ಅವರ ಮುಖದಲ್ಲಿ ನಿಚ್ಚಳವಾಗಿ ಕಾಣುತ್ತಿತ್ತು. ನಿಲ್ಲಲೂ ಆಗದಂಥ ಸ್ಥತಿಯಲ್ಲಿದ್ದ ಡೀನೊ ಅತ್ಯಾಕರ್ಷಕ ಡಬಲ್ ಸೆಂಚುರಿ ಬಾರಿಸಿ (210) ಔಟಾದರು. ಪೆವಿಲಿಯನ್​ಗೆ ವಾಪಸ್ಸಾದಾಕ್ಷಣ ಅವರಿಗೆ ಡ್ರಿಪ್ಸ್ ಹಾಕಲಾಯಿತು. ಆ ಇನ್ನಿಂಗ್ಸ್ ಅನ್ನು ಟೆಸ್ಟ್ ಕ್ರಿಕೆಟ್ ಸರ್ವಶ್ರೇಷ್ಠ ಇನ್ನಿಂಗ್ಸ್​ಗಳಲ್ಲೊಂದು ಅಂತ ಪರಿಗಣಿಸಲಾಗುತ್ತದೆ.

ಆ ಟೆಸ್ಟ್ ಪಂದ್ಯವನ್ನು ನೆನೆಸಿಕೊಂಡೇ ಅವರು ಸಾಯುವುದಾದರೆ ಮೈದಾನದಲ್ಲೇ ಸಾಯುತ್ತೇನೆ ಅಂತ ಹೇಳಿದ್ದು.

1984ರಿಂದ 1992 ರವರೆಗೆ ಆಸ್ಟ್ರೇಲಿಯಾ ಪರ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದ ಜೋನ್ಸ್ 52 ಟೆಸ್ಟ್​ಗಳಲ್ಲಿ 46.55 ಸರಾಸರಿಯಲ್ಲಿ 3631 ರನ್ ಗಳಿಸಿದರು. ಹಾಗೆಯೇ, 164 ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿ 44.71ರ ಸರಾಸರಿಯಲ್ಲಿ 6068 ರನ್ ಗಳಿಸಿದರು. ಜೋನ್ಸ್ ಆಡುವ ದಿನಗಳಲ್ಲಿ ಟಿ20 ಕ್ರಿಕೆಟ್ ಇನ್ನೂ ಹುಟ್ಟಿರಲಿಲ್ಲ. 1987 ರಲ್ಲಿ ಆಲನ್ ಬಾರ್ಡರ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ವಿಶ್ವಕಪ್ ಗೆದ್ದಾಗ ಜೋನ್ಸ್ ಮಹತ್ತರ ಕಾಣಿಕೆ ನೀಡಿದ್ದರು. ‘‘ಸುಮಾರು ಒಂದು ಲಕ್ಷ ಪ್ರೇಕ್ಷಕರೆದರು ವಿಶ್ವಕಪ್ ಗೆದ್ದಿದ್ದು ಒಂದು ಅವಿಸ್ಮರಣೀಯ ಅನುಭವ’’ ಅಂತ ಡೀನೊ ಹೇಳಿದ್ದರು.

ಅಂತರರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾದ ನಂತರ ಜೋನ್ಸ್ ಕಾಮೆಂಟೇಟರ್ ಮತ್ತು ಅನಾಲಿಸ್ಟ್ ಆಗಿ ಕೆಲಸ ಮಾಡಿದರು. ಐಪಿಎಲ್​ನ ಪ್ರತಿ ಆವೃತಿಗೆ ಅವರು ಪ್ಯಾನಲಿಸ್ಟ್ ಆಗಿ ಆಗಮಿಸುತ್ತಿದ್ದರು. ಅದ್ಭುತವಾದ ಹಾಸ್ಯಪ್ರಜ್ಞೆ ಹೊಂದಿದ್ದ ಅವರ ಕಾಮೆಂಟರಿ ನಿಖರ, ಸಮಂಜಸ ಮತ್ತು ಮನರಂಜನಾತ್ಮಕವಾಗಿರುತ್ತಿತ್ತು.

ಅವರ ಸಾವಿನ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾದ ಚೇರ್ಮನ್ ಅರ್ಲ್ ಎಡ್ಡಿಂಗ್ಸ್, ‘‘ಡೀನ್ ಜೋನ್ಸ್ ಕ್ರಿಕೆಟ್ ಜನಾಂಗದ ಹೀರೊ ಆಗಿದ್ದರು ಹಾಗೂ ಒಬ್ಬ ಲೆಜೆಂಡ್ ಆಗಿ ನಮ್ಮ ನೆನಪಿನಲ್ಲುಳಿಯುತ್ತಾರೆ. 1980 ಮತ್ತು 1990ರ ದಶಕಗಳಲ್ಲಿ ಕ್ರಿಕೆಟ್ ವೀಕ್ಷಿಸಿದವರೆಲ್ಲ ಅವರ ದಿಟ್ಟತನದ ಬ್ಯಾಟಿಂಗ್ ಮತ್ತು ಆಟದೆಡೆಗಿನ ದಣಿವರಿಯಯದ ಅಪ್ರೋಚನ್ನು ನೆನಪಿಸಿಕೊಳ್ಳುತ್ತಾರೆ. ಕ್ರಿಕೆಟ್ ಮೇಲೆ ಅವರಿಗಿದ್ದ ವ್ಯಾಮೋಹ ಅನನ್ಯವಾದದ್ದು,’’ ಎಂದಿದ್ದಾರೆ.

ಅವರು ಹೇಳಿದ್ದು ಅಕ್ಷರಶಃ ನಿಜ. ವಿ ಮಿಸ್ ಯೂ ಪ್ರೊಫೆಸರ್ ಡೀನೊ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada