AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶುಭಮನ್ ಜೊತೆ ಸಾರಾ ತೆಂಡುಲ್ಕರ್ ಡೇಟಿಂಗ್, ಸಚಿನ್ ತೆಂಡುಲ್ಕರ್ ಅಳಿಯನಾಗ್ತಾನಾ ಗಿಲ್?

ಸಾರಾ ತೆಂಡುಲ್ಕರ್.. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಮುದ್ದಿನ ಮಗಳು. ಅಂದ ಚೆಂದದಲ್ಲಿ ಸಾರಾ ಯಾವ ಬಾಲಿವುಡ್ ಹೀರೊಯಿನ್​ಗೂ ಕಡಿಮೆಯಿಲ್ಲ. ಲಂಡನ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಪದವಿ ಪಡೆದಿರೋ 22ರ ಹರೆಯದ ಸಾರಾ ಅಂದ್ರೆ, ಅಪ್ಪ ಸಚಿನ್​ಗೆ ಪಂಚಪ್ರಾಣ. ಐಪಿಎಲ್ ಟೈಮ್​ನಲ್ಲಿ ಸಾರಾ ವಿಷ್ಯ ಯಾಕೇ ಎತ್ಕೊಂಡ್ವಿ ಅಂದ್ರೆ, ಸಾರಾ ಈಗ ಐಪಿಎಲ್​ನಲ್ಲಿ ಆಡ್ತೀರೋ ಯುವ ಕ್ರಿಕೆಟಿಗನೊಬ್ಬನಿಗೆ ಮನಸೋತಿದ್ದಾಳೆ. ಅಷ್ಟಕ್ಕೂ ಸಾರಾ ಹೃದಯಕ್ಕೆ ಲಗ್ಗೆ ಹಾಕಿರೋ ಆ ಕ್ರಿಕೆಟಿಗ ಬೇರರ್ಯಾರೂ ಅಲ್ಲ.. ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆರಂಭಿಕ […]

ಶುಭಮನ್ ಜೊತೆ ಸಾರಾ ತೆಂಡುಲ್ಕರ್ ಡೇಟಿಂಗ್, ಸಚಿನ್ ತೆಂಡುಲ್ಕರ್ ಅಳಿಯನಾಗ್ತಾನಾ ಗಿಲ್?
ಆಯೇಷಾ ಬಾನು
| Edited By: |

Updated on:Sep 25, 2020 | 10:33 AM

Share

ಸಾರಾ ತೆಂಡುಲ್ಕರ್.. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಮುದ್ದಿನ ಮಗಳು. ಅಂದ ಚೆಂದದಲ್ಲಿ ಸಾರಾ ಯಾವ ಬಾಲಿವುಡ್ ಹೀರೊಯಿನ್​ಗೂ ಕಡಿಮೆಯಿಲ್ಲ. ಲಂಡನ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಪದವಿ ಪಡೆದಿರೋ 22ರ ಹರೆಯದ ಸಾರಾ ಅಂದ್ರೆ, ಅಪ್ಪ ಸಚಿನ್​ಗೆ ಪಂಚಪ್ರಾಣ.

ಐಪಿಎಲ್ ಟೈಮ್​ನಲ್ಲಿ ಸಾರಾ ವಿಷ್ಯ ಯಾಕೇ ಎತ್ಕೊಂಡ್ವಿ ಅಂದ್ರೆ, ಸಾರಾ ಈಗ ಐಪಿಎಲ್​ನಲ್ಲಿ ಆಡ್ತೀರೋ ಯುವ ಕ್ರಿಕೆಟಿಗನೊಬ್ಬನಿಗೆ ಮನಸೋತಿದ್ದಾಳೆ. ಅಷ್ಟಕ್ಕೂ ಸಾರಾ ಹೃದಯಕ್ಕೆ ಲಗ್ಗೆ ಹಾಕಿರೋ ಆ ಕ್ರಿಕೆಟಿಗ ಬೇರರ್ಯಾರೂ ಅಲ್ಲ.. ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆರಂಭಿಕ ಬ್ಯಾಟ್ಸ್​ಮನ್ ಶುಭಮನ್ ಗಿಲ್.

ಸಾರಾಗಿಂತ ಒಂದು ವರ್ಷ ಚಿಕ್ಕವನಾಗಿರೋ ಶುಭಮನ್ ಗಿಲ್, ಸದ್ಯ ಕ್ರಿಕೆಟ್ ದುನಿಯಾದಲ್ಲಿ ಮೋಸ್ಟ್ ಹ್ಯಾಂಡ್ಸಮ್ ಕ್ರಿಕೆಟಿಗ. 2018ರ ಅಂಡರ್ ನೈಂಟೀನ್ ವಿಶ್ವಕಪ್ ವಿಜೇತ ತಂಡದಲ್ಲಿದ್ದ ಶುಭಮನ್, ಹೈಯೆಸ್ಟ್ ರನ್ ಗೆಟರ್ ಆಗಿ ಹೊರಹೊಮ್ಮಿದ್ದ. ಟೀಮ್ ಇಂಡಿಯಾದ ಫ್ಯೂಚರ್ ಸ್ಟಾರ್ ಅಂತಲೇ ಗುರುತಿಸಿಕೊಂಡಿರೋ ಶುಭಮನ್ ಈಗ, ಸಾರಾ ಜೊತೆಗಿನ ಪ್ರೀತಿ ವಿಚಾರದಿಂದಾಗಿ ಸುದ್ದಿಯಾಗಿದ್ದಾನೆ.

ಡೇಟಿಂಗ್ ಗಾಸಿಪ್​ಗೆ ಕಿಡಿ ಹಚ್ಚಿದ ಸಾರಾ ತೆಂಡುಲ್ಕರ್! ಸಾರಾ ಮತ್ತು ಶುಭಮನ್ ಪ್ರೀತಿಯಲ್ಲಿ ಬಿದ್ದಿದ್ದಾರೆ ಅನ್ನೋ ಗಾಸಿಪ್ ಸುದ್ದಿ ಕಳೆದೊಂದು ವರ್ಷದಿಂದ ಕೇಳಿ ಬರ್ತಾನೆ ಇತ್ತು. ಆದ್ರೀಗ ಸ್ವತಃ ಸಾರಾ, ಗಿಲ್ ಜೊತೆ ಡೇಟಿಂಗ್​ನಲ್ಲಿದ್ದೀನಿ ಅನ್ನೋ ಗಾಸಿಪ್​ಗೆ ಕಿಡಿ ಹಚ್ಚಿದ್ದಾಳೆ. ಕೆಕೆಆರ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ವೇಳೆ, ಸಾರಾ ಇನ್​ಸ್ಟಾಗ್ರಾಮ್​ನಲ್ಲಿ ಮಾಡಿದ ಪೋಸ್ಟ್, ಇಷ್ಟೆಲ್ಲಾ ಚರ್ಚೆಗೆ ಕಾರಣವಾಗಿದೆ.

ಬುಧವಾರ ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್‌ ವೇಳೆ ಸೂರ್ಯಕುಮಾರ್ ಬಿರುಸಾಗಿ ಹೊಡದ ಚೆಂಡು, ಬೌಂಡರಿಲೈನ್ ದಾಟೋದ್ರಲ್ಲಿತ್ತು. ಆದ್ರೆ ಶುಬ್‌ಮನ್ ಆ ಚೆಂಡನ್ನು ಡೈವ್ ಹೊಡೆದು ತಡೆದಿದ್ರು. ಗಿಲ್ ಸಾಲಿಡ್ ಫಿಲ್ಡಿಂಗ್ ಮಾಡಿದ ಫೋಟೋವನ್ನ, ಸಾರಾ ಇನ್‌ಸ್ಟಾಗ್ರಾಮ್ ಸ್ಟೋರಿಗೆ ಹಾಕಿಕೊಂಡಿದ್ದಾಳೆ. ಅಷ್ಟೇ ಅಲ್ಲ. ಅದಕ್ಕೆ ಮೂರು ಹಾರ್ಟ್ ಸಿಂಬಲ್ ಕೂಡ ಹಾಕಿದ್ದಾಳೆ. ಸಾರಾ ಮಾಡಿದ ಇದೇ ಪೋಸ್ಟ್, ಇಬ್ಬರು ಡೇಟಿಂಗ್​ನಲ್ಲಿದ್ದಾರೆ ಅನ್ನೋ ಸುದ್ದಿಗೆ ಕಿಡಿ ಹಚ್ಚಿದ್ದು.

ಸಾರಾಳ ಇದೇ ಪೋಸ್ಟ್ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಹೀಗಾಗಿ ನೆಟ್ಟಿಗರು ಇಬ್ಬರು ಲವ್​ನಲ್ಲಿದ್ದಾರೆ ಅನ್ನೋ ಗಾಸಿಪ್ ಸುದ್ದಿ ಸುಳ್ಳಲ್ಲ. ನಿಜ ಅನ್ನೋದಕ್ಕೆ ಶುರುಮಾಡಿದ್ದಾರೆ.

ಇದೊಂದೇ ಅಲ್ಲ. ಇನ್​ಸ್ಟಾಗ್ರಾಮ್​ನಲ್ಲಿ ಸಾರಾ ಮತ್ತು ಗಿಲ್ ಮಾಡೋ ಪೋಸ್ಟ್​ಗಳು, ಒಂದೇ ರೀತಿಯಲ್ಲಿರುತ್ತೆ. ಹಾಗೇ ಫೋಸ್ಟ್​ಗೆ ಇಬ್ಬರೂ ಒಂದೇ ರೀತಿ ಶೀರ್ಷಿಕೆ ಮತ್ತು ಇಮೊಜಿಗಳನ್ನ ಹಾಕ್ತಾರೆ. ಒಮ್ಮೆ ಇದೇ ವಿಚಾರವಾಗಿ ಹಾರ್ದಿಕ್ ಪಾಂಡ್ಯಾ, ಸಾರಾ ಮತ್ತು ಗಿಲ್ ಕಾಲೆಳೆದಿದ್ರು.

ಹೀಗೆ ಗಾಸಿಪ್ ಸುದ್ದಿ ಹರಡಿರುವಾಗಲೇ, ಶುಬ್​ಮನ್ ಗಿಲ್ ಇನ್​ಸ್ಟಾಗ್ರಾಮ್​ನಲ್ಲಿ ಚೆಂದದ ಫೋಟೋ ಹಾಕಿ, ಐ ಸ್ಪೈ ಎಂದು ಬರೆದುಕೊಂಡಿದ್ರು. ಇದಾದ ಬಳಿಕ ಸಾರಾ ಕೂಡ ಚೆಂದದ ಫೋಟೋ ಪೋಸ್ಟ್ ಮಾಡಿ, ಐ ಸ್ಪೈ ಎಂದು ಬರೆದುಕೊಂಡಿದ್ಳು. ಇಷ್ಟೆಲ್ಲಾ ಸುದ್ದಿಗಳ ಮದ್ಯೆ ಸಾರಾ ಮತ್ತೊಮ್ಮೆ ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಗಿಲ್ ಫೋಟೋಗೆ, ಹಾರ್ಟ್ ಸಿಂಬಲ್ ಹಾಕಿಕೊಂಡಿರೋದನ್ನ ನೋಡಿದ್ರೆ, ಇಬ್ಬರು ಲವ್​ನಲ್ಲಿ ಬಿದ್ದಿದ್ದಾರೆ ಅನ್ನೋ ಸುದ್ದಿ ನಿಜ ಅನ್ನೋದ್ರಲ್ಲಿ ಅನುಮಾನವೇ ಇಲ್ಲ ಅಂತಿದ್ದಾರೆ ನೆಟ್ಟಿಗರು.

Published On - 10:03 am, Fri, 25 September 20

Follow Us