ಡೆಲ್ಲಿ ಬೌಲರ್​ಗಳೆದುರು ಮಂಡಿಯೂರಿದ ಚೆನೈಗೆ ಸತತ ಎರಡನೆ ಸೋಲು

|

Updated on: Sep 25, 2020 | 11:31 PM

ಡೆಲ್ಲಿ ಕ್ಯಾಪಿಟಲ್ಸ್ ಬೌಲರ್​ಗಳೆದುರು ರನ್ ಗಳಿಸಲು ತಿಣುಕಾಡಿದ ಚೆನೈ ಬ್ಯಾಟ್ಸ್​ಮನ್​ಗಳು ತಮ್ಮ ಟೀಮಿನ ಸತತ ಎರಡನೇ ಸೋಲಿಗೆ ಕಾರಣರಾದರು. ದುಬೈನ ಇಂಟರ್​ನ್ಯಾಶನಲ್ ಕ್ರೀಡಾಂಗಣದಲ್ಲಿ ಇಂದು 176 ರನ್​ಗಳ ಅಷ್ಡೇನೂ ದೊಡ್ಡದಲ್ಲದ ಮೊತ್ತದ ಬೆನ್ನಟ್ಟಿದ ಚೆನೈ 131/7 ಗಳಿಸುವಲ್ಲಿ ಮಾತ್ರ ಯಶ ಕಂಡಿತು. ಕಗಿಸೊ ರಬಾಡಾ 26 ರನ್ ನೀಡಿ 3 ವಿಕೆಟ್ ಪಡೆದು ತಂಡಕ್ಕೆ 44 ರನ್​ಗಳ ಗೆಲುವು ದೊರಕಿಸಿಕೊಟ್ಟರು. ಎಡಗೈ ಸ್ಪಿನ್ನರ್ ಅಕ್ಸರ್ ಪಟೇಲ್ (4-0-18-1), ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ (4-0-23-0) ಮತ್ತು ಅನ್ರಿಕ್ […]

ಡೆಲ್ಲಿ ಬೌಲರ್​ಗಳೆದುರು ಮಂಡಿಯೂರಿದ ಚೆನೈಗೆ ಸತತ ಎರಡನೆ ಸೋಲು
Follow us on

ಡೆಲ್ಲಿ ಕ್ಯಾಪಿಟಲ್ಸ್ ಬೌಲರ್​ಗಳೆದುರು ರನ್ ಗಳಿಸಲು ತಿಣುಕಾಡಿದ ಚೆನೈ ಬ್ಯಾಟ್ಸ್​ಮನ್​ಗಳು ತಮ್ಮ ಟೀಮಿನ ಸತತ ಎರಡನೇ ಸೋಲಿಗೆ ಕಾರಣರಾದರು. ದುಬೈನ ಇಂಟರ್​ನ್ಯಾಶನಲ್ ಕ್ರೀಡಾಂಗಣದಲ್ಲಿ ಇಂದು 176 ರನ್​ಗಳ ಅಷ್ಡೇನೂ ದೊಡ್ಡದಲ್ಲದ ಮೊತ್ತದ ಬೆನ್ನಟ್ಟಿದ ಚೆನೈ 131/7 ಗಳಿಸುವಲ್ಲಿ ಮಾತ್ರ ಯಶ ಕಂಡಿತು. ಕಗಿಸೊ ರಬಾಡಾ 26 ರನ್ ನೀಡಿ 3 ವಿಕೆಟ್ ಪಡೆದು ತಂಡಕ್ಕೆ 44 ರನ್​ಗಳ ಗೆಲುವು ದೊರಕಿಸಿಕೊಟ್ಟರು.

ಎಡಗೈ ಸ್ಪಿನ್ನರ್ ಅಕ್ಸರ್ ಪಟೇಲ್ (4-0-18-1), ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ (4-0-23-0) ಮತ್ತು ಅನ್ರಿಕ್ ನೋರೆ (4-0-21-2) ಅವರ ಕರಾರುವಾಕ್ ಬೌಲಿಂಗ್ ಸಹ ಡೆಲ್ಲಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿತು. ಡೆಲ್ಲಿ ಪರ ಮತ್ತೊಮ್ಮೆ ಬ್ಯಾಟಿಂಗ್​ನಲ್ಲಿ ಮಿಂಚಿದ ಫಫ್ ಡು ಪ್ಲೆಸ್ಸಿ 35 ಎಸೆತಗಳಲ್ಲಿ 43 (4X4) ಬಾರಿಸಿದರು. ಕೇದಾರ್ ಜಾಧವ್ 20 ಎಸೆತಗಳಲ್ಲಿ 26 ರನ್ (3X4) ಗಳಿಸಿದರು.

ಇದಕ್ಕೆ ಮೊದಲು ಟಾಸ್ ಸೋತ ನಂತರ ಬ್ಯಾಟಿಂಗ್​ಗೆ ಕಳಿಸಲ್ಪಟ್ಟ ಡೆಲ್ಲಿಗೆ ಶಿಖರ್ ಧವನ್ ಮತ್ತು ಪೃಥ್ವಿ ಶಾಹ ಜೋಡಿಯು 94 ರನ್​ಗಳ ಉತ್ತಮ ಆರಂಭವೊದಗಿಸಿತು. 27 ಎಸೆತಗಳಲ್ಲಿ 35 ರನ್ (3X4 1X6) ಬಾರಿಸಿದ ಶಿಖರ್, ಲೆಗ್ ಸ್ಪಿನ್ನರ್ ಪಿಯುಷ್ ಚಾವ್ಲಾ ಅವರ ಎಸೆತವೊಂದನ್ನು ರಿವರ್ಸ್ ಸ್ವೀಪ್ ಮಾಡುವ ಪ್ರಯತ್ನದಲ್ಲಿ ಎಲ್​ಬಿ ಬಲೆಗೆ ಸಿಕ್ಕರು. 35 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದ ಶಾಹ ಅಂತಿಮವಾಗಿ 64 (43 9X4 1X6) ರನ್ ಗಳಿಸಿದ್ದಾಗ ಚಾವ್ಲಾಗೆ ಎರಡನೇ ಬಲಿಯಾದರು.

ಶಾಹ ಔಟಾದ ನಂತರ ಜೊತೆಗೂಡಿದ ರಿಷಬ್ ಪಂತ್ ಮತ್ತು ನಾಯಕ ಅಯ್ಯರ್ ಮೂರನೇ ವಿಕೆಟ್​ಗೆ 58ರನ್ ಸೇರಿಸಿದರು. 22 ಎಸೆತಗಳಲ್ಲಿ 22 ರನ್ ಗಳಿಸಿದ ಅಯ್ಯರ್, ಸ್ಯಾಮ್ ಕರನ್ ಅವರ ದಾಳಿಯಲ್ಲಿ ಧೋನಿ ಹಿಡಿದ ಅಮೋಘ ಕ್ಯಾಚಿಗೆ ಬಲಿಯಾದರು. ತಮ್ಮ ಬಲಕ್ಕೆ ಚಂಗನೆ ಹಾರಿ ಹಿಡಿದ ಕ್ಯಾಚ್ ಧೋನಿಗಿನ್ನೂ ವಯಸ್ಸಾಗಿಲ್ಲ ಎಂಬ ಭಾವನೆ ಮೂಡಿಸಿತು.

ಭಾರಿ ಹೊಡೆತಗಳಿಗೆ ಹೆಸರಾಗಿರುವ ಪಂತ್ ತನ್ನ ಖ್ಯಾತಿಗೆ ತಕ್ಕ ಆಟವಾಡಲು ಪ್ರಯತ್ನಿಸಿದರಾದರೂ ನಿಧಾನಗತಿಯ ಪಿಚ್​ನಿಂದಾಗಿ ಶಾಟ್​ಗಳು ಸರಿಯಾಗಿ ಕನೆಕ್ಟ್ ಆಗಲಿಲ್ಲ. 25 ಎಸೆತಗಳಲ್ಲಿ ಆಜೇಯ 37 (6X4) ರನ್ ಬಾರಿಸಿದ ಪಂತ್ 20ನೇ ಓವರ್​ನಲ್ಲಿ 14 ರನ್ ಮಾತ್ರ ಪಡೆಯುವಲ್ಲಿ ಯಶ ಕಂಡರು. ಆಂತಿಮವಾಗಿ ಡೆಲ್ಲಿ ಪೇರಿಸಿದ ಮೊತ್ತ ಸ್ಫರ್ದಾತ್ಮಕ ಎನ್ನಬಹುದಾದ 175/3.

ಚೆನೈ ಪರ ಚಾವ್ಲಾ 2 ವಿಕೆಟ್ ಪಡೆದರೆ ಉಳಿದೊಂದನ್ನು ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಸ್ಯಾಮ್ ಕರನ್ ಪಡೆದರು.