ಗವಾಸ್ಕರ್ನ ಉದ್ಧಟತನಕ್ಕೆ ಅನುಷ್ಕಾಳ ‘ಮು ತೋಡ್ ಜವಾಬ್!’
ಕಾಮೆಂಟ್ರಿ ಮಾಡುವಾಗ ಕೆಲ ಸಲ ಉದ್ಧಟತನ ಪ್ರದರ್ಶಿಸುವ ಅಭ್ಯಾಸವಿರುವ ಖ್ಯಾತ ವೀಕ್ಷಕ ವಿವರಣೆಕಾರ ಮತ್ತು ಭಾರತದ ಮಾಜಿ ಕ್ಯಾಪ್ಟನ್ ಸುನಿಲ್ ಗವಾಸ್ಕರ್ ಈ ಬಾರಿ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ವೈಫಲ್ಯದ ಬಗ್ಗೆ ಹದ್ದು ಮೀರಿ ಮಾತಾಡಿದ್ದು ರಾಯಲ್ ಚಾಲಂಜರ್ಸ್ ಬೆಂಗಳೂರು ಟೀಮಿನ ನಾಯಕನ ಪತ್ನಿ ಮತ್ತು ಖ್ಯಾತ ನಟಿ ಅನುಷ್ಕಾ ಶರ್ಮ ಅವರನ್ನು ತೀವ್ರವಾಗಿ ಕೆರಳಿಸಿದೆ. ಅಸಲಿಗೆ ಆಗಿದ್ದೇನೆಂದರೆ, ಗುರುವಾರದಂದು ಕಿಂಗ್ಸ್ ಎಲೆವೆನ್ ಪಂಜಾಬ್ ವಿರುದ್ಧ ಆಡಿದ ಇಂಡಿಯನ್ ಪ್ರಿಮೀಯರ್ ಲೀಗ್ನ ಪಂದ್ಯದಲ್ಲಿ ಕೊಹ್ಲಿ ಕೆಟ್ಟದಾಗಿ ವಿಫಲರಾದರು. […]
ಕಾಮೆಂಟ್ರಿ ಮಾಡುವಾಗ ಕೆಲ ಸಲ ಉದ್ಧಟತನ ಪ್ರದರ್ಶಿಸುವ ಅಭ್ಯಾಸವಿರುವ ಖ್ಯಾತ ವೀಕ್ಷಕ ವಿವರಣೆಕಾರ ಮತ್ತು ಭಾರತದ ಮಾಜಿ ಕ್ಯಾಪ್ಟನ್ ಸುನಿಲ್ ಗವಾಸ್ಕರ್ ಈ ಬಾರಿ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ವೈಫಲ್ಯದ ಬಗ್ಗೆ ಹದ್ದು ಮೀರಿ ಮಾತಾಡಿದ್ದು ರಾಯಲ್ ಚಾಲಂಜರ್ಸ್ ಬೆಂಗಳೂರು ಟೀಮಿನ ನಾಯಕನ ಪತ್ನಿ ಮತ್ತು ಖ್ಯಾತ ನಟಿ ಅನುಷ್ಕಾ ಶರ್ಮ ಅವರನ್ನು ತೀವ್ರವಾಗಿ ಕೆರಳಿಸಿದೆ.
ಅಸಲಿಗೆ ಆಗಿದ್ದೇನೆಂದರೆ, ಗುರುವಾರದಂದು ಕಿಂಗ್ಸ್ ಎಲೆವೆನ್ ಪಂಜಾಬ್ ವಿರುದ್ಧ ಆಡಿದ ಇಂಡಿಯನ್ ಪ್ರಿಮೀಯರ್ ಲೀಗ್ನ ಪಂದ್ಯದಲ್ಲಿ ಕೊಹ್ಲಿ ಕೆಟ್ಟದಾಗಿ ವಿಫಲರಾದರು. ಫೀಲ್ಡಿಂಗ್ ಮಾಡುವಾಗ ಪಂಜಾಬ್ ಟೀಮಿನ ನಾಯಕ ಕೆ ಎಲ್ ರಾಹುಲ್ ನೀಡಿದ ಎರಡು ಕ್ಯಾಚ್ಗಳನ್ನು ಸಹ ಅವರು ಡ್ರಾಪ್ ಮಾಡಿದರು. ಅದರ ಲಾಭ ಪಡೆದ ರಾಹುಲ್ ಬಿರುಸಿನ ಶತಕ ಪೂರೈಸಿದ್ದೂ ಅಲ್ಲದೆ ಟೀಮಿನ ಮೊತ್ತವನ್ನು 200ರ ಗಡಿ ದಾಟಿಸಿದರು.
ಫೀಲ್ಡಿಂಗ್ನಲ್ಲಾದ ಪ್ರಮಾದವನ್ನು ಕೊಹ್ಲಿ ಬ್ಯಾಟಿಂಗ್ನಲ್ಲಿ ಸರಿದೂಗಿಸುವರೆಂಬ ನಿರೀಕ್ಷೆ ಎಲ್ಲರಿಗಿತ್ತು. ಆದರೆ ಅವರು 5 ಎಸೆತಗಳಲ್ಲಿ ಕೇವಲ 1 ರನ್ ಗಳಿಸಿ ಶೆಲ್ಡನ್ ಕಾರ್ಟೆಲ್ಗೆ ವಿಕೆಟ್ ಒಪ್ಪಿಸಿದರು. ಅವರ ವೈಫಲ್ಯದ ಬಗ್ಗೆ ಆಗ ಕಾಮೆಂಟ್ ಮಾಡಿದ ಗವಾಸ್ಕರ್, ‘‘ಲಾಕ್ಡೌನ್ ವೇಳೆಯಲ್ಲಿ ವಿರಾಟ್ ಕೇವಲ ಅನುಷ್ಕಾಳ ಬೌಲಿಂಗ್ ಎದುರಿಸಿದ್ದಾರೆ. ಆ ವಿಡಿಯೊವನ್ನೊಮ್ಮೆ ನೋಡಿ. ಅದರಿಂದೇನೂ ಲಾಭವಿಲ್ಲ,’’ ಎಂದರು.
ಲಾಕ್ಡೌನ್ ಸಮಯದಲ್ಲಿ ಅನುಷ್ಕಾರೊಂದಿಗೆ ತಮ್ಮ ಮನೆಯ ಟೆರೇಸ್ನಲ್ಲಿ ತಾನು ಕ್ರಿಕೆಟ್ ಆಡುತ್ತಿರುವ ವಿಡಿಯೊವನ್ನು ಕೊಹ್ಲಿ ಶೇರ್ ಮಾಡಿದ್ದಾರೆ. ಸದರಿ ವಿಡಿಯೊವನ್ನು ನೋಡಿಯೇ ಗವಾಸ್ಕರ್ ಅಂಥ ಕೀಳು ಅಭಿರುಚಿಯ ಕಾಮೆಂಟ್ ಮಾಡಿದ್ದು, ಅದು ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೊಹ್ಲಿ, ಗವಾಸ್ಕರ್ರ ಕಾಮೆಂಟ್ಗೆ ರಿಯಾಕ್ಟ್ ಮಾಡಿಲ್ಲವಾದರೂ ಅನುಷ್ಕಾ ಸನ್ನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
‘‘ಮಿಸ್ಟರ್ ಗವಾಸ್ಕರ್ ಅವರೇ, ನಿಮ್ಮ ಕಾಮೆಂಟ್ ಕೀಳು ಅಭಿರುಚಿಯದಾಗಿದ್ದು, ಒಬ್ಬ ಮಹಿಳೆಯ ಪತಿಯ ವೈಫಲ್ಯಕ್ಕೆ ಆಕೆಯನ್ನು ದೂಷಿಸಿ ಅಂಥ ಕಾಮೆಂಟ್ ಯಾಕೆ ಮಾಡಿರುವಿರೆಂದು ವಿವರಿಸುತ್ತೇನೆ. ನೀವು ವೀಕ್ಷಕ ವಿವರಣೆ ನೀಡಲು ಶುರು ಮಾಡಿದಾಗಿನಿಂದ ಪ್ರತಿಯೊಬ್ಬ ಕ್ರಿಕೆಟ್ ಆಟಗಾರನ ಖಾಸಗಿ ಬದುಕನ್ನು ಗೌರವಿಸಿರುವಿರೆಂದು ಭಾವಿಸುತ್ತೇನೆ. ಈ ಹಿನ್ನೆಲೆಯಲ್ಲಿ ನನಗೆ ಮತ್ತು ನಮ್ಮಿಬ್ಬರಿಗೆ ನೀವು ಅದೇ ತೆರನಾದ ಗೌರವ ನೀಡಬೇಕೆಂದು ನಿಮಗನಿಸುವುದಿಲ್ಲವೇ? ಕಳೆದ ರಾತ್ರಿ ನನ್ನ ಪತಿಯ ಆಟದ ಬಗ್ಗೆ ಕಾಮೆಂಟ್ ಮಾಡುವಾಗ ಹಲವಾರು ಇತರ ಶಬ್ದ ಮತ್ತು ವಾಕ್ಯಗಳನ್ನು ನೀವು ಉಪಯೋಗಿಸಬಹುದಿತ್ತು, ಆದರೆ ನೀವು ನನ್ನ ಹೆಸರನ್ನು ಉಮಯೋಗಿದರೆ ಮಾತ್ರ ನಿಮ್ಮ ಮಾತಿಗೆ ಹೆಚ್ಚು ಮಹತ್ವ ಬರುತ್ತದೆ ಹಾಗೂ ಪ್ರಸ್ತುತವೆನಿಸುತ್ತದೆ ಎಂದು ಭಾವಿಸಿದಿರಿ. ನಾವೀಗ 2020 ವರ್ಷದಲ್ಲಿದ್ದೇವೆ. ಆದರೆ, ನನ್ನ ವಿಷಯದಲ್ಲಿ ಪರಿಸ್ಥಿ ಬದಲಾಗಿಲ್ಲ. ನನ್ನ ಹೆಸರನ್ನು ಬಳಸಿ ಕೆಟ್ಟದಾಗಿ ಕಾಮೆಂಟ್ ಮಾಡುವುದು ಯಾವಾಗ ಕೊನೆಗೊಳ್ಳಲಿದೆ? ಗೌರವಾನ್ವಿತ ಗವಾಸ್ಕರ್ ಅವರೇ, ಸಭ್ಯರ ಕ್ರೀಡೆ ಎಂದು ಗುರುತಿಸಿಕೊಂಡಿರುವ ಆಟದ ಲೆಜೆಂಡ್ ನೀವು. ನಿಮ್ಮ ಕಾಮೆಂಟ್ ನನ್ನ ಮೇಲೆ ಯಾವ ಪರಿಣಾಮವನ್ನುಂಟು ಮಾಡಿತು ಅಂತ ನಿಮಗೆ ಹೇಳಬೇಕೆನಿಸಿತು,’’ ಎಂದು ಇನ್ಸ್ಟಾಗ್ರಾಮ್ನಲ್ಲಿ ಅನುಷ್ಕಾ ಪೋಸ್ಟ್ ಮಾಡಿದ್ದಾರೆ.
ಇನ್ನಾದರೂ 70ರ ಸನಿಹವಿರುವ ಗವಾಸ್ಕರ್ ತಮ್ಮ ವರ್ತನೆಯಲ್ಲಿ, ಮಾತಿನಲ್ಲಿ ಸುಧಾರಣೆ ತಂದುಕೊಳ್ಳುವರೇ?