India vs England: ರಾಹುಲ್ ನಮ್ಮ ಚಾಂಪಿಯನ್ ಬ್ಯಾಟ್ಸ್​ಮನ್ ಅಂತ ಹೇಳಿ ಕನ್ನಡಿಗನ ಬೆಂಬಲಕ್ಕೆ ನಿಂತ ಕ್ಯಾಪ್ಟನ್ ವಿರಾಟ್ ಕೊಹ್ಲಿ

|

Updated on: Mar 17, 2021 | 6:14 PM

ಮೂರನೇ ಪಂದ್ಯಕ್ಕೆ ರೋಹಿತ್ ವಾಪಸ್ಸಾಗಿದ್ದರಿಂದ ಕೊಹ್ಲಿ ತಮ್ಮ ಮೂರನೇ ಕ್ರಮಾಂಕವನ್ನು ಹೊಸಬ ಮತ್ತು ಎರಡನೇ ಪಂದ್ಯದಲ್ಲಿ ಆಕರ್ಷಕ ಹಾಗೂ ಆಕ್ರಮಣಕಾರಿ ಅರ್ಧ ಶತಕ ಬಾರಿಸಿ ಪಂದ್ಯದ ವ್ಯಕ್ತಿ ಪ್ರಶಸ್ತಿಗೆ ಪಾತ್ರರಾಗಿದ್ದ ಇಶಾನ್ ಕಿಷನ್ ಅವರಿಗೆ ತ್ಯಾಗ ಮಾಡಿ ತಾನು 4ನೇ ಕ್ರಮಾಂಕದಲ್ಲಿ ಆಡಿದರು.

India vs England: ರಾಹುಲ್ ನಮ್ಮ ಚಾಂಪಿಯನ್ ಬ್ಯಾಟ್ಸ್​ಮನ್ ಅಂತ ಹೇಳಿ ಕನ್ನಡಿಗನ ಬೆಂಬಲಕ್ಕೆ ನಿಂತ ಕ್ಯಾಪ್ಟನ್ ವಿರಾಟ್ ಕೊಹ್ಲಿ
ವಿರಾಟ್​ ಕೊಹ್ಲಿ ಮತ್ತು ಕೆ.ಎಲ್ .ರಾಹುಲ್
Follow us on

ಅಹಮದಾಬಾದ್: ಸತತ ವೈಫಲ್ಯಗಳ ಹೊರತಾಗಿಯೂ ಕೆ.ಎಲ್.ರಾಹುಲ್ ಟೀಮಿನ ಕ್ಯಾಪ್ಟನ್ ಮತ್ತು ಬ್ಯಾಟಿಂಗ್ ಕೋಚ್ ಅವರ ಬೆಂಬಲ ಪಡೆಯುತ್ತಿದ್ದಾರೆ. ಟೀಮ್ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರಂತೂ ಕನ್ನಡಿಗನನ್ನು ಟಿ20 ಫಾರ್ಮಾಟ್​ನ ಚಾಂಪಿಯನ್ ಬ್ಯಾಟ್ಸಮನ್ ಎಂದು ಕರೆದು, ಟಾಪ್ ಕ್ರಮಾಂಕದಲ್ಲಿ ರೋಹಿತ್ ಶರ್ಮ ಅವರೊಂದಿಗೆ ರಾಹುಲ್ ಟೀಮ್ ಇಂಡಿಯಾದ ಅವಿಭಾಜ್ಯ ಅಂಗವಾಗಿದ್ದಾರೆ ಎಂದು ಹೇಳಿದರು. ಮಂಗಳವಾರದ ಮೂರನೇ ಪಂದ್ಕಕ್ಕೆ ಮೊದಲಿನ 2 ಪಂಂದ್ಯಗಲ್ಲಿ ರಾಹುಲ್ 1 ಮತ್ತು 0 ಗೆ ಔಟಾಗಿದ್ದರೂ ಕೊಹ್ಲಿ ಮತ್ತು ಟೀಮ್ ಮ್ಯಾನೇಜ್ಮೆಂಟ್​ ಸೂರ್ಯಕುಮಾರ್ ಯಾದವ್ ಅವರನ್ನು ತಂಡದಿಂದ ಕೈಬಿಟ್ಟು ರಾಹುಲ್ ಅವರನ್ನು ಆಡಿಸುವ ನಿರ್ಧಾರ ತೆಗೆದುಕೊಂಡಿತ್ತು.

ಮೂರನೇ ಪಂದ್ಯಕ್ಕೆ ರೋಹಿತ್ ವಾಪಸ್ಸಾಗಿದ್ದರಿಂದ ಕೊಹ್ಲಿ ತಮ್ಮ ಮೂರನೇ ಕ್ರಮಾಂಕವನ್ನು ಹೊಸಬ ಮತ್ತು ಎರಡನೇ ಪಂದ್ಯದಲ್ಲಿ ಆಕರ್ಷಕ ಹಾಗೂ ಆಕ್ರಮಣಕಾರಿ ಅರ್ಧ ಶತಕ ಬಾರಿಸಿ ಪಂದ್ಯದ ವ್ಯಕ್ತಿ ಪ್ರಶಸ್ತಿಗೆ ಪಾತ್ರರಾಗಿದ್ದ ಇಶಾನ್ ಕಿಷನ್ ಅವರಿಗೆ ತ್ಯಾಗ ಮಾಡಿ ತಾನು 4ನೇ ಕ್ರಮಾಂಕದಲ್ಲಿ ಆಡಿದರು. ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸಿದ ರಾಹುಲ್ 4ನೇ-ಬಾಲ್ ಸೊನ್ನೆಗೆ ಔಟಾದರು. ಆದರೆ ಕೊಹ್ಲಿಗೆ ತನ್ನ ಆರಂಭ ಆಟಗಾರನ ಮೇಲಿನ ವಿಶ್ವಾಸ ಕಿಂಚಿತ್ತೂ ಕಡಿಮೆಯಾಗಿಲ್ಲ.

‘ಎರಡು ಪಂದ್ಯಗಳ ಮೊದಲು ನಾನು ಬ್ಯಾಟಿಂಗ್​ನಲ್ಲಿ ವಿಫನಾಗಿದ್ದೆ, ರಾಹುಲ್ ನಮ್ಮ ಚಾಂಪಿಯನ್ ಬ್ಯಾಟ್ಸ್​ಮನ್ ಆಗಿದ್ದಾರೆ. ಟಿ20 ಕ್ರಿಕೆಟ್ ಪಾರ್ಮಾಟ್​ನಲ್ಲಿ ಅವರ 2-3 ವರ್ಷಗಳ ಸಾಧನೆಯನ್ನು ನೋಡಿದ್ದೇಯಾದರೆ ಉಳಿದೆಲ್ಲವರಿಗಿಂತ ಅದು ಚೆನ್ನಾಗಿದೆ,’ ಎಂದು ಮೊಟೆರಾ ಮೈದಾನದಲ್ಲಿ ಮೂರನೇ ಪಂದ್ಯ ಮುಗಿದ ನಂತರ ಕೊಹ್ಲಿ ಹೇಳಿದರು.

ವಿಕ್ರಮ್ ರಾಥೋಡ್

ಕೊಹ್ಲಿ ಮಾತ್ರ ರಾಹುಲ್ ಅವರನ್ನು ಬೆಂಬಲಿಸಿ ಮಾತಾಡುತ್ತಿಲ್ಲ, ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಠೋಡ್ ಸಹ ಬ್ಯಾಟ್ಸ್​ಮನ್​ಗಳು ವೈಫಲ್ಯ ಕಾಣುವುದು ಅಸಹಜವೇನಲ, ಎಲ್ಲ ಖ್ಯಾತ ಆಟಗಾರರ ವೃತ್ತಿಬದುಕಿನಲ್ಲಿ ಅದು ಜರುಗುತ್ತದೆ ಎಂದು ಹೇಳಿ, ರಾಹುಲ್ ಟಿ20ಕ್ರಿಕೆಟ್​ನಲ್ಲಿ ಭಾರತೀಯ ಟೀಮಿನ ಅತ್ಯುತ್ತಮ ಬ್ಯಾಟ್ಸ್​ಮನ್ ಎಂದು ಹೇಳಿದರು.

‘ಎಲ್ಲ ಬ್ಯಾಟ್ಸ್​ಮನ್​ಗಳೊಂದಿಗೆ ಇದು ಸಂಭವಿಸುತ್ತದೆ. ಆದರೆ ವಾಸ್ತವ ಸಂಗತಿಯೇನೆಂದರೆ ರಾಹುಲ್ ಟಿ20 ಕ್ರಿಕೆಟ್​ನಲ್ಲಿ ನಮ್ಮ ಅತ್ಯುತ್ತಮ ಬ್ಯಾಟ್ಸ್​ಮನ್. ಈ ಆವೃತ್ತಿಯಲ್ಲಿ ಅವರು 145ರ ಸ್ಟ್ರೈಕ್​ರೇಟ್​ನೊಂದಿಗೆ 41ಕ್ಕಿಂತ ಹೆಚ್ಚಿನ ಸರಾಸರಿ ಹೊಂದಿದ್ದಾರೆ. ಮೂರು ಪಂದ್ಯಗಳಲ್ಲಿನ ವೈಫಲ್ಯ ಅವರು ಟಿ20 ಕ್ರಿಕೆಟ್​ನಲ್ಲಿ ನಮ್ಮ ಟೀಮಿನ ಬೆಸ್ಟ್​ ಬ್ಯಾಟ್ಸ್​ಮನ್ ಎಂಬ ಅಂಶವನ್ನು ಮರೆಮಾಡದು. ಈಗ ಅವರಿಗೆ ನಮ್ಮ ಬೆಂಬಲದ ಅವಶ್ಯತಕೆಯಿದೆ, ಅವರು ಈ ಲೀನ್ ಪ್ಯಾಚ್​ನಿಂದ ಮೇಲೆ ಬರುತ್ತಾರೆಂಬ ಸಂಪೂರ್ಣ ವಿಶ್ವಾಸ ನನಗಿದೆ ಎಂದು ರಾಠೋಡ್ ಮಂಗಳವಾರದಂದು ಅಹಮದಾಬಾದಿನಲ್ಲಿ ಮಾಧ್ಯಮದವರೊಂದಿಗೆ ಮಾತಾಡುವಾಗ ಹೇಳಿದರು.

ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ಸೀಮಿತ ಓವರ್​ಗಳ ಸರಣಿಗಳಲ್ಲಿ ಆಡಿದ ನಂತರ ರಾಹುಲ್ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್​ ಸರಣಿಗಳಲ್ಲಿ ರಾಹುಲ್ ಟೀಮಿನ ಭಾಗವಾಗಿದ್ದರೂ ಒಂದು ಟೆಸ್ಟ್​ ಪಂದ್ಯದಲ್ಲೂ ಆಡುವ ಇಲೆವೆನ್​ನ ಭಾಗವಾಗಿರಲಿಲ್ಲ. ಕೇವಲ ನೆಟ್ಸ್​ನಲ್ಲಿ ಮಾತ್ರ ಬಾಗವಹಿಸುತ್ತಿದ್ದರು. ಹಾಗಾಗಿ ಅವರನ್ನು ಜಡತ್ವ ಆವರಿಸಿರಬಹುದೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಠೋಡ್, ಅದು ಸಹ ರಾಹುಲ್ ವೈಫಲ್ಯಗಳಿಗೆ ಕಾರಣವಾಗಿರಬಹುದು ಎಂದು ಹೇಳಿದರು.

‘ಈ ಅಂಶವನ್ನು ನಾನು ಸಹ ಒಪ್ಪುತ್ತೇನೆ. ಮೈದಾನದಲ್ಲಿ ಬಹಳ ದಿನಗಳವರಗೆ ಆಡದಿದ್ದರೆ ಆಟಗಾರರಿಗೆ ಜಡತ್ವ ಆವರಿಸುವುದು ಸಹಜ. ಇಂಥ ಸಂದರ್ಭಗಳಲ್ಲಿ ನಾವು ಮಾಡಬಹುದಾದ ಕೆಲಸವೆಂದರೆ, ನೆಟ್ಸ್​ನಲ್ಲಿ ಅವರಿಗೆ ಅಭ್ಯಾಸ ಮಾಡಿಸುವುದು. ಟೀಮಿನ ಸದಸ್ಯರೆಲ್ಲ ನೆಟ್ಸ್​ನಲ್ಲಿ ಸಾಕಷ್ಟು ಅಭ್ಯಾಸ ನಡೆಸುತ್ತಿದ್ದಾರೆ. ಕೆಲವು ಸಲ ಸೆಂಟರ್​ ಪಿಚ್​ಗಳ ಮೇಲೆಯೂ ಅಭ್ಯಾಸ ಮಾಡುತ್ತಾರೆ,’ ಎಂದು ರಾಠೋಡ್ ಹೇಳಿದರು.

ಇದನ್ನೂ ಓದಿ: India vs England | ರಾಹುಲ್ ಒಬ್ಬ ಮ್ಯಾಚ್​ವಿನ್ನರ್, ಒಂದೆರಡು ವೈಫಲ್ಯಗಳಿಂದ ಅವರನ್ನು ಕಳಪೆ ಅನ್ನಲಾಗದು: ಆಕಾಶ್ ಚೋಪ್ರಾ

Published On - 6:13 pm, Wed, 17 March 21