‘ಇಡೀ ವಿಶ್ವವೇ ಭಾರತದತ್ತ ನೋಡುತ್ತಿದೆ’; ಭಾರತದ ಫುಟ್ಬಾಲ್ ಬಗ್ಗೆ ಡಿಎಫ್‌ಬಿ ಅಧ್ಯಕ್ಷ ಬರ್ಂಡ್ ನ್ಯೂಯೆಂಡಾರ್ಫ್ ಹೇಳಿದ್ದಿದು

|

Updated on: Jun 08, 2024 | 5:08 PM

DFB President Bernd Neuendorf: ಈಗಾಗಲೇ ಹೆಚ್ಚು ಮಕ್ಕಳು ಈ ಕ್ರೀಡೆಯ ಮೇಲೆ ಹೆಚ್ಚು ಆಸಕ್ತಿ ತೊರುತ್ತಿದ್ದಾರೆ. ಅದಕ್ಕಾಗಿಯೇ ನಾವು ಭಾರತವನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಹಾಗಾಗಿಯೇ ನಾವು ನಿಮ್ಮ ಬೆಂಬಲದೊಂದಿಗೆ (ಟಿವಿ9), ಅತಿ ದೊಡ್ಡ ಫುಟ್ಬಾಲ್ ಟ್ಯಾಲೆಂಟ್ ಹಂಟ್, ‘ಇಂಡಿಯಾಸ್ ಟೈಗರ್ಸ್ & ಟೈಗ್ರೆಸಸ್’ ಅನ್ನು ಆಯೋಜಿಸುತ್ತಿದ್ದೇವೆ ಎಂದರು.

‘ಇಡೀ ವಿಶ್ವವೇ ಭಾರತದತ್ತ ನೋಡುತ್ತಿದೆ’; ಭಾರತದ ಫುಟ್ಬಾಲ್ ಬಗ್ಗೆ ಡಿಎಫ್‌ಬಿ ಅಧ್ಯಕ್ಷ ಬರ್ಂಡ್ ನ್ಯೂಯೆಂಡಾರ್ಫ್ ಹೇಳಿದ್ದಿದು
Follow us on

ಭಾರತದಲ್ಲಿ ಫುಟ್ಬಾಲ್ (Football) ಬೆಳವಣಿಗೆಗಾಗಿ ದೇಶದ ಅತಿದೊಡ್ಡ ನ್ಯೂಸ್ ನೆಟ್​ವರ್ಕ್​ ಟಿವಿ9 ವಾಹಿನಿ ‘ಇಂಡಿಯಾಸ್ ಟೈಗರ್ಸ್ & ಟೈಗ್ರೆಸಸ್’ (Indian Tigers & Tigresses) ಟ್ಯಾಲೆಂಟ್ ಹಂಟ್ ಕಾರ್ಯಕ್ರಮದಡಿಯಲ್ಲಿ ಈಗಾಗಲೇ ದೇಶಾದ್ಯಂತ 14 ವರ್ಷದೊಳಗಿನ ಪ್ರತಿಭಾವಂತ ಯುವ ಫುಟ್ಬಾಲ್ ಪಟುಗಳ ಆಯ್ಕೆಗೆ ಮುಂದಾಗಿದೆ. ಈ ಪ್ರತಿಭಾನ್ವೇಷಣೆಗೆ ಟಿವಿ9 ಜೊತೆಗೆ ಯುರೋಪ್‌ನ ಅಗ್ರ ಫುಟ್‌ಬಾಲ್ ಲೀಗ್ ಬುಂಡೆಸ್ಲಿಗಾ (Bundesliga) ಕೂಡ ಕೈಜೋಡಿಸಿದೆ. ಅದರಂತೆ ಉಭಯರ ಸಹಯೋಗದೊಂದಿಗೆ ದೇಶದಲ್ಲಿ ಯುವ ಫುಟ್ಬಾಲ್ ಪ್ರತಿಭೆಗಳ ಭೇಟೆ ಆರಂಭವಾಗಲಿದೆ. ಇದಕ್ಕೆ ಪೂರಕವಾಗಿ ಟಿವಿ9 ವಾಹಿನಿಯ ಹಿರಿಯ ಸಲಹೆಗಾರರಾದ ಶ್ರೀ. ಕೌಶಿಕ್ ಮೌಲಿಕ್ ಅವರು ಜರ್ಮನಿಯಲ್ಲಿ ಫುಟ್ಬಾಲ್ ಪ್ರಗತಿಗಾಗಿ ದುಡಿದ ಖ್ಯಾತ ಪತ್ರಕರ್ತ, ರಾಜಕಾರಣಿ ಹಾಗೂ ಡಿಎಫ್‌ಬಿ ಅಧ್ಯಕ್ಷ ಬರ್ಂಡ್ ನ್ಯೂಯೆಂಡಾರ್ಫ್ (Bernd Neuendorf) ಅವರೊಂದಿಗೆ ಸಂದರ್ಶನ ನಡೆಸಿದ್ದು, ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು ಹೀಗೆ.

ಕೌಶಿಕ್: ಭಾರತೀಯ ಫುಟ್‌ಬಾಲ್ ಜಾಗತಿಕ ಮಟ್ಟದಲ್ಲಿ ಬೆಳೆಯಲು ಏನಾದ್ರು ಸಲಹೆ ನೀಡಿ?

ಬರ್ಂಡ್ ನ್ಯೂಯೆಂಡಾರ್ಫ್: ನಾನು ಇತರ ದೇಶಗಳಿಗೆ ಯಾವುದೇ ಸಲಹೆ ನೀಡುವ ಅಗತ್ಯವಿಲ್ಲ. ನನಗೆ ಗೊತ್ತು, ನನಗೆ ತಿಳಿದಿರುವ ಏಕೈಕ ವಿಷಯವೆಂದರೆ ಭಾರತವೂ ಫುಟ್ಬಾಲ್ ಕ್ರೀಡೆಯನ್ನು ಅಭಿವೃದ್ಧಿಪಡಿಸಲು ಸಾಕಷ್ಟು ಪ್ರಯತ್ನ ಪಡುತ್ತಿದೆ. ಅಲ್ಲದೆ ಈ ಕ್ರೀಡೆ ಈಗಾಗಲೇ ದೇಶದಾದ್ಯಂತ ಜನಪ್ರಿಯತೆ ಗಳಿಸುತ್ತಿದೆ. ಪ್ರಪಂಚದಾದ್ಯಂತ ಫುಟ್ಬಾಲ್ ಹೇಗೆ ಅಭಿವೃದ್ಧಿ ಹೊಂದುತ್ತಿದೆ ಎಂಬುದನ್ನು ನಾವು ನೋಡಿದ್ದೇವೆ. ಆಫ್ರಿಕಾ, ಏಷ್ಯಾದಲ್ಲಿ ಈ ಕ್ರೀಡೆಯಲ್ಲಿ ಯಶಸ್ಸು ಸಾಧಿಸಿರುವ ಅನೇಕ ದೇಶಗಳಿವೆ. ಪ್ರತಿಯೊಬ್ಬರೂ ಆಟವನ್ನು ಆನಂದಿಸಬೇಕು ಮತ್ತು ಪ್ರತಿಯೊಬ್ಬರೂ ಈ ಆಟವನ್ನು ಇನ್ನಷ್ಟು ಮೇಲಕ್ಕೆ ತೆಗೆದುಕೊಂಡು ಹೋಗಬೇಕೆಂದು ನಾವು ಬಯಸುತ್ತೇವೆ.

ಈಗಾಗಲೇ ಹೆಚ್ಚು ಮಕ್ಕಳು ಈ ಕ್ರೀಡೆಯ ಮೇಲೆ ಹೆಚ್ಚು ಆಸಕ್ತಿ ತೊರುತ್ತಿದ್ದಾರೆ. ಅದಕ್ಕಾಗಿಯೇ ನಾವು ಭಾರತವನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಹಾಗಾಗಿಯೇ ನಾವು ನಿಮ್ಮ ಬೆಂಬಲದೊಂದಿಗೆ (ಟಿವಿ9), ಅತಿ ದೊಡ್ಡ ಫುಟ್ಬಾಲ್ ಟ್ಯಾಲೆಂಟ್ ಹಂಟ್, ‘ಇಂಡಿಯಾಸ್ ಟೈಗರ್ಸ್ & ಟೈಗ್ರೆಸಸ್’ ಅನ್ನು ಆಯೋಜಿಸುತ್ತಿದ್ದೇವೆ ಎಂದರು.

ನಮ್ಮ ತಂಡ ಅದ್ಭುತ ಪ್ರದರ್ಶನ ನೀಡಲಿದೆ

ಇನ್ನು ಇದೇ ಜೂನ್ 15 ರಿಂದ ಆರಂಭವಾಗಲಿರುವ UEFA ಯುರೋ 2024 ಲೀಗ್ ಬಗ್ಗೆ ತಮ್ಮ ನಿರೀಕ್ಷೆಗಳನ್ನು ಹಂಚಿಕೊಂಡ ನ್ಯೂಯೆಂಡಾರ್ಫ್, ‘ನಾವು ಯುರೋ 24 ಲೀಗ್ ಅನ್ನು ಆಯೋಜಿಸಿರುವುದಕ್ಕೆ ತುಂಬಾ ಹೆಮ್ಮೆಪಡುತ್ತೇವೆ. ಇದು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ದೊಡ್ಡ ಕಾರ್ಯಕ್ರಮವಾಗಿದೆ. ಈ ಲೀಗ್​ನಲ್ಲಿ 24 ತಂಡಗಳು ಭಾಗವಹಿಸುತ್ತಿವೆ. ಹೀಗಾಗಿ ಪ್ರತಿಯೊಬ್ಬರೂ ಈ ಲೀಗ್ ನೋಡಲು ಉತ್ಸುಕರಾಗಿದ್ದಾರೆ’.

ಮುಂದುವರೆದು ಮಾತನಾಡಿದ ಅವರು, ‘ಹೌದು, ನಾವು ಜರ್ಮನ್ ತಂಡದೊಂದಿಗೆ ಕೆಲವು ಉತ್ತಮ ಫಲಿತಾಂಶಗಳನ್ನು ಹೊಂದಿದ್ದೇವೆ. ಕಳೆದ ಎರಡು ವಿಶ್ವಕಪ್‌ಗಳಲ್ಲಿ ನಾವು ಉತ್ತಮ ಪ್ರದರ್ಶನ ನೀಡಲಿಲ್ಲ. ಆದರೆ ಈ ಬಾರಿ ಅಭಿಮಾನಿಗಳ ಬೆಂಬಲದೊಂದಿಗೆ ನಾವು ನಮ್ಮ ದೇಶದಲ್ಲಿ ಪಂದ್ಯಾವಳಿಯನ್ನು ಆಯೋಜಿಸುತ್ತಿದ್ದೇವೆ. ಈ ಲೀಗ್​ನಲ್ಲಿ ನಮ್ಮ ತಂಡ ಅದ್ಭುತ ಪ್ರದರ್ಶನ ನೀಡಲಿದೆ ಎಂದು ಎಲ್ಲರೂ ನಿರೀಕ್ಷಿಸುತ್ತಿದ್ದಾರೆ. ನಾವು ಸಹ ಅದನ್ನೇ ಆಶಿಸುತ್ತೇನೆ. ಏಕೆಂದರೆ ನಮ್ಮ ತಂಡದ ಯಶಸ್ಸು ಫುಟ್ಬಾಲ್ ಅನ್ನು ಇನ್ನಷ್ಟು ಉತ್ತೇಜಿಸುತ್ತದೆ.

ನಿಮ್ಮ ನೆಚ್ಚಿನ ತಂಡ ಅದ್ಭುತ ಪ್ರದರ್ಶನ ನೀಡಿದರೆ, ಮಕ್ಕಳು ಸಹ ಇದರೆಡೆಗೆ ಆಸಕ್ತಿವಹಿಸಿ ಕ್ಲಬ್‌ ಸೇರಲು ಮುಂದಾಗುತ್ತಾರೆ. ಅಲ್ಲದೆ ಅವರು ತಮ್ಮ ನೆಚ್ಚಿನ ಆಟಗಾರರನ್ನು ಅನುಸರಿಸಲು ಬಯಸುತ್ತಾರೆ. ಮತ್ತು ಅದೇ ರೀತಿ ಮಾಡುತ್ತಾರೆ. ಆದ್ದರಿಂದ ನಾವು ಈ ಪಂದ್ಯಾವಳಿಯಲ್ಲಿ ಬಹಳಷ್ಟು ಭರವಸೆಗಳನ್ನು ಹೊಂದಿದ್ದೇವೆ. ಇದಕ್ಕೆ ಪೂರಕವಾಗಿ ನಮ್ಮ ತಂಡ ಉತ್ತಮ ತರಬೇತುದಾರರನ್ನು ಹೊಂದಿದೆ. ಹಾಗೆಯೇ ನಮ್ಮಲ್ಲಿ ಉತ್ತಮ ತಂಡವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕೋಟ್ಯಾಂತರ ಅಭಿಮಾನಿಗಳ ಬಳಗ ಹೊಂದಿದ್ದೇವೆ. ಆದ್ದರಿಂದ ನಮ್ಮ ತಂಡ ಈ ಲೀಗ್​ನಲ್ಲಿ ಉತ್ತಮ ಪ್ರದರ್ಶನ ನೀಡಲಿದೆ ಎಂದು ಭಾವಿಸುತ್ತೇನೆ ಎಂದರು.

Published On - 4:58 pm, Sat, 8 June 24