ಬರೋಬ್ಬರಿ 9 ಸಿಕ್ಸರ್: ರಾಜಸ್ಥಾನ್ ಆಟಗಾರನ ಸ್ಫೋಟಕ ಶತಕವೂ ಸಾಕಾಗಿಲ್ಲ ಪಾಕ್ ವಿರುದ್ಧ ಗೆಲ್ಲಲು

| Updated By: Vinay Bhat

Updated on: Jul 17, 2021 | 7:57 AM

Liam Livingstone: ಲಿವಿಂಗ್​ಸ್ಟನ್​ಗೆ ಯಾವೊಬ್ಬ ಬ್ಯಾಟ್ಸ್​ಮನ್​ ಸಾಥ್ ನೀಡಲಿಲ್ಲ. ನಾಯಕ ಇಯಾನ್ ಮಾರ್ಗನ್ ಕೂಡ 16 ರನ್​ಗೆ ಔಟ್ ಆದರು. ಆದರೂ ಪಾಕ್ ಬೌಲರ್​ಗಳ ಬೆವರಿಳಿಸಿದ ಲಿವಿಂಗ್​ಸ್ಟನ್ ಕೇವಲ 43 ಎಸೆತಗಳಲ್ಲಿ ಬರೋಬ್ಬರಿ 9 ಸಿಕ್ಸರ್, 6 ಬೌಂಡರಿ ಸಿಡಿಸಿ 103 ರನ್ ಚಚ್ಚಿದರು.

ಬರೋಬ್ಬರಿ 9 ಸಿಕ್ಸರ್: ರಾಜಸ್ಥಾನ್ ಆಟಗಾರನ ಸ್ಫೋಟಕ ಶತಕವೂ ಸಾಕಾಗಿಲ್ಲ ಪಾಕ್ ವಿರುದ್ಧ ಗೆಲ್ಲಲು
Liam Livingstone
Follow us on

ಇಂಗ್ಲೆಂಡ್ (England) ವಿರುದ್ಧದ ಏಕದಿನ ಸರಣಿಯಲ್ಲಿ 3-0 ಅಂತರದಿಂದ ಹೀನಾಯ ಸೋಲು ಅನುಭವಿಸಿ ಭಾರೀ ಮುಖಭಂಗಕ್ಕೆ ಒಳಗಾಗಿದ್ದ ಪಾಕಿಸ್ತಾನ (Pakistan) ತಂಡ ಮೊದಲ ಟಿ-20 ಪಂದ್ಯಗಳಲ್ಲಿ ಭರ್ಜರಿ ಕಮ್​ಬ್ಯಾಕ್ ಮಾಡಿದೆ. ನಾಯಕ ಬಾಬರ್ ಅಜಾಂ (Babar Azam) ಅವರ ಅದ್ಭುತ ಬ್ಯಾಟಿಂಗ್ ಜೊತೆಗೆ ಶಾಹಿನ್ ಆಫ್ರಿದಿಯ ಸಮಯೋಚಿತ ಬೌಲಿಂಗ್ ನೆರವಿನಿಂದ ಪಾಕ್ ಮೊದಲ ಟಿ-20 ಪಂದ್ಯದಲ್ಲಿ 31 ರನ್​ಗಳ ಜಯ ಸಾಧಿಸಿದೆ. ಇತ್ತ ಇಂಗ್ಲೆಂಗ್ ತಂಡದ ಪರ ಲ್ಯಾಮ್ ಲಿವಿಂಗ್​ಸ್ಟನ್ (Liam Livingstone) ಸ್ಫೋಟಕ ಶತಕ ಸಿಡಿಸಿದರೂ ಯಾವುದೇ ಪ್ರಯೋಜನ ವಾಗಲಿಲ್ಲ.

ಪಾಕಿಸ್ತಾನ ನೀಡಿದ್ದ ಬರೋಬ್ಬರಿ 233 ರನ್​ಗಳ ಬಿಗ್ ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ ಆರಂಧದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ಡೇವಿಡ್ ಮಲನ್ 1, ಜೇಸನ್ ರಾಯ್ 32, ಜಾನಿ ಬೈರ್​ಸ್ಟೊ 11, ಮೊಯೀನ್ ಅಲಿ 1 ಹೀಗೆ ಪ್ರಮುಖ ಬ್ಯಾಟ್ಸ್​ಮನ್​ಗಳೇ ಪೆವಿಲಿಯನ್ ಸೇರಿಕೊಂಡರು. ಹೀಗೆ ಒಂದುಕಡೆ ವಿಕೆಟ್ ಉರುಳುತ್ತಿದ್ದರೆ ಇತ್ತ ಐಪಿಎಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡುತ್ತಿದ್ದ ಲ್ಯಾಮ್ ಲಿವಿಂಗ್​ಸ್ಟನ್ ಸ್ಫೋಟಕ ಬ್ಯಾಟಿಂಗ್ ಮೂಲಕ ಗೆಲುವಿಗೆ ಹೋರಾಟ ನಡೆಸುತ್ತಿದ್ದರು.

 

ಆದರೆ ಲಿವಿಂಗ್​ಸ್ಟನ್​ಗೆ ಯಾವೊಬ್ಬ ಬ್ಯಾಟ್ಸ್​ಮನ್​ ಸಾಥ್ ನೀಡಲಿಲ್ಲ. ನಾಯಕ ಇಯಾನ್ ಮಾರ್ಗನ್ ಕೂಡ 16 ರನ್​ಗೆ ಔಟ್ ಆದರೆ, ಲೆವಿಸ್ ಗ್ರೆಗರಿ 10 ರನ್​ಗೆ ಸುಸ್ತಾದರು. ಆದರೂ ಪಾಕ್ ಬೌಲರ್​ಗಳ ಬೆವರಿಳಿಸಿದ ಲಿವಿಂಗ್​ಸ್ಟನ್ ಕೇವಲ 43 ಎಸೆತಗಳಲ್ಲಿ ಬರೋಬ್ಬರಿ 9 ಸಿಕ್ಸರ್, 6 ಬೌಂಡರಿ ಸಿಡಿಸಿ 103 ರನ್ ಚಚ್ಚಿದರು. ಇಂಗ್ಲೆಂಡ್ 19.2 ಓವರ್​ನಲ್ಲಿ 201 ರನ್​ಗೆ ಆಲೌಟ್ ಆಗುವ ಮೂಲಕ ಸೋಲುಕಂಡಿತು. ಪಾಕ್ ಪರ ಶಾಹಿನ್ ಅಫ್ರಿದಿ ಮತ್ತು ಶದಾಬ್ ಖಾನ್ ತಲಾ 3 ವಿಕೆಟ್ ಕಿತ್ತರು.

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಪಾಕಿಸ್ತಾನ ಆರಂಭದಲ್ಲೇ ಸ್ಫೋಟಕ ಆಟ ಶುರುಮಾಡಿತು. ರಿಜ್ವಾನ್ ಹಾಗೂ ನಾಯಕ ಬಾಬರ್ ಅಜಂ ಬೌಂಡರಿ ಸಿಕ್ಸರ್​ಗಳ ಮಳೆ ಸುರಿಸಿದರು. ಮೊದಲ ವಿಕೆಟ್​ಗೇ ಈ ಜೋಡಿ 150 ರನ್​ಗಳ ಕಾಣಿಕೆ ನೀಡಿತು.

ರಿಜ್ವಾನ್ 41 ಎಸೆತಗಳಲ್ಲಿ 63 ರನ್ ಬಾರಿಸಿದರೆ, ಬಾಬರ್ 49 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ ಸಿಡಿಸಿ 85 ರನ್ ಗಳಿಸಿದರು. ಫಖರ್ ಜಮಾನ್ 26 ಮತ್ತು ಹಫೀಜ್ 24 ರನ್ ಗಳಿಸಿ 20 ಓವರ್​ನಲ್ಲಿ ತಂಡದ ಮೊತ್ತವನ್ನು 232 ರನ್​ಗೆ ತಂದಿಟ್ಟು ಎದುರಾಳಿಗೆ ಕಠಿಣ ಸವಾಲು ನೀಡಿದರು.

ಪಾಕಿಸ್ತಾನ 31 ರನ್​ಗಳ ಜಯದೊಂದಿಗೆ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಎರಡನೇ ಟಿ-20 ಪಂದ್ಯ ಜುಲೈ 18 ರಂದು ಭಾನುವಾರ ನಡೆಯಲಿದೆ.

IND vs SL: ನಾನು ಎಲ್ಲ ಮಾದರಿಯ ಕ್ರಿಕೆಟ್​ಗೆ ರೆಡಿ ಎಂದ ಟೀಮ್ ಇಂಡಿಯಾದ ಸ್ಟಾರ್ ಬೌಲರ್

‘ಪ್ರೀತಿಗಿಂತಲೂ ಹೆಚ್ಚಿನದಾದ ಪ್ರೀತಿಯಿಂದ ಪ್ರೀತಿಸಿದ’ ಗರ್ಲ್​ಫ್ರೆಂಡನ್ನೇ ಮದುವೆಯಾದ ರಾಜಸ್ತಾನ ರಾಯಲ್ಸ್ ಆಲ್​ರೌಂಡರ್ ಶಿವಂ ದುಬೆ

(Liam Livingstone 42-ball hundred not enough as England fail to reach Pakistan target)

Published On - 7:53 am, Sat, 17 July 21