IND vs SL: ನಾನು ಎಲ್ಲ ಮಾದರಿಯ ಕ್ರಿಕೆಟ್​ಗೆ ರೆಡಿ ಎಂದ ಟೀಮ್ ಇಂಡಿಯಾದ ಸ್ಟಾರ್ ಬೌಲರ್

ಭುವನೇಶ್ವರ್ ಅವರು ಭಾರತ ಪರ ಕೊನೆಯ ಬಾರಿ 2018 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿದಿದ್ದರು. ಬಳಿಕ ಇಂಜುರಿಯಿಂದಾಗಿ ತಂಡದಿಂದ ಹೊರಗುಳಿಯಬೇಕಾಯಿತು.

IND vs SL: ನಾನು ಎಲ್ಲ ಮಾದರಿಯ ಕ್ರಿಕೆಟ್​ಗೆ ರೆಡಿ ಎಂದ ಟೀಮ್ ಇಂಡಿಯಾದ ಸ್ಟಾರ್ ಬೌಲರ್
ಟೀಂ ಇಂಡಿಯಾ
Follow us
TV9 Web
| Updated By: Vinay Bhat

Updated on: Jul 17, 2021 | 7:20 AM

ಪ್ರಥಮ ದರ್ಜೆ ಮತ್ತು ಟೆಸ್ಟ್​ ಕ್ರಿಕೆಟ್ ಆಡದೆ ಬರೋಬ್ಬರಿ ಮೂರು ವರ್ಷಗಳಿಂದ ಹೊರಗುಳಿದಿದ್ದ ಟೀಮ್ ಇಂಡಿಯಾದ (Team India) ಪ್ರಮುಖ ವೇಗಿ ಭುವನೇಶ್ವರ್ ಕುಮಾರ್ (Bhuvneshwar kumar) ಸದ್ಯ ಅವಕಾಶ ಕೊಟ್ಟರೆ ನಾನು ರೆಡ್ ಬಾಲ್ ಕ್ರಿಕೆಟ್​ ಆಡಲು ತಯಾರಿದ್ದೇನೆ ಎಂದು ಹೇಳಿದ್ದಾರೆ. ಇತ್ತೀಚೆಗಷ್ಟೆ ಸಾಮಾಜಿಕ ಜಾಲತಾಣಗಳಲ್ಲಿ ಭುವಿಗೆ ಟೆಸ್ಟ್​ ಕ್ರಿಕೆಟ್​ನಲ್ಲಿ (Test Cricket) ಆಡಲು ಆಸಕ್ತಿ ಇಲ್ಲ ಎಂಬ ಸುದ್ದಿ ವೈರಲ್ ಆಗಿತ್ತು. ಆದರೀಗ ಸ್ವತಃ ಭುವನೇಶ್ವರ್ ಅವರೇ ನಾನು ಎಲ್ಲ ಮಾದರಿಯ ಕ್ರಿಕೆಟ್ ಆಡಲು ತಯಾರಿದ್ದೇನೆ ಎಂದು ಹೇಳಿದ್ದಾರೆ.

ಭುವನೇಶ್ವರ್ ಕುಮಾರ್ ಸದ್ಯ ಏಕದಿನ ಸರಣಿಗಾಗಿ ಶ್ರೀಲಂಕಾ ಪ್ರವಾಸದಲ್ಲಿದ್ದು, ಉಪ ನಾಯಕನ ಆಗಿ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಿಜ ಹೇಳಬೇಕೆಂದರೆ ನಾನು ರೆಡ್ ಬಾಲ್ ಅಥವಾ ವೈಟ್ ಬಾಲ್ ಕ್ರಿಕೆಟ್​ಗೆ ಮಾತ್ರ ಸೀಮಿತ ಎಂದು ಅಂದುಕೊಂಡಿಲ್ಲ. ಎಲ್ಲಾದರು ನನ್ನನ್ನು ಟೆಸ್ಟ್​ ಕ್ರಿಕೆಟ್​ಗೆ ಆಯ್ಕೆ ಮಾಡಿದರೆ ಖಂಡಿತವಾಗಿಯೂ ನನ್ನ ಬೆಸ್ಟ್ ನೀಡುವೆ. ನಾನು ಎಲ್ಲ ಮಾದರಿಯ ಕ್ರಿಕೆಟ್​ಗೆ ಸಿದ್ಧತೆ ನಡೆಸುತ್ತೇನೆ. ಅವಕಾಶ ಸಿಕ್ಕಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತೇನೆ. ಮುಂದಿನ 18-20 ತಿಂಗಳಲ್ಲಿ ಏನು ನಡೆಯಲಿದೆ ಎಂಬ ಬಗ್ಗೆ ನಾನು ಯೋಚಿಸುವುದಿಲ್ಲ” ಎಂದು ಹೇಳಿದ್ದಾರೆ.

ಭುವನೇಶ್ವರ್ ಅವರು ಭಾರತ ಪರ ಕೊನೆಯ ಬಾರಿ 2018 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿದಿದ್ದರು. ಬಳಿಕ ಇಂಜುರಿಯಿಂದಾಗಿ ತಂಡದಿಂದ ಹೊರಗುಳಿಯಬೇಕಾಯಿತು. 2019 ಏಕದಿನ ವಿಶ್ವಕಪ್​ ವೇಳೆಯಲ್ಲೂ ಇಂಜುರಿಗೆ ತುತ್ತಾದರು. 2020ರ ಐಪಿಎಲ್​ನಲ್ಲಿ ಸನ್​​ರೈಸರ್ಸ್​ ಹೈದರಾಬಾದ್ ತಂಡದ ಪರ ಆಡುತ್ತಿರುವಾಗಲೂ ಗಾಯಕ್ಕೆ ಒಳಗಾದರು.

ಬಳಿಕ ಇಂಗ್ಲೆಂಡ್ ವಿರುದ್ಧದ ಟಿ-20 ಮತ್ತು ಏಕದಿನ ಸರಣಿಗೆ ಆಯ್ಕೆಯಾದ ಭುವಿ ಆಡಿದ 8 ಪಂದ್ಯಗಳಲ್ಲಿ 10 ವಿಕೆಟ್ ಕಿತ್ತು ಕಮ್​ಬ್ಯಾಕ್ ಮಾಡಿದರು. ಜುಲೈ 18 ರಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ಭುವಿ ಪಾಲಿಗೆ ಮುಖ್ಯವಾಗಿದೆ. ಐಸಿಸಿ ಟಿ-20 ವಿಶ್ವಕಪ್​ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಉತ್ತಮ ಅವಕಾಶವಾಗಿದೆ.

ಧವನ್ ನೇತೃತ್ವದ ಟೀಮ್ ಇಂಡಿಯಾ ಜುಲೈ 18 ರಿಂದ ಮೂರು ಪಂದ್ಯಗಳ ಏಕದಿನ ಸರಣಿಯೊಂದಿಗೆ ತಮ್ಮ ಶ್ರೀಲಂಕಾ ಪ್ರವಾಸವನ್ನು ಆರಂಭಿಸಲಿದೆ. ನಂತರ ಜುಲೈ 25 ರಿಂದ ಜುಲೈ 29 ರವರೆಗೆ ಮೂರು ಪಂದ್ಯಗಳ ಟಿ 20 ಸರಣಿಯನ್ನು ಆಡಲಿದೆ. ಏಕದಿನ ಮತ್ತು ಟಿ 20 ಐ ಸರಣಿಯ ಎಲ್ಲಾ ಪಂದ್ಯಗಳು ಪ್ರಸಿದ್ಧ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.

‘ಪ್ರೀತಿಗಿಂತಲೂ ಹೆಚ್ಚಿನದಾದ ಪ್ರೀತಿಯಿಂದ ಪ್ರೀತಿಸಿದ’ ಗರ್ಲ್​ಫ್ರೆಂಡನ್ನೇ ಮದುವೆಯಾದ ರಾಜಸ್ತಾನ ರಾಯಲ್ಸ್ ಆಲ್​ರೌಂಡರ್ ಶಿವಂ ದುಬೆ

ಪಾಕಿಸ್ತಾನ ಟಿ20ಐ ತಂಡದಲ್ಲಿ ಕ್ರಿಕೆಟರ್​ಗಳಿಗಿಂತ ಕುಸ್ತಿಪಟುಗಳು ಜಾಸ್ತಿ ಕಾಣುತ್ತಿದ್ದಾರೆ: ಆಕಿಬ್ ಜಾವೆದ್

(India vs Sri lanka I am ready for all formats Bhuvneshwar says he is prepared for red-ball cricket)