AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

KL Rahul: ರಾಹುಲ್ ಫಿಟ್ನೆಸ್​ಗೆ ಅಥಿಯಾ ಶೆಟ್ಟಿ ಫಿದಾ; ಪ್ರಣಯ ಪಕ್ಷಿಗಳ ಪ್ರೀತಿಗೆ ಮತ್ತೊಂದು ಸಾಕ್ಷಿ

KL Rahul: ರಾಹುಲ್ ಫಿಟ್ನೆಸ್​ಗೆ ಫಿದಾ ಆಗಿ ಅಥಿಯಾ ಇನ್​ಸ್ಟ್ರಾಗ್ರಾಮ್​ನಲ್ಲಿ ಎಮೋಜಿ ಹಾಕಿರೋ ಫೊಟೋ, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

KL Rahul: ರಾಹುಲ್ ಫಿಟ್ನೆಸ್​ಗೆ ಅಥಿಯಾ ಶೆಟ್ಟಿ ಫಿದಾ; ಪ್ರಣಯ ಪಕ್ಷಿಗಳ ಪ್ರೀತಿಗೆ ಮತ್ತೊಂದು ಸಾಕ್ಷಿ
ಕೆ ಎಲ್ ರಾಹುಲ್
ಪೃಥ್ವಿಶಂಕರ
|

Updated on: May 27, 2021 | 5:43 PM

Share

ಟೀಮ್ ಇಂಡಿಯಾ ಕ್ರಿಕೆಟಿಗ ಕನ್ನಡಿಗ ಕೆ.ಎಲ್. ರಾಹುಲ್ ಶಸ್ತ್ರಚಿಕಿತ್ಸೆ ಬಳಿಕ ಮುಂಬೈನಲ್ಲಿ ಟೀಮ್ ಇಂಡಿಯಾವನ್ನ ಸೇರಿಕೊಂಡಿದ್ದಾರೆ. ಆದ್ರೆ ಮುಂಬೈನಲ್ಲಿ ರಾಹುಲ್ ಫಿಟ್ನೆಸ್​ಗೆ ಬಾಲಿವುಡ್ ನಟಿಯೊಬ್ಬಳು ಕ್ಲೀನ್ ಬೌಲ್ಡ್ ಆಗಿದ್ದಾಳೆ. ಕ್ರಿಕೆಟ್ ಲೋಕ ಹಾಗೂ ಬಾಲಿವುಡ್ ನಂಟನ್ನ ಮತ್ತಷ್ಟು ಬೆಸೆಯುವಂತ ಮತ್ತೊಂದು ಲವ್ ಸ್ಟೋರಿಗೆ ಬಿಟೌನ್ ಸಾಕ್ಷಿಯಾಗ್ತಿದೆ. ಅದೇ ಟೀಂ ಇಂಡಿಯಾದ ಸ್ಟೈಲಿಶ್ ಆಟಗಾರ ಕನ್ನಡಿಗ ಕೆ.ಎಲ್.ರಾಹುಲ್ ಮತ್ತು ಬಾಲಿವುಡ್ ನಟಿ ಅತಿಯಾ ಶೆಟ್ಟಿ.

ಸ್ಟೈಲಿಶ್ ಕ್ರಿಕೆಟಿಗನಾಗಿರೋ ರಾಹುಲ್ ಹಾಗೂ ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ನಡುವಿನ ಲವ್ವಿ-ಡವ್ವಿ ಬಗ್ಗೆ 2019ರಿಂದಲೂ ಗಾಸಿಪ್​ಗಳು ಕೇಳಿಬರ್ತಿದೆ. 2020ರಲ್ಲಿ ಈ ಜೋಡಿ ಮುಂಬೈನಲ್ಲಿ ಡಿನ್ನರ್ ಪಾರ್ಟಿಗೆ ಹೋಗೋವಾಗ, ಕ್ಯಾಮೆರಾ ಕಣ್ಣಿಗೆ ಬಿದ್ದಿದ್ರು. ಆಗಲೇ ಗೊತ್ತಾಗಿದ್ದು ಇಬ್ಬರು ಲವ್​ನಲ್ಲಿ ಬಿದ್ದಿದ್ದಾರೆ ಅನ್ನೋದು.

ನಾವಿಬ್ಬರೂ ಲವ್ ಮಾಡ್ತೀದ್ದೀವಿ ಅನ್ನೋ ಸುಳಿವು ಇನ್ನು ಇನ್​ಸ್ಟ್ರಾಗಾಂನಲ್ಲಿ ಈ ಜೋಡಿ ತಮ್ಮ ಫೊಟೋಸಗಳಿಗೆ ಲೈಕ್ಸ್ ಮತ್ತು ಡಿಫರೆಂಟ್ ಎಮೋಜಿಗಳನ್ನ ಪೋಸ್ಟ್ ಮಾಡಿ, ನಾವಿಬ್ಬರೂ ಲವ್ ಮಾಡ್ತೀದ್ದೀವಿ ಅನ್ನೋ ಸುಳಿವು ನೀಡ್ತಿದ್ದಾರೆ. ಇದೀಗ ಮತ್ತೊಮ್ಮೆ ಈ ಜೋಡಿ ಸುದ್ದಿಯಾಗಿದ್ದಾರೆ. ಅಪೆಂಡಿಕ್ಸ್ ಆಪರೇಷನ್ ಬಳಿಕ ಟೀಮ್ ಇಂಡಿಯಾ ಸೇರಿಕೊಂಡಿರುವ ರಾಹುಲ್, ಮುಂಬೈನಲ್ಲಿ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ಗೆ ತಯಾರಿ ನಡೆಸಿಕೊಳ್ತಿದ್ದಾರೆ.

ರಾಹುಲ್ ತಾವು ವರ್ಕೌಟ್ ಮಾಡುತ್ತಿರೋ ಫೋಟೋವನ್ನ ಇನ್​ಸ್ಟ್ರಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೊಟೋಗೆ ರಾಹುಲ್ ಌಂಡ್ ಸ್ಟಿಲ್ ವಿ ರೈಸ್ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಆಥಿಯಾ, ಕಾಮೆಂಟ್​ನಲ್ಲಿ ಸ್ಮೈಲಿ ಎಮೋಜಿಯ ರಿಪ್ಲೇ ಮಾಡಿದ್ದಾಳೆ.

ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ರಾಹುಲ್ ಫಿಟ್ನೆಸ್​ಗೆ ಫಿದಾ ಆಗಿ ಅಥಿಯಾ ಇನ್​ಸ್ಟ್ರಾಗ್ರಾಮ್​ನಲ್ಲಿ ಎಮೋಜಿ ಹಾಕಿರೋ ಫೊಟೋ, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೀಗೆ ಇಬ್ಬರು ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿಯ ಸುಳಿವು ನೀಡಿದ್ರೂ, ಸಾರ್ವಜನಿಕವಾಗಿ ನಾವಿಬ್ರೂ ಪ್ರೀತಿಯಲ್ಲಿದ್ದೀವಿ ಅನ್ನೋದನ್ನ ಒಪ್ಪಿಕೊಂಡಿಲ್ಲ. ಸದ್ಯ ಟೀಮ್ ಇಂಡಿಯಾ ಆಟಗಾರರೊಂದಿಗೆ ಕನ್ನಡಿಗ ರಾಹುಲ್ ಮುಂಬೈನಲ್ಲಿ ಕ್ವಾರಂಟೈನ್ ಆಗಿದ್ದಾರೆ. ಐಪಿಎಲ್​ನಲ್ಲಿ ಅಕ್ಯುಟ್ ಅಪೆಂಡಿಸೈಟಿಸ್​ನಿಂದ ಅರ್ಧಕ್ಕೆ ಹೊರಬಿದ್ದಿದ್ದ ರಾಹುಲ್, ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ರು. ಆದ್ರೀಗ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ರಾಹುಲ್, ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಮೇಲೆ ಕಣ್ಣಿಟ್ಟಿದ್ದಾರೆ..

Follow Us
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?