ಫಿಟ್ನೆಸ್ ಟೆಸ್ಟ್​ನಲ್ಲಿ ಪಾಂಡ್ಯಾ ಫೇಲ್! ಮತ್ಯಾರು ಆಯ್ಕೆ?

|

Updated on: Jan 13, 2020 | 7:46 AM

ನ್ಯೂಜಿಲೆಂಡ್ ಪ್ರವಾಸದೊಂದಿಗೆ ಟೀಂ ಇಂಡಿಯಾಕ್ಕೆ ಗ್ರೇಟ್ ಕಮ್​ಬ್ಯಾಕ್ ಮಾಡೋ ವಿಶ್ವಾಸದಲ್ಲಿದ್ದ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯಾಗೆ, ತೀವ್ರ ನಿರಾಸೆಯನ್ನ ಅನುಭವಿಸಿದ್ದಾರೆ. ನ್ಯೂಜಿಲೆಂಡ್ ಎ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದ ಪಾಂಡ್ಯಾ, ಫಿಟ್ನೆಸ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದಾರೆ. ಪಾಂಡ್ಯಾ ಸ್ಥಾನಕ್ಕೆ ವಿಜಯ್ ಶಂಕರ್​ನನ್ನ ಆಯ್ಕೆಮಾಡಲಾಗಿದೆ. ಆಸಿಸ್ ಓಪನ್​ಗೆ ಕಾಡ್ಗಿಚ್ಚಿನ ಬಿಸಿ! ವರ್ಷದ ಮೊದಲ ಆಸ್ಟ್ರೇಲಿಯಾ ಓಪನ್ ಗ್ರ್ಯಾನ್​ಸ್ಲಾಮ್ ಟೆನಿಸ್ ಟೂರ್ನಿಗೆ ದಿನಗಣನೆ ಶುರುವಾಗಿದ್ದು, ಕಾಡ್ಗಿಚ್ಚಿನ ಕಂಟಕ ಎದುರಾಗಿದೆ. ಕಾಡ್ಗಿಚ್ಚಿನಿಂಜ ಸದ್ಯದ ಆಸ್ಟ್ರೇಲಿಯಾ ವಾತಾವರಣಕಲುಷಿತಗೊಂಡಿದ್ದು, ಉಸಿರಾಟಕ್ಕೆ ತೀವ್ರ ತೊಂದರೆಯಾಗ್ತಿದೆ. ಆದ್ರಿಂದ ಜನವರಿ 20ರಿಂದ […]

ಫಿಟ್ನೆಸ್ ಟೆಸ್ಟ್​ನಲ್ಲಿ ಪಾಂಡ್ಯಾ ಫೇಲ್! ಮತ್ಯಾರು ಆಯ್ಕೆ?
Follow us on

ನ್ಯೂಜಿಲೆಂಡ್ ಪ್ರವಾಸದೊಂದಿಗೆ ಟೀಂ ಇಂಡಿಯಾಕ್ಕೆ ಗ್ರೇಟ್ ಕಮ್​ಬ್ಯಾಕ್ ಮಾಡೋ ವಿಶ್ವಾಸದಲ್ಲಿದ್ದ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯಾಗೆ, ತೀವ್ರ ನಿರಾಸೆಯನ್ನ ಅನುಭವಿಸಿದ್ದಾರೆ. ನ್ಯೂಜಿಲೆಂಡ್ ಎ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದ ಪಾಂಡ್ಯಾ, ಫಿಟ್ನೆಸ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದಾರೆ. ಪಾಂಡ್ಯಾ ಸ್ಥಾನಕ್ಕೆ ವಿಜಯ್ ಶಂಕರ್​ನನ್ನ ಆಯ್ಕೆಮಾಡಲಾಗಿದೆ.

ಆಸಿಸ್ ಓಪನ್​ಗೆ ಕಾಡ್ಗಿಚ್ಚಿನ ಬಿಸಿ!
ವರ್ಷದ ಮೊದಲ ಆಸ್ಟ್ರೇಲಿಯಾ ಓಪನ್ ಗ್ರ್ಯಾನ್​ಸ್ಲಾಮ್ ಟೆನಿಸ್ ಟೂರ್ನಿಗೆ ದಿನಗಣನೆ ಶುರುವಾಗಿದ್ದು, ಕಾಡ್ಗಿಚ್ಚಿನ ಕಂಟಕ ಎದುರಾಗಿದೆ. ಕಾಡ್ಗಿಚ್ಚಿನಿಂಜ ಸದ್ಯದ ಆಸ್ಟ್ರೇಲಿಯಾ ವಾತಾವರಣಕಲುಷಿತಗೊಂಡಿದ್ದು, ಉಸಿರಾಟಕ್ಕೆ ತೀವ್ರ ತೊಂದರೆಯಾಗ್ತಿದೆ. ಆದ್ರಿಂದ ಜನವರಿ 20ರಿಂದ ಆರಂಭವಾಗೋ ಟೂರ್ನಿ ಆಯೋಜಿಸಬೇಕಾ ಅಥವಾ ಬೇಡ್ವಾ ಅನ್ನೋ ಪ್ರಶ್ನೆಉದ್ಭವಿಸಿದೆ.

ಸಾನಿಯಾ-ಬೋಪಣ್ಣ ಜೋಡಿ:
ಇದೇ 20ರಿಂದ ಆರಂಭಗೊಳ್ಳಲಿರೋ ಆಸ್ಟ್ರೇಲಿಯಾ ಓಪನ್ ಮಿಶ್ರಾ ಡಬಲ್ಸ್ ವಿಭಾಗದಲ್ಲಿ ಹೈದರಾಬಾದ್ ತಾರೆ ಸಾನಿಯಾ ಮಿರ್ಜಾ ಜೊತೆ ರೋಹನ್ ಬೋಪಣ್ಣ ಜೋಡಿಯಾಗಿ ಕಣಕ್ಕಿಳಿಯಲಿದ್ದಾರೆ. ಈ ಇಬ್ಬರು ಆಟಗಾರರು ರಿಯೋ ಓಲಿಂಪಿಕ್ಸ್​ ಜೋಡಿಯಾಗಿ ಕಣಕ್ಕಿಳಿದಿದ್ರು. ಈ ಮೊದಲು ಸಾನಿಯಾಗೆ ರಾಜೀವ್ ರಾಮ್ ಜೊತೆಯಾಗಿ ಆಡುತ್ತಿದ್ರು.

ಸಚಿನ್-ದಾದಾ ಫನ್ನಿ ಟ್ವೀಟ್:
ವ್ಯಾಯಾಮ ಮಾಡ್ತಿರೋ ಫೋಟೋ ಪ್ರಕಟಿಸಿದ್ದ ಗಂಗೂಲಿ, ಬೆಳ್ಳಂ ಬೆಳಿಗ್ಗೆ ತಣ್ಣನೆಯ ಗಾಳಿಯಲ್ಲಿ ವ್ಯಾಯಾಮ ಮಾಡೋದು ಆರಾಮ ಕೊಡುತ್ತಿದೆ, ಎಂದು ಬರೆದುಕೊಂಡಿದ್ರು .ಇದಕ್ಕೆ ಕಮೆಂಟ್ ಮಾಡಿದ ಸಚಿನ್ ಭಾರತ ತಂಡದಲ್ಲಿದ್ದಾಗ ಸ್ಕಿಪ್ಪಿಂಗ್ ಎಂದರೆ ನಿನಗೆ ಎಷ್ಟು ಇಷ್ಟ ಎಂದುಗೊತ್ತು ಬಿಡು ಎಂದು ತಮಾಷೆ ಮಾಡಿದ್ದಾರೆ.