ರಣಜಿ ಟ್ರೋಫಿ: ಮುಂಬೈ ತಂಡಕ್ಕೆ ರೋಹಿತ್ ಪಾಠ

|

Updated on: Jan 08, 2020 | 8:05 PM

ರಣಜಿ ಟ್ರೋಫಿ ಟೂರ್ನಿಯಲ್ಲಿ ತವರಿನಲ್ಲಿ ಆಡಿದ ಎರಡೂ ಪಂದ್ಯಗಳನ್ನ ಸೋತಿರೋ ಮುಂಬೈ ತಂಡದ ಆಟಗಾರರೊಂದಿಗೆ, ರೋಹಿತ್ ಶರ್ಮಾ ಚರ್ಚೆಸಿದ್ರು. ಕರ್ನಾಟಕ ವಿರುದ್ಧ 5ವಿಕೆಟ್​ಗಳ ಸೋಲುಕಂಡಿದ್ದ ಮುಂಬೈ, ರೈಲ್ವೇಸ್ ವಿರುದ್ಧ 10ವಿಕೆಟ್​ನಿಂದ ಸೋಲುಕಂಡಿತ್ತು. ಸತತ ಸೋಲಿನಿಂದ ಹತಾಶರಾಗಿರೋ ಆಟಗಾರರಿಗೆ, ಆತ್ವವಿಶ್ವಾಸ ತುಂಬುವ ಮಾತುಗಳನ್ನಾಡಿದ ರೋಹಿತ್, ಸದಸ್ಯ ಪರಿಸ್ಥಿತಿಯನ್ನ ನಿಭಾಯಿಸುವ ಕುರಿತು ಚರ್ಚೆ ನಡೆಸಿದ್ರು. ಶ್ರೇಯಸ್ ಗೋಪಾಲ್ ನಾಯಕ: ಇದೇ 11ರಿಂದ 14ರವರೆಗೆ ಸೌರಾಷ್ಟ್ರ ವಿರುದ್ಧ ನಡೆಯಲಿರೋ ರಣಜಿ ಪಂದ್ಯದಲ್ಲಿ ಶ್ರೇಯಸ್ ಗೋಪಾಲ ಕರ್ನಾಟಕ ತಂಡವನ್ನ ಮುನ್ನಡೆಸಲಿದ್ದಾರೆ. ಕರುಣ್ ನಾಯರ್ […]

ರಣಜಿ ಟ್ರೋಫಿ: ಮುಂಬೈ ತಂಡಕ್ಕೆ ರೋಹಿತ್ ಪಾಠ
Follow us on

ರಣಜಿ ಟ್ರೋಫಿ ಟೂರ್ನಿಯಲ್ಲಿ ತವರಿನಲ್ಲಿ ಆಡಿದ ಎರಡೂ ಪಂದ್ಯಗಳನ್ನ ಸೋತಿರೋ ಮುಂಬೈ ತಂಡದ ಆಟಗಾರರೊಂದಿಗೆ, ರೋಹಿತ್ ಶರ್ಮಾ ಚರ್ಚೆಸಿದ್ರು. ಕರ್ನಾಟಕ ವಿರುದ್ಧ 5ವಿಕೆಟ್​ಗಳ ಸೋಲುಕಂಡಿದ್ದ ಮುಂಬೈ, ರೈಲ್ವೇಸ್ ವಿರುದ್ಧ 10ವಿಕೆಟ್​ನಿಂದ ಸೋಲುಕಂಡಿತ್ತು. ಸತತ ಸೋಲಿನಿಂದ ಹತಾಶರಾಗಿರೋ ಆಟಗಾರರಿಗೆ, ಆತ್ವವಿಶ್ವಾಸ ತುಂಬುವ ಮಾತುಗಳನ್ನಾಡಿದ ರೋಹಿತ್, ಸದಸ್ಯ ಪರಿಸ್ಥಿತಿಯನ್ನ ನಿಭಾಯಿಸುವ ಕುರಿತು ಚರ್ಚೆ ನಡೆಸಿದ್ರು.

ಶ್ರೇಯಸ್ ಗೋಪಾಲ್ ನಾಯಕ:
ಇದೇ 11ರಿಂದ 14ರವರೆಗೆ ಸೌರಾಷ್ಟ್ರ ವಿರುದ್ಧ ನಡೆಯಲಿರೋ ರಣಜಿ ಪಂದ್ಯದಲ್ಲಿ ಶ್ರೇಯಸ್ ಗೋಪಾಲ ಕರ್ನಾಟಕ ತಂಡವನ್ನ ಮುನ್ನಡೆಸಲಿದ್ದಾರೆ. ಕರುಣ್ ನಾಯರ್ ವಿವಾಹ ನಿಮಿತ್ತ ರಜೆ ಪಡೆದಿದ್ದಾರೆ. ಆದ್ರಿಂದ ಶ್ರೇಯಸ್ ರಾಜ್ಯ ತಂಡದ ನಾಯಕತ್ವವನ್ನ ವಹಿಸಿದ್ದಾರೆ. ಇನ್ನೂ ಗಾಯದಿಂದ ಚೇತರಿಸಿಕೊಂಡಿರೋ ಕೆ.ವಿ.ಸಿದ್ಧಾರ್ಥ್ ಹಾಗೂ ಆಲ್​ರೌಂಡರ್ ಪವನ್ ದೇಶಪಾಂಡೆ ತಂಡವನ್ನ ಸೇರಿಕೊಂಡಿದ್ದಾರೆ.

ವಿಂಡೀಸ್​ಗೆ ಭರ್ಜರಿಗೆ ಗೆಲುವು:
ಬಾರ್ಬಡೋಸ್​ನಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 5ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ವಿಂಡೀಸ್ ಬೌಲರ್​ಗಳ ಸಂಘಟಿತ ದಾಳಿಗೆ ಪತರಗುಟ್ಟಿದ ಐರ್ಲೆಂಡ್, 180ರನ್​ಗೆ ಆಲೌಟ್ ಆಯ್ತು. 181ರನ್​ಗಳ ಸುಲಭ ಗುರಿ ಬೆನ್ನತ್ತಿದ ವಿಂಡೀಸ್, 33.1ಓವರ್​ಗಳಲ್ಲಿ 5ವಿಕೆಟ್ ಕಳೆದುಕೊಂಡು ಗೆಲುವಿನ ನಗೆಬೀರಿತು. ಎವಿನ್ ಲೆವಿಸ್ 99ರನ್ ಗಳಿಸಿದ್ರೆ, ಅಲ್ಜಾರಿ ಜೋಸೆಫ್ 4ವಿಕೆಟ್ ಪಡೆದು ಮಿಂಚಿದ್ರು.

ಶ್ರೀಲಂಕಾಗೆ ಆಘಾತ:
ಟೀಂ ಇಂಡಿಯಾ ವಿರುದ್ಧದ ಎರಡನೇ ಟಿ-ಟ್ವೆಂಟಿದಲ್ಲಿ ಸೋಲುಕಂಡಿದ್ದ ಶ್ರೀಲಂಕಾ, ಮೂರನೇ ಟಿ-ಟ್ವೆಂಟಿಗೂ ಮುನ್ನ ದೊಡ್ಡ ಆಘಾತವನ್ನ ಎದುರಿಸಿದೆ. ಲಂಕಾದ ಸ್ಟಾರ್ ಆಲ್​ರೌಂಡರ್ ಇಸುರು ಉದಾನಾ, ಅಭ್ಯಾಸ ವೇಳೆ ಗಾಯಗೊಂಡಿದ್ದು ತಂಡದಿಂದ ಹೊರಬಿದ್ದಿದ್ದಾರೆ. ಉದಾನಾಗೆ ಚಿಕಿತ್ಸೆ ನೀಡಿದ್ರು ಸುಧಾರಣೆ ಕಾಣೋದು ಅನುಮಾನವಾಗಿದೆ. ಆದ್ರಿಂದ ಮೂರನೇ ಟಿ-ಟ್ವೆಂಟಿಯಿಂದಿ ವಿಶ್ರಾಂತಿ ನೀಡಲಾಗಿದೆ.