ಸೋತರೂ ಟೀಮ್ ಇಂಡಿಯಾದ ಸೆಮಿಫೈನಲ್ ಆಸೆ ಜೀವಂತ!

Hockey World Cup 2026: ಹಾಲಿ ಚಾಂಪಿಯನ್ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಭಾರತದ ಮಹಿಳಾ ಹಾಕಿ ತಂಡ 0-2 ಗೋಲುಗಳಿಂದ ಸೋಲುಂಡಿರಬಹುದು, ಆದರೆ ವಿಶ್ವಕಪ್ ಟ್ರೋಫಿ ಗೆಲ್ಲುವ ಅವರ ಕನಸು ಮಾತ್ರ ಇನ್ನೂ ಭಗ್ನವಾಗಿಲ್ಲ! ಭಾನುವಾರ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಮಹಾ ಕದನವೇ ಭಾರತದ ಸೆಮಿಫೈನಲ್ ಭವಿಷ್ಯವನ್ನು ನಿರ್ಧರಿಸಲಿದೆ. ಇದರ ಜೊತೆಗೆ ಟೀಮ್ ಇಂಡಿಯಾ ಚೀನಾ ತಂಡದ ಸೋಲನ್ನು ಕೂಡ ಎದುರು ನೋಡಬೇಕಾಗುತ್ತದೆ.

ಸೋತರೂ ಟೀಮ್ ಇಂಡಿಯಾದ ಸೆಮಿಫೈನಲ್ ಆಸೆ ಜೀವಂತ!
Team India
Image Credit source: FIH

Updated on: Aug 22, 2026 | 7:30 AM

ಮಹಿಳಾ ಹಾಕಿ ವಿಶ್ವಕಪ್ 2026 ರ ಎರಡನೇ ಸುತ್ತಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ನೆದರ್ಲೆಂಡ್ಸ್ ವಿರುದ್ಧ ಭಾರತ 0-2 ಗೋಲುಗಳ ಅಂತರದಿಂದ ಸೋಲನುಭವಿಸಿದೆ. ಈ ಸೋಲಿನ ಹೊರತಾಗಿಯೂ ಟೀಮ್ ಇಂಡಿಯಾಗೆ ಸೆಮಿಫೈನಲ್​ಗೇರಲು ಮತ್ತೊಂದು ಅವಕಾಶವಿದೆ. ಈ ಅವಕಾಶಕ್ಕೂ ಮುನ್ನ ಭಾರತ ತಂಡ ತನ್ನ ಮುಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಲೇಬೇಕು.

ನೆದರ್ಲೆಂಡ್ಸ್ ವಿರುದ್ಧದ ಹೋರಾಟ:

ಅಮ್‌ಸ್ಟೆಲ್‌ವೀನ್‌ನ ವ್ಯಾಗನರ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ವಿಶ್ವದ ನಂಬರ್ 1 ತಂಡವಾದ ನೆದರ್ಲೆಂಡ್ಸ್ ವಿರುದ್ಧ ಭಾರತೀಯ ವನಿತೆಯರು ಅತ್ಯುತ್ತಮ ರಕ್ಷಣಾತ್ಮಕ ಆಟ ಪ್ರದರ್ಶಿಸಿದರು. ಆದರೆ, ಡಚ್ ಆಟಗಾರ್ತಿಯರ ಆಕ್ರಮಣಕಾರಿ ಆಟದ ಮುಂದೆ ಭಾರತ 0-2 ರಿಂದ ಶರಣಾಯಿತು.

ಮೊದಲ ಸುತ್ತಿನಲ್ಲಿ ಇಂಗ್ಲೆಂಡ್ ವಿರುದ್ಧ 0-0 ಡ್ರಾ ಸಾಧಿಸಿ, ಸೌತ್ ಆಫ್ರಿಕಾವನ್ನು 6-1 ರಿಂದ ಮಣಿಸಿದ್ದ ಭಾರತ, ಚೀನಾ ವಿರುದ್ಧದ ಡ್ರಾದಿಂದ 1 ಅಂಕವನ್ನು ಈ ಎರಡನೇ ಸುತ್ತಿನ ಪೂಲ್ ‘E’ ನಲ್ಲಿ ಅವಕಾಶ ಪಡೆದಿದ್ದರು. ಇದೀಗ ದ್ವಿತೀಯ ಸುತ್ತಿನ ಮೊದಲ ಪಂದ್ಯದಲ್ಲಿ ಸೋತರೂ ಸೆಮಿಫೈನಲ್​ಗೇರಲು ಮತ್ತೊಂದು ಅವಕಾಶ ಇದೆ.

ಸೆಮಿಫೈನಲ್‌ಗೆ ಭಾರತ ಹೇಗೆ ಅರ್ಹತೆ ಪಡೆಯಬಹುದು?

ಸದ್ಯ ಪೂಲ್ ‘E’ ನಲ್ಲಿ ಭಾರತ ಕೊನೆಯ ಸ್ಥಾನದಲ್ಲಿದ್ದರೂ, ಆಗಸ್ಟ್ 21 ರಂದೇ ನಡೆದ ಆಸ್ಟ್ರೇಲಿಯಾ ಮತ್ತು ಚೀನಾ ನಡುವಿನ ಪಂದ್ಯ 1-1 ರಿಂದ ಡ್ರಾ ಆಗಿರುವುದು ಭಾರತದ ಪ್ಲಸ್ ಪಾಯಿಂಟ್ ಆಗಿದೆ. ಭಾರತ ಅಗ್ರ ಎರಡು ತಂಡಗಳಲ್ಲಿ ಒಂದಾಗಿ ಸೆಮಿಫೈನಲ್ ಪ್ರವೇಶಿಸಬೇಕಾದರೆ ಈ ಕೆಳಗಿನ ಲೆಕ್ಕಾಚಾರಗಳು ನಡೆಯಬೇಕಿದೆ:

  • ಆಸ್ಟ್ರೇಲಿಯಾ ವಿರುದ್ಧ ಕಡ್ಡಾಯ ಗೆಲುವು: ಆಗಸ್ಟ್ 23 ರ ಭಾನುವಾರ ನಡೆಯಲಿರುವ ತನ್ನ ಕೊನೆಯ ಎರಡನೇ ಸುತ್ತಿನ ಪಂದ್ಯದಲ್ಲಿ ಭಾರತ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಕಡ್ಡಾಯವಾಗಿ ಸೋಲಿಸಲೇಬೇಕು.
  • ನೆದರ್ಲೆಂಡ್ಸ್ ನೆರವು: ಇದೇ ವೇಳೆ ಭಾನುವಾರ ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಈಗಾಗಲೇ ಸೆಮಿಫೈನಲ್ ತಲುಪಿರುವ ನೆದರ್ಲೆಂಡ್ಸ್ ತಂಡ ಚೀನಾವನ್ನು ಸೋಲಿಸಬೇಕಾಗುತ್ತದೆ.

ಇದನ್ನೂ ಓದಿ: 70 ಕೋಟಿ ರೂ. ನಷ್ಟ: ಟೀಮ್ ಇಂಡಿಯಾ ಕಣಕ್ಕಿಳಿದರೆ 500 ಕೋಟಿ ರೂ. ಲಾಭ!

ಈ ಎರಡು ಫಲಿತಾಂಶಗಳು ಭಾರತದ ಪರವಾಗಿ ಬಂದರೆ, ಭಾರತೀಯ ಮಹಿಳಾ ಹಾಕಿ ತಂಡವು ಸೆಮಿಫೈನಲ್ ಹಂತಕ್ಕೆ ಲಗ್ಗೆ ಇಡಲಿದೆ. ಅಂದರೆ ಇಲ್ಲಿ ಟೀಮ್ ಇಂಡಿಯಾಗೆ ತನ್ನ ಗೆಲುವು ಜೊತೆಗೆ ನೆದರ್​ಲೆಂಡ್ಸ್ ತಂಡದ ಜಯ ಕೂಡ ಅನಿವಾರ್ಯವಾಗಿ ಮಾರ್ಪಟ್ಟಿದೆ. ಅದರಂತೆ ಮುಂದಿನ ಪಂದ್ಯದಲ್ಲಿ ಭಾರತ ತಂಡ ಗೆದ್ದು, ಚೀನಾ ತಂಡ ಸೋತರೆ ಟೀಮ್ ಇಂಡಿಯಾ ಸೆಮಿಫೈನಲ್​ಗೇರಲಿದೆ.

 

Published On - 7:29 am, Sat, 22 August 26

Loading...
Unable to load recommendations.
Follow Us