AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hockey World Cup

Hockey World Cup

Hockey – ಹಾಕಿ ಕ್ರೀಡೆಯ ಇತಿಹಾಸವು ಸಾವಿರಾರು ವರ್ಷಗಳಷ್ಟು ಹಳೆಯದಾಗಿದ್ದು, ಪ್ರಾಚೀನ ಈಜಿಪ್ಟ್, ಗ್ರೀಸ್ ಮತ್ತು ಪರ್ಷಿಯಾ ದೇಶಗಳಲ್ಲಿ ಕೋಲು-ಚೆಂಡಿನಿಂದ ಆಡುತ್ತಿದ್ದ ವಿವಿಧ ಆಟಗಳಲ್ಲೇ ಇದರ ಮೂಲ ಅಡಗಿದೆ. ಆದರೆ, ಇಂದು ನಾವು ಆಡುವ ‘ಆಧುನಿಕ ಫೀಲ್ಡ್ ಹಾಕಿ’ ಸಂಪೂರ್ಣವಾಗಿ ರೂಪುಗೊಂಡಿದ್ದು 19ನೇ ಶತಮಾನದ ಇಂಗ್ಲೆಂಡ್‌ನಲ್ಲಿ. ಬ್ರಿಟನ್‌ನಲ್ಲಿ ಲಿಖಿತ ನಿಯಮಗಳನ್ನು ರೂಪಿಸಿ, ವಿಶ್ವದ ಮೊದಲ ಹಾಕಿ ಕ್ಲಬ್‌ ಸ್ಥಾಪಿಸುವ ಮೂಲಕ ಈ ಆಟಕ್ಕೆ ಹೊಸ ರೂಪ ನೀಡಲಾಯಿತು. ಬ್ರಿಟಿಷ್ ಸೈನಿಕರ ಮೂಲಕ ಭಾರತ ಸೇರಿದಂತೆ ಜಗತ್ತಿನಾದ್ಯಂತ ಹರಡಿದ ಈ ಕ್ರೀಡೆಯು, 1908ರಲ್ಲಿ ಅಧಿಕೃತವಾಗಿ ಒಲಿಂಪಿಕ್ಸ್ ಸೇರಿತು. ತದನಂತರ 1928 ರಿಂದ 1956 ರವರೆಗೆ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಅವರ ಅದ್ಭುತ ಆಟದ ನೆರವಿನಿಂದ ಸತತ 6 ಒಲಿಂಪಿಕ್ ಚಿನ್ನದ ಪದಕಗಳನ್ನು ಗೆದ್ದ ಭಾರತ ತಂಡವು ಜಾಗತಿಕ ಹಾಕಿಯಲ್ಲಿ ಸುವರ್ಣ ಯುಗವನ್ನು ಸೃಷ್ಟಿಸಿತು. ಈ ಭವ್ಯ ಇತಿಹಾಸದೊಂದಿಗೆ ಹಾಕಿ ಇಂದಿಗೂ ಭಾರತದ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ ಒಂದಾಗಿ ಮುಂದುವರಿದಿದೆ.

ಇನ್ನೂ ಹೆಚ್ಚು ಓದಿ

ಸೋತರೂ ಟೀಮ್ ಇಂಡಿಯಾದ ಸೆಮಿಫೈನಲ್ ಆಸೆ ಜೀವಂತ!

Hockey World Cup 2026: ಹಾಲಿ ಚಾಂಪಿಯನ್ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಭಾರತದ ಮಹಿಳಾ ಹಾಕಿ ತಂಡ 0-2 ಗೋಲುಗಳಿಂದ ಸೋಲುಂಡಿರಬಹುದು, ಆದರೆ ವಿಶ್ವಕಪ್ ಟ್ರೋಫಿ ಗೆಲ್ಲುವ ಅವರ ಕನಸು ಮಾತ್ರ ಇನ್ನೂ ಭಗ್ನವಾಗಿಲ್ಲ! ಭಾನುವಾರ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಮಹಾ ಕದನವೇ ಭಾರತದ ಸೆಮಿಫೈನಲ್ ಭವಿಷ್ಯವನ್ನು ನಿರ್ಧರಿಸಲಿದೆ. ಇದರ ಜೊತೆಗೆ ಟೀಮ್ ಇಂಡಿಯಾ ಚೀನಾ ತಂಡದ ಸೋಲನ್ನು ಕೂಡ ಎದುರು ನೋಡಬೇಕಾಗುತ್ತದೆ.

ಭಾರತ vs ಪಾಕ್ ಮುಖಾಮುಖಿ ಎಷ್ಟು ಗಂಟೆಗೆ, ಯಾವ ಚಾನೆಲ್​ನಲ್ಲಿ? ಇಲ್ಲಿದೆ ಮಾಹಿತಿ

India vs Pakistan Hockey World Cup Match Live Streaming: ಹಾಕಿ ಪ್ರೇಮಿಗಳು ಕಾಯುತ್ತಿದ್ದ ಆ ಮಹಾ ಮುಖಾಮುಖಿಯ ದಿನ ಬಂದೇ ಬಿಟ್ಟಿದೆ. ನೆದರ್ಲ್ಯಾಂಡ್ಸ್‌ನಲ್ಲಿ ನಡೆಯುತ್ತಿರುವ ಪುರುಷರ ಎಫ್‌ಐಎಚ್ (FIH) ಹಾಕಿ ವಿಶ್ವಕಪ್ 2026 ಟೂರ್ನಿಯಲ್ಲಿ ಇಂದು ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಪರಸ್ಪರ ಸೆಣಸಾಡಲಿವೆ.