ವಿಶ್ವದ ಯಾವುದೇ ಲೀಗ್ ಐಪಿಎಲ್ ಜೊತೆ ಸ್ಪರ್ಧಿಸಲು ಸಾಧ್ಯವಿಲ್ಲ; ಪಾಕ್ ಕ್ರಿಕೆಟಿಗ ವಹಾಬ್ ರಿಯಾಜ್

|

Updated on: May 15, 2021 | 7:33 PM

ಐಪಿಎಲ್ ಎಲ್ಲಾ ದೊಡ್ಡ ಆಟಗಾರರು ಆಡಲು ಬಯಸುವ ಲೀಗ್ ಆಗಿದೆ. ನೀವು ಪಿಎಸ್‌ಎಲ್ ಅನ್ನು ಐಪಿಎಲ್‌ಗೆ ಹೋಲಿಸಲಾಗುವುದಿಲ್ಲ. ಐಪಿಎಲ್ ಬೇರೆ ಹಂತ.

ವಿಶ್ವದ ಯಾವುದೇ ಲೀಗ್ ಐಪಿಎಲ್ ಜೊತೆ ಸ್ಪರ್ಧಿಸಲು ಸಾಧ್ಯವಿಲ್ಲ; ಪಾಕ್ ಕ್ರಿಕೆಟಿಗ ವಹಾಬ್ ರಿಯಾಜ್
ವಹಾಬ್ ರಿಯಾಜ್
Follow us on

ಕ್ರಿಕೆಟ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪೈಪೋಟಿ ಎಲ್ಲರಿಗೂ ತಿಳಿದಿದೆ. ಈ ಎರಡು ತಂಡಗಳ ಕ್ರಿಕೆಟ್ ಆಟ ಅಭಿಮಾನಿಗಳಿಗೆ ಒಂದು ಯುದ್ಧವಾಗಿದೆ. ಆದರೆ, ಇಲ್ಲಿರುವ ವಿಚಾರಉಭಯ ತಂಡಗಳ ನಡುವಿನ ಕ್ರಿಕೆಟ್ ಯುದ್ಧದ ಬಗ್ಗೆ ಅಲ್ಲ, ಆದರೆ ಉಭಯ ದೇಶಗಳ ಟಿ 20 ಲೀಗ್ ಬಗ್ಗೆ. ಬಿಸಿಸಿಐ ನಡೆಸುವ ಐಪಿಎಲ್ ಹಾಗೂ ಪಿಸಿಬಿ ನಡೆಸುವ ಪಿಎಸ್ಎಲ್​ಗಳಲ್ಲಿ ಯಾವುದು ದೊಡ್ಡ ಲೀಗ್ ಎಂಬ ಪ್ರಶ್ನೆಯೂ ಉದ್ಭವಿಸುತ್ತಿದೆ. ಆದರೆ ಈ ಎರಡರಲ್ಲಿ ಯಾವುದು ದೊಡ್ಡ ಲೀಗ್ ಎಂಬುದನ್ನು ಪಾಕಿಸ್ತಾನಿ ಆಟಗಾರನೊಬ್ಬ ನಿರ್ಧರಿಸಿದ್ದಾರೆ. ಈ ಕ್ರಿಕೆಟಿಗ ಕ್ರಿಕೆಟ್ ಲೀಗ್ ಅಂದರೆ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಆಡುತ್ತಾರೆ.

ಈ ಎರಡು ಲೀಗ್​ಗಳಲ್ಲಿ ಯಾವುದು ಬಿಗ್​ ಲೀಗ್ ಎಂಬುದನ್ನು ಪಾಕಿಸ್ತಾನಿ ಕ್ರಿಕೆಟಿಗ ವಹಾಬ್ ರಿಯಾಜ್ ಬಹಿರಂಗಪಡಿಸಿದ್ದಾರೆ. ಈ 35 ವರ್ಷದ ಆಟಗಾರ ತನ್ನ ಆರಂಭಿಕ ಆವೃತ್ತಿಯಿಂದ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಆಡುತ್ತಿದ್ದಾರೆ. ರಿಯಾಜ್ ಪಿಎಸ್‌ಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರನು ಸಹ ಆಗಿದ್ದಾರೆ. ಆದರಿಂದ ಇಂತಹ ಪರಿಸ್ಥಿತಿಯಲ್ಲಿ, ಐಪಿಎಲ್ ಅಥವಾ ಪಿಎಸ್ಎಲ್ ಲೀಗ್​​ಗಳಲ್ಲಿ ಯಾವುದು ದೊಡ್ಡದು ಎಂದು ಹೇಳುವುದು ಉತ್ತಮವಲ್ಲ.

ಐಪಿಎಲ್‌ನಲ್ಲಿ ಸಂಬಳ ಹೆಚ್ಚು, ಅಂತರರಾಷ್ಟ್ರೀಯ ಆಟಗಾರರು ಹೆಚ್ಚು
ಎಡಗೈ ವೇಗದ ಬೌಲರ್ ತಮ್ಮ ಕಿರು ಸಂದರ್ಶನದಲ್ಲಿ, ಐಪಿಎಲ್‌ನಲ್ಲಿ ಹೆಚ್ಚು ಅಂತರರಾಷ್ಟ್ರೀಯ ಆಟಗಾರರು ಏಕೆ ಆಡುತ್ತಾರೆ ಎಂಬುದನ್ನು ವಿವರಿಸಿದರು. ಇದಕ್ಕಾಗಿ ಬಿಸಿಸಿಐ ಎಲ್ಲಾ ದೇಶಗಳ ಕ್ರಿಕೆಟ್ ಮಂಡಳಿಗಳೊಂದಿಗೆ ಮಾತನಾಡುತ್ತಾ ಇದೇ ರೀತಿಯ ವಿಂಡೋವನ್ನು ರಚಿಸುತ್ತದೆ. ಮತ್ತೊಂದೆಡೆ, ಪಿಎಸ್ಎಲ್ ತಮ್ಮ ರಾಷ್ಟ್ರೀಯ ತಂಡಗಳ ನಿಯಮಿತ ಭಾಗವಾಗಿರದ ಅಂತರರಾಷ್ಟ್ರೀಯ ಆಟಗಾರರನ್ನು ಗುರಿಯಾಗಿಸುತ್ತದೆ. ಐಪಿಎಲ್‌ನಲ್ಲಿ ಆಟಗಾರರಿಗೆ ಹೆಚ್ಚಿನ ಹಣವಿದೆ, ಆದರೆ ಪಿಎಸ್‌ಎಲ್‌ನಲ್ಲಿ ವೇತನವು ಕಡಿಮೆ ಇದೆ ಎಂದು ರಿಯಾಜ್ ಹೇಳಿದರು.

ಐಪಿಎಲ್‌ ಮುಂದೆ ಯಾವ ಲೀಗ್ ಕೂಡ ಸ್ಪರ್ಧಿಸಲು ಸಾಧ್ಯವಿಲ್ಲ – ವಹಾಬ್ ರಿಯಾಜ್
ಕ್ರಿಕೆಟ್ ಪಾಕಿಸ್ತಾನ ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ರಿಯಾಜ್, ಐಪಿಎಲ್ ಎಲ್ಲಾ ದೊಡ್ಡ ಆಟಗಾರರು ಆಡಲು ಬಯಸುವ ಲೀಗ್ ಆಗಿದೆ. ನೀವು ಪಿಎಸ್‌ಎಲ್ ಅನ್ನು ಐಪಿಎಲ್‌ಗೆ ಹೋಲಿಸಲಾಗುವುದಿಲ್ಲ. ಐಪಿಎಲ್ ಬೇರೆ ಹಂತ. ಪಿಎಸ್ಎಲ್ ಮಾತ್ರವಲ್ಲದೆ ವಿಶ್ವದ ಯಾವುದೇ ಲೀಗ್ ಐಪಿಎಲ್ ಜೊತೆ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ರಿಯಾಜ್ ಹೇಳಿದ್ದಾರೆ. ಆದಾಗ್ಯೂ, ಬೌಲಿಂಗ್ ಮಾನದಂಡಕ್ಕೆ ಸಂಬಂಧಿಸಿದಂತೆ, ಈ ಸಂದರ್ಭದಲ್ಲಿ ಪಿಎಸ್‌ಎಲ್ ಐಪಿಎಲ್‌ಗಿಂತ ಉತ್ತಮವಾಗಿರುತ್ತದೆ ಎಂದು ರಿಯಾಜ್ ಹೇಳಿದರು. ಪಿಎಸ್‌ಎಲ್‌ನಲ್ಲಿ ಆಡುವ ಬೌಲರ್‌ಗಳ ಸಾಮರ್ಥ್ಯ ಐಪಿಎಲ್‌ನಲ್ಲಿಲ್ಲ ಎಂದು ಹೇಳಿದರು.