
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯವನ್ನು ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಇಂದು (ಜೂನ್ 18) ಆರಂಭಿಸಬೇಕಿತ್ತು. ಆದರೆ, ಬಹಳ ಕುತೂಹಲ ಮೂಡಿಸಿದ್ದ ಆಟಕ್ಕೆ ಮೊದಲ ದಿನವೇ ವರುಣ ಅಡ್ಡಿಪಡಿಸಿದ್ದಾನೆ. ಟಾಸ್ಗೂ ಮೊದಲು ಮೊದಲ ಸೆಷನ್ ರದ್ದುಗೊಳಿಸುವ ನಿರ್ಧಾರ ಕೈಗೊಳ್ಳುವಂತಾಗಿತ್ತು. 2.30ಕ್ಕೆ ಆರಂಭವಾಗಬೇಕಿದ್ದ ಪಂದ್ಯವನ್ನು ಮಳೆಯ ಕಾರಣದಿಂದ ಮೊದಲ ಸೆಷನ್ ರದ್ದುಗೊಳಿಸಲಾಗಿತ್ತು.

ಆ ಬಳಿಕ ಮತ್ತೂ ಮಳೆ ಕಡಿಮೆ ಆಗಿರದ ಕಾರಣ ಮೊದಲ ದಿನದಾಟವನ್ನೇ ರದ್ದುಗೊಳಿಸಲಾಯಿತು. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್, ನಾಯಕರಾಗಿ ತಮ್ಮ ಮೊದಲ ಐಸಿಸಿ ಟ್ರೋಫಿ ಆಡುತ್ತಿದ್ದಾರೆ. ಆದರೆ, ಸೌತಾಂಪ್ಟನ್ನ ಹವಾಮಾನ ಆಡಲು ಇಂದು ಅವಕಾಶ ಮಾಡಿಕೊಟ್ಟಿಲ್ಲ. ಹವಾಮಾನ ವರದಿ ನೋಡಿದರೂ ಪಂದ್ಯಕ್ಕೆ ಸೂಕ್ತ ಅವಕಾಶ ಮಾಡಿಕೊಡುವಂತೆ ಕಾಣಿಸುತ್ತಿಲ್ಲ. ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಮುಂದೇನಾಗುತ್ತೆ ಎಂದು ಕಾದು ನೋಡಬೇಕಿದೆ!

ವಿರಾಟ್ ಕೊಹ್ಲಿ ಸಾರಥ್ಯದಲ್ಲಿ ಭಾರತ ತಂಡ ಗೆದ್ದರೆ ಅದು ಟೆಸ್ಟ್ ಕ್ರಿಕೆಟ್ ಜಗತ್ತಿನ ಮೇಲೆ ಅಪಾರ ಪ್ರಭಾವ ಬೀರಲಿದೆ. ಅಂದರೆ ನ್ಯೂಜಿಲ್ಯಾಂಡ್ ಗೆಲುವು ಸಾಧಿಸುವುದಕ್ಕಿಂತ ಭಾರತ ಯಶಸ್ಸು ಸಾಧಿಸಿದರೆ ಅದು ಟೆಸ್ಟ್ ಕ್ರಿಕೆಟ್ಗೆ ಶ್ರೇಯಸ್ಕರ. ಏಕೆಂದರೆ ಪುಟ್ಟ ರಾಷ್ಟ್ರ ನ್ಯೂಜಿಲ್ಯಾಂಡ್ ಬೀಗುವುದಕ್ಕಿಂತ ಭಾರತ ಗೆದ್ದರೆ ಅದರ ತೂಕವೇ ಬೇರೆ ಆಗಿರುತ್ತದೆ. ಇದು ಸ್ವತಃ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಗೂ ಚೆನ್ನಾಗಿ ಗೊತ್ತಾಗಿದೆ.

ಹಾಗಾಗಿಯೇ ಮೊಟ್ಟಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಇಂತಹ ಪಂದ್ಯಾವಳಿಯನ್ನು ಆಯೋಜಿಸಿದೆ. ಟೆಸ್ಟ್ ಕ್ರಿಕೆಟ್ ಪುನ:ಶ್ಚೇತನಕ್ಕಾಗಿಯೇ ಇಂತಹ ಚೊಚ್ಚಲ ಚಾಂಪಿಯನ್ಶಿಪ್ ಆಯೋಜಿಸಿದೆ ಅಂದರೆ ತಪ್ಪಾಗಲಾರದು.

ಮುಂದಿನ ದಿನಗಳ ಹವಾಮಾನ ಹೇಗಿರಬಹುದು ಗೊತ್ತಾ? 2 ನೇ ದಿನದಂದು ಹವಾಮಾನವು ಸ್ವಲ್ಪ ಉತ್ತಮವಾಗಿರುತ್ತದೆ, ಮಳೆಯು ಭಾರಿ ಪಾತ್ರವಹಿಸುವ ಸಾಧ್ಯತೆಯಿಲ್ಲ. 3 ನೇ ದಿನವು ಮೊದಲ ದಿನಕ್ಕಿಂತ ಕೆಟ್ಟದಾಗಿರಬಹುದು ಏಕೆಂದರೆ ಆಟದ ಗಮನಾರ್ಹ ಭಾಗವು ಮಳೆಯಿಂದಾಗಿ ನಿಂತುಹೋಗಬಹುದು.

ಭಾರತ ತಂಡ ತನ್ನ ಪ್ಲೇಯಿಂಗ್ 11 (Playing XI) ಮಾರ್ಪಾಡು ಮಾಡುತ್ತದಾ?

ಐದನೇ ದಿನ ಮತ್ತೆ ಮಳೆ ಪಂದ್ಯಕ್ಕೆ ತೊಂದರೆ ನೀಡಬಹುದು. ಮೋಡ ಕವಿದ ವಾತಾವರಣ ಇರಲಿದೆ. ಬೆಳಿಗ್ಗೆ ಮತ್ತು ಮಧ್ಯಾಹ್ನ ಸ್ವಲ್ಪ ತುಂತುರು ಮಳೆಯಾಗಬಹುದು. ಇಂದು ಮಳೆರಾಯ ತೋರಿದ ಆಟ-ಕಾಟದ ಜೊತೆಗೆ ಒಂದಷ್ಟು ಮಾಹಿತಿಗಳನ್ನೂ ಇಲ್ಲಿ ನೀಡಿದ್ದೇವೆ. ಕ್ರಿಕೆಟ್ ಕುರಿತ ವಿಶೇಷ ಮಾಹಿತಿಗಳಿಗಾಗಿ ಟಿವಿ9 ಡಿಜಿಟಲ್ ನೋಡಬಹುದು.
Published On - 10:12 pm, Fri, 18 June 21