AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

WTC Final: ಡಬ್ಲ್ಯೂಟಿಸಿ ಫೈನಲ್​ಗೆ ವರುಣನ ಅಡ್ಡಿ, ಸೌತಾಂಪ್ಟನ್‌ನಲ್ಲಿ ನಿಲ್ಲದ ಮಳೆ! ಮೊದಲ ದಿನದ ಆಟ ಸ್ಥಗಿತ

WTC Final: ಸೌತಾಂಪ್ಟನ್‌ನಲ್ಲಿ ನಿರಂತರ ಮಳೆಯಿಂದಾಗಿ, ಟಾಸ್ ಅಥವಾ ಮೊದಲ ಸೆಷನ್ ಆಡಲಾಗಲಿಲ್ಲ. ನಿರಂತರ ಮಳೆಯಿಂದಾಗಿ ಮೊದಲ ದಿನದ ಆಟವನ್ನು ರದ್ದುಗೊಳಿಸಿ ಆಡಳಿತ ಮಂಡಳಿ ಅಧಿಕೃತವಾಗಿ ಪ್ರಕಟಣೆ ಹೊರಡಿಸಿದೆ.

WTC Final: ಡಬ್ಲ್ಯೂಟಿಸಿ ಫೈನಲ್​ಗೆ ವರುಣನ ಅಡ್ಡಿ, ಸೌತಾಂಪ್ಟನ್‌ನಲ್ಲಿ ನಿಲ್ಲದ ಮಳೆ! ಮೊದಲ ದಿನದ ಆಟ ಸ್ಥಗಿತ
ಪೃಥ್ವಿಶಂಕರ
|

Updated on:Jun 18, 2021 | 7:58 PM

Share

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ 2021 ರಲ್ಲಿ ಭಾರತ ಮತ್ತು ನ್ಯೂಜಿಲೆಂಡ್ (ಭಾರತ ವಿರುದ್ಧ ನ್ಯೂಜಿಲೆಂಡ್) ಮುಖಾಮುಖಿಯಾಗಿದೆ. ಮಳೆಯಿಂದಾಗಿ ಮೊದಲ ದಿನದ ಆಟವು ಕೆಟ್ಟ ಪರಿಣಾಮ ಬೀರಿದೆ. ಹೀಗಾಗಿ ಮೊದಲ ದಿನದ ಆಟವನ್ನು ಆಡಳಿತ ಮಂಡಳಿ ಸ್ಥಗಿತಗೊಳಿಸಿದೆ. ಸೌತಾಂಪ್ಟನ್‌ನಲ್ಲಿ ನಿರಂತರ ಮಳೆಯಿಂದಾಗಿ, ಟಾಸ್ ಅಥವಾ ಮೊದಲ ಸೆಷನ್ ಆಡಲಾಗಲಿಲ್ಲ. ಆಟಗಾರರು ಮತ್ತು ಅಭಿಮಾನಿಗಳು ಎಲ್ಲರೂ ಮಳೆ ನಿಲ್ಲುವವರೆಗೆ ಕಾಯುತ್ತಿದ್ದರು. ಆದರೆ ನಿರಂತರ ಮಳೆಯಿಂದಾಗಿ ಮೊದಲ ದಿನದ ಆಟವನ್ನು ರದ್ದುಗೊಳಿಸಿ ಆಡಳಿತ ಮಂಡಳಿ ಅಧಿಕೃತವಾಗಿ ಪ್ರಕಟಣೆ ಹೊರಡಿಸಿದೆ.

ನಾಳೆ ಭಾರತದ ಕಾಲಮಾನದ ಪ್ರಕಾರ 3 ಗಂಟೆಗೆ ಆಟ ಪ್ರಾರಂಭ ಈ ಬಗ್ಗೆ ಬಿಸಿಸಿಐ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ. ದುರದೃಷ್ಟವಶಾತ್, ಮಳೆಯಿಂದಾಗಿ ಮೊದಲ ದಿನದ ಆಟವನ್ನು ರದ್ದುಪಡಿಸಲಾಗಿದೆ. ನಾಳೆ ಸ್ಥಳೀಯ ಸಮಯ ಬೆಳಿಗ್ಗೆ 10.30 ಕ್ಕೆ (ಭಾರತದ ಕಾಲಮಾನದ ಪ್ರಕಾರ 3 ಗಂಟೆ) ಆಟ ಪ್ರಾರಂಭವಾಗಲಿದೆ. ಜೂನ್ 18 ರಂದು ನಿರಂತರವಾಗಿ ಮಳೆಯಾಯಿತು. ಹಿಂದಿನ ದಿನ ಅಂದರೆ ಜೂನ್ 17 ರಂದು ಮಳೆ ರಾತ್ರಿಯಿಡಿ ಸೌತಾಂಪ್ಟನ್ನಲ್ಲಿ ನಿರಂತರವಾಗಿ ಬೀಳುತ್ತಿತ್ತು.ಇದರಿಂದ ಪಿಚ್​ ಕೂಡ ನೀರಿನಿಂದ ತುಂಬಿತ್ತು.

ಈ ನಡುವೆ ಸ್ವಲ್ಪ ಸಮಯ ಮಳೆ ನಿಂತಿತ್ತು. ನಂತರ ನೀರನ್ನು ಮೈದಾನದಿಂದ ಹೊರಹಾಕಲು ಪ್ರಯತ್ನಿಸಲಾಯಿತು. ಇಷ್ಟರಲ್ಲಾಗಲೇ, ಊಟದ ವಿರಾಮವೂ ಮುಗಿದು ಹೋಗಿತ್ತು. ಹೀಗಾಗಿ ಭಾರತೀಯ ಸಮಯ ಸಂಜೆ 7.30 ಕ್ಕೆ ಪಿಚ್​ ಪರೀಕ್ಷಿಸಲು ನಿರ್ಧರಿಸಲಾಯಿತು. ಆದರೆ ಮತ್ತೆ ಮಳೆ ಬರಲಾರಂಭಿಸಿತು. ಹೀಗಾಗಿ ಮೊದಲ ದಿನದ ಆಟ ರದ್ದಾಯಿತು. ಈಗ ಮೊದಲ ದಿನದ ಓವರ್‌ಗಳನ್ನು ಮೀಸಲು ದಿನದಂದು ಮಾಡಬಹುದು. ಮಳೆಯ ಸಾಧ್ಯತೆಯಿಂದಾಗಿ, ಈ ಟೆಸ್ಟ್​ಗೆ ಒಂದು ದಿನವನ್ನು ಕಾಯ್ದಿರಿಸಲಾಗಿದೆ.

ಮಳೆ ಮುಂದುವರಿಯುವ ನಿರೀಕ್ಷೆಯಿದೆ ಮುಂದಿನ ನಾಲ್ಕು ದಿನಗಳಲ್ಲಿ ಪ್ರತಿದಿನ 98 ಓವರ್‌ಗಳನ್ನು ಆಡಲಾಗುವುದು ಎಂದು ಹೇಳಲಾಗಿದೆ. ಇದರ ನಂತರ ಉಳಿದಿರುವ ಓವರ್‌ಗಳು ಮೀಸಲು ದಿನದಂದು ಪೂರ್ಣಗೊಳ್ಳುತ್ತವೆ. ಆದಾಗ್ಯೂ, ಸೌತಾಂಪ್ಟನ್‌ನಲ್ಲಿ ಮಳೆ ಮುಂದುವರಿಯುವ ನಿರೀಕ್ಷೆಯಿರುವುದರಿಂದ ಇದು ಕೂಡ ಕಡಿಮೆ. ಮುಂದಿನ ದಿನಗಳಲ್ಲಿ ನಿರಂತರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಂತಹ ಪರಿಸ್ಥಿತಿಯಲ್ಲಿ, ಪಂದ್ಯದ ಫಲಿತಾಂಶದ ಬಗ್ಗೆ ಅನುಮಾನವಿದೆ. ಭಾರತ ಮತ್ತು ನ್ಯೂಜಿಲೆಂಡ್ ಜಂಟಿಯಾಗಿ ಮೊದಲ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಪಡೆಯುವ ಸಾಧ್ಯತೆ ಇದೆ.

Published On - 7:34 pm, Fri, 18 June 21

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಗಜೇಂದ್ರಗಡ: ಹೈಟೆಕ್ ಅಗ್ನಿಶಾಮಕ ಠಾಣೆ ಇದ್ದರೂ ಸಿಬ್ಬಂದಿ ಇಲ್ಲದೆ ವ್ಯರ್ಥ!
ಗಜೇಂದ್ರಗಡ: ಹೈಟೆಕ್ ಅಗ್ನಿಶಾಮಕ ಠಾಣೆ ಇದ್ದರೂ ಸಿಬ್ಬಂದಿ ಇಲ್ಲದೆ ವ್ಯರ್ಥ!
ಭಾರತ ಪ್ರಜಾತಂತ್ರದ ತಾಯಿ: ಬ್ಲೂಮ್​ಬರ್ಗ್ ಫೋರಂನಲ್ಲಿ ನರೇಂದ್ರ ಮೋದಿ
ಭಾರತ ಪ್ರಜಾತಂತ್ರದ ತಾಯಿ: ಬ್ಲೂಮ್​ಬರ್ಗ್ ಫೋರಂನಲ್ಲಿ ನರೇಂದ್ರ ಮೋದಿ
ಇಂಡಿಯಾ- ವೆಸ್ಟ್ ಇಂಡೀಸ್ ಪಂದ್ಯಕ್ಕೆ  ಡಿಸಿಎಂಗೆ ವೆಂಕಟೇಶ್ ಪ್ರಸಾದ್ ಆಹ್ವಾನ
ಇಂಡಿಯಾ- ವೆಸ್ಟ್ ಇಂಡೀಸ್ ಪಂದ್ಯಕ್ಕೆ  ಡಿಸಿಎಂಗೆ ವೆಂಕಟೇಶ್ ಪ್ರಸಾದ್ ಆಹ್ವಾನ
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಹೈಕಮಾಂಡ್ ತಲುಪಿದ ಸ್ಟಿಂಗ್ ವಿಚಾರ: ಕ್ಯಾಬಿನೆಟ್ ಪ್ರಸ್ತಾಪಕ್ಕೆ ಗರಂ
ಹೈಕಮಾಂಡ್ ತಲುಪಿದ ಸ್ಟಿಂಗ್ ವಿಚಾರ: ಕ್ಯಾಬಿನೆಟ್ ಪ್ರಸ್ತಾಪಕ್ಕೆ ಗರಂ
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್
ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷ ನಾಯಕರ ಹೈ-ಟೀ
ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷ ನಾಯಕರ ಹೈ-ಟೀ
ಕ್ಯಾಪ್ಟನ್ ಟೀಕಿಸಿದ ತಂಡವನ್ನೇ ಆಯ್ಕೆ ಮಾಡಿಕೊಂಡ ಕುಮಾರಿ
ಕ್ಯಾಪ್ಟನ್ ಟೀಕಿಸಿದ ತಂಡವನ್ನೇ ಆಯ್ಕೆ ಮಾಡಿಕೊಂಡ ಕುಮಾರಿ