Team India Meet PM Modi Live: ಪ್ರಧಾನಿ ಮೋದಿಯನ್ನು ಭೇಟಿಯಾದ ಟೀಮ್ ಇಂಡಿಯಾ
India Cricket Team Meet PM Narendra Modi Live Streaming: ಟಿ20 ವಿಶ್ವಕಪ್ ಗೆದ್ದು ಭಾರತಕ್ಕೆ ಬಂದಿರುವ ಟೀಮ್ ಇಂಡಿಯಾಕ್ಕೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಇದೀಗ ಟೀಮ್ ಇಂಡಿಯಾ ದೆಹಲಿಗೆ ತಲುಪಿದ್ದು, ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಮೋದಿ ಅವರು ಟೀಮ್ ಇಂಡಿಯಾ ನಾಯಕರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಭಾರತ ತಂಡದ ಜತೆಗೆ ಮೋದಿ ಮಾತುಕತೆ ನಡೆಸುತ್ತಿರುವುದನ್ನು ನೇರಪ್ರಸಾರದಲ್ಲಿ ನೋಡಬಹುದು.
ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವಿಜಯ ಸಾಧಿಸಿದ ಭಾರತ ಇದೀಗ ಬಾರ್ಬಡೋಸ್‌ನಿಂದ ದೆಹಲಿಗೆ ಇಂದು ಆಗಮಿಸಿದೆ. ಇದೀಗ ದೆಹಲಿ ಐಟಿಸಿ ಮೌರ್ಯ ಹೋಟೆಲ್ನಿಂದ ಪ್ರಧಾನಿ ಮೋದಿ ಅವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂಡಿಯಾನ್ ಕ್ರಿಕೆಟ್ ಟೀಮ್ ನಾಯಕರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ವಿರಾಟ್, ರೋಹಿತ್, ಹಾರ್ದಿಕ್ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ಇಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ಮೋದಿ ಜತೆಗೆ ಭಾರತ ಕ್ರಿಕೆಟ್ ತಂಡದ ನಾಯಕರು ಮಾತುಕತೆ ನಡೆಸುತ್ತಿರುವುದನ್ನು ನೇರಪ್ರಸಾರದಲ್ಲಿ ಕಾಣಬಹುದು
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jul 04, 2024 01:25 PM