ಈ ವರ್ಷ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಭಾರತದಲ್ಲೇ ನಡೆಯುವ ಟಿಟ್ವೆಂಟಿ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಆಗಲಿದೆ. ಹೀಗಂತ ನಾವ್ ಹೇಳ್ತಿಲ್ಲ.. ಟೀಮ್ ಇಂಡಿಯಾ ವಿರುದ್ಧ ಸೋತ ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗರೇ ಕೊಹ್ಲಿ ಪಡೆಗೆ ಜೈಕಾರ ಹಾಕುತ್ತಿದ್ದಾರೆ. ಇಷ್ಟು ದಿನ ಟೀಂ ಇಂಡಿಯಾ ಆಟಗಾರರನ್ನ ಬರೀ ನಿಂದನೆಗಳಿಂದಲೇ ಅಲ್ಲಗಳೆಯುತ್ತಿದ್ದ ಇಂಗ್ಲೆಂಡ್ ತಂಡದ ಮಾಜಿ ಆಟಗಾರರು, ಟೀಂ ಇಂಡಿಯಾ ಟಿ20 ಸರಣಿಯನ್ನು ಗೆದ್ದ ಬಳಿಕ ತಮ್ಮ ವರಸೆಯನ್ನು ಬದಲಾಯಿಸಿದ್ದಾರೆ.
ಬೂಮ್ರಾ, ಶಮಿ, ಜಡೆಜಾ ತಂಡದಲ್ಲಿರಲಿಲ್ಲ!
ಇಂಗ್ಲೆಂಡ್ ವಿರುದ್ಧದ ಟಿಟ್ವೆಂಟಿ ಸರಣಿಯನ್ನ ಟೀಮ್ ಇಂಡಿಯಾ 3-2ರ ಅಂತರದಲ್ಲಿ ಗೆದ್ದು ಬೀಗಿದೆ. ಐಸಿಸಿ ಟಿಟ್ವೆಂಟಿ ರ್ಯಾಂಕಿಂಗ್ನಲ್ಲಿ ನಂ.1 ಟೀಮ್ ಇಂಗ್ಲೆಂಡ್ ತಂಡವನ್ನ ಬಗ್ಗು ಬಡಿದ ಕೊಹ್ಲಿ ಪಡೆಗೆ, ಎಲ್ಲರೂ ಜೈಕಾರ ಹಾಕುತ್ತಿದ್ದಾರೆ. ಸ್ವತಃ ಇಂಗ್ಲೆಂಡ್ ತಂಡದ ಮಾಜಿ ನಾಯಕರೇ, ಕೊಹ್ಲಿ ಹುಡುಗರ ಸಾಧನೆಯನ್ನ ಗುಣಗಾನ ಮಾಡುತ್ತಿದ್ದಾರೆ.
ಮುಂಬರುವ ಟಿಟ್ವೆಂಟಿ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಆಗೋದು ಖಚಿತ ಎಂದು, ಇಂಗ್ಲೆಂಡ್ ತಂಡದ ಮಾಜಿ ನಾಯಕರು ಭವಿಷ್ಯ ನುಡಿದಿದ್ದಾರೆ. ತಂಡದಲ್ಲಿ ಮೂವರು ಸ್ಟಾರ್ ಆಟಗಾರರಿಲ್ಲದೇ ಇದ್ರೂ, ಕೊಹ್ಲಿ ಪಡೆ ನಂ.1 ತಂಡವನ್ನು ಬಗ್ಗು ಬಡಿದಿದೆ. ಇದಕ್ಕಿಂತ ದೊಡ್ಡ ಸಾಧನೆ ಮತ್ತೊಂದಿಲ್ಲ ಎಂದು ಬಣ್ಣಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಪರ ಮೂವರು ಸ್ಟಾರ್ ಆಟಗಾರರು ತಂಡದಲ್ಲಿರಲಿಲ್ಲ. ಆಲ್ರೌಂಡರ್ ರವೀಂದ್ರ ಜಡೇಜಾ, ವೇಗಿಗಳಾದ ಜಸ್ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಶಮಿ ತಂಡದಲ್ಲಿರಲಿಲ್ಲ. ಹಾಗಿದ್ರೂ ಕೊಹ್ಲಿ ಪಡೆ ಸರಣಿ ಗೆದ್ದು ಬೀಗಿದೆ. ಇದೇ ಕಾರಣಕ್ಕೆ ಟೀಮ್ ಇಂಡಿಯಾ ಟಿಟ್ವೆಂಟಿ ವಿಶ್ವಕಪ್ನಲ್ಲಿ ಚಾಂಪಿಯನ್ ಆಗುತ್ತೆ ಎಂದಿದ್ದಾರೆ.
ಟೀಮ್ ಇಂಡಿಯಾ ಚಾಂಪಿಯನ್ ತಂಡ.
ಟೀಮ್ ಇಂಡಿಯಾ ಆಟಗಾರರು ಆಡುವ ಐಪಿಎಲ್ ಮತ್ತು ಟಿ 20 ಕ್ರಿಕೆಟ್ನಿಂದಾಗಿ ಆಳವಾದ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಪ್ರಮುಖ ಮೂವರು ಆಟಗಾರರು ಇಲ್ಲದೇ ಇದ್ರೂ, ಬಲಿಷ್ಟ ಇಂಗ್ಲೆಂಡ್ ತಂಡವನ್ನ ಸೋಲಿಸಿದ್ದಾರೆ. ಈ ಎಲ್ಲ ಸಂಗತಿಗಳಿಂದಾಗಿ ಟೀಮ್ ಇಂಡಿಯಾ ಟಿಟ್ವೆಂಟಿ ವಿಶ್ವಕಪ್ನಲ್ಲಿ ಗೆಲ್ಲುವ ತಂಡ.
-ಮೈಕಲ್ ಅಥರ್ಟನ್, ಇಂಗ್ಲೆಂಡ್ ಮಾಜಿ ನಾಯಕ
ಮೈಕಲ್ ಅಥರ್ಟನ್ ಬೆನ್ನಲ್ಲೇ ಮತ್ತೊಬ್ಬ ನಾಯಕ ಮೈಕಲ್ ವಾನ್ ಕೂಡ, ಟಿಟ್ವೆಂಟಿ ವಿಶ್ವಕಪ್ನಲ್ಲಿ ಕೊಹ್ಲಿ ಪಡೆಯೇ ಚಾಂಪಿಯನ್ ಆಗುವ ನೆಚ್ಚಿನ ತಂಡ ಎಂದಿದ್ದಾರೆ..
ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ
ಈ ಸರಣಿಯಲ್ಲಿ ಭಾರತ ಅದ್ಭುತವಾಗಿ ಹೊರ ಹೊಮ್ಮಿದೆ. ಉತ್ತಮವಾದ ತಂಡ ಗೆಲುವು ದಾಖಲಿಸಿದೆ. ಜಸ್ಪ್ರೀತ್ ಬೂಮ್ರಾ ಮತ್ತು ರವೀಂದ್ರ ಜಡೇಜಾ ತಂಡವನ್ನ ಸೇರಿಕೊಂಡ್ರೆ, ಟಿಟ್ವೆಂಟಿ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಲಿದೆ.
-ಮೈಕಲ್ ವಾನ್, ಇಂಗ್ಲೆಂಡ್ ತಂಡದ ನಾಯಕ
ಆರಂಭದಲ್ಲಿ ಟಿಟ್ವೆಂಟಿ ಕ್ರಿಕೆಟ್ನಲ್ಲಿ ನಮ್ಮನ್ನ ಮಣಿಸೋರಿಲ್ಲ ಎಂದು ಬೀಗಿತ್ತಿದ್ದ ಇಂಗ್ಲೆಂಡ್ನ ಮಾಜಿ ಕ್ರಿಕೆಟಿಗರು ಈಗ ಕೊಹ್ಲಿ ಪಡೆಗೆ ಜೈಕಾರ ಹಾಕುತ್ತಿದ್ದಾರೆ. ಸದ್ಯ ಟೀಮ್ ಇಂಡಿಯಾದ ಸಾಮರ್ಥ್ಯ ನೋಡಿದ್ರೆ, ಈ ವರ್ಷ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಭಾರತದಲ್ಲೇ ನಡೆಯುವ ಟಿಟ್ವೆಂಟಿ ವಿಶ್ವಕಪ್ನಲ್ಲಿ ಚಾಂಪಿಯನ್ ಆಗುವ ಭರವಸೆ ಮೂಡಿಸಿದ್ದಾರೆ.
ಇದನ್ನೂ ಓದಿ: India vs England: ಕೊಹ್ಲಿ ಇರೋದೇ ಹಾಗೆ! ವಿರಾಟ್- ಬಟ್ಲರ್ ವಾಕ್ಸಮರಕ್ಕೆ ಪ್ರತಿಕ್ರಿಸಿದ ಮೋರ್ಗಾನ್ ಹೇಳಿದ್ದೇನು ಗೊತ್ತಾ?