India vs England: ಕೊಹ್ಲಿ ಇರೋದೇ ಹಾಗೆ! ವಿರಾಟ್​- ಬಟ್ಲರ್​ ವಾಕ್ಸಮರಕ್ಕೆ ಪ್ರತಿಕ್ರಿಸಿದ ಮೋರ್ಗಾನ್​ ಹೇಳಿದ್ದೇನು ಗೊತ್ತಾ?

India vs England: ವಿರಾಟ್ ಮೈದಾನದಲ್ಲಿ ಆಡುವಾಗ ಹೆಚ್ಚು ಭಾವೋದ್ವೇಗಕ್ಕೆ ಒಳಗಾಗುತ್ತಾರೆ. ಇದು ಅವರ ನೈಜ ವರ್ತನೆಯಾಗಿದೆ.

India vs England: ಕೊಹ್ಲಿ ಇರೋದೇ ಹಾಗೆ! ವಿರಾಟ್​- ಬಟ್ಲರ್​ ವಾಕ್ಸಮರಕ್ಕೆ ಪ್ರತಿಕ್ರಿಸಿದ ಮೋರ್ಗಾನ್​ ಹೇಳಿದ್ದೇನು ಗೊತ್ತಾ?
ಇಯಾನ್​ ಮೋರ್ಗಾನ್- ವಿರಾಟ್ ಕೊಹ್ಲಿ
Follow us
ಪೃಥ್ವಿಶಂಕರ
|

Updated on: Mar 22, 2021 | 1:42 PM

ಅಹಮದಾಬಾದ್​: ಇಂಡಿಯಾ- ಇಂಗ್ಲೆಂಡ್​ ನಡುವಿನ ಟಿ 20 ಸರಣಿಯ ನಿರ್ಣಾಯಕ ಸಮರ ಭಾರತಕ್ಕೆ ಸಂತಸ ನೀಡುವ ಮೂಲಕ ಕೊನೆಗೊಂಡಿದೆ. ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾದ ಆಟಗಾರರ ವೀರೊಚಿತ ಹೋರಾಟದಿಂದ ಸರಣಿಯನ್ನು ಗೆದ್ದು ಬೀಗಿತು. ಈ ಮೂಲಕ ವಿಶ್ವದ ನಂ.1 ತಂಡವನ್ನು ಸದ್ದಿಲ್ಲದೆ ಸದೆಬಡಿದಿದೆ. ಆದರೆ ಈ ಅಂತಿಮ ಕದನದಲ್ಲಿ ಟೀಂ ಇಂಡಿಯಾ ನಾಯಕ ಹಾಗೂ ಇಂಗ್ಲೆಂಡ್​ ತಂಡದ ಆರಂಭಿಕ ಆಟಗಾರ ಜೋಸ್ ಬಟ್ಲರ್ ನಡುವೆ ವಾಕ್ಸಮರವೂ ಸಹ ನಡೆಯಿತು. ಮೈದಾನದಲ್ಲಿ ಇಬ್ಬರೂ ಪರಸ್ಪರ ಜೋರು ಧ್ವನಿಯಲ್ಲಿ ಮಾತಿನ ಯುದ್ಧ ನಡೆಸಿದ್ದರು. ಈ ಇಬ್ಬರು ಆಟಗಾರರ ವಾಕ್ಸಮರ ಮೈದಾನದಲ್ಲಿನ ಕ್ಯಾಮೆರಾಗಳಲ್ಲಿ ಸೆರೆಹಿಡಿಯಲಾಗಿತ್ತು. ಜೊತೆಗೆ ಪಂದ್ಯದ ನಂತರ ಈ ವಿಡಿಯೋ ಫುಲ್​ ವೈರಲ್​ ಸಹ ಆಗಿತ್ತು.

ಈಗ ಪ್ರತಿಯೊಂದು ಕ್ರಿಯೆಗೂ ಒಂದು ಪ್ರತಿಕ್ರಿಯೆ ಇದ್ದೆ ಇರುತ್ತದೆ ಎಂಬಂತೆ ಅಂದು ನಡೆದ ವಾಕ್ಸಮರದ ಬಗ್ಗೆ ಇಂಗ್ಲೆಂಡ್ ನಾಯಕ ಇಯಾನ್​ ಮೋರ್ಗಾನ್ ಮೊದಲ ಬಾರಿಗೆ ಇಡೀ ವಿಷಯದ ಬಗ್ಗೆ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ವರ್ತನೆಯ ಬಗ್ಗೆಯೂ ಹೇಳಿಕೆ ನೀಡಿದ್ದಾರೆ.

ವಿರಾಟ್-ಬಟ್ಲರ್‌ ವಾಕ್ಸಮರಕ್ಕೆ ಮೋರ್ಗನ್‌ ಪ್ರತಿಕ್ರಿಯೆ ಇಂಗ್ಲೆಂಡ್‌ನ ಸೀಮಿತ ಓವರ್‌ಗಳ ನಾಯಕ ಇಯಾನ್ ಮೋರ್ಗಾನ್ ಆ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಆ ಘಟನೆ ಏಕೆ ಸಂಭವಿಸಿತು ಎಂಬುದು ನನಗೆ ತಿಳಿದಿಲ್ಲ. ಈ ಇಡೀ ಸಂಘರ್ಷದ ಮೂಲ ಯಾವುದು ಎಂಬುದು ಗೊತ್ತಿಲ್ಲ? ವಿರಾಟ್ ಮೈದಾನದಲ್ಲಿ ಆಡುವಾಗ ಹೆಚ್ಚು ಭಾವೋದ್ವೇಗಕ್ಕೆ ಒಳಗಾಗುತ್ತಾರೆ. ಇದು ಅವರ ನೈಜ ವರ್ತನೆಯಾಗಿದೆ. ಸ್ಪರ್ಧೆಯು ಕಠಿಣವಾದಾಗ, ಆ ಸಮಯದಲ್ಲಿ ಆಟಗಾರರ ನಡುವೆ ಚರ್ಚೆ ನಡೆಯುವುದು ಸಹಜ. ಹಾಗಾಗಿ ಅಂದಿನ ಪಂದ್ಯದಲ್ಲಿ ಈ ಘಟನೆ ಸಂಭವಿಸಿದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

13 ನೇ ಓವರ್‌ನಲ್ಲಿ ನಡೆದ ಪ್ರಸಂಗ ವಾಸ್ತವವಾಗಿ, ಈ ಇಡೀ ಪ್ರಸಂಗ ಇಂಗ್ಲೆಂಡ್ ಇನ್ನಿಂಗ್ಸ್ನ 13 ನೇ ಓವರ್​ನಲ್ಲಿ ನಡೆಯಿತು. 225 ರನ್‌ಗಳ ಗುರಿಯನ್ನ ಬೆನ್ನಟ್ಟಿದ ಇಂಗ್ಲೆಂಡ್ ಎರಡನೇ ಆಘಾತ ಎದುರಿಸಿತು. ಭುವನೇಶ್ವರ್ ಕುಮಾರ್ ಎಸೆತದಲ್ಲಿ ಸಿಕ್ಸರ್​ ಬಾರಿಸಲು ಯತ್ನಿಸಿದ ಜೋಸ್ ಬಟ್ಲರ್ ಔಟಾಗಿದ್ದರು. ಆ ಸಮಯದಲ್ಲಿ ಇಂಗ್ಲೆಂಡ್‌ನ ಸ್ಕೋರ್ 130 ರನ್ ಆಗಿತ್ತು. ಬಟ್ಲರ್​ ವಿಕೆಟ್​ ಬಳಿಕ ಮೈದಾನದಲ್ಲಿ ಯತ ಪ್ರಕಾರವಾಗಿ ತಮ್ಮ ಅಗ್ರೇಶನ್​ ಹೊರಹಾಕಿದ ಕೊಹ್ಲಿ ಆಟಗಾರರೊಂದಿಗೆ ಸೆಲೆಬ್ರೆಷನ್​ ಮೂಡ್​ನಲ್ಲಿದ್ದರು.

ಔಟಾದ ಬಳಿಕ ಡಗ್‌ ಔಟ್‌ಗೆ ಹಿಂದಿರುಗುತ್ತಿದ್ದ ಬಟ್ಲರ್​, ವಿರಾಟ್‌ ಕಡೆ ತಿರುಗಿ ಏನನ್ನೋ ಹೇಳಿದರು, ಇದನ್ನು ಗಮನಿಸಿದ ಕೊಹ್ಲಿ ಕೂಡಲೇ ಸೆಲೆಬ್ರೇಷನ್​ ಮೂಡ್​ಗೆ ಬ್ರೇಕ್​ ಹಾಕಿ ಬಟ್ಲರ್​ ಕಡೆಗೆ ಅದೇನೊ ಹೇಳುತ್ತಾ ದಾವಿಸಿದರು. ಕೊಹ್ಲಿಯ ಬರುವಿಕೆಯನ್ನ ಗಮನಿಸಿದ ಬಟ್ಲರ್​ ಸಹ ಡಗ್​ಔಟ್​ನಿಂದ ವಾಪಸ್ಸ್​ ತಿರುಗಿ ಕೊಹ್ಲಿ ಮಾತಿಗೆ ಪ್ರತ್ಯುತ್ತರ ನೀಡಲು ಆರಂಭಿಸಿದರು. ಕೆಲ ಸಮಯದವರೆಗೆ ಈ ಇಬ್ಬರ ನಡುವಿನ ಮಾತಿನ ಚಕಮಕಿ ಮುಂದುವರೆದಿತ್ತು. ಕೊಹ್ಲಿಯ ಮಾತಿನ ಬರಕ್ಕೆ ಹೆದರಿದ ಬಟ್ಲರ್​, ಪೆವಿಲಿಯನ್​ ಅತ್ತ ಪೆಚ್ಚುಮೊರೆ ಹಾಕಿಕೊಂಡು ಸಾಗಿದರು. ಆದರೆ ಈ ಇಬ್ಬರ ನಡುವಿನ ವಾಗ್ವಾದಕ್ಕೆ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ.

ಇದನ್ನೂ ಓದಿ:India vs England: ಏಕದಿನ ಸರಣಿಗಾಗಿ ಇಂಗ್ಲೆಂಡ್ ತಂಡ ಪ್ರಕಟ.. ರೂಟ್, ಆರ್ಚರ್ ಸರಣಿಯಿಂದ​ ಔಟ್!

ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ