AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England: ಮೊದಲ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾದ ಆಡುವ ಹನ್ನೊಂದರ ಬಳಗ ಹೀಗಿರಬಹುದು?

India vs England: ಏಕದಿನ ಸರಣಿಗಾಗಿ ಉಭಯ ತಂಡಗಳು ಅಹಮದಾಬಾದ್‌ನಿಂದ ಪುಣೆ ತಲುಪಿವೆ. ಮೊದಲ ಏಕದಿನ ಪಂದ್ಯ ಮಾರ್ಚ್ 23 ರ ಮಂಗಳವಾರ ನಡೆಯಲಿದೆ.

India vs England: ಮೊದಲ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾದ ಆಡುವ ಹನ್ನೊಂದರ ಬಳಗ ಹೀಗಿರಬಹುದು?
ಟೀಂ ಇಂಡಿಯಾ
Follow us
ಪೃಥ್ವಿಶಂಕರ
|

Updated on: Mar 22, 2021 | 3:39 PM

ಪುಣೆ: ಟೆಸ್ಟ್ ಮತ್ತು ಟಿ 20 ನಂತರ, ಈಗ ಫಿಫ್ಟಿ ಓವರ್ ಫಾರ್ಮ್ಯಾಟ್‌ನತ್ತ ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ತಂಡಗಳು ತಯಾರಿ ನಡೆಸಿವೆ. ಸ್ವರೂಪ ಬದಲಾಗಿದೆ ಆದರೆ ಟೀಮ್ ಇಂಡಿಯಾದ ಚಿಂತನೆ ಒಂದೇ ಆಗಿದೆ. ಅದೇನೆಂದರೆ, ಇಂಗ್ಲೆಂಡ್​ ಎದುರು ನಾವು ಸರಣಿ ಗೆಲ್ಲಬೇಕು ಎಂಬುದು ಅಷ್ಟೇ. ಏಕದಿನ ಸರಣಿಗಾಗಿ ಉಭಯ ತಂಡಗಳು ಅಹಮದಾಬಾದ್‌ನಿಂದ ಪುಣೆ ತಲುಪಿವೆ. ಮೊದಲ ಏಕದಿನ ಪಂದ್ಯ ಮಾರ್ಚ್ 23 ರ ಮಂಗಳವಾರ ನಡೆಯಲಿದೆ. ಇದು ಹಗಲು-ರಾತ್ರಿ ಪಂದ್ಯವಾಗಿದ್ದು, ಭಾರತೀಯ ಕಾಲಮಾನ ಮಧ್ಯಾಹ್ನ 1.30 ಕ್ಕೆ ಆರಂಭವಾಗಲಿದೆ.

ಅಂದಹಾಗೆ, ಟೀಮ್ ಇಂಡಿಯಾ ಕೊನೆಯ 3 ಅಂತರರಾಷ್ಟ್ರೀಯ ಸರಣಿಯಲ್ಲೂ ಒಂದೇ ರೀತಿಯ ಪಲಿತಾಂಶ ಕಂಡಿದೆ. ಮೊದಲು ಟೀಂ ಇಂಡಿಯಾ ಎದುರಾಳಿ ತಂಡದೆದುರು ಸೋಲುಪ್ಪಿಕೊಂಡಿದದೆ. ತದನಂತರ ಎದುರಾಳಿಗಳನ್ನು ಸೋಲಿಸಿದಲ್ಲದೆ ಸರಣಿಯನ್ನ ಕೈವಶ ಮಾಡಿಕೊಂಡಿದೆ. ಆದರೆ ಇದರ ಹೊರತಾಗಿಯೂ, 2 ಸರಣಿಗಳನ್ನು ಕೈಚೆಲ್ಲಿರುವ ಇಂಗ್ಲೆಂಡ್ ತಂಡ ಗೆಲ್ಲುವ ಉದ್ದೇಶದಿಂದ ಭಾರತದ ವಿರುದ್ಧ ಕಣಕ್ಕಿಳಿಯಲಿದೆ. ಇದಕ್ಕಾಗಿ ಉಭಯ ತಂಡಗಳು ಉತ್ತಮ ತಂಡದೊಂದೊಗೆ ಮೈದಾನಕ್ಕಿಳಿಯುತ್ತಿವೆ.

ಸೂರ್ಯಕುಮಾರ್ ಪಾದಾರ್ಪಣೆ ಮಾಡಬಹುದು ಈಗ ಪ್ರಶ್ನೆಯೆಂದರೆ, ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಯಾವ್ಯಾವ ಆಟಗಾರರೊಂದಿಗೆ ಮೈದಾನಕ್ಕಿಳಿಯಲಿದೆ ಎಂಬುದು. ವಿರಾಟ್ ಕೊಹ್ಲಿ ಆಡುವ ಇಲೆವೆನ್ ಬಗ್ಗೆ ಮಾಡಿರುವ ಗೇಮ್​ ಪ್ಲಾನ್​ ಏನು ಎಂಬುದು ಈಗ ಎಲ್ಲರ ಕುತೂಹಲಕ್ಕೆ ಸಾಕ್ಷಿಯಾಗಿದೆ. ಸ್ಪಷ್ಟವಾದ ಒಂದು ವಿಷಯವೆಂದರೆ, ಮೊದಲ ಏಕದಿನ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಈ ಕ್ರಿಕೆಟ್ ಮಾದರಿಯಲ್ಲಿ ಪಾದಾರ್ಪಣೆ ಮಾಡುವುದು ಬಹುತೇಕ ಖಚಿತವಾಗಿದೆ. ಅಸಲಿಗೆ ವಿರಾಟ್ ಕೊಹ್ಲಿ ಟಿ 20 ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ಬಗ್ಗೆ ತುಂಬಾ ಪ್ರಭಾವಿತರಾಗಿದ್ದರು. ಟಿ 20 ಸರಣಿಯನ್ನು ಗೆದ್ದ ನಂತರವೂ ಅವರು ಸೂರ್ಯಕುಮಾರ್ ಯಾದವ್ ಮೇಲೆ ತಮ್ಮಲ್ಲಿರುವ ಅಭಿಪ್ರಾಯವನ್ನು ಸಹ ವ್ಯಕ್ತಪಡಿಸಿದರು. ಕೊಹ್ಲಿಯ ಮನಸ್ಸು ಗೆದ್ದಿರುವುದೇ, ಸೂರ್ಯಕುಮಾರ್​ಯಾದವ್​ ಏಕದಿನ ತಂಡದಲ್ಲಿ ಸ್ಥಾನ ಪಡೆಯಲು ಕಾರಣವಾಗಿದೆ.

ಮಧ್ಯಮ ಕ್ರಮಾಂಕ ಬಲಿಷ್ಠವಾಗಲಿದೆ ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಅಲ್ಲದೆ, ರೋಹಿತ್ ಮತ್ತು ಧವನ್ ಜೋಡಿ ಆರಂಭಿಕ ಹಂತದಲ್ಲಿ ಇಂಗ್ಲೆಂಡ್ ಬೌಲರ್‌ಗಳಿಗೆ ಸಿಂಹ ಸ್ವಪ್ನವಾಗಲಿದ್ದಾರೆ. ವಿರಾಟ್ ಕೊಹ್ಲಿ, ಒನ್​ಡೌನ್​ನಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತ. ಹಾರ್ದಿಕ್ ಪಾಂಡ್ಯ ತಂಡದ ಆಲ್‌ರೌಂಡರ್ ಪಾತ್ರ ನಿರ್ವಹಿಸಲಿದ್ದಾರೆ. ಇದಲ್ಲದೆ, ಮಧ್ಯದಲ್ಲಿ ತಂಡವನ್ನು ಬಲಪಡಿಸಲು ಶ್ರೇಯಸ್ ಅಯ್ಯರ್ ಮತ್ತು ರಿಷಭ್ ಪಂತ್ ಕೂಡ ತಂಡದಲ್ಲಿರಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಭಾರತ 3 ವೇಗದ ಬೌಲರ್‌ಗಳು ಮತ್ತು ಇಬ್ಬರು ಸ್ಪಿನ್ನರ್‌ನೊಂದಿಗೆ ಕಣಕ್ಕಿಳಿಯಬಹುದು.

ಟೀಮ್ ಇಂಡಿಯಾದ ಆಡುವ ಇಲೆವೆನ್ ಸಾಧ್ಯತೆ ಇದೆ ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಭುವನೇಶ್ವರ್ ಕುಮಾರ್, ವಾಷಿಂಗ್​ಟನ್ ಸುಂದರ್, ಟಿ.ನಟರಾಜನ್, ಯಜ್ವೇಂದ್ರ ಚಹಲ್

ಇದನ್ನೂ ಓದಿ:India vs England: ಕೊಹ್ಲಿ ಇರೋದೇ ಹಾಗೆ! ವಿರಾಟ್​- ಬಟ್ಲರ್​ ವಾಕ್ಸಮರಕ್ಕೆ ಪ್ರತಿಕ್ರಿಸಿದ ಮೋರ್ಗಾನ್​ ಹೇಳಿದ್ದೇನು ಗೊತ್ತಾ?

ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್
ಚಿನ್ನಸ್ವಾಮಿಯಲ್ಲಿ ಮೊದಲ ಗೆಲುವು; ಕುಣಿದು ಕುಪ್ಪಳಿಸಿದ ಕೊಹ್ಲಿ
ಚಿನ್ನಸ್ವಾಮಿಯಲ್ಲಿ ಮೊದಲ ಗೆಲುವು; ಕುಣಿದು ಕುಪ್ಪಳಿಸಿದ ಕೊಹ್ಲಿ