India vs England: ಬೆಂಚ್ ಕಾಯುವುದರಿಂದ ರಾಹುಲ್ ಫಾರ್ಮ್ಗೆ ಮರಳುವುದಿಲ್ಲ.. ಕನ್ನಡಿಗನ ಪರ ಬ್ಯಾಟ್ ಬೀಸಿದ ಗಂಭೀರ್!
India vs England:ಕಳಪೆ ಫಾರ್ಮ್ನಿಂದ ಬಳಲುತ್ತಿರುವವರನ್ನ ತಂಡದಿಂದ ಹೊರಗಿಟ್ಟರೆ ಅದು ಅವರಿಗೆ ಪ್ರಯೋಜನಕ್ಕೆ ಬರುವುದಿಲ್ಲ. ಹೀಗಾಗಿ ರಾಹುಲ್ಗೆ ಎಲ್ಲಾ ಮೂರು ಪಂದ್ಯಗಳಲ್ಲಿ ಅವಕಾಶ ನೀಡಬೇಕಾಗುತ್ತದೆ
ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಸರಣಿ ಮುಗಿದ ನಂತರ, ಈಗ ಏಕದಿನ ಸರಣಿಯತ್ತ ಕಣ್ಣು ಹಾಯಿಸಲಾಗಿದೆ. ವಿಶ್ವದ ನಂಬರ್ ಒನ್ ಮತ್ತು ನಂಬರ್ ಟೂ ಏಕದಿನ ತಂಡದ ನಡುವಿನ 3 ಪಂದ್ಯಗಳ ಸರಣಿಯು ಮಾರ್ಚ್ 23 ರ ಮಂಗಳವಾರದಿಂದ ಪುಣೆಯಲ್ಲಿ ಪ್ರಾರಂಭವಾಗಲಿದೆ. ಈ ಸರಣಿಯು ಕ್ರಿಕೆಟ್ ವಲಯದಲ್ಲಿ ಹೆಚ್ಚು ವಿಶೇಷವಾದುದಲ್ಲ. ಆದರೆ ಭಾರತೀಯ ತಂಡಕ್ಕೆ ಈ ಸರಣಿ ಬಹುಮುಖ್ಯವಾಗಿದೆ. ಟೀಂ ಇಂಡಿಯಾ ತನ್ನ ಕೆಲವು ಆಟಗಾರರ ಫಾರ್ಮನ್ನ ಅರ್ಥ ಮಾಡಿಕೊಳ್ಳಲು ಇದು ಸಹಾಯಕಾರಿಯಾಗಲಿದೆ.
ಏಕದಿನ ಸರಣಿಯಲ್ಲಿ ಈ ತೀರ್ಮಾನ ಬದಲಾಗಬಹುದು ಅಂತಹ ಆಟಗಾರರಲ್ಲಿ ಒಬ್ಬನೆಂದರೆ, ಅದು ಕನ್ನಡಿಗ ಕೆ.ಎಲ್.ರಾಹುಲ್. ಟಿ 20 ಸರಣಿಯ ವೈಫಲ್ಯದ ನಂತರ ರಾಹುಲ್ ಸ್ಥಾನ ಟೀಂ ಇಂಡಿಯಾದಲ್ಲಿ ಅಪಾಯದಲ್ಲಿದೆ ಎಂದು ತೋರುತ್ತದೆ. ಆದರೆ ಏಕದಿನ ಸರಣಿಯಲ್ಲಿ ಈ ತೀರ್ಮಾನ ಬದಲಾಗಬಹುದು. ಇದಕ್ಕೆ ಪುಷ್ಠಿ ನೀಡುವಂತೆ ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅವರು ಎಲ್ಲಾ ಮೂರು ಪಂದ್ಯಗಳಲ್ಲಿ ರಾಹುಲ್‌ಗೆ ಅವಕಾಶ ನೀಡಬೇಕು ಎಂದು ಹೇಳಿಕೆ ನೀಡಿದ್ದಾರೆ.
ಸೀಮಿತ ಓವರ್‌ಗಳಲ್ಲಿ ಪ್ರಸ್ತುತ ಟೀಂ ಇಂಡಿಯಾದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ರಾಹುಲ್ ಕೂಡ ಒಬ್ಬರು ಎಂದು ಪರಿಗಣಿಸಲಾಗಿದೆ. ಟಿ 20 ಪಂದ್ಯಗಳಲ್ಲಿ ವಿಶ್ವದ ಅಗ್ರ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದರೆ, ಏಕದಿನ ಪಂದ್ಯಗಳಲ್ಲಿ ಅವರ ದಾಖಲೆಯೂ ಉತ್ತಮವಾಗಿದೆ. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಟಿ 20 ವಿಶ್ವಕಪ್‌ನ ದೃಷ್ಟಿಕೋನದಿಂದ ರಾಹುಲ್ ತಂಡದಲ್ಲಿರುವುದು ಸಹ ಮುಖ್ಯವಾಗಿದೆ. ಇದನ್ನು ಗಮನಿಸಿದರೆ, ರಾಹುಲ್ ತಮ್ಮ ಕಳಪೆ ಫಾರ್ಮ್ನಿಂದ ಹೊರಬಂದು ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಪಡೆಯಬೇಕಾಗಿದೆ.
ಎಲ್ಲಾ ಮೂರು ಪಂದ್ಯಗಳಲ್ಲೂ ಅವಕಾಶ ನೀಡಬೇಕು ಭಾರತದ ಮಾಜಿ ಆರಂಭಿಕ ಆಟಗಾರ ಗಂಭೀರ್ ಕೂಡ ರಾಹುಲ್ ಪರ ಬ್ಯಾಟ್ ಬೀಸಿದ್ದಾರೆ. ಫಾರ್ಮ್ ಅನ್ನು ಮರಳಿ ಪಡೆಯುವ ಏಕೈಕ ಮಾರ್ಗವೆಂದರೆ ಪಂದ್ಯಗಳನ್ನು ಆಡುವುದು ಎಂಬುದು ಗಂಭೀರ್ ಅಭಿಪ್ರಾಯವಾಗಿದೆ. ಕಾರ್ಯಕ್ರಮವೊಂದರಲ್ಲಿ ಏಕದಿನ ಸರಣಿ ಬಗ್ಗೆ ಮಾತಾನಾಡಿದ ಗಂಭೀರ್, ಈ ಸರಣಿಯಲ್ಲಿ ರಾಹುಲ್ಗೆ ಅವಕಾಶ ನೀಡುವಂತೆ ಒತ್ತಾಯಿಸಿದರು.
ಕಳಪೆ ಫಾರ್ಮ್ನಿಂದ ಬಳಲುತ್ತಿರುವವರನ್ನ ತಂಡದಿಂದ ಹೊರಗಿಟ್ಟರೆ ಅದು ಅವರಿಗೆ ಪ್ರಯೋಜನಕ್ಕೆ ಬರುವುದಿಲ್ಲ. ಹೀಗಾಗಿ ರಾಹುಲ್ಗೆ ಎಲ್ಲಾ ಮೂರು ಪಂದ್ಯಗಳಲ್ಲಿ ಅವಕಾಶ ನೀಡಬೇಕಾಗುತ್ತದೆ ಎಂದರು. ಯಾರಾದರೂ ಕೆಟ್ಟ ಫಾರ್ಮ್ನಿಂದ ಬಳಲುತ್ತಿದ್ದರೆ, ಅದನ್ನು ಮರಳಿ ಪಡೆಯುವ ಏಕೈಕ ಮಾರ್ಗವೆಂದರೆ ಅವನಿಗೆ ಅವಕಾಶ ನೀಡುವುದು ಎಂದರು.
ಟಿ20 ಸರಣಿಯಲ್ಲಿ ಕೇವಲ 15 ರನ್ ಟಿ20 ಸರಣಿಯ ಮೊದಲು, ಈ ಸ್ವರೂಪಕ್ಕಾಗಿ ರಾಹುಲ್ ಅವರನ್ನು ಕ್ಯಾಪ್ಟನ್ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಆರಂಭಿಕ ಆಟಗಾರ ಎಂದು ಘೋಷಿಸಿದರು. ರೋಹಿತ್ ಶರ್ಮಾ ಅವರೊಂದಿಗೆ ರಾಹುಲ್ ತಂಡದ ಆರಂಭಿಕ ಆಟಗಾರನಾಗಲಿದ್ದಾರೆ ಎಂದು ಕೊಹ್ಲಿ ಹೇಳಿದ್ದರು. ಆದರೆ ಸರಣಿಯಲ್ಲಿ ರಾಹುಲ್ ಸಂಪೂರ್ಣವಾಗಿ ವಿಫಲರಾದರು. ಮೊದಲ 4 ಪಂದ್ಯಗಳಲ್ಲಿ ರಾಹುಲ್‌ಗೆ ಅವಕಾಶ ನೀಡಲಾಯಿತು. ಇದರಲ್ಲಿ ಕೇವಲ 15 ರನ್ ಮಾತ್ರ ಅವರ ಬ್ಯಾಟ್‌ನಿಂದ ಹೊರಬಂದಿತು. ಜೊತೆಗೆ ಈ ಸಮಯದಲ್ಲಿ ಸತತ 2 ಬಾರಿ ಖಾತೆ ತೆರೆಯದೆ ರಾಹುಲ್ ಔಟ್ ಆದರು. ಕೊನೆಯ ಪಂದ್ಯದಲ್ಲಿ ಕೊಹ್ಲಿ ಸ್ವತಃ ಓಪನಿಂಗ್‌ಗೆ ಬಂದು ರೋಹಿತ್ ಅವರೊಂದಿಗೆ ಅದ್ಭುತ ಬ್ಯಾಟಿಂಗ್ ಮಾಡಿದರು.