India vs England: ಏಕದಿನ ಸರಣಿಗಾಗಿ ಇಂಗ್ಲೆಂಡ್ ತಂಡ ಪ್ರಕಟ.. ರೂಟ್, ಆರ್ಚರ್ ಸರಣಿಯಿಂದ ಔಟ್!
India vs England: ಇಂಗ್ಲೆಂಡ್ ಪರ ಅತಿ ಹೆಚ್ಚು 16 ಶತಕಗಳನ್ನು ಮತ್ತು ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರನಾದ ಜೋ ರೂಟ್ ಅವರನ್ನು ಈ ತಂಡದಿಂದ ಕೈಬಿಡಲಾಗಿದೆ.
ಭಾರತ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ 14 ಸದಸ್ಯರ ಬಲಿಷ್ಠ ತಂಡವನ್ನು ಘೋಷಿಸಿದೆ. ಇಂಗ್ಲಿಷ್ ತಂಡದಲ್ಲಿ 14 ಆಟಗಾರರಿಗೆ ಸ್ಥಾನ ನೀಡಲಾಗಿದೆ. ಆದರೆ ತಂಡದ ವೇಗದ ಬೌಲರ್ ಜೋಫ್ರಾ ಆರ್ಚರ್ ಈ ಸರಣಿಯಿಂದ ಹೊರಗುಳಿದಿದ್ದಾರೆ. ಮೊಣಕೈ ಗಾಯದ ಚಿಕಿತ್ಸೆಗಾಗಿ ಅವರು ಯುಕೆಗೆ ಹಿಂತಿರುಗಲಿದ್ದಾರೆ. ಅದೇ ಸಮಯದಲ್ಲಿ, ತಂಡದ ಟೆಸ್ಟ್ ನಾಯಕ ಜೋ ರೂಟ್ ಕೂಡ ಸರಣಿಗೆ ಮರಳಿಲ್ಲ. ಇಂಗ್ಲೆಂಡ್ ಪರ ಏಕದಿನ ಪಂದ್ಯಗಳಲ್ಲಿ ಗರಿಷ್ಠ 16 ಶತಕಗಳನ್ನು ಗಳಿಸಿದ ರೂಟ್, ಟೆಸ್ಟ್ ಸರಣಿಯ ನಂತರವೇ ದೇಶಕ್ಕೆ ಮರಳಿದರು. ಇಂಗ್ಲಿಷ್ ಮಂಡಳಿಯು ಮಾರ್ಚ್ 21 ರ ಭಾನುವಾರ ತನ್ನ ತಂಡವನ್ನು ಘೋಷಿಸಿದೆ
ಏಕದಿನ ಸರಣಿ ಮಾರ್ಚ್ 23 ರಿಂದ ಪುಣೆಯಲ್ಲಿ ಪ್ರಾರಂಭ ಭಾರತ ವಿರುದ್ಧದ ಟೆಸ್ಟ್ ಸರಣಿ ಮತ್ತು ಟಿ 20 ಸರಣಿಯ ಸೋಲಿನ ನಂತರ ಈ ಪ್ರವಾಸದಲ್ಲಿ ಸ್ವಲ್ಪ ಯಶಸ್ಸನ್ನು ಗಳಿಸಲು ಇಂಗ್ಲೆಂಡ್‌ಗೆ ಇದು ಕೊನೆಯ ಅವಕಾಶವಾಗಿದೆ. ಮಾರ್ಚ್ 20 ರ ಶನಿವಾರ, ಭಾರತವು ನಿರ್ಣಾಯಕ ಟಿ 20 ಪಂದ್ಯದಲ್ಲಿ ಪೂರ್ಣ ಸಾಮರ್ಥ್ಯದ ಇಂಗ್ಲೆಂಡ್ ತಂಡವನ್ನು 36 ರನ್‌ಗಳಿಂದ ಸೋಲಿಸಿ ಸರಣಿಯನ್ನು ತಮ್ಮದಾಗಿಸಿಕೊಂಡಿತು. ಮಾರ್ಚ್ 23 ರಿಂದ ಪುಣೆಯಲ್ಲಿ ಪ್ರಾರಂಭವಾಗಲಿರುವ ಏಕದಿನ ಸರಣಿಯ ಮೇಲೆ ಈಗ ಎರಡೂ ತಂಡಗಳ ಕಣ್ಣು ಇದೆ.
ಜೋ ರೂಟ್ ಅವರನ್ನು ತಂಡದಿಂದ ಕೈಬಿಡಲಾಗಿದೆ ಟಿ 20 ಸರಣಿಗಾಗಿ ಭಾರತ ಪ್ರವಾಸದಲ್ಲಿ ತಂಡದೊಂದಿಗೆ ಹಾಜರಿದ್ದ ಆಟಗಾರರಲ್ಲಿ 14 ಸದಸ್ಯರ ತಂಡವನ್ನು ಇಂಗ್ಲಿಷ್ ತಂಡ ಪ್ರಕಟಿಸಿದೆ. ಇಂಗ್ಲೆಂಡ್ ಪರ ಅತಿ ಹೆಚ್ಚು 16 ಶತಕಗಳನ್ನು ಮತ್ತು ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರನಾದ ಜೋ ರೂಟ್ ಅವರನ್ನು ಈ ತಂಡದಿಂದ ಕೈಬಿಡಲಾಗಿದೆ. ಇದಕ್ಕೆ ಒಂದು ಕಾರಣವೆಂದರೆ ಇಂಗ್ಲೆಂಡ್‌ನ ರೊಟೆಷನ್ ಪಾಲಿಸಿ, ಇದರ ಅಡಿಯಲ್ಲಿ ಎಲ್ಲಾ ಸ್ವರೂಪಗಳ ಆಟಗಾರರಿಗೆ ಅಗತ್ಯವಾದ ವಿಶ್ರಾಂತಿ ನೀಡಲಾಗುತ್ತದೆ. ಹೀಗಾಗಿ 4 ಪಂದ್ಯಗಳ ಟೆಸ್ಟ್ ಸರಣಿಯ ನಂತರ ರೂಟ್ ಯುಕೆಗೆ ಮರಳಿದರು.
ಆರ್ಚರ್ ಸರಣಿಯಿಂದ ಔಟ್.. ಇಂಗ್ಲೆಂಡ್ ತಂಡವು ವೇಗದ ಬೌಲರ್ ಜೋಫ್ರಾ ಆರ್ಚರ್ ರೂಪದಲ್ಲಿ ದೊಡ್ಡ ಹೊಡೆತವನ್ನು ಅನುಭವಿಸಿದೆ. ಆರ್ಚರ್ ತನ್ನ ಮೊಣಕೈ ನೋವಿನಿಂದ ಬಳಲುತ್ತಿದ್ದು, ಟೆಸ್ಟ್ ಸರಣಿಯಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿತು. ಈ ಸಮಸ್ಯೆ ಟಿ20 ಸರಣಿಯ ಸಮಯದಲ್ಲಿ ಮತ್ತಷ್ಟು ಹೆಚ್ಚಾಯಿತು. ಆದಾಗ್ಯೂ, ಆರ್ಚರ್ ಟಿ20 ಸರಣಿ ಎಲ್ಲಾ ಪಂದ್ಯಗಳನ್ನು ಆಡುವುದರ ಜೊತೆಗೆ ಪ್ರತಿ ಪಂದ್ಯದಲ್ಲೂ ತಮ್ಮ ಬೌಲಿಂಗ್ ಕೋಟಾವನ್ನು ಸಂಪೂರ್ಣಗೊಳಿಸಿದರು.
ಐಪಿಎಲ್ನ ಆರಂಭಿಕ ಕೆಲವು ಪಂದ್ಯಗಳಿಗೆ ಜೋಫ್ರಾ ಅಲಭ್ಯ ಏಕದಿನ ಸರಣಿ ಮತ್ತು ಐಪಿಎಲ್ 2021 ರಿಂದ ಆರ್ಚರ್ ಹೊರಗುಳಿಯುವ ಸುದ್ದಿ ಒಂದು ದಿನ ಮುಂಚಿತವಾಗಿಯೇ ಬಂದಿತ್ತು. ನಿರೀಕ್ಷೆಯಂತೆ ಆರ್ಚರ್ ಅವರನ್ನು ಏಕದಿನ ಸರಣಿಯಿಂದ ಕೈಬಿಡಲಾಗಿದೆ. ಹೀಗಾಗಿ ಅವರು ಸ್ವದೇಶಕ್ಕೆ ಹಿಂದಿರುಗಲಿದ್ದಾರೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಮಂಡಳಿಯು ತನ್ನ ಹೇಳಿಕೆಯಲ್ಲಿ, ಇಸಿಬಿಯ ವೈದ್ಯಕೀಯ ತಂಡವು ಜೋಫ್ರಾ ಆರ್ಚರ್ ಅವರನ್ನು ಪರೀಕ್ಷಿಸುತ್ತದೆ. ಅವರು ಚಿಕಿತ್ಸೆಯಿಂದ ಸಂಪೂರ್ಣ ಗುಣಮುಖರಾದ ಬಳಿಕ ಪಂದ್ಯಾವಳಿಯ ಬಗ್ಗೆ ಚಿಂತಿಸಲಾಗುತ್ತದೆ ಎಂದಿದೆ. ಇದರ ಪರಿಣಾಮವಾಗಿ, ಇಂಡಿಯನ್ ಪ್ರೀಮಿಯರ್ ಲೀಗ್‌ನ ಆರಂಭಿಕ ಕೆಲವು ಪಂದ್ಯದಲ್ಲಿ ಜೋಫ್ರಾ ಅವರಿಗೆ ಆಡಲು ಸಾಧ್ಯವಾಗುವುದಿಲ್ಲ.
ಇಂಗ್ಲೆಂಡ್‌ನ 14 ಮಂದಿಯ ತಂಡ ಇಯಾನ್ ಮೋರ್ಗಾನ್ (ನಾಯಕ), ಜೇಸನ್ ರಾಯ್, ಮೊಯೀನ್ ಅಲಿ, ಜಾನಿ ಬೈರ್‌ಸ್ಟೋವ್, ಸ್ಯಾಮ್ ಬಿಲ್ಲಿಂಗ್ಸ್, ಜಾಸ್ ಬಟ್ಲರ್, ಸ್ಯಾಮ್ ಕರಣ್, ಟಾಮ್ ಕರಣ್, ಲಿಯಾಮ್ ಲಿವಿಂಗ್‌ಸ್ಟೋನ್, ಮ್ಯಾಟ್ ಪರ್ಕಿನ್ಸನ್, ಆದಿಲ್ ರಶೀದ್, ಬೆನ್ ಸ್ಟೋಕ್ಸ್, ರೀಸ್ ಟಾಪ್ಲೆ ಮತ್ತು ಮಾರ್ಕ್ ವುಡ್
??????? England have named a 14-member squad for their ODI series against India, starting 23 March.
Jofra Archer misses out because of an elbow injury.#INDvENG pic.twitter.com/CXNaWHBHI3
— ICC (@ICC) March 21, 2021
Published On - 5:43 pm, Sun, 21 March 21