ವಮಿಕಾ ಎತ್ತಿಕೊಂಡ ಅನುಷ್ಕಾ ಶರ್ಮ, ಲಗೇಜ್ ಹಿಡಿದ ವಿರಾಟ್ ಕೊಹ್ಲಿ; ಏರ್​ಪೋರ್ಟ್ ಫೊಟೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್

ಅನುಷ್ಕಾ ಹಾಗೂ ಮಗಳು ವಮಿಕಾ ಗುಜರಾತ್​ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಕ್ರಿಕೆಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಜೊತೆಯಾಗಿದ್ದರು. ಐದನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ರೋಚಕ ಗೆಲುವು ದಾಖಲಿಸಿತ್ತು.

ವಮಿಕಾ ಎತ್ತಿಕೊಂಡ ಅನುಷ್ಕಾ ಶರ್ಮ, ಲಗೇಜ್ ಹಿಡಿದ ವಿರಾಟ್ ಕೊಹ್ಲಿ; ಏರ್​ಪೋರ್ಟ್ ಫೊಟೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್
ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ
Follow us
TV9 Web
| Updated By: ganapathi bhat

Updated on:Apr 06, 2022 | 6:54 PM

ನಟಿ ಅನುಷ್ಕಾ ಶರ್ಮ, ವಿರಾಟ್ ಕೊಹ್ಲಿ ಅಹಮದಾಬಾದ್ ಏರ್​ಪೋರ್ಟ್​ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ವಿರುಷ್ಕಾ ದಂಪತಿ ತಮ್ಮ ಮಗುವಿನೊಂದಿಗೆ ಕಂಡುಬಂದ ಫೊಟೊ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದುಮಾಡುತ್ತಿದೆ. ಅನುಷ್ಕಾ ಶರ್ಮ ತಮ್ಮ ಮಗಳನ್ನು ಎತ್ತಿಕೊಂಡಿದ್ದರೆ, ವಿರಾಟ್ ಕೊಹ್ಲಿ ಲಗೇಜ್​ನ್ನು ಹಿಡಿದು ಕಂಡುಬಂದಿದ್ದಾರೆ. ಸೆಲೆಬ್ರಿಟಿ ಸಂಸಾರದ ಕ್ಯೂಟ್ ಫೊಟೊ ಈಗ ಅಭಿಮಾನಿಗಳ ಮನಗೆದ್ದಿದೆ. ಮಗುವಿನ ಮುಖವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಬಾರದು ಎಂದು ದಂಪತಿ ಈ ಹಿಂದೆ ಕೇಳಿಕೊಂಡಿದ್ದರು. ಅದರಂತೆ ವೈರಲ್ ಆಗಿರುವ ಫೊಟೊದಲ್ಲೂ ಮಗುವಿನ ಮುಖ ಕಾಣುತ್ತಿಲ್ಲ.

ಅನುಷ್ಕಾ ಹಾಗೂ ಮಗಳು ವಮಿಕಾ ಗುಜರಾತ್​ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಕ್ರಿಕೆಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಜೊತೆಯಾಗಿದ್ದರು. ಐದನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ರೋಚಕ ಗೆಲುವು ದಾಖಲಿಸಿತ್ತು. ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ಗೆಲ್ಲುವ ಮೂಲಕ ಭಾರತ 3-2 ಅಂತರದ ಗೆಲುವು ದಾಖಲಿಸಿತ್ತು.

ಈ ಮೊದಲು ಮಹಿಳಾ ದಿನಕ್ಕೆ ಸಂಬಂಧಿಸಿ ವಿರಾಟ್ ಕೊಹ್ಲಿ ಅನುಷ್ಕಾ ಹಾಗೂ ವಮಿಕಾಗೆ ಶುಭಕೋರಿ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಮಗುವಿನ ಜನನವೊಂದು ಅಭೂತಪೂರ್ವ ಘಳಿಗೆ. ಮಾನವನೊಬ್ಬ ಹೊಂದಬಹುದಾದ ಅದ್ಭುತ ಅನುಭವ ಎಂದು ತಮ್ಮ ತಂದೆತನದ ಬಗ್ಗೆ ತಿಳಿಸಿದ್ದರು. ಮಹಿಳೆಯರು ನಮಗಿಂತ ಬಹಳ ಶಕ್ತಿಶಾಲಿಗಳು ಎಂದೂ ಕೊಹ್ಲಿ ಹೇಳಿದ್ದರು. ಮಡದಿ, ಮಗಳಿಗೆ ಮಹಿಳಾ ದಿನದ ಶುಭ ಕೋರಿದ್ದ ಕೊಹ್ಲಿ ಜೊತೆಗೆ ಪ್ರಪಂಚದ ಎಲ್ಲಾ ಮಹಿಳೆಯರಿಗೂ ಶುಭಾಶಯ ಕೋರಿದ್ದರು.

ಮಗಳು ವಮಿಕಾ, ಅನುಷ್ಕಾ ಶರ್ಮ ಹಾಗೂ ವಿರಾಟ್ ಫೊಟೊ ವೈರಲ್

ಬಯೋ ಬಬಲ್ ಕಾರಣ ಜೊತೆಗಿದ್ದರು ಅನುಷ್ಕಾ, ವಿರಾಟ್, ವಮಿಕಾ! ಈ ಹಿಂದೆ, ಕೊರೊನಾ ಸೋಂಕಿನಿಂದ ಟೀಂ ಇಂಡಿಯಾ ಆಟಗಾರರನ್ನು ರಕ್ಷಿಸುವ ಸಲುವಾಗಿ ಬಿಸಿಸಿಐ ತನ್ನ ನಿಯಾಮಾವಳಿಗಳಲ್ಲಿ ಹಲವು ಬದಲಾವಣೆಗಳನ್ನು ತಂದಿತ್ತು. ಆ ನಿಯಮಗಳ ಫಲವೇ ಬಯೋ ಬಬಲ್. ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಟೀಮ್ ಇಂಡಿಯಾ ಕ್ರಿಕೆಟಿಗರು ಎರಡು ತಿಂಗಳಿಗೂ ಹೆಚ್ಚು ಕಾಲ ಬಯೋ ಬಬಲ್​ ನಿಯಮಕ್ಕೆ ಒಳಗಾಗಿದ್ದರು. ಚೆನ್ನೈನಲ್ಲಿ ನಡೆದ ನಾಲ್ಕು ಟೆಸ್ಟ್ ಸರಣಿಯ ಮುನ್ನ ಕೊಹ್ಲಿ ಅಂಡ್​ ಟೀಂ ಚೆನ್ನೈನಲ್ಲಿ ಬಯೋ-ಬಬಲ್ ನಿಯಮಕ್ಕೆ ಒಳಗಾಗಿತು. ಇದಕ್ಕೂ ಮೊದಲು ಟೀಂ ಇಂಡಿಯಾ ಆಸಿಸ್​ ಪ್ರವಾಸದ ವೇಳೆ ಬಯೋ ಬಬಲ್​ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸಿತ್ತು.

ಇದರ ಫಲವಾಗಿ ಟೀಂ ಇಂಡಿಯಾದ ಕೆಲವು ಆಟಗಾರರು ಮತ್ತು ಇಂಗ್ಲೆಂಡ್ ತಂಡದ ಆಟಗಾರರು ಅಹಮದಾಬಾದ್‌ನ ಹಯಾಟ್ ರೀಜೆನ್ಸಿ ಹೋಟೆಲ್​ನಲ್ಲಿ ತಮ್ಮ ಕುಟುಂಬಸ್ಥರೊಂದಿಗೆ ವಾಸ್ತವ್ಯ ಹೂಡಿದ್ದರು. ಟೀಂ ಇಂಡಿಯಾ ನಾಯಕ ಕೊಹ್ಲಿ, ಅವರ ಪತ್ನಿ ಅನುಷ್ಕಾ ಶರ್ಮಾ ಮತ್ತು ಮಗಳು ವಮಿಕಾ ಕೂಡ ಹಯಾಟ್ ರೀಜೆನ್ಸಿ ಹೋಟೆಲ್​ನಲ್ಲಿ ನೆಲೆಯೂರಿದ್ದರು.

ಹೀಗಾಗಿ ನಾಯಕ ವಿರಾಟ್​ ಕೊಹ್ಲಿ ಉಳಿದುಕೊಂಡಿರುವ ಕೋಣೆಯ ಬಾಗಿಲಿನ ಮೇಲೆ ನಾಮ ಫಲಕವನ್ನು ಹಾಕಲಾಗಿತ್ತು. ಈ ಫಲಕದ ಮೇಲೆ ವಿರಾಟ್​ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಹಾಗೂ ಮಗಳು ವಮಿಕಾ ಹೆಸರನ್ನು ಸಹ ಬರೆಯಲಾಗಿತ್ತು. ಜೊತೆಗೆ ಸ್ವಿಟ್​ ಹೋಮ್​ ಎಂಬ ಹೆಡ್ಡಿಂಗ್​ ಸಹ ನೀಡಲಾಗಿತ್ತು. ಇದರಿಂದ ಆಟಗಾರರಿಗೆ ಹೋಟೆಲ್​ನ ರೂಂಗಳು ತಮ್ಮ ಮನೆಗಳಂತೆಯೇ ಭಾಸವಾಗುತ್ತದೆ ಎಂಬುದು ಹೋಟೆಲ್​ ಸಿಬ್ಬಂದಿಗಳ ವಿವರಣೆಯಾಗಿತ್ತು.

ಇದನ್ನೂ ಓದಿ: ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್​ನಲ್ಲಿ ಸರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್​ಮನ್​ ಅನ್ನೋದು ನಿಜವೇ?

ವಿರುಷ್ಕಾ ದಂಪತಿ ಮಗಳ ಹೆಸರು ‘ವಮಿಕಾ’.. ಏನಿದರ ಅರ್ಥ?

Published On - 10:40 pm, Sun, 21 March 21

ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ