IND vs AFG T20I Series: ಭಾರತ-ಅಫ್ಘಾನಿಸ್ತಾನ ಟಿ20 ಸರಣಿ ಯಾವಾಗ ಆರಂಭ?, ಎಷ್ಟು ಗಂಟೆಗೆ?, ಲೈವ್ ಯಾವುದರಲ್ಲಿ?

|

Updated on: Jan 08, 2024 | 7:50 AM

When and Where India vs Afghanistan T20I Series: ಭಾರತ ಮತ್ತು ಅಫ್ಘಾನಿಸ್ತಾನ ನಡುವೆ 3 ಟಿ20 ಕ್ರಿಕೆಟ್ ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯ ಜನವರಿ 11 ರಂದು, ಎರಡನೇ ಪಂದ್ಯ ಜನವರಿ 14 ಮತ್ತು ಮೂರನೇ ಪಂದ್ಯ ಜನವರಿ 17 ರಂದು ಆಯೋಜಿಸಲಾಗಿದೆ. ಹಾಗಾದರೆ, ಭಾರತ-ಅಫ್ಘಾನಿಸ್ತಾನ ಟಿ20 ಸರಣಿ ಎಷ್ಟು ಗಂಟೆಗೆ?. ಇಲ್ಲಿದೆ ಸಂಪೂರ್ಣ ಮಾಹಿತಿ.

IND vs AFG T20I Series: ಭಾರತ-ಅಫ್ಘಾನಿಸ್ತಾನ ಟಿ20 ಸರಣಿ ಯಾವಾಗ ಆರಂಭ?, ಎಷ್ಟು ಗಂಟೆಗೆ?, ಲೈವ್ ಯಾವುದರಲ್ಲಿ?
India vs Afghanistan T20I Series
Follow us on

ಭಾರತ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಮುಗಿಸಿ ಇದೀಗ ತವರಿಗೆ ಮರಳಿದೆ. ಸದ್ಯ ವಿಶ್ರಾಂತಿಯಲ್ಲಿರುವ ಟೀಮ್ ಇಂಡಿಯಾ ಕೆಲವೇ ದಿನಗಳಲ್ಲಿ ಮುಂದಿನ ಸರಣಿಗೆ ಸಜ್ಜಾಗಬೇಕಿದೆ. ರೋಹಿತ್ ಪಡೆಯ ಮುಂದಿನ ಟಾರ್ಗೆಟ್ ಅಫ್ಘಾನಿಸ್ತಾನ ಆಗಿದೆ. ಇಂಡೋ-ಅಫ್ಘಾನ್ (India vs Afghanistan) ನಡುವೆ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಈ ಸರಣಿಗಾಗಿ ಈಗಾಗಲೇ ಬಿಸಿಸಿಐ ತಂಡವನ್ನು ಕೂಡ ಪ್ರಕಟಿಸಿದ್ದು, ಸುಮಾರು 14 ತಿಂಗಳ ಬಳಿಕ ಟಿ20ಐ ಕ್ರಿಕೆಟ್​ಗೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕಮ್​ಬ್ಯಾಕ್ ಮಾಡಿದ್ದಾರೆ. ಹಾಗಾದರೆ, ಭಾರತ-ಅಫ್ಘಾನಿಸ್ತಾನ ಟಿ20 ಸರಣಿ ಯಾವಾಗ ಆರಂಭ?, ಎಷ್ಟು ಗಂಟೆಗೆ?. ಇಲ್ಲಿದೆ ಸಂಪೂರ್ಣ ಮಾಹಿತಿ.

ಭಾರತ- ಅಫ್ಘಾನಿಸ್ತಾನ ಟಿ20 ಸರಣಿ ಯಾವಾಗ?

ಭಾರತ ಮತ್ತು ಅಫ್ಘಾನಿಸ್ತಾನ ನಡುವೆ 3 ಟಿ20 ಕ್ರಿಕೆಟ್ ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯ ಜನವರಿ 11 ರಂದು, ಎರಡನೇ ಪಂದ್ಯ ಜನವರಿ 14 ಮತ್ತು ಮೂರನೇ ಪಂದ್ಯ ಜನವರಿ 17 ರಂದು ಆಯೋಜಿಸಲಾಗಿದೆ.

ಇದನ್ನೂ ಓದಿ
KL Rahul: ಟಿ20 ತಂಡದಿಂದ ಕನ್ನಡಿಗ ಕೆಎಲ್ ರಾಹುಲ್ ಔಟ್..!
ರೋಹಿತ್ ರಿಎಂಟ್ರಿ: ಹಾರ್ದಿಕ್ ಪಾಂಡ್ಯ ಕನಸು ಭಗ್ನ..!
ಕೊನೆಯಲ್ಲಿ ಎಡವಿದ ಭಾರತ; ಆಸೀಸ್​ಗೆ 6 ವಿಕೆಟ್​ ಜಯ
ರೋಹಿತ್, ಕೊಹ್ಲಿ ಟಿ20 ವಿಶ್ವಕಪ್ ಆಡುವುದು ಖಚಿತ

ಭಾರತ- ಅಫ್ಘಾನಿಸ್ತಾನ ಟಿ20 ಸರಣಿ ಎಲ್ಲಿ ಆಡಲಾಗುತ್ತದೆ?

ಭಾರತ ಮತ್ತು ಅಫ್ಘಾನಿಸ್ತಾನ ಟಿ20 ಸರಣಿಯ ಮೊದಲ ಪಂದ್ಯ ಮೊಹಾಲಿಯಲ್ಲಿ ನಡೆಯಲಿದೆ. ಎರಡನೇ ಪಂದ್ಯ ಇಂದೋರ್‌ನಲ್ಲಿ ಮತ್ತು ಮೂರನೇ ಪಂದ್ಯ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.

IND vs AFG: ಸೂರ್ಯ, ಪಾಂಡ್ಯ ಸೇರಿದಂತೆ ತಂಡದ ಮತ್ತೊಬ್ಬ ಆರಂಭಿಕ ಆಟಗಾರ ಟಿ20 ಸರಣಿಗೆ ಅಲಭ್ಯ..!

ಭಾರತ- ಅಫ್ಘಾನಿಸ್ತಾನ ಟಿ20 ಸರಣಿ ಎಲ್ಲಿ ವೀಕ್ಷಿಸಬಹುದು?

ಭಾರತ- ಅಫ್ಘಾನಿಸ್ತಾನ ಟಿ20 ಸರಣಿಯ ಲೈವ್ ಸ್ಟ್ರೀಮ್ JioCinema ಅಪ್ಲಿಕೇಶನ್‌ನಲ್ಲಿ ಲಭ್ಯವಿರುತ್ತದೆ. ಸ್ಪೋರ್ಟ್ಸ್ 18 ನೆಟ್‌ವರ್ಕ್‌ನಲ್ಲಿಯೂ ಪಂದ್ಯವನ್ನು ಲೈವ್ ಆಗಿ ವೀಕ್ಷಿಸಬಹುದು.

ಭಾರತ- ಅಫ್ಘಾನಿಸ್ತಾನ ಟಿ20 ಸರಣಿ ಎಷ್ಟು ಗಂಟೆಗೆ ಆರಂಭ?

ಭಾರತ ಹಾಗೂ ಅಫ್ಘಾನಿಸ್ತಾನ ಟಿ20 ಸರಣಿಯ ಎಲ್ಲ ಮೂರು ಪಂದ್ಯಗಳು ಭಾರತೀಯ ಕಾಲಮಾನದ ಪ್ರಕಾರ ಸಂಜೆ 7 ಗಂಟೆಗೆ ಆರಂಭವಾಗಲಿದೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಸರ್ ಪಟೇಲ್, ರವಿ ಬಿಷ್ಣೋಯ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಮುಖೇಶ್ ಕುಮಾರ್.

ಅಫ್ಘಾನಿಸ್ತಾನ ತಂಡ: ಇಬ್ರಾಹಿಂ ಝದ್ರಾನ್ (ನಾಯಕ), ರಹಮಾನುಲ್ಲಾ ಗುರ್ಬಾಜ್, ಇಕ್ರಮ್ ಅಲಿಖಿಲ್, ಹಜರತುಲ್ಲಾ ಝಜೈ, ರಹಮತ್ ಷಾ, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಕರೀಂ ಜನತ್, ಅಜ್ಮುಲ್ಲಾ ಉಮರ್ಜಾಯ್, ಶರಫುದ್ದೀನ್ ಅಶ್ರಫ್, ಮುಜೀಬ್ ಉರ್ ರೆಹಮಾಲ್, ಫಜಲ್ ಹಕ್ಮಾನ್, ನವೀನ್ ಉಲ್ ಹಕ್, ನೂರ್ ಅಹ್ಮದ್, ಮೊಹಮ್ಮದ್ ಸಲೀಮ್, ಖೈಸ್ ಅಹ್ಮದ್, ಗುಲ್ಬದಿನ್ ನೈಬ್ ಮತ್ತು ರಶೀದ್ ಖಾನ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:49 am, Mon, 8 January 24