India vs Australia Test Series | 3ನೇ ಟೆ​ಸ್ಟ್​ಗೆ ಭಾರತ ತಂಡ ಪ್ರಕಟ; ಟೆಸ್ಟ್ ಕ್ರಿಕೆಟ್​ಗೆ ಸೈನಿ​ ಪಾದಾರ್ಪಣೆ

ಅಜಿಂಕ್ಯಾ ರಹಾನೆ 3ನೇ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಗಾಯದಿಂದಾಗಿ 2 ಟೆಸ್ಟ್​ ಪಂದ್ಯಗಳಿಗೆ ಅಲಭ್ಯರಾಗಿದ್ದ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಕಣಕ್ಕಿಳಿಯಲ್ಲಿದ್ದಾರೆ. ವೇಗಿ ನವದೀಪ್ ಸೈನಿ ಪಾದಾರ್ಪಣೆ ಮಾಡಲಿದ್ದಾರೆ.

India vs Australia Test Series | 3ನೇ ಟೆ​ಸ್ಟ್​ಗೆ ಭಾರತ ತಂಡ ಪ್ರಕಟ; ಟೆಸ್ಟ್ ಕ್ರಿಕೆಟ್​ಗೆ ಸೈನಿ​ ಪಾದಾರ್ಪಣೆ
ಅಭ್ಯಾಸದಲ್ಲಿ ನಿರತರಾಗಿರುವ ಟೀಂ ಇಂಡಿಯಾ ಆಟಗಾರರು

Updated on: Jan 06, 2021 | 2:13 PM

ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಈಗಾಗಲೇ ನಡೆದಿರುವ 2 ಟೆಸ್ಟ್​ ಪಂದ್ಯಗಳಲ್ಲಿ ಒಂದರಲ್ಲಿ ಹೀನಾಯವಾಗಿ ಸೋತು, ಮತ್ತೊಂದರಲ್ಲಿ ಭರ್ಜರಿ ಜಯ ಸಾಧಿಸಿದೆ. ಹೀಗಾಗಿ ಎಲ್ಲರ ಕಣ್ಣು ಮೂರನೇ ಟೆಸ್ಟ್​ ಮೇಲೆ ಬಿದ್ದಿದೆ.

ಮೂರನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ, ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿದೆ. 3ನೇ ಟೆಸ್ಟ್ ಪಂದ್ಯವನ್ನು ಅಜಿಂಕ್ಯಾ ರಹಾನೆ ನಾಯಕನಾಗಿ ಮುನ್ನಡೆಸಲಿದ್ದಾರೆ. ಗಾಯದಿಂದಾಗಿ 2 ಟೆಸ್ಟ್​ ಪಂದ್ಯಗಳಿಗೆ ಅಲಭ್ಯರಾಗಿದ್ದ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಕಣಕ್ಕಿಳಿಯಲ್ಲಿದ್ದಾರೆ. ಜೊತೆಗೆ ಮೊದಲ ಬಾರಿಗೆ ಟೆಸ್ಟ್​ ಕ್ರಿಕೆಟ್​ಗೆ ವೇಗಿ ನವದೀಪ್ ಸೈನಿ ಪಾದಾರ್ಪಣೆ ಮಾಡಲಿದ್ದಾರೆ.

ರೋಹಿತ್​ ಶರ್ಮ ತಂಡಕ್ಕೆ ಮರಳಿರುವುದರಿಂದ ಕಳಪೆ ಫಾರ್ಮ್​ನಲ್ಲಿದ್ದ ಮಾಯಾಂಕ್​ ಅಗರವಾಲ್​ಗೆ ತಂಡದಿಂದ ಕೋಕ್​ ನೀಡಲಾಗಿದೆ. ಇನ್ನೂ ಕಳೆದ ಪಂದ್ಯದಲ್ಲಿ ಗಾಯದ ಸಮಸ್ಯೆಯಿಂದಾಗಿ ಪಂದ್ಯದಿಂದ ಹೊರ ನಡೆದಿದ್ದ ವೇಗಿ ಉಮೇಶ್​ ಯಾದವ್​ ಸ್ಥಾನಕ್ಕೆ ನವದೀಪ್ ಸೈನಿ ಆಯ್ಕೆಯಾಗಿದ್ದಾರೆ. ಜನವರಿ 7ರಿಂದ ಭಾರತೀಯ ಕಾಲಮಾನ ಮುಂಜಾನೆ 5 ಗಂಟೆಗೆ 3ನೇ ಟೆಸ್ಟ್​ ಪಂದ್ಯ ಪ್ರಾರಂಭವಾಗಲಿದೆ.

ಆಟಗಾರರ ಪಟ್ಟಿ: ಅಜಿಂಕ್ಯಾ ರಹಾನೆ (ಕ್ಯಾಪ್ಟನ್), ರೋಹಿತ್ ಶರ್ಮಾ, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ರಿಷಭ್ ಪಂತ್, ರವೀಂದ್ರ ಜಡೇಜಾ, ಆರ್.ಅಶ್ವಿನ್, ಜಸ್​ಪ್ರೀತ್​ ಬುಮ್ರಾ, ಮೊಹಮದ್ ಸಿರಾಜ್, ನವದೀಪ್ ಸೈನಿ

ಟೀಂ ಇಂಡಿಯಾ ಫ್ಯಾನ್ಸ್​ಗೆ ಸಿಹಿ ಸುದ್ದಿ: ಐಸೋಲೇಷನ್​ನಲ್ಲಿದ್ದ ಆಟಗಾರರ ಬಗ್ಗೆ ಮಹತ್ತರ ಮಾಹಿತಿ ನೀಡಿದ BCCI

Published On - 2:07 pm, Wed, 6 January 21