India vs England: 3ನೇ ಅಂಪೈರ್​ ಕೆಟ್ಟ ತೀರ್ಪಿಗೆ ಸೂರ್ಯ ಕುಮಾರ್​ ಔಟ್​..​ ಸಾಫ್ಟ್​ ಸಿಗ್ನಲ್ ಬಗ್ಗೆ ಕಿಡಿಕಾರಿದ ಮಾಜಿ ಕ್ರಿಕೆಟಿಗರು!

|

Updated on: Mar 19, 2021 | 11:48 AM

India vs England: ಯಾದವ್​ ಬ್ಯಾಟ್​ಗೆ ತಾಗಿ ಚಿಮ್ಮಿದ ಚೆಂಡನ್ನು ಡೇವಿಡ್ ಮಲಾನ್ ಡೈವ್ ಮಾಡಿ ಕ್ಯಾಚ್ ಮಾಡಿದರು. ಆದರೆ ಮಲಾನ್ ಹಿಡಿದ ಕ್ಯಾಚ್ ಅನುಮಾನಾಸ್ಪದವಾಗಿತ್ತು.

India vs England: 3ನೇ ಅಂಪೈರ್​ ಕೆಟ್ಟ ತೀರ್ಪಿಗೆ ಸೂರ್ಯ ಕುಮಾರ್​ ಔಟ್​..​ ಸಾಫ್ಟ್​ ಸಿಗ್ನಲ್ ಬಗ್ಗೆ ಕಿಡಿಕಾರಿದ ಮಾಜಿ ಕ್ರಿಕೆಟಿಗರು!
ವಿವಾದಾತ್ಮಕ ತೀರ್ಪಿಗೆ ಬಲಿಯಾದ ಸೂರ್ಯ ಕುಮಾರ್​ ಯಾದವ್
Follow us on

ಅಹಮದಾಬಾದ್‌: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ನಾಲ್ಕನೇ ಟಿ 20 ಯಲ್ಲಿ ಇಂಗ್ಲೆಂಡ್‌ನ್ನು 8 ರನ್‌ಗಳಿಂದ ಸೋಲಿಸಿ ಸರಣಿಯನ್ನು 2-2ರಿಂದ ಸಮಬಲಗೊಳಿಸಿದ್ದರಿಂದ ಸರಣಿಯಲ್ಲಿ ಟೀಂ ಇಂಡಿಯಾ ಭರ್ಜರಿ ಪುನರಾಗಮನ ಮಾಡಿದೆ. ಎರಡನೇ ಟಿ 20 ಯಲ್ಲಿ ಇಶಾನ್ ಕಿಶನ್ ಅವರೊಂದಿಗೆ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ಸೂರ್ಯಕುಮಾರ್ ಯಾದವ್ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಸಿಗಲಿಲ್ಲ. ಆದರೆ ಗುರುವಾರ ಅವರು ಅದ್ಭುತ ಪ್ರದರ್ಶನದಿಂದಾಗಿ ಟೀಂ ಇಂಡಿಯಾ ಭರ್ಜರಿ ಜಯಗಳಿಸಿದೆ.

ಅಬ್ಬರದ ಬ್ಯಾಟಿಂಗ್​ ಮಾಡಿದ ಸೂರ್ಯ..
ವನ್ಡೌನ್ನಲ್ಲಿ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್, ತಾವಾಡಿದ ಮೊದಲ ಬಾಲ್ ಅನ್ನೇ ಸಿಕ್ಸರ್ಗಟ್ಟಿದ್ರು. ಅಷ್ಟೇ ಅಲ್ಲ.. ಇಂಗ್ಲೆಂಡ್ ವಿರುದ್ಧ ಅಬ್ಬರದ ಬ್ಯಾಟಿಂಗ್ ಮಾಡಿದ ಸೂರ್ಯಕುಮಾರ್, ಮೋದಿ ಮೈದಾನದಲ್ಲಿ ರನ್ ಮಳೆ ಹರಿಸಿದ್ರು. 31 ಬಾಲ್ನಲ್ಲಿ 6 ಬೌಂಡರಿ 3 ಸಿಕ್ಸರ್ ಸಿಡಿಸಿದ ಸೂರ್ಯಕುಮಾರ್ 57 ರನ್ಗಳಿಸಿದ್ರು. ಟೀಮ್ ಇಂಡಿಯಾವನ್ನು ರಕ್ಷಿಸುವ ಕೆಲಸವನ್ನು ಸೂರ್ಯಕುಮಾರ್ ಯಾದವ್ ಮಾಡಿದರು. ಯಾದವ್ ರನ್ ಕೊಡುಗೆಯೊಂದಿಗೇ ಭಾರತ ಉತ್ತಮ ಗುರಿ (185 ರನ್) ನೀಡಲು ಕಾರಣರಾದರು.

ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ 3ನೇ ಅಂಪೈರ್.
ಟೀಂ ಇಂಡಿಯಾ ಇನ್ನಿಂಗ್ಸ್‌ನ 13.2ನೇ ಓವರ್‌ನಲ್ಲಿ ಸ್ಯಾಮ್ ಕರನ್ ಎಸೆದ ಎಸೆತವನ್ನು, ಯಾದವ್ ಸಿಕ್ಸರ್​ ಬಾರಿಸಲು ಯತ್ನಿಸಿದರು. ಆದರೆ ಯಾದವ್​ ಬ್ಯಾಟ್​ಗೆ ತಾಗಿ ಚಿಮ್ಮಿದ ಚೆಂಡನ್ನು ಡೇವಿಡ್ ಮಲಾನ್ ಡೈವ್ ಮಾಡಿ ಕ್ಯಾಚ್ ಮಾಡಿದರು. ಆದರೆ ಮಲಾನ್ ಹಿಡಿದ ಕ್ಯಾಚ್ ಅನುಮಾನಾಸ್ಪದವಾಗಿತ್ತು. ಅಂಪೈರ್​ ರಿವ್ಯೂವ್​ನಲ್ಲಿ ಚೆಂಡು ನೆಲಕ್ಕೆ ತಾಗಿದಂತೆ ಕಾಣಿಸುತ್ತಿತ್ತು. ಇದನ್ನು ಪರಿಶೀಲಿಸಿದ ಥರ್ಡ್ ಅಂಪೈರ್ ಕೂಡ ಅದನ್ನು ಔಟ್ ಎಂದು ಅಂತಿಮವಾಗಿ ತೀರ್ಪು ನೀಡಿದರು. ಇದು ವಿವಾದಕ್ಕೆ ಕಾರಣವಾಗಿದೆ.

ಕಿಡಿಕಾರಿದ ಮಾಜಿ ಕ್ರಿಕೆಟಿಗರು..
ಸೂರ್ಯಕುಮಾರ್ ಯಾದವ್ ಔಟ್ ತೀರ್ಪು ನಿಜಕ್ಕೂ ವಿವಾದಾತ್ಮಕವಾಗಿದೆ. ಯಾಕೆಂದರೆ ಚೆಂಡು ನೆಲಕ್ಕೆ ತಾಗಿದಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಡಿಆರ್‌ಎಸ್‌ನಲ್ಲೂ ಇದನ್ನು ಸುಲಭವಾಗಿ ಔಟ್ ಎಂದು ಹೇಳುವಂತಿರಲಿಲ್ಲ. ಆದರೆ ಅಂತಿಮವಾಗಿ ಫೀಲ್ಡ್​ ಅಂಪೈರ್​ ತೀರ್ಮಾನವನ್ನ ಗಣನೆಗೆ ತೆಗೆದುಕೊಂಡ 3ನೇ ಅಂಪೈರ್​ ಸಾಫ್ಟ್‌ ಸಿಗ್ನಲ್ ಆಧಾರದ ಮೇಲೆ ಔಟ್ ಎಂದು ತೀರ್ಪು ನೀಡಿದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಟ್ವೀಟ್‌ಗಳು ಹರಿದಾಡುತ್ತಿವೆ. ವೀರೇಂದ್ರ ಸೆಹ್ವಾಗ್ ಸೇರಿದಂತೆ ಅನೇಕರು ಈ ತೀರ್ಪಿನ ಬಗ್ಗೆ ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

ಸಾಫ್ಟ್ ಸಿಗ್ನಲ್ ನಿಯಮ ಬದಲಾಗಬೇಕು..
ಸೋಶಿಯಲ್ ಮೀಡಿಯಾದಲ್ಲಿ ಮೂರನೇ ಅಂಪೈರ್ ನಿರ್ಧಾರದ ವಿರುದ್ಧ ಕಾಮೆಂಟ್ಗಳ ಪ್ರವಾಹ ಉಂಟಾಗಿದೆ. ಹಾಲಿ ಮತ್ತು ಮಾಜಿ ಕ್ರಿಕೆಟಿಗರು ಕೂಡ ಈ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ವೀರೇಂದ್ರ ಸೆಹ್ವಾಗ್ ಕೂಡ ಕಣ್ಣುಮುಚ್ಚಿದ ಮಗುವಿನ ಚಿತ್ರವನ್ನು ಟ್ವೀಟ್ ಮಾಡಿದ್ಕದಾರೆ. ತೀರ್ಪು ನೀಡುವಾಗ ಮೂರನೇ ಅಂಪೈರ್​ ಈ ಮಗುವಿನ ರೀತಿ ಕಣ್ಣು ಮುಚ್ಚಿಕೊಂಡು ತೀರ್ಪು ನೀಡಿದ್ದಾರೆ ಎಂಬುದು ಸೆಹ್ವಾಗ್​ ಅವರ ಟ್ವಿಟ್​ನ ಉದ್ದೇಶವಾಗಿದೆ. ಹಾಗೆಯೇ ಫೀಲ್ಡ್​ ಅಂಪೈರ್​ಗಳ ಸಾಫ್ಟ್​ ಸಿಗ್ನಲ್​ ನಿಯಮ ಏಕೆ ಎಂದು ವಾಸಿಮ್ ಜಾಫರ್ ಐಸಿಸಿಯನ್ನು ಪ್ರಶ್ನೆ ಮಾಡಿದ್ದಾರೆ. ಅನೇಕ ಕ್ರಿಕೆಟಿಗರು ಆನ್-ಫೀಲ್ಡ್ ಅಂಪೈರ್‌ಗಳ ಸಾಫ್ಟ್ ಸಿಗ್ನಲ್ ನಿರ್ಧಾರವನ್ನು ಬದಲಾಯಿಸಬೇಕೆಂದು ಒತ್ತಾಯಿಸಿದ್ದಾರೆ.

ಸಾಫ್ಟ್ ಸಿಗ್ನಲ್ ನಿಯಮ ಎಂದರೇನು?
ಅಂಪೈರ್ ತಮ್ಮ ನಿರ್ಧಾರದ ಬಗ್ಗೆ ಖಚಿತವಾಗಿರದಿದ್ದರೆ, ಅವರು ಮೂರನೇ ಅಂಪೈರ್​ಗೆ ನಿರ್ಧಾರ ತೆಗೆದುಕೊಳ್ಳುವಂತೆ ಕೇಳುವುದಕ್ಕೂ ಮೊದಲು ತಮ್ಮ ಸಾಫ್ಟ್ ಸಿಗ್ನಲ್ ನಿರ್ಧಾರವನ್ನು ನೀಡುತ್ತಾರೆ. ಈ ನಿರ್ಧಾರ ಔಟ್​ ಅಥವಾ ನಾಟ್​ಔಟ್​ ಕೂಡ ಆಗಿರಬಹುದು. ಮೂರನೇ ಅಂಪೈರ್ ಸಹ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ, ಅಂತಹ ಪರಿಸ್ಥಿತಿಯಲ್ಲಿ ಆನ್-ಫೀಲ್ಡ್ ಅಂಪೈರ್ನ ಸಾಫ್ಟ್ ಸಿಗ್ನಲ್​ ಅನ್ನು ಮೂರನೇ ಅಂಪೈರ್ ಗಣನೆಗೆ ತೆಗೆದುಕೊಳ್ಳುತ್ತಾರೆ. ಆನ್-ಫೀಲ್ಡ್ ಅಂಪೈರ್​ ನೀಡಿದ ಸಾಫ್ಟ್ ಸಿಗ್ನಲ್ ಆಧಾರದ ಮೇಲೆ 3ನೇ ಅಂಪೈರ್​ ತಮ್ಮ ನಿರ್ಧಾರವನ್ನು ಪ್ರಕಟಿಸುತ್ತಾರೆ.

ಇದನ್ನೂ ಓದಿ: India vs England: ಮೊದಲ ಪಂದ್ಯದಲ್ಲೇ ಬೆಳಗಿದ ಸೂರ್ಯ! ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದ ಯಾದವ್​ ಕೊಹ್ಲಿ ಬಗ್ಗೆ ಹೇಳಿದ್ದೇನು?

Published On - 11:43 am, Fri, 19 March 21