Virat Kohli: ಇದು ನಮ್ಮ ಕ್ರಿಕೆಟ್​ ಧರ್ಮ! ಆಸಿಸ್​ ನಾಡಲ್ಲಿ ಜನಾಂಗೀಯ ನಿಂದನೆ, ಇಲ್ಲಿ.. ನಮ್ಮನ್ನಾಳಿದ ಬ್ರಿಟಿಷ್​ ಕ್ರಿಕೆಟಿಗನ ಕಾಲಿಡಿದ ಕೊಹ್ಲಿ!

|

Updated on: Feb 06, 2021 | 2:51 PM

India vs England: Virat Kohli Sportsmanship ಆಟದ ವೇಳೆ ಇಂಜುರಿಯಿಂದ ಬಳಲಿದ ರೂಟ್​ ನೆರವಿಗೆ ಬಂದ ಟೀಂ ಇಂಡಿಯಾ ನಾಯಕ ಕೊಹ್ಲಿಗೆ ಮೊದಲ ದಿನದಾಟದ ಬಳಿಕ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್​ ಸಹ ಧನ್ಯವಾದ ಅರ್ಪಿಸಿದರು. ​

Virat Kohli: ಇದು ನಮ್ಮ ಕ್ರಿಕೆಟ್​ ಧರ್ಮ! ಆಸಿಸ್​ ನಾಡಲ್ಲಿ ಜನಾಂಗೀಯ ನಿಂದನೆ, ಇಲ್ಲಿ.. ನಮ್ಮನ್ನಾಳಿದ ಬ್ರಿಟಿಷ್​ ಕ್ರಿಕೆಟಿಗನ ಕಾಲಿಡಿದ ಕೊಹ್ಲಿ!
ಗಾಯಗೊಂಡ ರೂಟ್​ ನೆರವಿಗೆ ಬಂದ ಕೊಹ್ಲಿ
Follow us on

ಚೆನ್ನೈ: ಛೆಪಾಕ್​ನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಡಿಯಾ-ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಕೊಹ್ಲಿಯ ಕ್ರೀಡಾ ಸ್ಫೂರ್ತಿಯನ್ನು ಇಡೀ ಜಗತ್ತೇ ಕೊಂಡಾಡಿದೆ. (Virat Kohli Sportsmanship) . 100ನೇ ಟೆಸ್ಟ್​ ಪಂದ್ಯ ಆಡುತ್ತಿರುವ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಮೊದಲನೇ ದಿನದಾಟದಲ್ಲಿ 87 ನೇ ಓವರ್​ ಮಾಡಲು ಬಂದ ಅಶ್ವಿನ್​ ಎಸೆತವನ್ನು ಸ್ವೀಪ್​ ಮಾಡುವ ಮೂಲಕ ಸಿಕ್ಸರ್​ ಬಾರಿಸಿದರು. ಈ ಯತ್ನದಲ್ಲಿ ಸ್ನಾಯು ಸೆಳೆತವು ರೂಟ್​ ಕಾಲು ಹಿಡಿಯಿತು. ತೀವ್ರ ನೋವು ಅನುಭಿಸಿದ ನಾಯಕ ಜೋ ರೂಟ್ ಕೆಳಗೆ ಬಿದ್ದು ಒದ್ದಾಡತೊಡಗಿದರು. ಕೂಡಲೇ ಅವರ ಬಳಿ ಜಿಗಿದು ಸಾಗಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೀದಾ ರೂಟ್​ ಕಾಲು ಹಿಡಿದು, ಉಪಚರಿಸತೊಡಗಿದರು. ಕೊಹ್ಲಿಯ ಈ ಕ್ರೀಡಾಸ್ಫೂರ್ತಿಯನ್ನು ಕಂಡ ಕ್ರಿಕೆಟ್​ ಅಭಿಮಾನಿಗಳು, ಕೊಹ್ಲಿಯನ್ನು ಕೊಂಡಾಡಿದ್ದಾರೆ.

ಆಟದ ವೇಳೆ ಇಂಜುರಿಯಿಂದ ಬಳಲಿದ ರೂಟ್​ ನೆರವಿಗೆ ಬಂದ ಟೀಂ ಇಂಡಿಯಾ ನಾಯಕ ಕೊಹ್ಲಿಗೆ ಮೊದಲ ದಿನದಾಟದ ಬಳಿಕ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್​ ಸಹ ಧನ್ಯವಾದವನ್ನೂ ಅರ್ಪಿಸಿದ್ದಾರೆ.

ಕಾಂಗರೂಗಳ​ ನಾಡಿನಲ್ಲಿ ಜನಾಂಗೀಯ ನಿಂದನೆ ಕಹಿ ತಿಂದಿದ್ದರು..
ಇತ್ತೀಚಿನ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾ ಆಟಗಾರರು ಸಾಕಷ್ಟು ಬಾರಿ ಜನಾಂಗೀಯ ನಿಂದನೆಗೆ ಒಳಗಾದರು. ನಿಂದನೆಯ Sledging ಕಹಿ ಉಂಡಿದ್ದರು.  ಟೀಂ ಇಂಡಿಯಾ ವೇಗಿಗಳಾದ ಬುಮ್ರಾ ಹಾಗೂ ಸಿರಾಜ್​ನನ್ನು ಅಲ್ಲಿನ ಪೇಕ್ಷಕರು ಇನ್ನಿಲ್ಲದಂತೆ ನಿಂದಿಸಿದರು. ತಮ್ಮ ತಂದೆಯ ಅಗಲಿಕೆಯ ನೋವಿನಲ್ಲಿರುವ ಸಿರಾಜ್​ರನ್ನು ಬಿಡದ ಅಲ್ಲಿನ ಕುಮತಿಯ ಪ್ರೇಕ್ಷಕರು, ಸಿರಾಜ್​ ಮನಸ್ಸಿಗೆ ಭಾರಿ ನೋವನ್ನುಂಟು ಮಾಡಿದರು. ಇದರಿಂದ ನೊಂದ ಸಿರಾಜ್​ ಈ ಘಟನೆಯನ್ನು ಅಂಪೈರ್​ ಗಮನಕ್ಕೆ ತಂದು, ನಿಂದಿಸಿದವರಿಗೆ ತಕ್ಕ ಶಾಸ್ತಿ ಮಾಡಿಸಿದರು ಅನ್ನಿ. ಆದರೆ ಕ್ರಿಕೆಟ್ ಅನ್ನೇ​ ತಮ್ಮ ಧರ್ಮವೆಂದು ಅನುಸರಿಸುವ ಭಾರತದಲ್ಲಿ ಇವುಗಳಿಗೆಲ್ಲಾ ಅವಕಾಶವಿಲ್ಲ. ಶತ್ರುವನ್ನು ಸಹ ಆತ್ಮೀಯತೆಯಿಂದ ಕಾಣುವ ಹೃದಯ ವೈಶಾಲ್ಯತೆಯನ್ನು ಭಾರತೀಯರು ಹುಟ್ಟಿನಿಂದಲ್ಲೇ ಕಲಿತಿರುತ್ತಾರೆ ಎಂಬುದಕ್ಕೆ ಕೊಹ್ಲಿಯ ಈ ಜೆಸ್ಚರ್​ (Gesture) ಸಾಕ್ಷಿಯಾಗಿದೆ.


ನಮ್ಮನ್ನಾಳಿದ ದೇಶದ ಕ್ರಿಕೆಟಿಗನ ಕಾಲಿಡಿದ ಕೊಹ್ಲಿ..
ನೂರಾರು ವರ್ಷ ಭಾರತವನ್ನು ಆಳಿ, ಇನ್ನಿಲ್ಲದಂತೆ ದೇಶವನ್ನು ಕಾಡಿದ್ದ ಬ್ರಿಟೀಷರ ನಾಡಿನಿಂದ ಈ ಕ್ರಿಕೆಟ್​ ತಂಡ ಭಾರತಕ್ಕೆ ಆಗಮಿಸಿದೆ. ಆದರೆ ಅದೆಲ್ಲವನ್ನು ಮನಸ್ಸಿಗೆ ಹಚ್ಚಿಕೊಳ್ಳದೆ, ಅಥವಾ ತಾಜಾ ಆಗಿ ಆಸ್ಟ್ರೇಲಿಯಾ ನೆಲದಲ್ಲಿ Sledging ಕಹಿ ಉಂಡಿದ್ದರೂ ಅದನ್ನೆಲ್ಲ ಪರಿಗಣಿಸದೆ.. ಖುದ್ದು ಭಾರತೀಯ ತಂಡದ ನಾಯಕನೇ ಇತರರಿಗೆ ಮಾದರಿಯಾಗುವಂತೆ, ಕಷ್ಟದಲ್ಲಿದ್ದ ಆಂಗ್ಲ ನಾಡಿನ ಆಟಗಾರನಿಗೆ ನೆರವಾಗಿದ್ದಾರೆ. ಇಂತಹ ಮಾನವೀಯ ಮೌಲ್ಯಗಳಿಂದಲೇ ಭಾರತವನ್ನು ಇಡೀ ವಿಶ್ವ ಮೆಚ್ಚಿರುವುದು.. ಅಲ್ವಾ!


ಡು ಪ್ಲೆಸಿಸ್​ ಕಾಲು ಹಿಡಿದಿದ್ದ ಧೋನಿ..
2015 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮುಂಬೈನಲ್ಲಿ ನಡೆದಿದ್ದ ಪಂದ್ಯದಲ್ಲಿ ಧೋನಿ ಸಹ ಇಂತಹುದೆ ಕೆಲಸ ಮಾಡಿದ್ದರು. ಅಂದು ಶತಕ ಸಿಡಿಸಿ ಅಬ್ಬರಿಸುತ್ತಿದ್ದ ಡು ಪ್ಲೆಸಿಸ್​, ಅಕ್ಸರ್​ ಪಟೇಲ್​ ಎಸೆತವನ್ನು ಸಿಕ್ಸರ್​ಗೆ ಅಟ್ಟುವ ತವಕದಲ್ಲಿ ಇಂಜುರಿಗೆ ಒಳಗಾದರು. ಕೂಡಲೇ ಸಹಾಯಕ್ಕೆ ಆಗಮಿಸಿದ ಧೋನಿ, ಡು ಪ್ಲೆಸಿಸ್​ಗೆ ಪ್ರಥಮ ಚಿಕಿತ್ಸೆ ನೀಡಿ ಸುದ್ದಿಯಾಗಿದ್ದರು.