India vs England: ರೋಹಿತ್​ ಇಲ್ಲದ ಕ್ರಿಕೆಟ್​ ಪಂದ್ಯವನ್ನು ವೀಕ್ಷಿಸುವುದಕ್ಕಿಂತ ಟಿವಿ ಆಫ್​ ಮಾಡುವುದೇ ಒಳಿತು: ವಿರೇಂದ್ರ ಸೆಹ್ವಾಗ್

|

Updated on: Mar 13, 2021 | 2:50 PM

india vs england: ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಯಲ್ಲಿ ಆಡುವ ಇಲೆವೆನ್‌ನಲ್ಲಿ ರೋಹಿತ್ ಶರ್ಮಾ ಅವರನ್ನು ಆಡಿಸದಿರುವುದಕ್ಕೆ ಅಸಮಾಧಾನಗೊಂಡಿರುವ ಸೆಹ್ವಾಗ್​ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

India vs England: ರೋಹಿತ್​ ಇಲ್ಲದ ಕ್ರಿಕೆಟ್​ ಪಂದ್ಯವನ್ನು ವೀಕ್ಷಿಸುವುದಕ್ಕಿಂತ ಟಿವಿ ಆಫ್​ ಮಾಡುವುದೇ ಒಳಿತು: ವಿರೇಂದ್ರ ಸೆಹ್ವಾಗ್
ರೋಹಿತ್ ಶರ್ಮಾ
Follow us on

ಅಹಮದಬಾದ್​: ರೋಹಿತ್ ಶರ್ಮಾ.. ಕ್ರಿಕೆಟ್‌ ಜಗತ್ತಿನ ‘ಹಿಟ್‌ಮ್ಯಾನ್’. ರೋಹಿತ್​ ಮೈದಾನದಲ್ಲಿ ಅಬ್ಬರಿಸಲು ಶುರುಮಾಡಿದರೆ ಎದುರಾಳಿ ತಂಡದ ಬೌಲರ್​ಗಳಿಗೆ ನಡುಕ ಆರಂಭವಾಗುವದಂತು ಸತ್ಯ. ಬರಿ ಬೌಂಡರಿ, ಸಿಕ್ಸರ್​ಗಳಿಂದಲೇ ಎದುರಾಳಿ ತಂಡದ ಆಟಗಾರರನ್ನು ಹೈರಾಣಾಗಿಸುವ ರೋಹಿತ್​ ತಮ್ಮ ಬ್ಯಾಟಿಂಗ್​ನಿಂದಲೇ ಅರ್ಧ ಪಂದ್ಯವನ್ನು ಗೆಲ್ಲಿಸಿಬಿಟ್ಟಿರುತ್ತಾರೆ. ಆದರೆ ಇಂತಹ ಸ್ಟೋಟಕ ಆಟಗಾರನನ್ನು ಟೀಂ ಇಂಡಿಯಾ ನಿನ್ನೆಯ ಪಂದ್ಯದಲ್ಲಿ ಆಡಿಸದೆ ತಪ್ಪು ಮಾಡಿತಾ ಎಂಬ ಪ್ರಶ್ನೆಗಳು ಈಗ ಕ್ರಿಕೆಟ್​ ಪಂಡಿತರಲ್ಲಿ ಉದ್ಭವಿಸಿದೆ. ಎಂತಹ ಕಷ್ಟದ ಸನ್ನಿವೇಶದಲ್ಲೂ ಮೈದಾನದಲ್ಲಿ ನಿಂತು ಬೃಹತ್​ ಇನ್ನಿಂಗ್ಸ್​ ಕಟ್ಟುವ ತಾಕತ್ತಿರುವ ರೋಹಿತ್​ ಇಲ್ಲದ ನಿನ್ನೆಯ ಪಂದ್ಯ ಬರಿ ಸಪ್ಪೆಯಾಗಿ ಕಾಣಿಸುತ್ತಿತ್ತು. ಅಲ್ಲದೆ ಆರಂಭಿಕರಾಗಿ ಬಂದ ಟೀಂ ಇಂಡಿಯಾ ಆಟಗಾರರು ಇಂಗ್ಲೆಂಡ್​ ಎದುರು ರನ್​ಗಳಿಸಲು ಪರದಾಡಿ ಕೇವಲ ಒಂದಂಕಿಗೆ ವಿಕೆಟ್​ ಒಪ್ಪಿಸುವಾಗ, ಟೀಂ ಇಂಡಿಯಾ ಅಭಿಮಾನಿಗಳಿಗೆ ರೋಹಿತ್​ ಅಲಭ್ಯದಿಂದಾದ ಅನಾಹುತ ಎದ್ದು ಕಾಣುತ್ತಿತ್ತು.

ಹೌದು, ರೋಹಿತ್ ಶರ್ಮಾ ಕ್ರಿಕೆಟ್ ಪ್ರೇಮಿಗಳ ಆರಾಧ್ಯ ದೈವ. ರೋಹಿತ್​ ಇಲ್ಲದ ಕ್ರಿಕೆಟನ್ನು ಊಹಿಸಲು ಸಾಧ್ಯವಿಲ್ಲ. ರೋಹಿತ್​ ಕೇವಲ ಕ್ರಿಕೆಟ್​ ಅಭಿಮಾನಿಗಳಿಗೆ ಮಾತ್ರ ಇಷ್ಟದ ಆಟಗಾರನಾಗಿಲ್ಲ. ಬದಲಿಗೆ ಅದೆಷ್ಟೋ ಹೆಸರಾಂತ ಕ್ರಿಕೆಟ್​ ಆಟಗಾರರಿಗೆ ರೋಹಿತ್​ ಒಬ್ಬ ನೆಚ್ಚಿನ ಆಟಗಾರನ್ನಾಗಿದ್ದಾರೆ. ಅಂತಹ ಅಭಿಮಾನಿಗಳಲ್ಲಿ ಟೀಂ ಇಂಡಿಯಾದ ಮಾಜಿ ಸ್ಪೋಟಕ ಆಟಗಾರ ವೀರೇಂದ್ರ ಸೆಹ್ವಾಗ್ ಸಹ ಒಬ್ಬರಾಗಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಯಲ್ಲಿ ಆಡುವ ಇಲೆವೆನ್‌ನಲ್ಲಿ ರೋಹಿತ್ ಶರ್ಮಾ ಅವರನ್ನು ಆಡಿಸದಿರುವುದಕ್ಕೆ ಅಸಮಾಧಾನಗೊಂಡಿರುವ ಸೆಹ್ವಾಗ್​ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ರೋಹಿತ್​ನನ್ನ ನೋಡುವುದಕ್ಕಾಗಿಯೇ ಪ್ರೇಕ್ಷಕರು ಬರುತ್ತಾರೆ
ತನ್ನ ಯುಗದಲ್ಲಿ ಎದುರಾಳಿ ತಂಡದ ಆಟಗಾರರನ್ನ ಇನ್ನಿಲ್ಲದಂತೆ ಕಾಡುತ್ತಿದ್ದ ಭಾರತದ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್,​ ರೋಹಿತ್​ ಅಲಭ್ಯತೆಯ ಬಗ್ಗೆ ತೀರ ಅಸಮಾದಾನಗೊಂಡಿದ್ದಾರೆ. ಈ ಬಗ್ಗೆ ಮಾತಾನಾಡಿರುವ ವೀರೂ, ರೋಹಿತ್​ನ ಆಟವನ್ನು ನೋಡುವುದಕ್ಕಾಗಿಯೇ ಜನರು ಕ್ರಿಕೆಟ್ ಕ್ರೀಡಾಂಗಣಕ್ಕೆ ಬರುತ್ತಾರೆ ಅಥವಾ ಟಿವಿಯ ಮುಂದೆ ಕುಳಿತುಕೊಳ್ಳುತ್ತಾರೆ. ಆದರೆ ಇಂದಿನ ಆಡುವ ಇಲೆವೆನ್‌ನಲ್ಲಿ ರೋಹಿತ್​ ಹೆಸರಿಲ್ಲ. ಆದ್ದರಿಂದ ಪಂದ್ಯವನ್ನು ನೋಡುವುದರಲ್ಲಿ ಯಾವುದೇ ಹುರುಳಿಲ್ಲ ಎಂದು ಸೆಹ್ವಾಗ್​ ಹೇಳಿದ್ದಾರೆ.

ರೋಹಿತ್ ಇಲ್ಲದಿದ್ದರೆ ಟಿವಿ ಆಫ್ ಮಾಡಿ
ನಾನು ಕೂಡ ರೋಹಿತ್ ಶರ್ಮಾ ಅವರ ದೊಡ್ಡ ಅಭಿಮಾನಿ ಎಂದು ಹೇಳಿರುವ ಸೆಹ್ವಾಗ್, ನಾನು ರೋಹಿತ್​ನನ್ನು ಆಡುವ ಇಲೆವೆನ್‌ನಲ್ಲಿ ನೋಡಲು ಬಯಸುತ್ತೇನೆ. ಅವನು ಉತ್ತಮವಾಗಿ ಆಡುವುದನ್ನು ನೋಡಲು ನೋಡಬಯಸುತ್ತೇನೆ. ಆದರೆ ರೋಹಿತ್​ ನಮ್ಮ ತಂಡದ ಪರವಾಗಿ ಆಡದಿದ್ದರೆ, ನಾನು ಟಿವಿಯನ್ನು ಆಫ್ ಮಾಡುತ್ತೇನೆ. ರೋಹಿತ್​ ಇಲ್ಲದ ಪಂದ್ಯವನ್ನು ಮತ್ತೆ ನೋಡುವುದರಲ್ಲಿ ನನಗೆ ಯಾವುದೇ ಆಸಕ್ತಿ ಇಲ್ಲ ಎಂದು ಸೆಹ್ವಾಗ್​ ಆಯ್ಕೆಗಾರರ ವಿರುದ್ಧ ಕಿಡಿಕಾರಿದ್ದಾರೆ.

ಮುಂದಿನ ಪಂದ್ಯಕ್ಕೂ ರೋಹಿತ್​ ಇಲ್ಲ..
ಪಂದ್ಯ ಆರಂಭಕ್ಕೂ ಒಂದು ದಿನ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಭಾರತದ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಟಿ20 ಯಲ್ಲಿ ರಾಹುಲ್​ ಜೊತೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎಂದು ಹೇಳಿದರು. ಆದರೆ, ಪಂದ್ಯದ ದಿನದಂದು ಅವರು ಆಡುವ ಹನ್ನೊಂದರಿಂದ ಹೊರಗುಳಿದಿದ್ದರು. ಪಂದ್ಯದ ಆರಂಭಕ್ಕೂ ಮೊದಲು ಇದರ ಬಗ್ಗೆ ಮಾತಾನಾಡಿದ ಕೊಹ್ಲಿ, ರೋಹಿತ್​ ಮೊದಲ ಎರಡು ಪಂದ್ಯಗಳಿಂದ ಹೊರಗುಳಿಯುತ್ತಾರೆ ಎಂದು ಹೇಳಿದರು. ಕಳೆದ ವರ್ಷ ಫೆಬ್ರವರಿಯಲ್ಲಿ ತಮ್ಮ ಕೊನೆಯ ಟಿ20 ಆಡಿದ ರೋಹಿತ್ ಶರ್ಮಾ ಅವರನ್ನು ಕಣ್ತುಂಬಿಕೊಳ್ಳಲು ಇನ್ನೂ ಎರಡು ಪಂದ್ಯದವರೆಗೆ ಕಾಯಬೇಕಿದೆ.

ಇದನ್ನೂ ಓದಿ: ಎಚ್ಚರವಹಿಸದಿದ್ದರೆ ನೀವು ಕೊಹ್ಲಿಯಂತ್ತಾಗುತ್ತೀರಿ! ಕೊಹ್ಲಿಯ ಡಕ್​ ಔಟ್, ಉತ್ತರಾಖಂಡ್​ ಪೊಲೀಸ್​ ಅಧಿಕಾರಿ​ಗೆ ಮಾದರಿಯಾಗಿದ್ದೇಗೆ?

Published On - 2:48 pm, Sat, 13 March 21