AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England: ಕನ್ನಡಿಗ ಕೆ.ಎಲ್​ ರಾಹುಲ್​ ಸೂಪರ್‌ಮ್ಯಾನ್ ಫೀಲ್ಡಿಂಗ್​ಗೆ ನೆಟ್ಟಿಗರಿಂದ ಶಹಬ್ಬಾಸ್​ಗಿರಿ.. ವಿಡಿಯೋ ನೋಡಿ!

India vs England: ಅಕ್ಷರ್ ಪಟೇಲ್ ಅವರ ಈ ಓವರ್‌ನ ಮೊದಲ ಎಸೆತವನ್ನು ಜೋಸ್ ಬಟ್ಲರ್ ಲಾಂಗ್ ಆನ್‌ನಲ್ಲಿ ಸಿಕ್ಸರ್ ಬಾರಿಸಲು ಯತ್ನಿಸಿದರು. ಆದರೆ ಅಲ್ಲೇ ಇದ್ದ ಕೆ.ಎಲ್.ರಾಹುಲ್ ಗಾಳಿಯಲ್ಲಿ ಹಾರಿ ಸಿಕ್ಸರ್​ ಲೈನ್​ ಒಳಗೆ ಬೀಳುತ್ತಿದ್ದ ಬಾಲನ್ನು ಹಿಡಿಯಲು ಯತ್ನಿಸಿದರು.

India vs England: ಕನ್ನಡಿಗ ಕೆ.ಎಲ್​ ರಾಹುಲ್​ ಸೂಪರ್‌ಮ್ಯಾನ್ ಫೀಲ್ಡಿಂಗ್​ಗೆ ನೆಟ್ಟಿಗರಿಂದ ಶಹಬ್ಬಾಸ್​ಗಿರಿ.. ವಿಡಿಯೋ ನೋಡಿ!
ಕೆ.ಎಲ್. ರಾಹುಲ್
Follow us
ಪೃಥ್ವಿಶಂಕರ
|

Updated on: Mar 13, 2021 | 5:38 PM

ಅಹಮದಬಾದ್​: ಇಂಗ್ಲೆಂಡ್ ವಿರುದ್ಧದ ಮೊದಲ ಟಿ 20 ಯಲ್ಲಿ ಟೀಮ್ ಇಂಡಿಯಾ ಸೋತಿದೆ. ಈ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಮೇಲೆ ಬಾರಿ ನಿರೀಕ್ಷೆಗಳನ್ನು ಇಡಲಾಗಿತ್ತು. ಆದರೆ ರಾಹುಲ್​ ಯಾವುದೇ ಬಿಗ್​ ಸ್ಕೋರ್ ಗಳಿಸುವಲ್ಲಿ ವಿಫಲರಾದರು. ಅಭಿಮಾನಿಗಳು ಕೂಡ ಈ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ಎಲ್ಲದರ ಹೊರತಾಗಿಯೂ, ಕೆಎಲ್ ರಾಹುಲ್ ಮಾಡಿದ ಆ ಅದ್ಭುತ ಫೀಲ್ಡಿಂಗ್​ ಈಗ ಎಲ್ಲಾ ಕ್ರಿಕೆಟ್​ ಪ್ರೇಮಿಗಳ ಹೃದಯ ಗೆದ್ದಿದೆ. ಅಹಮದಾಬಾದ್ ನೆಲದಲ್ಲಿ ರಾಹುಲ್ ಮಾಡಿದ ಈ ಸಾಧನೆಯಿಂದಾಗಿ, ರಾಹುಲ್​ ಅವರನ್ನು ಅಭಿಮಾನಿಗಳು ಟೀಂ ಇಂಡಿಯಾದ ಸೂಪರ್‌ಮ್ಯಾನ್ ಎಂದು ಕರೆಯಲಾರಂಭಿಸಿದ್ದಾರೆ.

ರಾಹುಲ್ ಅವರ ಕೊಡುಗೆ ಕೇವಲ 1 ರನ್.. ವಾಸ್ತವವಾಗಿ, ಇಂಗ್ಲೆಂಡ್ ವಿರುದ್ಧದ ಮೊದಲ ಟಿ 20 ಯಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್ ಅಷ್ಟು ಉತ್ತಮವಾಗಿರಲಿಲ್ಲ. 20 ಓವರ್‌ಗಳಲ್ಲಿ 8 ವಿಕೆಟ್‌ಗಳನ್ನು ಕಳೆದುಕೊಂಡ ಭಾರತ ಕೇವಲ 124 ರನ್ ಗಳಿಸಿತು. ಇದರಲ್ಲಿ ತಂಡಕ್ಕೆ ಕೆಎಲ್ ರಾಹುಲ್ ಅವರ ಕೊಡುಗೆ ಕೇವಲ 1 ರನ್ ಮಾತ್ರ. ಇದಕ್ಕೆ ಪ್ರತಿಕ್ರಿಯೆಯಾಗಿ, ಇಂಗ್ಲೆಂಡ್ ತಂಡ ಭಾರತ ನಿಗದಿಪಡಿಸಿದ ಗುರಿಯನ್ನು ಕೇವಲ 15.3 ಓವರ್​ಗಳಲ್ಲೇ ತಲುಪಿತು. ಆದರೆ ಅವರ ಇನ್ನಿಂಗ್ಸ್ ಸಮಯದಲ್ಲಿ, ಕೆಎಲ್ ರಾಹುಲ್ ಮಾಡಿದ ಆ ಅದ್ಭುತ ಫೀಲ್ಡಿಂಗ್​ ಎದುರಾಳಿ ತಂಡದ ಆಟಗಾರರ ಹೃದವನ್ನೇ ಗೆದ್ದಿದೆ.

ಮೊದಲ ಟಿ20 ಯಲ್ಲಿ ಸೂಪರ್‌ಮ್ಯಾನ್ ಅದ ಕೆಎಲ್ ರಾಹುಲ್ ಈ ಇಡೀ ಘಟನೆ ನಡೆದಿದ್ದು ಇಂಗ್ಲೆಂಡ್‌ ಇನ್ನಿಂಗ್ಸ್‌ನ 5 ನೇ ಓವರ್‌ನಲ್ಲಿ. ಅಕ್ಷರ್ ಪಟೇಲ್ ಅವರ ಈ ಓವರ್‌ನ ಮೊದಲ ಎಸೆತವನ್ನು ಜೋಸ್ ಬಟ್ಲರ್ ಲಾಂಗ್ ಆನ್‌ನಲ್ಲಿ ಸಿಕ್ಸರ್ ಬಾರಿಸಲು ಯತ್ನಿಸಿದರು. ಆದರೆ ಅಲ್ಲೇ ಇದ್ದ ಕೆ.ಎಲ್.ರಾಹುಲ್ ಗಾಳಿಯಲ್ಲಿ ಹಾರಿ ಸಿಕ್ಸರ್​ ಲೈನ್​ ಒಳಗೆ ಬೀಳುತ್ತಿದ್ದ ಬಾಲನ್ನು ಹಿಡಿಯಲು ಯತ್ನಿಸಿದರು. ಆದರೆ ಬಾಲ್​ ಬಹುತೇಕ ಸಿಕ್ಸರ್‌ ಲೈನ್​ ಕಡೆ ಬೀಳುವಂತಿತ್ತು.

ಇದನ್ನು ಗಮನಿಸಿದ ರಾಹುಲ್​ ಕೂಡಲೇ ಬಾಲನ್ನು ಹಿಡಿದು ಮೈದಾನದೊಳಕ್ಕೆ ಎಸೆಯುತ್ತಾರೆ. ಇನ್ನೊಂದು ಕುತೂಹಲಕಾರಿ ಸಂಗತಿಯೆಂದರೆ, ರಾಹುಲ್​ ಬಾಲನ್ನು ಮೈದಾನಕ್ಕೆ ಎಸೆಯುವ ವೇಳೆ ಅವರಿನ್ನು ನೆಲವನ್ನೇ ಮುಟ್ಟಿರುವುದಿಲ್ಲ. ಇನ್ನೂ ಗಾಳಿಯಲ್ಲಿರುವಾಗಲೇ ರಾಹುಲ್​ ಬಾಲನ್ನು ಹಿಡಿದು, ಮೈದಾನದೊಳಕ್ಕೆ ಎಸೆದು ತಂಡಕ್ಕೆ 5 ರನ್​ ಸೇವ್​ ಮಾಡುತ್ತಾರೆ. ರಾಹುಲ್​ ಅವರ ಈ ಅದ್ಭುತ ಫೀಲ್ಡಿಂಗ್​ ನೋಡಿದ ನಾಯಕ ಕೊಹ್ಲಿ ಚಪಾಳೆ ತಟ್ಟಿ ಅಭಿನಂದಿಸುತ್ತಾರೆ.

ಫೀಲ್ಡಿಂಗ್ ಓಕೆ, ಬ್ಯಾಟಿಂಗ್​ ಬಲವಾಗಬೇಕಿದೆ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿರುವ ಕೆ.ಎಲ್.ರಾಹುಲ್ ಟಿ 20 ಯಲ್ಲಿ ಭಾರತದ ಅತಿ ಹೆಚ್ಚು ಸರಾಸರಿ ಹೊಂದಿರುವ ಬ್ಯಾಟ್ಸ್‌ಮನ್ ಆಗಿದ್ದಾರೆ. ಮೊದಲ ಟಿ20 ಯಲ್ಲಿ ಅವರ ಬ್ಯಾಟ್​ನಿಂದ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. ಆದರೆ, ಎರಡನೇ ಟಿ20 ಯಲ್ಲಿ ಟೀಮ್ ಇಂಡಿಯಾ ಅವರ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಹೀಗಾಗಿ ರಾಹುಲ್​ ಅಬ್ಬರಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಇದನ್ನೂ ಓದಿ: India vs England: ರೋಹಿತ್​ ಇಲ್ಲದ ಕ್ರಿಕೆಟ್​ ಪಂದ್ಯವನ್ನು ವೀಕ್ಷಿಸುವುದಕ್ಕಿಂತ ಟಿವಿ ಆಫ್​ ಮಾಡುವುದೇ ಒಳಿತು: ವಿರೇಂದ್ರ ಸೆಹ್ವಾಗ್

ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ
ಆದಂಪುರ ಏರ್​ಬೇಸ್​​ ಭೇಟಿ ಬಳಿಕ ಮೋದಿ ಮಾತು: ಇಲ್ಲಿದೆ ನೇರಪ್ರಸಾರ
ಆದಂಪುರ ಏರ್​ಬೇಸ್​​ ಭೇಟಿ ಬಳಿಕ ಮೋದಿ ಮಾತು: ಇಲ್ಲಿದೆ ನೇರಪ್ರಸಾರ