ಖ್ಯಾತ ಮಹಿಳಾ ಓಟಗಾರ್ತಿ ಸೇರಿದಂತೆ ಭಾರತದ ಇಬ್ಬರು ಅಥ್ಲೀಟ್ಗಳು ಡೋಪಿಂಗ್ ಟೆಸ್ಟ್ನಲ್ಲಿ ವಿಫಲ
ಅವರಲ್ಲಿ ಒಬ್ಬರು ಪ್ರಖ್ಯಾತ 400 ಮೀಟರ್ ಓಟಗಾರ್ತಿಯಾಗಿದ್ದು ಹಲವಾರು 4X400 ರೀಲೇ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಅವರು ಟೋಕಿಯೋ ಒಲಂಪಿಕ್ಸ್ನಲ್ಲಿ ಮಹಿಳಾ ರೀಲೇ ತಂಡದ ಭಾಗವಾಗುವುದು ಖಚಿತವಾಗಿತ್ತು.

ಈ ವರ್ಷ ಟೊಕಿಯೋದಲ್ಲಿ ನಡೆಯಲಿರುವ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲು ರೇಸ್ಲ್ಲಿರುವ ಅಥ್ಲೀಟ್ಗಳ ಪೈಕಿ ಇಬ್ಬರು ಕಳೆದ ತಿಂಗಳು ಪಾಟಿಯಾಲಾದ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್ನಲ್ಲಿ ನಡೆದ ಡೋಪ್ ಟೆಸ್ಟ್ನಲ್ಲಿ ವಿಫಲರಾಗಿದ್ದಾರೆಂದು ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ನಿಗ್ರಹ ಘಟಕದ (ನಾಡಾ) ಪ್ರಧಾನ ಕಾರ್ಯದರ್ಶಿ ನವೀನ್ ಅಗರ್ವಾಲ್ ಶನಿವಾರದಂದು ಬಹಿರಂಗಪಡಿಸಿದರು.
ಅವರಲ್ಲಿ ಒಬ್ಬರು ಪ್ರಖ್ಯಾತ 400 ಮೀಟರ್ ಓಟಗಾರ್ತಿಯಾಗಿದ್ದು ಹಲವಾರು 4X400 ರೀಲೇ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಅವರು ಟೋಕಿಯೋ ಒಲಂಪಿಕ್ಸ್ನಲ್ಲಿ ಮಹಿಳಾ ರೀಲೇ ತಂಡದ ಭಾಗವಾಗುವುದು ಖಚಿತವಾಗಿತ್ತು. ಆದರೆ, ಆಕೆ ಹಾಗೂ ಮತ್ತೊಬ್ಬ ಅಥ್ಲೀಟ್ ಹೆಸರನ್ನು ನಾಡಾ ಆಗಲೀ ಆಥವಾ ಭಾರತದ ಅಥ್ಲೆಟಿಕ್ಸ್ ಒಕ್ಕೂಟವಾಗಲೀ ಬಹಿರಂಗ ಪಡಿಸಿಲ್ಲ.
‘ಡೋಪಿಂಗ್ ಟೆಸ್ಟ್ನಲ್ಲಿ ವಿಫಲರಾಗಿರುವ ಅಥ್ಲೀಟ್ಗಳ ಹೆಸರುಗಳನ್ನು ನಾನು ಹೇಳಲಾರೆ. ಆದರೆ ವಿಷಯವೇನೆಂದರೆ ಪಾಟಿಯಾಲಾದ ಗ್ರ್ಯಾಂಡ್ ಪ್ರಿಕ್ಸ್ನಲ್ಲಿ ನಾವು ನಮೂನೆಗಳನ್ನು (ಸ್ಯಾಂಪಲ್) ಸಂಗ್ರಹಿಸಿದ್ದೆವು. ಅವುಗಳಲ್ಲಿ ಎರಡು ಪಾಸಿಟಿವ್ ಪ್ರಕರಣಗಳು ದೊರೆತಿವೆ. ಇದಕ್ಕಿಂತ ಹೆಚ್ಚಿಗೆ ನಾನೇನೂ ಹೇಳಲಾರೆ,’ ಎಂದು ಪಿಟಿಐ ಸುದ್ದಿಸಂಸ್ಥೆ ಜೊತೆ ಶನಿವಾರ ಮಾತಾಡಿದ ಅಗರ್ವಾಲ್ ಹೇಳಿದರು.
‘ಇದು ಒಲಂಪಿಕ್ ವರ್ಷ ಆಗಿರುವುದರಿಂದ ನಮ್ಮ ಗಮನವೆಲ್ಲ ಪ್ರಮುಖ ಸಂಭಾವ್ಯ ಅಥ್ಲೀಟ್ಗಳ ಮೇಲಿದೆ ಮತ್ತು ಅವರ ಪರೀಕ್ಷಣೆ ಪದೇಪದೆ ನಡೆಯಲಿದೆ. ಸೀನಿಯರ್ ರಾಷ್ಟ್ರೀಯ ಹಂತದ ಕೆಳಗಿರರುವವರಿಗೆ ನಾವು ಈ ವರ್ಷ ಡೋಪಿಂಗ್ ಟೆಸ್ಟ್ಗಳನ್ನು ನಡೆಸುತ್ತಿಲ್ಲ,’ಎಂದು ಅವರು ಹೇಳಿದರು. ಈ ಚರ್ಚೆಯಲ್ಲಿರುವ ಉದ್ದೀಪನ ಮದ್ದು (ಶಕ್ತಿವರ್ಧಕ) ಮಿಥೈಲೆಕ್ಸಾನ್-2-ಅಮೈನ್ ಆಗಿದ್ದು ಇದು ವಿಶ್ವ ಉದ್ದೀಪನ ಮದ್ದು ಸೇವನೆ ನಿಗ್ರಹ ಘಟಕ (ವಾಡಾ) 2021 ರಲ್ಲಿ ಪ್ರಕಟಿಸಿರುವ ನಿಷೇಧಿತ ಮದ್ದುಗಳಲ್ಲಿ ಒಂದಾಗಿದೆ.
ಸದ್ಯದ ಬೆಳವಣಿಗೆ ಪ್ರಕಾರ ಡೋಪಿಂಗ್ ಟೆಸ್ಟ್ನಲ್ಲಿ ವಿಫಲರಾಗಿರುವ ಅಥ್ಲೀಟ್ಗಳನ್ನು ತಾತ್ಕಾಲಿಕವಾಗಿ ಸಸ್ಪೆಂಡ್ ಮಾಡಲಾಗಿದೆಯಾದರೂ ಅವರಿಬ್ಬರಿಗೆ ನಾಡಾದ ಉದ್ದೀಪನ ನಿಗ್ರಹ ಶಿಸ್ತು ಸಮಿತಿಯೆದುರು ತಮ್ಮ ಮುಗ್ಧತೆಯನ್ನು ಸಾಬೀತುಪಡಿಸಲು ಅವಕಾಶ ನೀಡಲಾಗಿದೆ. ಆಥ್ಲೀಟ್ಗಳು ಕೆಲವು ಸಲ ಅರಿವಿಗೆ ಗೊತ್ತಾಗದೆ ಆಕಸ್ಮಿಕವಾಗಿ ನಿಷೇಧಿತ ಪದಾರ್ಥಗಳನ್ನು ಉಪಯೋಗಿಸುವ ಸಾಧ್ಯತೆ ಇರುವುದರಿಂದ ಈ ಅವಕಾಶವನ್ನು ಅವರಿಗೆ ನೀಡಲಾಗಿದೆ.
ಅಥ್ಲೀಟ್ಗಳು ನಿಷೇಧಿತ ಪದಾರ್ಥ ಬಳಸಿದ್ದು ಸಾಬೀತಾದರೆ ಅವರು ಎರಡರಿಂದ 4 ವರ್ಷಗಳ ಕಾಲ ನಿಷೇಧಕ್ಕೊಳಗಾಗಬಹುದು. ಅದರೆ ಅವರು ತಮ್ಮ ಮೇಲೆ ವಿಧಿಸುವ ನಿಷೇಧವನ್ನು ರದ್ದುಪಡಿಸುವಂತೆ ನಾಡಾದ ಉಚ್ಛ ಅಂಗವಾಗಿರುವ ಉದ್ದೀಪನ ಮದ್ದು ನಿಗ್ರಹದ ಅಪೀಲ್ಸ್ ಸಮಿತಿಗೆ ಮನವಿ ಸಲ್ಲಿಸಬಹುದು
ಇದನ್ನೂ ಓದಿ: ಅಂದು ಡ್ರಮ್ಮರ್ ಆಗಿದ್ದ ಉಡುಪಿಯ ಯುವಕ, ಈಗ ಅಥ್ಲೆಟಿಕ್ಸ್ನ ಬಿರುಸಿನ ಓಟಗಾರ!
