Sign In

By signing in or creating an account, you agree with Associated Broadcasting Company's Terms & Conditions and Privacy Policy.

2021ರ ಐಪಿಎಲ್​ನಲ್ಲಿ ತಂಡಗಳ ಜೆರ್ಸಿ ಹೇಗಿರಲಿದೆ ಗೊತ್ತಾ?

ಚೆನ್ನೈ ಸೂಪರ್ ಕಿಂಗ್ಸ್, ಮುಂಬಾ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್​ರೈಸರ್ಸ್ ಹೈದರಾಬಾದ್, ಕೋಲ್ಕತಾ ನೈಟ್ ರೈಡರ್ಸ್, ಪಂಜಾಬ್ ಕಿಂಗ್ಸ್, ದೆಹಲಿ ಕ್ಯಾಪಿಟಲ್ಸ್ ಮತ್ತು ರಾಜಸ್ತಾನ್ ರಾಯಲ್ಸ್ ಜೆರ್ಸಿಗಳು ವಿನೂತನ ಶೈಲಿಯಲ್ಲಿ ಬರಲಿದೆ ಎನ್ನುವುದು ಈ ಬಾರಿಯ ಐಪಿಎಲ್​ನ ವಿಶೇಷ​

2021ರ ಐಪಿಎಲ್​ನಲ್ಲಿ ತಂಡಗಳ ಜೆರ್ಸಿ ಹೇಗಿರಲಿದೆ ಗೊತ್ತಾ?
ಐಪಿಎಲ್ 2021
Follow us
preethi shettigar
|

Updated on:Mar 14, 2021 | 11:28 AM

ನ್ಯೂ ಇಂಡಿಯನ್ ಪ್ರೀಮಿಯರ್ ಲೀಗ್ ಸೀಜನ್ ಎಂದರೆ ಹೊಸ ಪ್ರಾಯೋಜನಕರು ಮತ್ತು ನೂತನ ತಂಡದ ಜೆರ್ಸಿ ಎಂದು ಅರ್ಥ. ಇನ್ನೂ ಈ ವಿಚಾರವಾಗಿ ಕೆಲವರು ತಮ್ಮ ಕಿಟ್​ಗಳ ವಿನ್ಯಾಸವನ್ನು ಬದಲಾಯಿಸಲು ನಿರ್ಧರಿಸಿದ್ದರೆ, ಇನ್ನೂ ಹಲವರು ತಮ್ಮ ಜರ್ಸಿಯಲ್ಲಿನ ಹೊಸ ಶೀರ್ಷಿಕೆಗಾಗಿ ಪ್ರಾಯೋಜಕರನ್ನು ಕರೆತಂದಿದ್ದಾರೆ. ಮತ್ತೊಂದು ಅದ್ಭುತ ಐಪಿಎಲ್​ ಆವೃತ್ತಿಗೆ ಕಾಲಿಡಲು ಇನ್ನೇನು ಒಂದು ತಿಂಗಳು ಇರುವಾಗಲೇ ತಂಡದ ಜೆರ್ಸಿಗಳಲ್ಲಿನ ಬದಲಾವಣೆ ತೀವ್ರ ಕುತೂಹಲ ಕೆರಳಿಸಿದೆ. ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್​ರೈಸರ್ಸ್ ಹೈದರಾಬಾದ್, ಕೋಲ್ಕತ್ತ ನೈಟ್ ರೈಡರ್ಸ್, ಪಂಜಾಬ್ ಕಿಂಗ್ಸ್, ದೆಹಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಜರ್ಸಿಗಳು ವಿನೂತನ ಶೈಲಿಯಲ್ಲಿ ಬರಲಿದೆ ಎನ್ನುವುದು ಮತ್ತೊಂದು ವಿಶೇಷ.

ಐಪಿಎಲ್​ 2021: ಚೆನೈ ಸೂಪರ್ ಕಿಂಗ್ಸ್ (CSK) ಜೆರ್ಸಿ: ಎಪ್ರಿಲ್ 9 ರಿಂದ ಪ್ರಾರಂಭವಾಗಲಿರುವ ಐಪಿಎಲ್ 2021 ಆವೃತ್ತಿಗಾಗಿ ಎಂ.ಎಸ್ ಧೋನಿಯ ಸಿಎಸ್​ಕೆ ತಂಡ ತಮ್ಮ ಹೊಸ ವಿನ್ಯಾಸದ ಜೆರ್ಸಿಯನ್ನು ಬಹಿರಂಗಪಡಿಸಿದೆ. ಸಿಎಸ್​ಕೆ ಜೆರ್ಸಿ ಗಮನಾರ್ಹ ಬದಲಾವಣೆಗಳೊಂದಿಗೆ ಪ್ರೇಕ್ಷಕರ ಮುಂದೆ ಬರಲಿದ್ದು, ವಿಶೇಷವಾಗಿ ಮಿಂತ್ರಾ ಇದರ ಪ್ರಧಾನ ಪ್ರಾಯೋಜಕರಾಗಿದ್ದಾರೆ.

CSK

ಚೆನೈ ಸೂಪರ್ ಕಿಂಗ್ಸ್ ಜೆರ್ಸಿ

ಪಂಜಾಬ್ ಕಿಂಗ್ಸ್ (PBKS) ಜೆರ್ಸಿ : ಕಿಂಗ್ಸ್ ಇಲೆವನ್ ಪಂಜಾಬ್ (KXIP) ಈ ಬಾರಿಯ ಐಪಿಎಲ್​ನಲ್ಲಿ ನೂತನ ಹೆಸರಿನೊಂದಿಗೆ ಬರುತ್ತಿದ್ದು, ಹೊಸ ಶೈಲಿಯ ಲೋಗೊ ಕೂಡ ಇರಲಿದೆ ಎನ್ನುವುದು ವಿಶೇಷ. ಪಂಜಾಬ್​ ಫ್ರ್ಯಾಂಚೈಸ್ 2021ರ ಐಪಿಎಲ್​ಗೆ ಪಂಜಾಬ್​ ಕಿಂಗ್ಸ್ ಆಗಿ ಪ್ರವೇಶಿಸಲಿದೆ ಮತ್ತು ಹೊಸ ಲೋಗೊವನ್ನು ಕೂಡ ಬಿಡುಗಡೆ ಮಾಡಿದೆ.

PBKS

ಪಂಜಾಬ್ ಕಿಂಗ್ಸ್ ಜೆರ್ಸಿ

ರಾಜಸ್ಥಾನ ರಾಯಲ್ಸ್ (RR) ಜರ್ಸಿ: ಆರ್​ಆರ್​ ಇನ್ನೂ ಕೂಡ ತನ್ನ ಜೆರ್ಸಿಯನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಜೈಪುರ ಮೂಲದ ಫ್ರ್ಯಾಂಚೈಸ್ ಪ್ರಸ್ತುತ ಶೀರ್ಷಿಕೆ ಇಲ್ಲದ ಪ್ರಾಯೋಜಕರಾಗಿದ್ದಾರೆ. ಆದರೆ ಲೀಗ್​ ಪ್ರಾರಂಭವಾಗುವ ಮೊದಲು ಹೊಸ ಬ್ರಾಂಡ್​ನೊಂದಿಗೆ ಆರ್​ಆರ್​ ಬರಲಿದೆ ಎಂಬ ನಿರೀಕ್ಷೆ ಇದೆ. ದ್ವಿಚಕ್ರ ವಾಹನ ತಯಾರಕರಾದ ಸ್ಟಡ್ಸ್ ಜೊತೆ ರಾಜಸ್ಥಾನ ರಾಯಲ್ಸ್ ಒಪ್ಪಂದ ಮಾಡಿಕೊಂಡಿದೆ ಎನ್ನುವುದು ವಿಶೇಷವಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಜೆರ್ಸಿ: ಆರ್​ಸಿಬಿ ತಂಡ ತಮ್ಮ ಜೆರ್ಸಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದೆ ಈ ವರ್ಷ ಐಪಿಎಲ್​ನಲ್ಲಿ ಭಾಗವಹಿಸುತ್ತಿದೆ. ವಿರಾಟ್​ ಕೊಹ್ಲಿ ನಾಯಕತ್ವದ ತಂಡ ಕಳೆದ ಬಾರಿ ಐಪಿಎಲ್​ನಲ್ಲಿ ಪ್ಲೇಆಫ್ ಮ್ಯಾಚ್​ ವರೆಗೆ ತಲುಪಿದ್ದರು. ಈ ಕಾರಣದಿಂದಾಗಿ ಈ ಬಾರಿ ಇನ್ನೂ ಉತ್ತಮ ಪ್ರದರ್ಶನ ನೀಡಿ ಐಪಿಎಲ್​ ಗೆಲುವಿನ ಪಟ್ಟವನ್ನು ಮುಡಿಗೇರಿಸಿಕೊಳ್ಳುತ್ತದೆ ಎಂಬ ನಿರೀಕ್ಷೆ ಇದೆ.

RCB

ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೆರ್ಸಿ

ಕೋಲ್ಕತಾ ನೈಟ್ ರೈಡರ್ಸ್ (KKR) ಜೆರ್ಸಿ: ಕೆಕೆಆರ್​ ಕೂಡ ಆರ್​ಸಿಬಿ ಮಾದರಿಯಲ್ಲಿಯೇ ಜೆರ್ಸಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿಲ್ಲ. ಪ್ರಸ್ತುತ ಅವರ ಶೀರ್ಷಿಕೆಯ ಪ್ರಾಯೋಜಕರು ಮೊಬೈಲ್​ ಪ್ರೀಮಿಯರ್​ ಲೀಗ್​ (ಎಮ್​ಪಿಎಲ್​) ಆಗಿದ್ದು, ಚಿನ್ನ ಮತ್ತು ನೇರಳೆ ಬಣ್ಣದ ಜೆರ್ಸಿ ಇರಲಿದೆ.

KKR

ಕೋಲ್ಕತಾ ನೈಟ್ ರೈಡರ್ಸ್ ಜೆರ್ಸಿ

ಸನ್​ರೈಸರ್ಸ್ ಹೈದರಾಬಾದ್ (SRH) ಜೆರ್ಸಿ: ಎಸ್​ಆರ್​ಹೆಚ್ ಕೆಸರಿ ಮತ್ತು ಕಪ್ಪು ಬಣ್ಣದ ಜೆರ್ಸಿ ಹೊಂದಿದ್ದು, ಈ ಜೆರ್ಸಿಯಲ್ಲಿ ಜೆಕೆ ಲಕ್ಷ್ಮಿ ಸಿಮೆಂಟ್​ ಅವರ ಪ್ರಧಾನ ಪ್ರಾಯೋಜಕತ್ವವಿದೆ. ಇದಲ್ಲದೇ ಅವರು ತಮ್ಮ ಕಿಟ್​ನಲ್ಲಿ ಜಿಯೋ, ಕೋಲ್ಗೇಟ್ ಮತ್ತು ವಾಲ್ವೋಲಿನ್​ ಪ್ರಾಯೋಜಕತ್ವವನ್ನು ಹೊಂದಿದ್ದಾರೆ.

SRH

ಸನ್​ರೈಸರ್ಸ್ ಹೈದರಾಬಾದ್ ಜೆರ್ಸಿ

ದೆಹಲಿ ಕ್ಯಾಪಿಟಲ್ಸ್ (DC) ಜೆರ್ಸಿ: ​ದೆಹಲಿ ಕ್ಯಾಪಿಟಲ್ಸ್​ ತಮ್ಮ ನೀಲಿ ಬಣ್ಣದ ಜೆರ್ಸಿ ಹೊಂದಿದ್ದು, ಜೆಎಸ್‌ಡಬ್ಲ್ಯೂ, ಎಬಿಕ್ಸ್‌ಕ್ಯಾಶ್, ಜಿಯೋ ಮತ್ತು ಅಪೊಲೊ ಟೈರ್‌ಗಳು ಪ್ರಮುಖ ಪ್ರಾಯೋಜಕರಾಗಿದ್ದಾರೆ. ಡಿಸಿ ಕಳೆದ ವರ್ಷದ ಜೆರ್ಸಿಯೊಂದಿಗೆ ಈ ವರ್ಷವೂ ಕೂಡ ಐಪಿಎಲ್​ಗೆ ಪ್ರವೇಶಿಸಲಿದೆ.

DC

ದೆಹಲಿ ಕ್ಯಾಪಿಟಲ್ಸ್ ಜೆರ್ಸಿ

ಮುಂಬೈ ಇಂಡಿಯನ್ಸ್ (MI) ಜೆರ್ಸಿ: ಹಾಲಿ ಚಾಂಪಿಯನ್‌ಗಳಾದ ಈ ತಂಡ ಕಿಟ್‌ ಹಾಗೂ ಜೆರ್ಸಿಯನ್ನು ಬದಲಾಯಿಸುವ ಸಾಧ್ಯತೆಯಿಲ್ಲ. ನಾಲ್ಕು ಬಾರಿ ಚಾಂಪಿಯನ್‌ ಆಗಿರುವ ಎಮ್​ಐನ ಶೀರ್ಷಿಕೆ ಪ್ರಾಯೋಜಕರಾಗಿ ಸ್ಯಾಮ್‌ಸಂಗ್ ಮತ್ತು ಡಿಎಚ್‌ಎಲ್ ಇರಲಿದೆ.

MI

ಮುಂಬೈ ಇಂಡಿಯನ್ಸ್ ಜೆರ್ಸಿ

ಆದರೆ ಈ ಎಲ್ಲಾ ಮಾಹಿತಿಗಳು ಚರ್ಚೆಯಲ್ಲಿದೆ ಆದರೆ ಇನ್ನೂ ಕೂಡ 2021ರ ಐಪಿಎಲ್​ ತಂಡಗಳ ಜೆರ್ಸಿಯ ಬಗ್ಗೆ ಅಧಿಕೃತವಾಗಿ ಖಚಿತ ಮಾಹಿತಿ ಹೊರಬಂದಿಲ್ಲ. ಸದ್ಯಕ್ಕೆ ಐಪಿಎಲ್ ಟೀಮ್​ಗಳು ಈ ಆಯ್ಕೆಯನ್ನು ಮಾಡಿಕೊಂಡಿದ್ದಾರೆ ಅಷ್ಟೇ.

ಇದನ್ನೂ ಓದಿ:ಐಪಿಎಲ್​ ಇತಿಹಾಸದಲ್ಲಿಯೇ ಅತ್ಯಧಿಕ ರನ್​ ಗಳಿಸಿದ ಐವರು ಆಟಗಾರರು

Published On - 11:25 am, Sun, 14 March 21

ಹಿಮಾನಿ ಶವವನ್ನು ಸೂಟ್‌ಕೇಸ್‌ನಲ್ಲಿ ಎಳೆದೊಯ್ಯುತ್ತಿರುವ ವಿಡಿಯೋ ಪತ್ತೆ
ಹಿಮಾನಿ ಶವವನ್ನು ಸೂಟ್‌ಕೇಸ್‌ನಲ್ಲಿ ಎಳೆದೊಯ್ಯುತ್ತಿರುವ ವಿಡಿಯೋ ಪತ್ತೆ
ಮಹಿಳೆಯರ ಸ್ಫೂರ್ತಿದಾಯಕ ಪಯಣ ಹಂಚಿಕೊಳ್ಳಲು ಪ್ರಧಾನಿ ಮೋದಿ ಅವಕಾಶ
ಮಹಿಳೆಯರ ಸ್ಫೂರ್ತಿದಾಯಕ ಪಯಣ ಹಂಚಿಕೊಳ್ಳಲು ಪ್ರಧಾನಿ ಮೋದಿ ಅವಕಾಶ
ನಟ್ಟು ಬೋಲ್ಟು ಹೇಳಿಕೆ: ಡಿಕೆಶಿ ಬಳಸಿದ ಭಾಷೆ ಸರಿ ಇಲ್ಲ ಎಂದ ನಾಗಾಭರಣ
ನಟ್ಟು ಬೋಲ್ಟು ಹೇಳಿಕೆ: ಡಿಕೆಶಿ ಬಳಸಿದ ಭಾಷೆ ಸರಿ ಇಲ್ಲ ಎಂದ ನಾಗಾಭರಣ
ಡಾ ರಾಜ್​ಕುಮಾರ್ ಅವರ ಒಂದು ಸನ್ನೆಗೆ ಲಕ್ಷ ಜನ ಸೇರ್ತಿದ್ರು: ಸಾಧು ಕೋಕಿಲ
ಡಾ ರಾಜ್​ಕುಮಾರ್ ಅವರ ಒಂದು ಸನ್ನೆಗೆ ಲಕ್ಷ ಜನ ಸೇರ್ತಿದ್ರು: ಸಾಧು ಕೋಕಿಲ
ಹೆಚ್ಚುವರಿ ಉತ್ತರ ಪತ್ರಿಕೆ ನೀಡದ ಮೇಲ್ವಿಚಾರಕ: ವಿದ್ಯಾರ್ಥಿನಿ ಕಣ್ಣೀರು
ಹೆಚ್ಚುವರಿ ಉತ್ತರ ಪತ್ರಿಕೆ ನೀಡದ ಮೇಲ್ವಿಚಾರಕ: ವಿದ್ಯಾರ್ಥಿನಿ ಕಣ್ಣೀರು
ಪ್ರತಿಭಟನೆಗಳಿಗೆ ಬಂದ್ ಒಂದೇ ಅಸ್ತ್ರವಲ್ಲ, ಅದು ಬ್ರಹ್ಮಾಸ್ತ್ರ: ನಾರಾಯಣಗೌಡ
ಪ್ರತಿಭಟನೆಗಳಿಗೆ ಬಂದ್ ಒಂದೇ ಅಸ್ತ್ರವಲ್ಲ, ಅದು ಬ್ರಹ್ಮಾಸ್ತ್ರ: ನಾರಾಯಣಗೌಡ
ಉತ್ತರ ಕನ್ನಡ ಜಿಲ್ಲೆಲಿ ಅತಿ ಹೆಚ್ಚು ಉಷ್ಣಾಂಶ ದಾಖಲು: ಡಿಸಿ ಹೇಳಿದ್ದಿಷ್ಟು
ಉತ್ತರ ಕನ್ನಡ ಜಿಲ್ಲೆಲಿ ಅತಿ ಹೆಚ್ಚು ಉಷ್ಣಾಂಶ ದಾಖಲು: ಡಿಸಿ ಹೇಳಿದ್ದಿಷ್ಟು
ಗಿರ್‌ನಲ್ಲಿ ಪ್ರಧಾನಿ ಮೋದಿಯ ಸಿಂಹ ಸಫಾರಿಯ ಕ್ಷಣಗಳ ವಿಡಿಯೋ ಇಲ್ಲಿದೆ
ಗಿರ್‌ನಲ್ಲಿ ಪ್ರಧಾನಿ ಮೋದಿಯ ಸಿಂಹ ಸಫಾರಿಯ ಕ್ಷಣಗಳ ವಿಡಿಯೋ ಇಲ್ಲಿದೆ
ಹೈಕಮಾಂಡ್ ನೀಡುವ ಸೂಚನೆಯನ್ನು ನಾನು ಪಾಲಿಸುತ್ತೇನೆ: ಸಿದ್ದರಾಮಯ್ಯ
ಹೈಕಮಾಂಡ್ ನೀಡುವ ಸೂಚನೆಯನ್ನು ನಾನು ಪಾಲಿಸುತ್ತೇನೆ: ಸಿದ್ದರಾಮಯ್ಯ
ರಾಜ್ಯದಲ್ಲಿ ಸದ್ಯಕ್ಕೆ ಯಾವ ಕುರ್ಚಿಯೂ ಖಾಲಿ ಇಲ್ಲ: ಪ್ರಿಯಾಂಕ್ ಖರ್ಗೆ
ರಾಜ್ಯದಲ್ಲಿ ಸದ್ಯಕ್ಕೆ ಯಾವ ಕುರ್ಚಿಯೂ ಖಾಲಿ ಇಲ್ಲ: ಪ್ರಿಯಾಂಕ್ ಖರ್ಗೆ