AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಪಿಎಲ್​ ಇತಿಹಾಸದಲ್ಲಿಯೇ ಅತ್ಯಧಿಕ ರನ್​ ಗಳಿಸಿದ ಐವರು ಆಟಗಾರರು

ಅಂದಹಾಗೆ, ಐಪಿಎಲ್​ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಪೈಕಿ ಒಬ್ಬ ಮಾತ್ರ ವಿದೇಶಿ ಆಟಗಾರನಿದ್ದು, ಉಳಿದವರೆಲ್ಲರೂ ಭಾರತೀಯರು ಎನ್ನುವುದು ವಿಶೇಷ. ಮೇಲಾಗಿ ಎಲ್ಲರಿಗಿಂತ ಹೆಚ್ಚು ರನ್​ ಗಳಿಸಿದ ಆಟಗಾರ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದಲ್ಲಿದ್ದಾರೆ ಎನ್ನುವುದು ಕನ್ನಡಿಗರ ಪಾಲಿಗೆ ತುಸು ಹೆಚ್ಚೇ ಸಂತಸ ನೀಡುವ ವಿಷಯ.

ಐಪಿಎಲ್​ ಇತಿಹಾಸದಲ್ಲಿಯೇ ಅತ್ಯಧಿಕ ರನ್​ ಗಳಿಸಿದ ಐವರು ಆಟಗಾರರು
ಐಪಿಎಲ್​​ನಲ್ಲಿ ಅತಿ ಹೆಚ್ಚು ರನ್​ ಗಳಿಸಿದ ಆಟಗಾರರು ಯಾರು?
Skanda
| Edited By: |

Updated on: Mar 12, 2021 | 1:11 PM

Share

ದೆಹಲಿ: ಕ್ರೀಡೆಗಳಲ್ಲಿ ಕ್ರಿಕೆಟ್​ಗೆ ಅತಿ ಹೆಚ್ಚಿನ ಪ್ರಾಶಸ್ತ್ಯ ಸಿಕ್ಕು ಹಲವು ವರ್ಷಗಳೇ ಕಳೆದಿವೆ. ಅಭಿಮಾನಿಗಳ ಕುತೂಹಲ ತಣಿಸಲು, ಅವರ ಉತ್ಸಾಹಕ್ಕೆ ಮತ್ತಷ್ಟು ಇಂಬು ನೀಡಲು ನೆರವಾಗುವಂತೆ ಕ್ರಿಕೆಟ್​ ಕೂಡ ಕಾಲಕಾಲಕ್ಕೆ ತಕ್ಕಂತೆ ಬದಲಾವಣೆಗಳಿಗೆ ಒಗ್ಗಿಕೊಂಡು ಬಂದಿದೆ. ಭಾರತದಲ್ಲಿ ಐಪಿಎಲ್​ ಶುರುವಾದ ನಂತರವಂತೂ ಚುಟುಕು ಕ್ರಿಕೆಟ್​ ಹೊಸತೊಂದು ಆಯಾಮವನ್ನೇ ಪಡೆದುಕೊಂಡಿತು ಎಂದರೆ ಅತಿಶಯೋಕ್ತಿ ಅಲ್ಲ. ಈಗಂತೂ 20 ಓವರ್​ಗಳಲ್ಲಿನ ಹೊಡಿಬಡಿ ಆಟದಲ್ಲಿ ಕ್ರಿಕೆಟ್​ ಪ್ರೇಮಿಗಳು ಸಂತಸ ಕಂಡುಕೊಂಡಿರುವ ಕಾರಣ ಅವರು ಆಟಗಾರರ ಮೇಲಿಡುವ ನಿರೀಕ್ಷೆಯ ಪ್ರಮಾಣವೂ ಹೆಚ್ಚಾಗಿದೆ.

ಅಂದಹಾಗೆ, ಐಪಿಎಲ್​ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಪೈಕಿ ಒಬ್ಬ ಮಾತ್ರ ವಿದೇಶಿ ಆಟಗಾರನಿದ್ದು, ಉಳಿದವರೆಲ್ಲರೂ ಭಾರತೀಯರು ಎನ್ನುವುದು ವಿಶೇಷ. ಮೇಲಾಗಿ ಎಲ್ಲರಿಗಿಂತ ಹೆಚ್ಚು ರನ್​ ಗಳಿಸಿದ ಆಟಗಾರ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದಲ್ಲಿದ್ದಾರೆ ಎನ್ನುವುದು ಕನ್ನಡಿಗರ ಪಾಲಿಗೆ ತುಸು ಹೆಚ್ಚೇ ಸಂತಸ ನೀಡುವ ವಿಷಯ. ಐಪಿಎಲ್​ನಲ್ಲಿ ಹೊಡಿಬಡಿ ಆರ್ಭಟ ಎಷ್ಟು ಮುಖ್ಯವೋ ಅದಕ್ಕೆ ತದ್ವಿರುದ್ಧವೆಂಬಂತೆ ತಾಳ್ಮೆಯಿಂದ ನಿಯಮಿತವಾಗಿ ರನ್​ ಗಳಿಸಿಕೊಳ್ಳುವುದೂ ಅಷ್ಟೇ ಮುಖ್ಯ. ಈ ಎರಡನ್ನೂ ಸಮಚಿತ್ತದಿಂದ ನಿಭಾಯಿಸಿದಾಗಲೇ ನಿಜವಾದ ಯಶಸ್ಸು ಸಾಧ್ಯ. ಉದಾಹರಣೆಗೆ ಕ್ರಿಸ್​ ಗೇಲ್​ರಂತಹ ಆಟಗಾರರು ಸಿಡಿದೆದ್ದರೆ ಎದುರಾಳಿಗಳನ್ನು ಧೂಳಿಪಟ ಮಾಡುವ ಸಾಮರ್ಥ್ಯ ಹೊಂದಿರುವರಾದರೂ ಅವರು ಎಲ್ಲಾ ಪಂದ್ಯಗಳಲ್ಲಿ ನಿಂತು ಆಡುತ್ತಾರೆ, ರನ್​ ಗಳಿಸುತ್ತಾರೆ ಎಂದು ನಂಬಿಕೆ ಇಡುವುದು ಕಷ್ಟ. ಹೀಗಾಗಿ ಇಲ್ಲಿ ಯಾವ ರೀತಿಯ ಬ್ಯಾಟಿಂಗ್​ಗೂ ಸೈ ಎನ್ನುವವರೇ ಹೆಚ್ಚು ಸೂಕ್ತ.

ಅತಿ ಹೆಚ್ಚು ರನ್​ ಪೇರಿಸಿದ 5 ಬ್ಯಾಟ್ಸ್​ಮನ್​ಗಳು ವಿರಾಟ್ ಕೊಹ್ಲಿ: ಭಾರತೀಯ ತಂಡದ ನಾಯಕ, ಆರ್​ಸಿಬಿ ಮುಂದಾಳು ವಿರಾಟ್​ ಕೊಹ್ಲಿ ಐಪಿಎಲ್​ನಲ್ಲಿ ಅತಿಹೆಚ್ಚು ರನ್​ ಕಲೆಹಾಕಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆಡಿರುವ 184 ಪಂದ್ಯಗಳಲ್ಲಿ 5 ಶತಕ, 39 ಅರ್ಧ ಶತಕಗಳಿಸಿದ್ದು, ಸರಾಸರಿ 38.16 ರನ್​ ದಾಖಲಿಸಿದ್ದಾರೆ. ಒಟ್ಟು 5,878 ರನ್ ಕಲೆಹಾಕಿರುವ ಕೊಹ್ಲಿ, 5 ಶತಕಗಳ ಪೈಕಿ 4 ಶತಕಗಳನ್ನು 2016ರ ಒಂದೇ ಸೀಸನ್​ನಲ್ಲಿ ಬಾರಿಸಿದ್ದಾರೆ ಎನ್ನುವುದು ಗಮನಾರ್ಹ. ಆ ಸೀಸನ್​ನಲ್ಲಿ 973 ರನ್​ ದಾಖಲಿಸಿದ್ದ ವಿರಾಟ್​, ಆಟಗಾರನೊಬ್ಬ ಸೀಸನ್​ನಲ್ಲಿ ದಾಖಲಿಸಿದ ಗರಿಷ್ಠ ಮೊತ್ತ ಎಂಬ ಹೆಗ್ಗಳಿಕೆಗೂ ಭಾಜನರಾಗಿದ್ದಾರೆ.

ಸುರೇಶ್​ ರೈನಾ: ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಪ್ರಮುಖ ಶಕ್ತಿಯಾಗಿರುವ ಸುರೇಶ್​ ರೈನಾ ಐಪಿಎಲ್​ನಲ್ಲಿ ಅತಿ ಹೆಚ್ಚು ರನ್​ಗಳಿಸಿರುವ ಆಟಗಾರರ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ. ಕಷ್ಟಕಾಲದಲ್ಲಿ ತಂಡದ ಕೈ ಹಿಡಿಯುವ ಸಾಮರ್ಥ್ಯವುಳ್ಳ ರೈನಾ ಇದುವರೆಗೆ ಆಡಿರುವ 189 ಪಂದ್ಯಗಳಿಂದ 5,368 ರನ್​ ಗಳಿಸಿದ್ದು, ಅದರಲ್ಲಿ 1 ಶತಕ ಹಾಗೂ 38 ಅರ್ಧ ಶತಗಳಿವೆ ಎಂಬುದು ಗಮನಾರ್ಹ.

ಡೇವಿಡ್​ ವಾರ್ನರ್​: ಸನ್​ರೈಸರ್ಸ್​ ಹೈದರಾಬಾದ್​ ತಂಡದ ನಾಯಕ ಹಾಗೂ ಆರಂಭಿಕ ಆಟಗಾರ ಆಗಿರುವ ಡೇವಿಡ್​ ವಾರ್ನರ್, ಐಪಿಎಲ್​ನಲ್ಲಿ ಅತಿ ಹೆಚ್ಚು ರನ್​ ಗಳಿಸಿದ 5 ಆಟಗಾರರ ಪಟ್ಟಿಯಲ್ಲಿರುವ ಏಕೈಕ ವಿದೇಶಿಗ ಎನ್ನುವುದು ಗಮನಾರ್ಹ. 141+ ಸ್ಟ್ರೈಕ್​ ರೇಟ್​ ಹೊಂದಿರುವ ವಾರ್ನರ್, ಸರಾಸರಿ 42.71ರಂತೆ ರನ್​ ಗಳಿಸಿದ್ದು ಒಟ್ಟು 5,254 ರನ್​ ಕಲೆ ಹಾಕಿದ್ದಾರೆ. ಆಡಿರುವ 142 ಪಂದ್ಯಗಳಲ್ಲಿ ಒಟ್ಟು 4 ಶತಕ ಹಾಗೂ 48 ಅರ್ಧ ಶತಕ ಗಳಿಸಿರುವ ಡೇವಿಡ್​ ವಾರ್ನರ್ ಅತಿ ಹೆಚ್ಚು ರನ್​ ಬಾರಿಸಿದ ಆಟಗಾರರ ಪೈಕಿ ಮೂರನೇ ಸ್ಥಾನದಲ್ಲಿದ್ದಾರೆ.

ರೋಹಿತ್​ ಶರ್ಮಾ: ಐಪಿಎಲ್​ನಲ್ಲಿ ಅತ್ಯಧಿಕ ರನ್​ ಗಳಿಸಿದ ಆಟಗಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ರೋಹಿತ್​ ಶರ್ಮಾ ಇನ್ನೊಂದು ಪ್ರಮುಖ ದಾಖಲೆಯನ್ನೂ ಬರೆದಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ ಮೂರು ದ್ವಿಶತಕ ಗಳಿಸಿದ ಏಕೈಕ ಆಟಗಾರ ಹಾಗೂ ಟಿ20 ಮಾದರಿಯ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆ ಅವರ ಹೆಸರಿನಲ್ಲಿದೆ. ಮುಂಬೈ ಇಂಡಿಯನ್ಸ್​ ತಂಡಕ್ಕಾಗಿ ಆಡುವ ರೋಹಿತ್​ ಶರ್ಮಾ, ಒಟ್ಟು 5,230 ರನ್​ ಗಳಿಸಿದ್ದು, ಒಂದು ಶತಕ ಹಾಗೂ 39 ಅರ್ಧಶತಕ ಅದರಲ್ಲಿದೆ.

ಶಿಖರ್​ ಧವನ್​: ಹೈದರಾಬಾದ್, ಮುಂಬೈ ಇಂಡಿಯನ್ಸ್​, ದೆಹಲಿ ಸೇರಿದಂತೆ ಸುಮಾರು ತಂಡಗಳ ಪರ ಆಡಿರುವ ಶಿಖರ್​ ಧವನ್​ ಆರಂಭಿಕ ಆಟಗಾರನಾಗಿದ್ದು, ಅತ್ಯಧಿಕ ರನ್​ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಕಳೆದ ಸೀಸನ್​ನಲ್ಲಿ ಎರಡು ಶತಕಗಳನ್ನು ಬಾರಿಸಿದ್ದಲ್ಲದೇ, ಅತ್ಯದ್ಭುತ ಪ್ರದರ್ಶನ ನೀಡಿದ್ದ ಶಿಖರ್​ ಧವನ್​, ಇದುವರೆಗೆ ಐಪಿಎಲ್​ನಲ್ಲಿ ಆಡಿರುವ 175 ಪಂದ್ಯಗಳಲ್ಲಿ 5,197 ರನ್​ಗಳಿಸಿದ್ದಾರೆ. ಅದರಲ್ಲಿ 2 ಶತಕ ಹಾಗೂ 41 ಅರ್ಧ ಶತಕಗಳೂ ಸೇರಿಕೊಂಡಿವೆ.

ಇದನ್ನೂ ಓದಿ: IPL ವಿಶೇಷ: 45, 800 ಕೋಟಿ ರೂ. ಮೌಲ್ಯಮಾಪನ ಹೊಂದಿರುವ ಐಪಿಎಲ್​ಗೆ ಆದಾಯ ಬರುವುದಾದರೂ ಹೇಗೆ? ಈ ಸ್ಟೋರಿ ಓದಿ

ICC T20 World Cup: ಈ ಬಾರಿಯ ಐಪಿಎಲ್​ ನಡೆಯುವ ಸ್ಥಳಗಳಲ್ಲೇ T20 ವಿಶ್ವಕಪ್​ ಆಯೋಜಿಸಲು ಬಿಸಿಸಿಐ ಚಿಂತನೆ,​ ಈ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ?

Follow Us
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ
ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ
ಬುರ್ಖಾ ಧರಿಸಿ ಬಂದವಳಿಂದ ಲಕ್ಷಾಂತರ ಮೌಲ್ಯದ ಚಿನ್ನದ ಸರ ಲೂಟಿ
ಬುರ್ಖಾ ಧರಿಸಿ ಬಂದವಳಿಂದ ಲಕ್ಷಾಂತರ ಮೌಲ್ಯದ ಚಿನ್ನದ ಸರ ಲೂಟಿ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್: ಯುವತಿಯನ್ನ ಮತಾಂತರಕ್ಕೆ ಯತ್ನ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್: ಯುವತಿಯನ್ನ ಮತಾಂತರಕ್ಕೆ ಯತ್ನ
Video:ಭಾರತವು ಅಮೆರಿಕದ ಆದೇಶವನ್ನು ಪಾಲಿಸುವುದಿಲ್ಲ: ಸೈಯದ್ ಅಕ್ಬರುದ್ದೀನ್
Video:ಭಾರತವು ಅಮೆರಿಕದ ಆದೇಶವನ್ನು ಪಾಲಿಸುವುದಿಲ್ಲ: ಸೈಯದ್ ಅಕ್ಬರುದ್ದೀನ್