IPL: ಮಿಲಿಯನ್ ಡಾಲರ್ ಟೂರ್ನಿಗೆ 2 ಹೊಸ ತಂಡಗಳ ಸೇರ್ಪಡೆ.. ಈ ವರ್ಷದ ಮೇ ತಿಂಗಳಲ್ಲಿ ಹರಾಜು ಪ್ರಕ್ರಿಯೆ!
ಐಪಿಎಲ್ 2022 ರಲ್ಲಿ 10 ತಂಡಗಳು ಭಾಗವಹಿಸುವುದನ್ನು ನೀವು ಕಾಣಬಹುದು. ಎರಡು ಹೊಸ ಫ್ರಾಂಚೈಸಿಗಳ ಸಂಪೂರ್ಣ ಪ್ರಕ್ರಿಯೆಯು ಈ ವರ್ಷದ ಮೇ ವೇಳೆಗೆ ಪೂರ್ಣಗೊಳ್ಳುತ್ತದೆ ಎಂದು ಅವರು ತಿಳಿಸಿದ್ದಾರೆ.
ಐಪಿಎಲ್‌ನ 14 ನೇ ಆವೃತ್ತಿಯಲ್ಲಿ 8 ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಮೈದಾನದಲ್ಲಿ ಸೆಣಸಾಡಲಿವೆ. ಆದರೆ ಮುಂದಿನ ಆವೃತ್ತಿಯಲ್ಲಿ 2 ಹೊಸ ತಂಡಗಳು ಐಪಿಎಲ್‌ನಲ್ಲಿ ಕಾಣಿಸಿಕೊಳ್ಳಲ್ಲಿವೆ. ಈ ಮೂಲಕ ಐಪಿಎಲ್‌ನಲ್ಲಿ ಇಷ್ಟು ದಿನ ಆಡುತ್ತಿದ್ದ 8 ತಂಡಗಳ ಜೊತೆಗೆ ಇನ್ನೂ 2 ತಂಡಗಳು ಸೇರಿ ಒಟ್ಟಾರೆ 10 ತಂಡಗಳು ಪ್ರೇಕ್ಷಕರಿಗೆ ಬರಪೂರ ಮನರಂಜನೆ ನೀಡಲಿವೆ. ಐಪಿಎಲ್ 2022 ರಲ್ಲಿ ಭಾಗವಹಿಸುವ 2 ಹೊಸ ತಂಡಗಳಿಗೆ ಈ ವರ್ಷ ಮೇ ತಿಂಗಳಲ್ಲಿ ಬಿಡ್ಡಿಂಗ್ ಮಾಡಲಾಗುತ್ತದೆ. ಅಂದರೆ, ಐಪಿಎಲ್ 2021 ಮುಗಿಯುವ ವೇಳೆಗೆ 2 ಹೊಸ ತಂಡಗಳನ್ನು ಬಿಡ್ ಮೂಲಕ ಕಟ್ಟಲಾಗುತ್ತದೆ.
ಐಪಿಎಲ್ 2022 ರಲ್ಲಿ 8 ಬದಲಿಗೆ 10 ತಂಡಗಳು ಆಡಲಿವೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ. ಐಪಿಎಲ್ 2022 ರಲ್ಲಿ 10 ತಂಡಗಳು ಭಾಗವಹಿಸುವುದನ್ನು ನೀವು ಕಾಣಬಹುದು. ಎರಡು ಹೊಸ ಫ್ರಾಂಚೈಸಿಗಳ ಸಂಪೂರ್ಣ ಪ್ರಕ್ರಿಯೆಯು ಈ ವರ್ಷದ ಮೇ ವೇಳೆಗೆ ಪೂರ್ಣಗೊಳ್ಳುತ್ತದೆ ಎಂದು ಅವರು ತಿಳಿಸಿದ್ದಾರೆ. ತಂಡಗಳನ್ನು ಸಂಪೂರ್ಣವಾಗಿ ನಿರ್ಧರಿಸಿದ ನಂತರ, ಆ ತಂಡಗಳು ಮುಂದಿನ ಐಪಿಎಲ್ಗೆ ತಯಾರಿ ನಡೆಸಬಹುದು ಎಂದು ಅವರು ತಿಳಿಸಿದರು.
ಗಂಗೂಲಿ ಆಗಲೇ ಸೂಚಿಸಿದ್ದರು ಮುಂದಿನ ಆವೃತ್ತಿಯ ಐಪಿಎಲ್‌ನಲ್ಲಿ (2022 ಐಪಿಎಲ್) 10 ತಂಡಗಳು ಆಡಲಿವೆ ಎಂದು ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ಹಲವಾರು ಬಾರಿ ಸೂಚನೆ ನೀಡಿದ್ದರು. ಇದನ್ನು ನಿರ್ಧರಿಸಲು ಮಾರ್ಚ್ 13 ರಂದು ಐಪಿಎಲ್ ಆಡಳಿತ ಮಂಡಳಿಯ ಸಭೆಯನ್ನು ಸಹ ನಡೆಸಿತ್ತು ಈ ಸಭೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ಜೈ ಷಾ ಕೂಡ ಭಾಗವಹಿಸಿದ್ದರು.
2 ವರ್ಷಗಳ ನಂತರ ಭಾರತದಲ್ಲಿ ಐಪಿಎಲ್ ಐಪಿಎಲ್ 14 ನೇ ಆವೃತ್ತಿ ಮತ್ತೊಮ್ಮೆ ಭಾರತದಲ್ಲಿ ನೆರವೇರಲಿದೆ. ಭಾರತದಲ್ಲಿ ಕೊನೆಯ ಬಾರಿಗೆ ಐಪಿಎಲ್ ಆಡಿದ್ದು 2019 ರಲ್ಲಿ. ಇದರ ನಂತರ, ಕೊನೆಯ ಆವೃತ್ತಿಯನ್ನ ದುಬೈನಲ್ಲಿ ಆಡಿಸಲಾಯಿತು. ಐಪಿಎಲ್ 2021 ಭಾರತದ 6 ನಗರಗಳಲ್ಲಿ ನಡೆಯಲಿದ್ದು, ಅದರ ಮೊದಲ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ. ಏಪ್ರಿಲ್ 9 ರಿಂದ ಪ್ರಾರಂಭವಾಗುವ ಐಪಿಎಲ್‌ನ 14 ನೇ ಆವೃತ್ತಿಯ ಪ್ಲೇಆಫ್ ಮತ್ತು ಅಂತಿಮ ಪಂದ್ಯಗಳು ಅಹಮದಾಬಾದ್‌ನಲ್ಲಿ ನಡೆಯಲಿದೆ.
ಇದನ್ನೂ ಓದಿ:IPL ವಿಶೇಷ: 45, 800 ಕೋಟಿ ರೂ. ಮೌಲ್ಯಮಾಪನ ಹೊಂದಿರುವ ಐಪಿಎಲ್ಗೆ ಆದಾಯ ಬರುವುದಾದರೂ ಹೇಗೆ? ಈ ಸ್ಟೋರಿ ಓದಿ