AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Road Safety World Series 2021: 2007ರ T20 ವಿಶ್ವಕಪ್‌ ನೆನಪಿಸಿದ​ ಯುವಿ.. ಒಂದೇ ಓವರ್​ನಲ್ಲಿ ಸತತ 4 ಸಿಕ್ಸರ್​!

Road Safety World Series 2021: ಆರಂಭಿಕ ಎಸೆತವನ್ನು ಡಾಟ್ ಮಾಡಿದ ಯುವಿ ಅನಂತರ 4 ಎಸೆತಗಳಿಗೆ ಸತತ 4 ಸಿಕ್ಸರ್‌ಗಳನ್ನು ಬಾರಿಸಿ 2007 ರ ಟಿ20 ವಿಶ್ವಕಪ್​ನ ಸೆಮಿ ಫೈನಲ್​ ಪಂದ್ಯವನ್ನು ಮತ್ತೊಮ್ಮೆ ನೆನೆಪು ಮಾಡಿದರು.

Road Safety World Series 2021: 2007ರ T20 ವಿಶ್ವಕಪ್‌ ನೆನಪಿಸಿದ​ ಯುವಿ.. ಒಂದೇ ಓವರ್​ನಲ್ಲಿ ಸತತ 4 ಸಿಕ್ಸರ್​!
ಯುವರಾಜ್ ಸಿಂಗ್
Follow us
ಪೃಥ್ವಿಶಂಕರ
|

Updated on:Mar 14, 2021 | 5:22 PM

ಯುವರಾಜ್​ ಸಿಂಗ್​.. ಟೀಂ ಇಂಡಿಯಾದ ಆಲ್​ರೌಂಡರ್​. ಯುವರಾಜ್​ನನ್ನು ಆಲ್​ರೌಂಡರ್​ ಅನ್ನುವುದಕ್ಕಿಂತ ಒಬ್ಬ ಅತ್ತ್ಯುತ್ತಮ ಬ್ಯಾಟ್ಸ್​ಮನ್ ಎನ್ನುವುದು ಒಳಿತು. ಏಕೆಂದರೆ ಯುವರಾಜ್​ ತನ್ನ ಬ್ಯಾಟ್​ನಿಂದ ತೋರಿದ ಕರಾಮತ್ತನ್ನು ತನ್ನ ಬೌಲಿಂಗ್​ನಲ್ಲಿ ಅಷ್ಟೊಂದು ಪರಿಣಾಮಕಾರಿಯಾಗಿ ತೋರಲಿಲ್ಲ. ಹೀಗಾಗಿ ಯುವರಾಜ್​ನನ್ನು ಆತನ ಯುಗದಲ್ಲಿ ಟೀಂ ಇಂಡಿಯಾದ ಭರವಸೆಯ ಆಟಗಾರ ಅಂತಲೂ ಕರೆಯುವ ಪ್ರತೀತಿ ಇತ್ತು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿಯುತ್ತಿದ್ದ ಯುವರಾಜ್​, ಟೀಂ ಇಂಡಿಯಾದ ಗೇಮ್​ ಚೆಂಜರ್​ ಆಗುತ್ತಿದ್ದರು. ತಮ್ಮ ಅಬ್ಬರದ ಬ್ಯಾಟಿಂಗ್​ನಿಂದ ಪಂದ್ಯದ ದಿಕ್ಕನೇ ಬದಲಾಯಿಸುತ್ತಿದ್ದ ಈ ಆಟಗಾರ ತನ್ನ ನಿವೃತ್ತಿಯ ಬಳಿಕವೂ ತನ್ನ ಅಂದಿನ ಚಾರ್ಮ್​ನ್ನು ಈಗಲೂ ಮುಂದುವರೆಸಿದ್ದಾರೆ.

ಯುವರಾಜ್​ ಸಿಂಗ್ ಹಳೆಯ ಸ್ಫೋಟಕ ಬ್ಯಾಟಿಂಗ್‌ ಹೌದು.. ಛತ್ತೀಗಢದ ರಾಯ್‌ಪುರ್‌ನಲ್ಲಿ ನಡೆಯುತ್ತಿರುವ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಟಿ20 ಟೂರ್ನಿಯಲ್ಲಿ ಯುವರಾಜ್​ ಸಿಂಗ್ ಮತ್ತೆ ತಮ್ಮ ಹಳೆಯ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದ್ದಾರೆ. ರಾಯ್‌ಪುರ್‌ನ ಶಾಹಿದ್ ವೀರ್ ನಾರಾಯಣ್ ಸಿಂಗ್ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ 13ನೇ ಪಂದ್ಯದಲ್ಲಿ ಇಂಡಿಯಾ ಲೆಜೆಂಡ್ಸ್‌ ಮತ್ತು ಸೌತ್‌ ಆಫ್ರಿಕಾ ಲೆಜೆಂಡ್ಸ್‌ ತಂಡಗಳು ಕಣಕ್ಕಿಳಿದಿದ್ದವು. ಸೆಮಿಫೈನಲ್ ದೃಷ್ಟಿಯಿಂದ ಈ ಪಂದ್ಯ ಇಂಡಿಯಾ ಲೆಜೆಂಡ್ಸ್​ಗೆ ತುಂಬಾ ಮಹತ್ವದಾಗಿತ್ತು.

ಇಂಡಿಯಾ ಲೆಜೆಂಡ್ಸ್‌ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಸೆಹ್ವಾಗ್ ವಿಕೆಟ್ ಆರಂಭದಲ್ಲಿಯೇ ಕಳೆದುಕೊಂಡರೂ ಸಚಿನ್ ತೆಂಡೂಲ್ಕರ್ ತಮ್ಮ ಹಳೆಯ ಆಟವನ್ನು ಇಲ್ಲಿ ಪ್ರದರ್ಶಿಸಿ ಅರ್ಧ ಶತಕ ಗಳಿಸಿದರು. ಕೇವಲ 37 ಎಸೆತಗಳಲ್ಲಿ 60 ರನ್ ಬಾರಿಸಿದ ಸಚಿನ್ ತೆಂಡೂಲ್ಕರ್, ಬದ್ರಿನಾಥ್ ಜೊತೆಗೆ 2ನೇ ವಿಕೆಟ್‌ಗೆ ಅರ್ಧ ಶತಕದ ಜೊತೆಯಾಟ ಆಡಿದರು. ಬದ್ರಿನಾಥ್ ಗಾಯಗೊಂಡು ನಿವೃತ್ತಿ ಪಡೆದರೆ ಸಚಿನ್ ಕ್ಯಾಚ್ ನೀಡಿ ನಿರ್ಗಮಿಸಿದರು.

ಸಿಕ್ಸರ್ ಮೇಲೆ ಸಿಕ್ಸರ್ ಬಾರಿಸಿದ ಯುವಿ ಈ ವೇಳೆ ಮೈದಾನಕ್ಕಿಳಿದ ಯುವಿ ತಮ್ಮ ಸ್ಪೋಟಕ ಆಟವನ್ನು ಪ್ರದರ್ಶಿಸಿದರು. ಸಿಕ್ಸರ್ ಮೇಲೆ ಸಿಕ್ಸರ್ ಬಾರಿಸಿದ ಯುವಿ ವೃತ್ತಿ ಜೀವನದ ಹಳೆಯ ದಿನಗಳನ್ನು ಅಭಿಮಾನಿಗಳಿಗೆ ನೆನಪಿಸಿದರು. ಒಂದು ಓವರ್‌ನಲ್ಲಂತೂ ಸತತ ನಾಲ್ಕು ಸಿಕ್ಸರ್ ಬಾರಿಸುವ ಮೂಲಕ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಯುವರಾಜ್ ಸಿಂಗ್ ಕೇವಲ 22 ಎಸೆತಗಳಲ್ಲಿ 52 ರನ್‌ ಬಾರಿಸಿದರು.

4 ಎಸೆತಗಳಿಗೆ ಸತತ 4 ಸಿಕ್ಸರ್ ಬ್ರೂಯಿನ್ ಬೆವರಿಳಿಸಿದ ಯುವಿ ಯುವರಾಜ್ ಸ್ಫೋಟಕ ಬ್ಯಾಟಿಂಗ್ ಕಾಣಸಿಕ್ಕಿದ್ದು ಭಾರತದ ಇನ್ನಿಂಗ್ಸ್‌ನ 18ನೇ ಓವರ್‌ನಲ್ಲಿ. ಆಫ್ರಿಕಾದ ಜಾಂಡರ್ ಡಿ ಬ್ರೂಯಿನ್ ಎಸೆದ ಆ ಓವರ್​ನಲ್ಲಿ ಆರಂಭಿಕ ಎಸೆತವನ್ನು ಡಾಟ್ ಮಾಡಿದ ಯುವಿ ಅನಂತರ 4 ಎಸೆತಗಳಿಗೆ ಸತತ 4 ಸಿಕ್ಸರ್‌ಗಳನ್ನು ಬಾರಿಸಿ 2007 ರ ಟಿ20 ವಿಶ್ವಕಪ್​ನ ಸೆಮಿ ಫೈನಲ್​ ಪಂದ್ಯವನ್ನು ಮತ್ತೊಮ್ಮೆ ನೆನೆಪು ಮಾಡಿದರು. ಯುವರಾಜ್​ಗೆ ಸಾಥ್​ ನೀಡಿದ ಯೂಸೂಫ್ ಪಠಾಣ್ 10 ಎಸೆತಗಳಲ್ಲಿ 23 ರನ್ ಬಾರಿಸಿದರೆ ಮನ್‌ಪ್ರೀತ್ ಗೋನಿ 16 ರನ್‌ ಬಾರಿಸಿ ಯುವರಾಜ್ ಸಿಂಗ್ ಜೊತೆಗೆ ಅಜೇಯರಾಗುಳಿದರು.

ಇನ್ನು ಭಾರತ ನೀಡಿದ ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಆರಂಭಿಕರು ಉತ್ತಮ ಪ್ರದರ್ಶನವನ್ನು ನೀಡಿದರು. ಮೊದಲ ವಿಕೆಟ್‌ಗೆ 87 ರನ್‌ಗಳ ಜೊತೆಯಾಟವನ್ನು ನೀಡಿದ ಆಂಡ್ರೋ ಪುಟಿಕ್ ಹಾಗೂ ಮಾರ್ನೆ ವಾನ್ ವ್ಯಾಕ್ ಜೋಡಿಯನ್ನು ಬೇರ್ಪಡಿಸಿದ ಬಳಿಕ ಇಂಡಿಯಾ ಲೆಜೆಂಡ್ಸ್ ತಂಡದ ಗೆಲುವು ಸನಿಹವಾಗಲು ಪ್ರಾರಂಭಿಸಿತು. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ 148 ರನ್‌ಗಳಿಸಲಷ್ಟೇ ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ಶಕ್ತರಾದರು. ಈ ಮೂಲಕ ಭಾರತ ಲೆಜೆಂಡ್ಸ್ 56 ರನ್‌ಗಳ ಗೆಲುವು ಸಾಧಿಸಿದೆ.

ಇದನ್ನೂ ಓದಿ:Road Safety World Series 2021: ನಿವೃತ್ತಿ ಬಳಿಕವೂ ನಿಂತಿಲ್ಲ ಸಚಿನ್​- ಸೆಹ್ವಾಗ್​ ಘರ್ಜನೆ.. ವೀರೂ ಅಬ್ಬರಕ್ಕೆ ಬಾಂಗ್ಲಾ ಲೆಜೆಂಡ್ಸ್​ ಉಡೀಸ್

Published On - 5:18 pm, Sun, 14 March 21

ಪಾಕ್​ ದಾಳಿಯ ಸಂತ್ರಸ್ತರಿಗೆ ಧೈರ್ಯ ತುಂಬಿದ ಸಿಎಂ ಒಮರ್
ಪಾಕ್​ ದಾಳಿಯ ಸಂತ್ರಸ್ತರಿಗೆ ಧೈರ್ಯ ತುಂಬಿದ ಸಿಎಂ ಒಮರ್
ಹಾರಂಗಿ ಜಲಾಶಯಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧ
ಹಾರಂಗಿ ಜಲಾಶಯಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧ
ಆಪರೇಷನ್ ಸಿಂಧೂರ್​ ಕಾರ್ಯಾಚರಣೆ ಬೆಂಬಲಿಸಿ ಕಾಂಗ್ರೆಸ್​ ತಿರಂಗಾ ಯಾತ್ರೆ
ಆಪರೇಷನ್ ಸಿಂಧೂರ್​ ಕಾರ್ಯಾಚರಣೆ ಬೆಂಬಲಿಸಿ ಕಾಂಗ್ರೆಸ್​ ತಿರಂಗಾ ಯಾತ್ರೆ
"ಮೋದಿ ಹೆಸರು ಹೇಳಲೂ ಹೆದರುವ ಹೇಡಿ ನಮ್ಮ ಪ್ರಧಾನಿ": ಪಾಕ್​ ಸಂಸದ ವ್ಯಂಗ್ಯ
ಬಿಗ್​ಬಾಸ್ ರಂಜಿತ್, ಮಾನಸ ಮದುವೆ, ಇಲ್ಲಿದೆ ನೋಡಿ ಮೆಹಂದಿ ವಿಡಿಯೋ
ಬಿಗ್​ಬಾಸ್ ರಂಜಿತ್, ಮಾನಸ ಮದುವೆ, ಇಲ್ಲಿದೆ ನೋಡಿ ಮೆಹಂದಿ ವಿಡಿಯೋ
ಸಾಂಬಾಂದಲ್ಲಿ ಗಡಿಯೊಳಗೆ ಉಗ್ರರ ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ BSF
ಸಾಂಬಾಂದಲ್ಲಿ ಗಡಿಯೊಳಗೆ ಉಗ್ರರ ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ BSF
ಬಂಕರ್​ಗಳಲ್ಲಿ ಅವಿತುಕೊಂಡಿರುವ ಪಾಕ್ ಪ್ರಧಾನಿ ಶರೀಫ್ ಮತ್ತು ಸೇನಾ ಮುಖ್ಯಸ್ಥ
ಬಂಕರ್​ಗಳಲ್ಲಿ ಅವಿತುಕೊಂಡಿರುವ ಪಾಕ್ ಪ್ರಧಾನಿ ಶರೀಫ್ ಮತ್ತು ಸೇನಾ ಮುಖ್ಯಸ್ಥ
ಸೇನೆಗೆ ಬಲ ತುಂಬಲು ಸಿದ್ಧ: ಹಾಸನದಲ್ಲಿ ನಿವೃತ್ತ ಯೋಧರ ಘೋಷಣೆ
ಸೇನೆಗೆ ಬಲ ತುಂಬಲು ಸಿದ್ಧ: ಹಾಸನದಲ್ಲಿ ನಿವೃತ್ತ ಯೋಧರ ಘೋಷಣೆ
ಸೇನೆಯೊಂದಿಗೆ ನಾವಿದ್ದೇವೆ ಅಂತ ಸೂಚಿಸಲು ತಿರಂಗ ಯಾತ್ರೆ: ದಿನೇಶ್ ಗುಂಡೂರಾವ್
ಸೇನೆಯೊಂದಿಗೆ ನಾವಿದ್ದೇವೆ ಅಂತ ಸೂಚಿಸಲು ತಿರಂಗ ಯಾತ್ರೆ: ದಿನೇಶ್ ಗುಂಡೂರಾವ್
ಸಿದ್ದಿ ಸಮುದಾಯದ ಜೊತೆ ಸರಳತೆಯ ಪಾಠ ಕಲಿತ ‘ಭರ್ಜರಿ ಬ್ಯಾಚುಲರ್ಸ್’
ಸಿದ್ದಿ ಸಮುದಾಯದ ಜೊತೆ ಸರಳತೆಯ ಪಾಠ ಕಲಿತ ‘ಭರ್ಜರಿ ಬ್ಯಾಚುಲರ್ಸ್’