India vs England: ರೋಹಿತ್​ ಇಲ್ಲದ ಕ್ರಿಕೆಟ್​ ಪಂದ್ಯವನ್ನು ವೀಕ್ಷಿಸುವುದಕ್ಕಿಂತ ಟಿವಿ ಆಫ್​ ಮಾಡುವುದೇ ಒಳಿತು: ವಿರೇಂದ್ರ ಸೆಹ್ವಾಗ್

india vs england: ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಯಲ್ಲಿ ಆಡುವ ಇಲೆವೆನ್‌ನಲ್ಲಿ ರೋಹಿತ್ ಶರ್ಮಾ ಅವರನ್ನು ಆಡಿಸದಿರುವುದಕ್ಕೆ ಅಸಮಾಧಾನಗೊಂಡಿರುವ ಸೆಹ್ವಾಗ್​ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

India vs England: ರೋಹಿತ್​ ಇಲ್ಲದ ಕ್ರಿಕೆಟ್​ ಪಂದ್ಯವನ್ನು ವೀಕ್ಷಿಸುವುದಕ್ಕಿಂತ ಟಿವಿ ಆಫ್​ ಮಾಡುವುದೇ ಒಳಿತು: ವಿರೇಂದ್ರ ಸೆಹ್ವಾಗ್
ರೋಹಿತ್ ಶರ್ಮಾ
Follow us
ಪೃಥ್ವಿಶಂಕರ
|

Updated on:Mar 13, 2021 | 2:50 PM

ಅಹಮದಬಾದ್​: ರೋಹಿತ್ ಶರ್ಮಾ.. ಕ್ರಿಕೆಟ್‌ ಜಗತ್ತಿನ ‘ಹಿಟ್‌ಮ್ಯಾನ್’. ರೋಹಿತ್​ ಮೈದಾನದಲ್ಲಿ ಅಬ್ಬರಿಸಲು ಶುರುಮಾಡಿದರೆ ಎದುರಾಳಿ ತಂಡದ ಬೌಲರ್​ಗಳಿಗೆ ನಡುಕ ಆರಂಭವಾಗುವದಂತು ಸತ್ಯ. ಬರಿ ಬೌಂಡರಿ, ಸಿಕ್ಸರ್​ಗಳಿಂದಲೇ ಎದುರಾಳಿ ತಂಡದ ಆಟಗಾರರನ್ನು ಹೈರಾಣಾಗಿಸುವ ರೋಹಿತ್​ ತಮ್ಮ ಬ್ಯಾಟಿಂಗ್​ನಿಂದಲೇ ಅರ್ಧ ಪಂದ್ಯವನ್ನು ಗೆಲ್ಲಿಸಿಬಿಟ್ಟಿರುತ್ತಾರೆ. ಆದರೆ ಇಂತಹ ಸ್ಟೋಟಕ ಆಟಗಾರನನ್ನು ಟೀಂ ಇಂಡಿಯಾ ನಿನ್ನೆಯ ಪಂದ್ಯದಲ್ಲಿ ಆಡಿಸದೆ ತಪ್ಪು ಮಾಡಿತಾ ಎಂಬ ಪ್ರಶ್ನೆಗಳು ಈಗ ಕ್ರಿಕೆಟ್​ ಪಂಡಿತರಲ್ಲಿ ಉದ್ಭವಿಸಿದೆ. ಎಂತಹ ಕಷ್ಟದ ಸನ್ನಿವೇಶದಲ್ಲೂ ಮೈದಾನದಲ್ಲಿ ನಿಂತು ಬೃಹತ್​ ಇನ್ನಿಂಗ್ಸ್​ ಕಟ್ಟುವ ತಾಕತ್ತಿರುವ ರೋಹಿತ್​ ಇಲ್ಲದ ನಿನ್ನೆಯ ಪಂದ್ಯ ಬರಿ ಸಪ್ಪೆಯಾಗಿ ಕಾಣಿಸುತ್ತಿತ್ತು. ಅಲ್ಲದೆ ಆರಂಭಿಕರಾಗಿ ಬಂದ ಟೀಂ ಇಂಡಿಯಾ ಆಟಗಾರರು ಇಂಗ್ಲೆಂಡ್​ ಎದುರು ರನ್​ಗಳಿಸಲು ಪರದಾಡಿ ಕೇವಲ ಒಂದಂಕಿಗೆ ವಿಕೆಟ್​ ಒಪ್ಪಿಸುವಾಗ, ಟೀಂ ಇಂಡಿಯಾ ಅಭಿಮಾನಿಗಳಿಗೆ ರೋಹಿತ್​ ಅಲಭ್ಯದಿಂದಾದ ಅನಾಹುತ ಎದ್ದು ಕಾಣುತ್ತಿತ್ತು.

ಹೌದು, ರೋಹಿತ್ ಶರ್ಮಾ ಕ್ರಿಕೆಟ್ ಪ್ರೇಮಿಗಳ ಆರಾಧ್ಯ ದೈವ. ರೋಹಿತ್​ ಇಲ್ಲದ ಕ್ರಿಕೆಟನ್ನು ಊಹಿಸಲು ಸಾಧ್ಯವಿಲ್ಲ. ರೋಹಿತ್​ ಕೇವಲ ಕ್ರಿಕೆಟ್​ ಅಭಿಮಾನಿಗಳಿಗೆ ಮಾತ್ರ ಇಷ್ಟದ ಆಟಗಾರನಾಗಿಲ್ಲ. ಬದಲಿಗೆ ಅದೆಷ್ಟೋ ಹೆಸರಾಂತ ಕ್ರಿಕೆಟ್​ ಆಟಗಾರರಿಗೆ ರೋಹಿತ್​ ಒಬ್ಬ ನೆಚ್ಚಿನ ಆಟಗಾರನ್ನಾಗಿದ್ದಾರೆ. ಅಂತಹ ಅಭಿಮಾನಿಗಳಲ್ಲಿ ಟೀಂ ಇಂಡಿಯಾದ ಮಾಜಿ ಸ್ಪೋಟಕ ಆಟಗಾರ ವೀರೇಂದ್ರ ಸೆಹ್ವಾಗ್ ಸಹ ಒಬ್ಬರಾಗಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಯಲ್ಲಿ ಆಡುವ ಇಲೆವೆನ್‌ನಲ್ಲಿ ರೋಹಿತ್ ಶರ್ಮಾ ಅವರನ್ನು ಆಡಿಸದಿರುವುದಕ್ಕೆ ಅಸಮಾಧಾನಗೊಂಡಿರುವ ಸೆಹ್ವಾಗ್​ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ರೋಹಿತ್​ನನ್ನ ನೋಡುವುದಕ್ಕಾಗಿಯೇ ಪ್ರೇಕ್ಷಕರು ಬರುತ್ತಾರೆ ತನ್ನ ಯುಗದಲ್ಲಿ ಎದುರಾಳಿ ತಂಡದ ಆಟಗಾರರನ್ನ ಇನ್ನಿಲ್ಲದಂತೆ ಕಾಡುತ್ತಿದ್ದ ಭಾರತದ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್,​ ರೋಹಿತ್​ ಅಲಭ್ಯತೆಯ ಬಗ್ಗೆ ತೀರ ಅಸಮಾದಾನಗೊಂಡಿದ್ದಾರೆ. ಈ ಬಗ್ಗೆ ಮಾತಾನಾಡಿರುವ ವೀರೂ, ರೋಹಿತ್​ನ ಆಟವನ್ನು ನೋಡುವುದಕ್ಕಾಗಿಯೇ ಜನರು ಕ್ರಿಕೆಟ್ ಕ್ರೀಡಾಂಗಣಕ್ಕೆ ಬರುತ್ತಾರೆ ಅಥವಾ ಟಿವಿಯ ಮುಂದೆ ಕುಳಿತುಕೊಳ್ಳುತ್ತಾರೆ. ಆದರೆ ಇಂದಿನ ಆಡುವ ಇಲೆವೆನ್‌ನಲ್ಲಿ ರೋಹಿತ್​ ಹೆಸರಿಲ್ಲ. ಆದ್ದರಿಂದ ಪಂದ್ಯವನ್ನು ನೋಡುವುದರಲ್ಲಿ ಯಾವುದೇ ಹುರುಳಿಲ್ಲ ಎಂದು ಸೆಹ್ವಾಗ್​ ಹೇಳಿದ್ದಾರೆ.

ರೋಹಿತ್ ಇಲ್ಲದಿದ್ದರೆ ಟಿವಿ ಆಫ್ ಮಾಡಿ ನಾನು ಕೂಡ ರೋಹಿತ್ ಶರ್ಮಾ ಅವರ ದೊಡ್ಡ ಅಭಿಮಾನಿ ಎಂದು ಹೇಳಿರುವ ಸೆಹ್ವಾಗ್, ನಾನು ರೋಹಿತ್​ನನ್ನು ಆಡುವ ಇಲೆವೆನ್‌ನಲ್ಲಿ ನೋಡಲು ಬಯಸುತ್ತೇನೆ. ಅವನು ಉತ್ತಮವಾಗಿ ಆಡುವುದನ್ನು ನೋಡಲು ನೋಡಬಯಸುತ್ತೇನೆ. ಆದರೆ ರೋಹಿತ್​ ನಮ್ಮ ತಂಡದ ಪರವಾಗಿ ಆಡದಿದ್ದರೆ, ನಾನು ಟಿವಿಯನ್ನು ಆಫ್ ಮಾಡುತ್ತೇನೆ. ರೋಹಿತ್​ ಇಲ್ಲದ ಪಂದ್ಯವನ್ನು ಮತ್ತೆ ನೋಡುವುದರಲ್ಲಿ ನನಗೆ ಯಾವುದೇ ಆಸಕ್ತಿ ಇಲ್ಲ ಎಂದು ಸೆಹ್ವಾಗ್​ ಆಯ್ಕೆಗಾರರ ವಿರುದ್ಧ ಕಿಡಿಕಾರಿದ್ದಾರೆ.

ಮುಂದಿನ ಪಂದ್ಯಕ್ಕೂ ರೋಹಿತ್​ ಇಲ್ಲ.. ಪಂದ್ಯ ಆರಂಭಕ್ಕೂ ಒಂದು ದಿನ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಭಾರತದ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಟಿ20 ಯಲ್ಲಿ ರಾಹುಲ್​ ಜೊತೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎಂದು ಹೇಳಿದರು. ಆದರೆ, ಪಂದ್ಯದ ದಿನದಂದು ಅವರು ಆಡುವ ಹನ್ನೊಂದರಿಂದ ಹೊರಗುಳಿದಿದ್ದರು. ಪಂದ್ಯದ ಆರಂಭಕ್ಕೂ ಮೊದಲು ಇದರ ಬಗ್ಗೆ ಮಾತಾನಾಡಿದ ಕೊಹ್ಲಿ, ರೋಹಿತ್​ ಮೊದಲ ಎರಡು ಪಂದ್ಯಗಳಿಂದ ಹೊರಗುಳಿಯುತ್ತಾರೆ ಎಂದು ಹೇಳಿದರು. ಕಳೆದ ವರ್ಷ ಫೆಬ್ರವರಿಯಲ್ಲಿ ತಮ್ಮ ಕೊನೆಯ ಟಿ20 ಆಡಿದ ರೋಹಿತ್ ಶರ್ಮಾ ಅವರನ್ನು ಕಣ್ತುಂಬಿಕೊಳ್ಳಲು ಇನ್ನೂ ಎರಡು ಪಂದ್ಯದವರೆಗೆ ಕಾಯಬೇಕಿದೆ.

ಇದನ್ನೂ ಓದಿ: ಎಚ್ಚರವಹಿಸದಿದ್ದರೆ ನೀವು ಕೊಹ್ಲಿಯಂತ್ತಾಗುತ್ತೀರಿ! ಕೊಹ್ಲಿಯ ಡಕ್​ ಔಟ್, ಉತ್ತರಾಖಂಡ್​ ಪೊಲೀಸ್​ ಅಧಿಕಾರಿ​ಗೆ ಮಾದರಿಯಾಗಿದ್ದೇಗೆ?

Published On - 2:48 pm, Sat, 13 March 21

ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ